ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಬಿಡುಗಡೆಯಾದ ಅತಿ ಕಡಿಮೆ ಸಮಯದಲ್ಲೇ ಆಫ್‌ರೋಡ್ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡ ಹೀರೋ Xpulse 200T ಇದೀಗ ಮತ್ತಷ್ಟು ನವೀಕರಣಗೊಂಡು ಬಿಡುಗಡೆಗೆ ಸಜ್ಜಾಗಿದೆ. ಆದರೆ ಬಿಡುಗಡೆಗೂ ಮುನ್ನವೇ ಈ ಹೊಸ ಬೈಕ್‌ನ ಬಣ್ಣಗಳ ಕುರಿತು ಟೀಸರ್ ಚಿತ್ರಗಳನ್ನು ಹೊರಬಿಡಲಾಗಿದೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ನವೀಕರಿಸಿದ ಬೈಕ್ ಅನ್ನು ಅಧಿಕೃತವಾಗಿ ಟೀಸ್ ಮಾಡಲಾಗಿದೆ. ಈ ಟೀಸರ್ ಚಿತ್ರಗಳು ಹೊಸ ಬೈಕ್‌ನ ಬಣ್ಣದ ಕುರಿತು ವಿವರಿಸುತ್ತಿದ್ದು, 3 ಹೊಸ ಡ್ಯುಯಲ್-ಟೋನ್ ಆಯ್ಕೆಗಳನ್ನು ಪಡೆಯುವ ಸಾಧ್ಯತೆಯಿದೆ. ಆಗಸ್ಟ್‌ನಲ್ಲಿ ನವೀಕರಿಸಿದ್ದ Hero Xpulse 200T ಬೈಕ್‌ನ ಕೆಲವು ಚಿತ್ರಗಳನ್ನು ನಿಮಗಾಗಿ ತಂದಿದ್ದೇವೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಜೊತೆಗೆ ಇತ್ತೀಚೆಗೆ ಹೀರೋ ಮೊದಲ ಬಾರಿಗೆ ಫೇಸ್‌ಲಿಫ್ಟೆಡ್ ಮೋಟಾರ್‌ಸೈಕಲ್ ಟೀಸರ್ ಚಿತ್ರಗಳನ್ನು ಬಿಟ್ಟಿದ್ದು ಎರಡರ ನಡುವಿನ ವ್ಯತ್ಯಾಸವನ್ನು ನೀವು ನೋಡಬಹುದು. ಇದರ ಅಧಿಕೃತ ಬಿಡುಗಡೆಗೆ ಇನ್ನೂ ಸಮಯವಿದ್ದರೂ ಆಫ್‌ ರೋಡ್ ಪ್ರಿಯರನ್ನು ರಂಜಿಸಲು ಟೀಸರ್ ಚಿತ್ರಗಳ ಮೂಲಕ ಸಣ್ಣ ಜಲಕ್ ನೀಡಲಾಗಿದೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಈಗ ನವೀಕರಿಸಿದ Xpulse 200T ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ ನಂತರ ನೀಡಬಹುದಾದ ಮೂರು ಹೊಸ ಬಣ್ಣಗಳನ್ನು ಇಲ್ಲಿ ನೋಡಬಹುದು. ಎಲ್ಲಾ ಮೂರು ಡ್ಯುಯಲ್-ಟೋನ್ ಬಣ್ಣದ ಯೋಜನೆಗಳು ಹೊಸ ಬಣ್ಣಗಳಾಗಿದ್ದು, ಇವನ್ನು ಪ್ರಸ್ತುತ ಮಾರಾಟವಾಗುತ್ತಿರುವ Xpulse 200T ಮಾದರಿಗಳಲ್ಲಿ ನೀಡಲಾಗುತ್ತಿಲ್ಲ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಸದ್ಯಕೆ ಖರೀದಿಗೆ ಲಭ್ಯವಿರುವ ಬೈಕ್‌ಗಳು ಕೇವಲ ಸಿಂಗಲ್ ಟೋನ್ ಬಣ್ಣಗಳಲ್ಲಿ ಮಾತ್ರ ಲಭ್ಯವಿವೆ. ಆದರೆ ಹೊಸದಾಗಿ ಪರಿಚಯಿಸುತ್ತಿರುವ ಡ್ಯುಯಲ್ ಟೋನ್ ಬಣ್ಣಗಳು ಹೆಚ್ಚು ಆಕರ್ಷಣೀಯ ಮತ್ತು ಸ್ಟೈಲಿಷ್ ಆಗಿ ಮೂಡಿ ಬಂದಿವೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಹೊಸ ಬಣ್ಣದ ಆಯ್ಕೆ ಕುರಿತ ವಿವರ

