ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 44ನೇ ಡಕಾರ್ ‌ರ‍್ಯಾಲಿಯ 12 ಹಂತಗಳಲ್ಲಿ ಐದು ಹಂತಗಳು ಪೂರ್ಣಗೊಂಡಿದ್ದು, ಪ್ರಸಕ್ತ ವರ್ಷದ ಡಕಾರ್ ‌ರ‍್ಯಾಲಿಯ ಪ್ರತಿ ಹಂತದಲ್ಲೂ ಉತ್ತಮ ರ‍್ಯಾಕಿಂಗ್‌ನಲ್ಲಿ ಮುಂದುವರಿಯುತ್ತಿರುವ ಸ್ಯಾಮ್ ಸದರ್‌ಲ್ಯಾಂಡ್‌ ಮತ್ತು ನಾಸರ್ ಅಲ್-ಅತ್ತಿಯಾ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

2022ರ ಡಕಾರ್ ‌ರ‍್ಯಾಲಿಯು ಜೆದ್ದಾ ನಗರದಿಂದ ಆರಂಭವಾಗಿ ರಿಯಾದ್‌ ನಗರಕ್ಕೆ ಬಂದು ತಲುಪಿದ್ದು, ಬರೋಬ್ಬರಿ 4 ಸಾವಿರ ಕಿ.ಮೀ ಅಂತರವನ್ನು ಒಳಗೊಂಡಿರುವ ಪ್ರಸಕ್ತ ವರ್ಷದ ರ‍್ಯಾಲಿಯಲ್ಲಿ ಐದನೇ ಹಂತವು 346 ಕಿ.ಮೀ ಒಳಗೊಂಡಿತ್ತು. ಐದನೇ ಹಂತದ ಒಟ್ಟು 346 ಕಿ.ಮೀ ಮಾರ್ಗದಲ್ಲಿ 214 ಕಿ.ಮೀ ಸಾಮಾನ್ಯ ಮಾರ್ಗವಾದರೆ 132 ಕಿ.ಮೀ ಅತ್ಯಂತ ಕಠಿಣ ಮಾರ್ಗವಾಗಿತ್ತು.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ರಿಯಾದ್‌ನಿಂದ ಆರಂಭಗೊಂಡಿದ್ದ ಐದನೇ ಹಂತವು ಪ್ರಮುಖ ಮಾರ್ಗಗಳೊಂದಿಗೆ ಪುನಃ ರಿಯಾದ್‌ಗೆ ತಲುಪಿದ್ದು, ಐದನೇ ಹಂತದ ಬೈಕ್ ವಿಭಾಗದಲ್ಲಿನ 346 ಕಿ.ಮೀ ಅಂತರವನ್ನು 3 ಗಂಟೆ 19 ನಿಮಿಷ 32 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಕೆಟಿಎಂ ರೇಸಿಂಗ್ ಫಾಕ್ಟರಿ ತಂಡದ ಟೋಬಿ ಪ್ರೈಸ್ ಮೊದಲ ಸ್ಥಾನ ಪಡೆದರು.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ಬೈಕ್ ವಿಭಾಗದಲ್ಲಿ ಕೆಟಿಎಂ ರೇಸಿಂಗ್ ಫಾಕ್ಟರಿ ತಂಡದ ಟೋಬಿ ಪ್ರೈಸ್ ಮೊದಲ ಸ್ಥಾನ ಪಡೆದರೆ ಮೊದಲ ವಿಜೇತ ಸ್ಪರ್ಧಿಗಿಂತ ಕೇವಲ 2 ನಿಮಿಷ 04 ಸೆಕೆಂಡ್ ತಡವಾಗಿ ಗುರಿತಲುಪಿದ ಗ್ಯಾಸ್ ಗ್ಯಾಸ್ ರೈಡರ್ ಡೇನಿಯಲ್ ಸ್ಯಾಂಡರ್ಸ್ ಮತ್ತು 5 ನಿಮಿಷ ತಡವಾಗಿ ಗುರಿತಲುಪಿದ ಹಾಲಿ ಚಾಂಪಿಯನ್ ಹೋಂಡಾ ತಂಡದ ಕೆವಿನ್ ಬೆನಾವಿಡೆಸ್ ಮೂರನೇ ಸ್ಥಾನ ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಐದು ಹಂತಗಳಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿರುವ ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಸ್ಯಾಮ್ ಸದರ್‌ಲ್ಯಾಂಡ್‌ 5ನೇ ಹಂತದಲ್ಲೂ ಆರನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಮೊದಲ ನಾಲ್ಕು ಹಂತದಲ್ಲೂ ಉತ್ತಮ ಸಾಧನೆಯೊಂದಿಗೆ ಸದ್ಯ ಒಟ್ಟಾರೆ ಬೈಕ್ ರ‍್ಯಾಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದ್ದಾರೆ.