ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ಕರ್ನಾಟಕದಲ್ಲಿ ಪ್ರಿ-ಯೂನಿವರ್ಸಿಟಿ (ಪಿಯುಸಿ) ವಿದ್ಯಾರ್ಥಿಗಳು ಕಾಲೇಜುಗಳಿಗೆ ಮೋಟಾರು ವಾಹನಗಳನ್ನು ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ, ನಿಯಮ ಉಲ್ಲಂಘಿಸುವ ತಪ್ಪಿತಸ್ಥ ವಿದ್ಯಾರ್ಥಿಗಳ ಪೋಷಕರು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸ್ ಕಮಿಷನರ್ ರವಿಕಾಂತೇಗೌಡ ಎಚ್ಚರಿಕೆ ನೀಡಿದ್ದಾರೆ.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ಈ ಹಿಂದೆ ಹೆಲ್ಮೆಟ್ ಧರಿಸಿ ಕಾನೂನು ನಿಯಮಗಳನ್ನು ಪಾಲಸಿ ಸಂಚರಿಸುತ್ತಿದ್ದರು ಪೊಲೀಸರು ಅಡ್ಡಗಟ್ಟಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಅಲ್ಲದೇ ಕೆಲವೆಡೆ ಇತರ ರಾಜ್ಯಗಳಿಂದ ಬರುವ ವಾಹನಗಳನ್ನು ತಡೆದು ಪೊಲೀಸರು ಇಲ್ಲಸಲ್ಲದ ಕಾರಣ ಹೇಳಿ ಹಣ ಸುಳಿಗೆ ಮಾಡುತ್ತಿದ್ದರು. ಈ ಸಂಬಂಧ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹಲವು ದೂರುಗಳು ಕೇಳಿಬಂದಿದ್ದವು.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರು, ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವುದನ್ನು ಕಂಡಾಗ ಮಾತ್ರ ಅಂತಹವರನ್ನು ತಡೆದು ದಾಖಲೆಗಳನ್ನು ಪರಿಶೀಲಿಸಬೇಕು, ನಿಯಮ ಪಾಲನೆ ಮಾಡುವವರನ್ನು ಸುಖಾಸುಮ್ಮನೆ ನಿಲ್ಲಿಸಬಾರದು ಎಂದು ಪೊಲೀಸರಿಗೆ ಸೂಚನೆ ನೀಡಿದ್ದರು.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ಹಾಗಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಕಾನೂನು ನಿಯಮಗಳನ್ನು ಪಾಲನೆ ಮಾಡಿದರೂ ಅವರು ವಾಹನಗಳನ್ನು ಓಡಿಸುವಂತಿಲ್ಲ. ಒಂದು ವೇಳೆ ನಿಯಮಗಳನ್ನು ಪಾಲಿಸಿ ವಾಹನಗಳನ್ನು ಚಾಲನೆ ಮಾಡಿದರೆ ಅಂತವರನ್ನು ನಿಲ್ಲಿಸದಂತೆ ಸೂಚನೆ ರವಾನಿಸಲಾಗಿದೆ. ಹಾಗಾಗಿ ವಿದ್ಯಾರ್ಥಿಗಳನ್ನು ಕಂಡುಕೊಳ್ಳುವುದು ಕಷ್ಟವಾಗುತ್ತದೆ.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ಈ ನಿಟ್ಟಿನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮೋಟಾರು ವಾಹನಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ವಿದ್ಯಾರ್ಥಿಗಳನ್ನು ಸೈಕಲ್, ಬಸ್ ಅಥವಾ ಆಟೋದಂತಹ ಇತರ ಸಾರಿಗೆ ವಿಧಾನಗಳನ್ನು ಬಳಸಲು ಪ್ರೋತ್ಸಾಹಿಸಲು ನಾವು ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ವಿದ್ಯಾರ್ಥಿ ತಪ್ಪೆಸಗಿರುವುದು ಗೊತ್ತಾದರೆ ವಾಹನ ಜಪ್ತಿ ಮಾಡಿ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಪರಾಧದ ಆಧಾರದ ಮೇಲೆ ಅವರಿಗೆ ದಂಡ ಮತ್ತು ಚಾರ್ಜ್‌ಶೀಟ್ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ಕರ್ನಾಟಕ ಮೋಟಾರು ವಾಹನ ನಿಯಮಗಳ ಪ್ರಕಾರ, 16 ವರ್ಷಗಳನ್ನು ಪೂರ್ಣಗೊಳಿಸಿರುವವರಿಗೆ 50 ಸಿಸಿ ಮೀರದ ಎಂಜಿನ್ ಸಾಮರ್ಥ್ಯದ ಸ್ಕೂಟರ್ ಅಥವಾ ಮೊಪೆಡ್‌ಗಳಂತಹ ದ್ವಿಚಕ್ರ ವಾಹನಗಳನ್ನು ಚಲಾಯಿಸಲು ಚಾಲನಾ ಪರವಾನಗಿ ನೀಡಲಾಗುತ್ತದೆ. ಕಾರು, ಬೈಕ್‌ಗಳಂತಹ ಲಘು ಮೋಟಾರು ವಾಹನಗಳಿಗೆ ಪರವಾನಗಿ ಪಡಿಯಲು 18 ವರ್ಷ ಪೂರ್ಣಗೊಳಿಸಿರಬೇಕು.