ಮುಂಬರಲಿರುವ ಹೀರೋ ಮ್ಯಾಟ್ ಶೀಲ್ಡ್ ಗೋಲ್ಡ್ ಎಂದು ಕರೆಯುವ ಬ್ರಾಂಜ್ ಮತ್ತು ಡಾರ್ಕ್ ಗ್ರೇ ಆಯ್ಕೆಯು ಹೆಚ್ಚು ಬೇಡಿಕೆ ಪಡೆಯುವ ನಿರೀಕ್ಷೆಯಿದೆ. ಇದರ ಮುಂಭಾಗದ ಮಡ್‌ಗಾರ್ಡ್ ಮತ್ತು ಫ್ಲೈಸ್ಕ್ರೀನ್ ಅನ್ನು ಬ್ರಾಂಜ್‌ನಲ್ಲಿ ಪೂರ್ಣಗೊಳಿಸಲಾಗಿದೆ. ಆದರೆ ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳು ಪ್ರಾಥಮಿಕವಾಗಿ ಗ್ರೇ ಬಣ್ಣದ್ದಲ್ಲಿ ನೀಡಲಾಗಿದೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಸೀಟ್ ವಿಭಾಗವು ಡ್ಯುಯಲ್-ಟೋನ್ ಸ್ಕೀಮ್ ಮತ್ತು ಕಾಂಟ್ರಾಸ್ಟ್ ಸ್ಟಿಚಿಂಗ್ ಅನ್ನು ಒಳಗೊಂಡಿದೆ. ನೋಡಲು ಪ್ರೀಮಿಯಂ ಆಗಿ ಕಾಣುತ್ತಿದ್ದು, ಹಳೆಯ ಮಾದರಿಯಂತೆ ಆಫ್‌ ರೋಡ್ ನೋಟವನ್ನು ಹಾಗೇ ಉಳಿಸಿಕೊಂಡು ಹೊಸ ಬಣ್ಣದ ಆಯ್ಕೆಯಲ್ಲಿ ಇನ್ನಷ್ಟು ಸ್ಟೈಲಿಷ್ ಲುಕ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಮುಂದಿನ ಬಣ್ಣವು ಸ್ಪೋರ್ಟ್ಸ್ ರೆಡ್ ಆಯ್ಕೆಯಾಗಿದ್ದು, ಇದನ್ನು ಹಿಂದಿನ ಮಾದರಿಯಂತೆ ಗ್ರೇ ವಿಭಾಗಗಳನ್ನು ಕಪ್ಪು ಬಣ್ಣದಿಂದ ಬದಲಾಯಿಸಲಾಗುತ್ತದೆ. ಬ್ರಾಂಜ್ (ಕಂಚು) ಸ್ಥಳದಲ್ಲಿ ನೀವು ಕಡುಗೆಂಪು ಬಣ್ಣವನ್ನು ನೋಡಬಹುದು. ಇನ್ನು ಬ್ರಾಂಜ್/ಗ್ರೇ ಆಯ್ಕೆಯ ಮೇಲೆ ಮ್ಯಾಟ್‌ಗೆ ವಿರುದ್ಧವಾಗಿ ಶೈನೀ ಡ್ಯುಯಲ್ ಟೋನ್ ಸೀಟ್ ಇಲ್ಲಿಯೂ ಇದೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಕೊನೆಯ ಬಣ್ಣದ ಆಯ್ಕೆಯು ಬಹಳಷ್ಟು ಹೊಳಪಿನದ್ದಾಗಿದೆ (ಶೈನೀ), ಸಿಲ್ವರ್ ಹಿನ್ನೆಲೆಯಲ್ಲಿ ಬಿಳಿ, ಹಸಿರು ಮುಖ್ಯಾಂಶಗಳನ್ನು ಒಳಗೊಂಡಿದೆ. ಇದು ಮ್ಯಾಟ್ ಫಿನಿಶ್ ಅನ್ನು ಸಹ ಹೊಂದಿದೆ. ಡ್ಯುಯಲ್-ಟೋನ್ ಸೀಟ್ ಅನ್ನು ಸಹ ಪಡೆಯುತ್ತದೆ. ಈ ಡ್ಯುಯಲ್ ಟೋನ್‌ಗಳು ಬೈಕಿನ ಅಂದವನ್ನು ಇನ್ನಷ್ಟು ಹೆಚ್ಚಿಸಿವೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಇನ್ನು ಮೂರು ಬಣ್ಣದ ಆಯ್ಕೆಗಳು ಬ್ಲಾಕ್ ವೀಲ್‌ಗಳನ್ನು ಪಡೆಯುತ್ತವೆ. ಸಂಪ್ ಗಾರ್ಡ್ ಮತ್ತು ಹಿಂದಿನ ಮಡ್‌ಗಾರ್ಡ್‌ನಂತಹ ಕೆಲವು ಪ್ಲಾಸ್ಟಿಕ್ ಬಿಟ್‌ಗಳು ಬೋರ್ಡ್‌ನಾದ್ಯಂತ ಬ್ಲಾಕ್ ಬಣ್ಣದಲ್ಲಿರುತ್ತವೆ. ಇವು ಆಯಾ ವಿಭಾಗದ ಬಣ್ಣದ ಆಯ್ಕೆಗೆ ಅನುಗುಣವಾಗಿ ಸೀಮಿತವಾಗಿ ಬಣ್ಣಗಳನ್ನು ಪಡೆದುಕೊಂಡಿವೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಈ ಬೈಕ್‌ನಲ್ಲಿ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲ. ಅದೇ 199.6 ಸಿಸಿ ಸಿಂಗಲ್-ಸಿಲಿಂಡರ್ ಆಯಿಲ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 18.1 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಇನ್ನು ಈ ಎಂಜಿನ್ 6,500 ಆರ್‌ಪಿಎಂನಲ್ಲಿ 16.15 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಹೊಸ ಹೀರೋ ಎಕ್ಸ್‌ಪಲ್ಸ್ 200 ಬೈಕ್ 157 ಕೆ.ಜಿ ತೂಕವನ್ನು ಹೊಂದಿದೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಈ ಹೀರೋ ಎಕ್ಸ್‌ಪಲ್ಸ್ 200ಟಿ ಬೈಕಿನ ಆಯಾಮದಲ್ಲೂ ಯಾವುದೇ ಬದಲಾವಣೆಗಳಿಲ್ಲ. ಇದು 177 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 13 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಮತ್ತು 799 ಎಂಎಂ ಸೀಟ್ ಎತ್ತರವನ್ನು ಹೊಂದಿದೆ.

ಬಿಡುಗಡೆಗೂ ಮುನ್ನವೇ ಬಹಿರಂಗಗೊಂಡ ನವೀಕರಿಸಿದ ಹೀರೋ Xpulse 200T ಬೈಕ್‌ನ 3 ಬಣ್ಣಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೀರೋ ಎಕ್ಸ್‌ಪಲ್ಸ್ 200ಟಿ ಬೈಕಿಗೆ ಆಫ್‌ ರೋಡ್ ವಿಭಾಗದಲ್ಲಿ ಬೇಡಿಕೆ ಹೆಚ್ಚಾಗಿದೆ. ಯುವಕರು ಕೂಡ ಇತ್ತೀಚೆಗೆ ಆಫ್‌ರೋಡ್ ಬೈಕುಗಳನ್ನು ಹೆಚ್ಚಾಗಿ ಖರೀದಿಸುತ್ತಿರುವುದರಿಂದ ಹೊಸದಾಗಿ ಬಿಡುಗಡೆಯಾಗಲಿರುವ ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುವ ನಿರಿಕ್ಷೆಯಿದೆ.

Most Read Articles

Kannada
English summary
Details of 3 colors of the updated Hero Xpulse 200T revealed ahead of the launch
Story first published: Tuesday, November 8, 2022, 11:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X