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ಹಾಗೆಯೇ ಭಾರತೀಯ ಮೋಟೊಸ್ಪೋರ್ಟ್ಸ್ ತಂಡಗಳಾದ ಹೀರೋ ಮೋಟೊಸ್ಪೋರ್ಟ್ಸ್ ಮತ್ತು ಟಿವಿಎಸ್ ಶೆರ್ಕೊ ತಂಡಗಳು ಐದನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಕಳೆದ ಮೂರು ವರ್ಷಗಳಿಂದ ಹೀರೋ ತಂಡವನ್ನು ಪ್ರತಿನಿಧಿಸುತ್ತಿರುವ ಪೋರ್ಚುಗೀಸ್ ರೈಡರ್ ಜೋಕ್ವಿಮ್ ರೊಡ್ರಿಗಸ್ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ಮೂರನೇ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಜೋಕ್ವಿಮ್ ರೊಡ್ರಿಗಸ್ ಐದನೇ ಹಂತದಲ್ಲಿ 20ನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಹೀರೋ ಮೋಟೊಸ್ಪೋರ್ಟ್ಸ್ ತಂಡದ ಮತ್ತೊಬ್ಬ ಸ್ಪರ್ಧಿ ಆರೋನ್ ಮೇರ್ ಕೂಡಾ ಉತ್ತಮ ಪ್ರದರ್ಶನ ತೋರುವ ಮೂಲಕ ಸದ್ಯ ಟಾಪ್ 15ರ ರ‍್ಯಾಕಿಂಗ್ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದ್ದಾರೆ.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ಟಿವಿಎಸ್ ಶೆರ್ಕೊ ತಂಡವು ಕೂಡಾ ಐದನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಳ್ಳುತ್ತಿದ್ದು, ಮೂವರು ಸ್ಪರ್ಧಿಗಳನ್ನು ಒಳಗೊಂಡಿರುವ ಟಿವಿಎಸ್ ತಂಡದ ಸ್ಪರ್ಧಿಗಳು ಟಾಪ್ 30 ಒಳಗೆ ಸ್ಥಾನ ಪಡೆದಿದೆ.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ಐದನೇ ಹಂತದಲ್ಲಿ ಕಾರುಗಳ ವಿಭಾಗವು ಕೂಡಾ ಸಾಕಷ್ಟು ರೋಚಕತೆಯಿಂದ ಮುಂದುವರಿದಿದ್ದು, ಮೊದಲ ಸ್ಥಾನಕ್ಕಾಗಿ ಟೊಯೊಟಾ ಮತ್ತು ಹಂಟರ್ ಟಿ1 ಬಿಆರ್‌ಎಕ್ಸ್ ನಡುವೆ ಭಾರೀ ಪೈಪೋಟಿ ಜೋರಾಗಿದೆ.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ಗಾಜೊ ರೇಸಿಂಗ್ ಟೊಯೊಟಾ ತಂಡದ ಹೆಂಕ್ ಲಟೆಗಾನ್ ಐದನೇ ಹಂತದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಕೇವಲ 40 ಸೆಕೆಂಡುಗಳ ಅಂತರದಲ್ಲಿ ಹಂಟರ್ ಟಿ1 ಬಿಆರ್‌ಎಕ್ಸ್ ತಂಡದ ಸೆಬಾಸ್ಟಿನ್ ಲೊಯೆಬ್ ಎರಡನೇ ಸ್ಥಾನವನ್ನು ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ಐದನೇ ಹಂತದ ಕಾರುಗಳ ವಿಭಾಗದಲ್ಲಿ ಮೊದಲ ಬಾರಿಗೆ ದಾಖಲೆ ನಿರ್ಮಿಸಿದ್ದ ಆಡಿ ಇ-ಟ್ರಾನ್ ತಂಡವು ಮೂರನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಕಾರುಗಳ ವಿಭಾಗದಲ್ಲಿ ಒಟ್ಟಾರೆ ರ‍್ಯಾಕಿಂಗ್‌ನಲ್ಲಿ ಗಾಜೊ ರೇಸಿಂಗ್ ಟೊಯೊಟಾ ತಂಡದ ನಾಸರ್ ಅಲ್-ಅತ್ತಿಯಾ ಮೊದಲ ಸ್ಥಾನದಲ್ಲಿ ಮತ್ತು ಹಂಟರ್ ಟಿ1 ಬಿಆರ್‌ಎಕ್ಸ್ ತಂಡದ ಸೆಬಾಸ್ಟಿನ್ ಲೊಯೆಬ್ ಎರಡನೇ ಸ್ಥಾನದಲ್ಲಿದ್ದಾರೆ.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ಹಾಗೆಯೇ ಟ್ರಕ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಕಮಾಜ್ ಮಾಸ್ಟರ್ ತಂಡವು ಅತ್ಯುತ್ತಮ ಚಾಲನಾ ಕೌಶಲ್ಯತೆಯೊಂದಿಗೆ ಅಗ್ರಸ್ಥಾನದೊಂದಿಗೆ ಮುಂದುವರೆದಿದ್ದು, ಮೊದಲ ಸ್ಥಾನವನ್ನು ಕಮಾಜ್ ಮಾಸ್ಟರ್ ತಂಡದ ಡಿಮಿಟ್ರಿ ಸೊಟಿಕ್ನೊವ್, ಆಂಡ್ರೆ ಕಾರ್ಗಿನೋವ್ ಎರಡನೇ ಸ್ಥಾನವನ್ನು ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