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ಹಾಗಾಗಿ ನಿಯಮಗಳ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮೋಟಾರು ವಾಹನ ಚಲಾಯಿಸುವಂತಿಲ್ಲ. 16 ಅಥವಾ 17 ವರ್ಷ ವಯಸ್ಸಿನ ಬಹಳಷ್ಟು ಪಿಯು ವಿದ್ಯಾರ್ಥಿಗಳು ಪರವಾನಗಿ ಮತ್ತು ದಾಖಲೆಗಳಿಲ್ಲದೆ ಕಾನೂನುಬಾಹಿರವಾಗಿ ಕಾಲೇಜುಗಳಿಗೆ ನಿತ್ಯ ಪ್ರಯಾಣಿಸುತ್ತಾರೆ. ಇದು ಹಲವು ಬಾರಿ ನಮ್ಮ ಗಮನಕ್ಕೆ ಬಂದಿದೆ.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ನಾವು ಎರಡು ವರ್ಷಗಳ ಹಿಂದೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬಯಸಿದ್ದೆವು ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಸಾಧ್ಯವಾಗಲಿಲ್ಲ ಎಂದ ಅವರು, ಕಲಿಕಾ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮ್ಮ ವಾಹನದ ಮೇಲೆ 'ಎಲ್' ಬೋರ್ಡ್ ಅಂಟಿಸಿರಬೇಕು ಎಂದು ರವಿಕಾಂತೇಗೌಡ ಹೇಳಿದರು.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ಸೌತ್ ಎಂಡ್ ಸರ್ಕಲ್ ಬಳಿಯ ಸುರಾನಾ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರಪ್ಪ ಮಾತನಾಡಿ, ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ 18 ವರ್ಷದೊಳಗಿನ ವಿದ್ಯಾರ್ಥಿಗಳು ತಮ್ಮ ಮೋಟಾರು ವಾಹನಗಳನ್ನು ಸಂಸ್ಥೆಗೆ ತರದಂತೆ ನಾವು ಹೇಳಿದ್ದೆವು. ಚಾಲನಾ ಪರವಾನಿಗೆ ಹೊಂದಿರದ ವಿದ್ಯಾರ್ಥಿಗಳಿಗೆ ವಾಹನ ನಿಲುಗಡೆಗೆ ಅವಕಾಶ ನೀಡುವುದಿಲ್ಲ. ತರಗತಿಗಳು ಈಗ ಆಫ್‌ಲೈನ್‌ನಲ್ಲಿರುವ ಕಾರಣ ಮುಂಬರುವ ವರ್ಷಗಳಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ಬೆಳಗಾವಿಯ ಡಿಸಿಪಿ (ಅಪರಾಧ) ಪಿ.ವಿ ಸ್ನೇಹಾ ಮಾತನಾಡಿ, ಈ ನಿಯಮದ ಬಗ್ಗೆ ಪ್ರತಿ ವರ್ಷ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಈ ವರ್ಷವೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಮೋಟಾರು ವಾಹನಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ನಾವು ಕಾಲೇಜುಗಳಿಗೆ ತಿಳಿಸಿದ್ದೇವೆ. ಅವರು ಉಲ್ಲಂಘಿಸಿರುವುದು ಕಂಡುಬಂದರೆ, ನಿಯಮಗಳ ಪ್ರಕಾರ ಪೋಷಕರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ ಎಂದರು.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ: ಪೋಷಕರ ವಿರುದ್ಧ ಎಫ್‌ಐಆರ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಳೆದ ಹಲವು ವರ್ಷಗಳಿಂದ ಬೆಂಗಳೂರು ನಗರದಲ್ಲಿ ಸ್ಕೂಲ್‌ ಮಕ್ಕಳು ಸಹ ಬೈಕ್, ಸ್ಕೂಟರ್‌ಗಳಲ್ಲಿ ಶಾಲಾ-ಕಾಲೇಜಿಗೆ ತೆರಳುತ್ತಿರುವುದು ಸಮಾನ್ಯ ವಿಷಯವಾಗಿಬಿಟ್ಟಿದೆ. ಹಲವು ಬಾರಿ ಪೋಷಕರ ಗಮನಕ್ಕೆ ತಂದು ದಂಡ ವಿಧಿಸಿದರೂ ಇಂತಹ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಹಾಗಾಗಿ ಈ ಬಾರಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಇನ್ನಾದರೂ ಪೋಷಕರು ಪೊಲೀಸರ ಕ್ರಮಕ್ಕೆ ಎಚ್ಚೆತ್ತು ಮಕ್ಕಳಿಗೆ ವಾಹನಗಳನ್ನು ನೀಡದೆ ಎಚ್ಚರ ವಹಿಸುವರೇ ಕಾದುನೋಡಬೇಕಿದೆ.

Most Read Articles

Kannada
English summary
FIR against parents if PU students caught driving
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X