ಇನ್ನು 44ನೇ ಆವೃತ್ತಿಯಲ್ಲಿ ಕಳೆದ ವರ್ಷದ ರ‍್ಯಾಲಿಯಲ್ಲಿ ಕೆಲವು ಅಪಾಯಕಾರಿ ಮಾರ್ಗಗಳನ್ನು ಕೈಬಿಡಲಾಗಿದ್ದು, ಕಳೆದ ಆವೃತ್ತಿಗಿಂತಲೂ ಹೊಸ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

14 ಹಂತಗಳನ್ನು ಒಳಗೊಂಡಿದ್ದ 43ನೇ ಡಕಾರ್ ರ‍್ಯಾಲಿಯ ಮಾರ್ಗಗಳನ್ನು 44ನೇ ಆವೃತ್ತಿಯಲ್ಲಿ 12ಕ್ಕೆ ಇಳಿಕೆ ಮಾಡಿದ್ದು, ಯಾವುದೇ ರೀತಿಯ ದುರಂತಗಳಿಗೆ ಎಡೆಮಾಡಿಕೊಡದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲಾಗಿದೆ. 2022ರ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಒಟ್ಟು ಅಂತರವನ್ನು ಕಳೆದ ಬಾರಿಯ 7 ಸಾವಿರ ಕಿ.ಮೀ ಅಂತರದಿಂದ 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿದೆ.

ಡಕಾರ್ ರ‍್ಯಾಲಿ 2022: ಐದನೇ ಹಂತದಲ್ಲೂ ಅತ್ಯುತ್ತಮ ರ‍್ಯಾಕಿಂಗ್ ಕಾಯ್ದುಕೊಂಡ ಸ್ಯಾಮ್ ಸದರ್‌ಲ್ಯಾಂಡ್‌

2022ರ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದು, ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಡಲಾಗಿದೆ.

Article Published On: Friday, January 7, 2022, 8:45 [IST]
English summary
Dakar rally 2022 stage 5 results ktm s toby price win in the bikes category
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+