2022ರಲ್ಲಿ ಭಾರತದಲ್ಲಿ ಬಿಡುಗಡೆಯಾದ 5 ಅತ್ಯಂತ ಜನಪ್ರಿಯ ದ್ವಿಚಕ್ರ ವಾಹನಗಳು
ಇನ್ನೇನು ಕೆಲವೇ ದಿನಗಳಲ್ಲಿ 2022 ಕೊನೆಗೊಂಡು 2023 (ಹೊಸ ವರ್ಷ) ಆರಂಭವಾಗಲಿದೆ. ಭಾರತದಲ್ಲಿ ಆಟೋಮೊಬೈಲ್ ಮಾರುಕಟ್ಟೆಯು ಈ ವರ್ಷ ಹಲವು ಹೊಸ ವಾಹನಗಳ ಬಿಡುಗಡೆಗೆ ಸಾಕ್ಷಿಯಾಯಿತು. ಟಿವಿಎಸ್, ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಮಾರುಕಟ್ಟೆಗೆ ಬಂದವು. ಇಲ್ಲಿ 2022ರಲ್ಲಿ ಲಾಂಚ್ ಆದ 5 ಪ್ರಮುಖ ದ್ವಿಚಕ್ರ ವಾಹನಗಳ ಬಗ್ಗೆ ತಿಳಿಸಿಕೊಡಲಾಗಿದೆ.
1.ರಾಯಲ್ ಎನ್‌ಫೀಲ್ಡ್ ಹಂಟರ್ 350:
ಈ ಪಟ್ಟಿಯಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಅಗ್ರಸ್ಥಾನದಲ್ಲಿರುವುದರಲ್ಲಿ ಆಶ್ಚರ್ಯವೇನಿಲ್ಲ. ರಾಯಲ್ ಎನ್‌ಫೀಲ್ಡ್ ದೇಶದ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿದ್ದು, ಹೆಚ್ಚು ಯುವ ಜನರನ್ನು ತನ್ನತ್ತ ಆಕರ್ಶಿಸುತ್ತದೆ. ಇದಲ್ಲದೆ ಹಂಟರ್ 350, 2022ರ ಅತ್ಯಂತ ಬಹುನಿರೀಕ್ಷಿತ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಇದರ ಆರಂಭಿಕ ಬೆಲೆ ದೇಶೀಯ ಮಾರುಕಟ್ಟೆಯಲ್ಲಿ 1,49,900. ರೂ.ಇದ್ದು, 3 ರೂಪಾಂತರಗಳು ಮತ್ತು 8 ಬಣ್ಣಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.

ಟಾಪ್ ವೆರಿಯಂಟ್ ಬೆಲೆ ರೂ.1,71,221 ಇದೆ. ನೂತನ ರಾಯಲ್ ಎನ್‌ಫೀಲ್ಡ್ ಹಂಟರ್ 350, 349 ಸಿಸಿ BS6 ಎಂಜಿನ್ ಅನ್ನು ಹೊಂದಿದೆ. ಇದು 20.2 bhp ಗರಿಷ್ಠ ಪವರ್ ಮತ್ತು 27 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್ ಜೊತೆಗೆ ರಾಯಲ್ ಎನ್‌ಫೀಲ್ಡ್ ಹಂಟರ್ 350 ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ ನೊಂದಿಗೆ ಖರೀದಿಗೆ ಲಭ್ಯವಿದ್ದು, ಈ ಹಂಟರ್ 350 ಬೈಕ್ 177 ಕೆಜಿ ತೂಕವಿದ್ದು, 13 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.
2.ಬಜಾಜ್ ಪಲ್ಸರ್ N160:
ಬಜಾಜ್ ಪಲ್ಸರ್ N160, ಹೊಸ ಪಲ್ಸರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ನ ಎರಡನೇ ಉತ್ಪನ್ನವಾಗಿದೆ. ಭಾರತದಲ್ಲಿ ಯಾವಾಗಲೂ 'ಪಲ್ಸರ್' ಬ್ರ್ಯಾಂಡ್ ಅತ್ಯಂತ ಜನಪ್ರಿಯವಾಗಿದ್ದು, ಬಹುತೇಕ ಯುವಕರೇ ಈ ಬೈಕ್ ಅನ್ನು ಹೆಚ್ಚು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಇದರಿಂದ ಈ ಪಟ್ಟಿಯಲ್ಲಿ ಬಜಾಜ್ ಪಲ್ಸರ್ N160 ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಬಹುದು.
ಬಜಾಜ್ ಪಲ್ಸರ್ N160 ಬೈಕ್ ಆರಂಭಿಕ ಬೆಲೆ ರೂ.1,23,010 ಇದ್ದು, ದೇಶದಲ್ಲಿ ಇದು 2 ರೂಪಾಂತರಗಳಲ್ಲಿ ಹಾಗೂ 4 ಬಣ್ಣಗಳಲ್ಲಿ ಲಭ್ಯವಿದೆ. ಟಾಪ್ ವೆರಿಯಂಟ್ ಬೆಲೆ ರೂ.1,29,323 ಇದೆ. ಬಜಾಜ್ ಪಲ್ಸರ್ N160, 164.82 ಸಿಸಿ BS6 ಎಂಜಿನ್ ಹೊಂದಿದ್ದು, ಇದು 15.68 bhp ಗರಿಷ್ಠ ಪವರ್ ಮತ್ತು 14.65 Nm ಟಾರ್ಕ್ ಉತ್ಪಾದಿಸುತ್ತದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಡಿಸ್ಕ್ ಬ್ರೇಕ್‌ಗಳೊಂದಿಗೆ ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ ಹೊಂದಿದ್ದು, 152 ಕೆಜಿ ತೂಕವಿದ್ದು, 14 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.
3.ಜಾವಾ 42 ಬಾಬರ್:
ಬೈಕ್ ಪ್ರಿಯರು ಇಷ್ಟಪಡುವ ಆಕರ್ಷಕ ಮೋಟಾರ್‌ಸೈಕಲ್‌ಗಳಲ್ಲಿ ಜಾವಾ 42 ಬಾಬರ್ ಕೂಡ ಒಂದಾಗಿದೆ. ಆದರೆ, ಒಂದೇ ಆಸನ ಇರುವುದರಿಂದ ಈ ಬೈಕ್ ಖರೀದಿಗೆ ಗ್ರಾಹಕರು ಕೊಂಚ ಮಟ್ಟಿಗೆ ಹಿಂದೇಟು ಹಾಕುತ್ತಾರೆ. ಜಾವಾ 42 ಬಾಬರ್ ಬೈಕ್ ಆರಂಭಿಕ ಬೆಲೆ ರೂ. 2,11,113 ಇದ್ದು, ಮೂರು ರೂಪಾಂತರಗಳು ಮತ್ತು 3 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಜಾವಾ 42 ಬಾಬರ್, 334 ಸಿಸಿ BS6 ಎಂಜಿನ್ ಹೊಂದಿದ್ದು, ಇದು 30.2 bhp ಪವರ್, 32.74 Nm ಟಾರ್ಕ್ ಉತ್ಪಾದಿಸುತ್ತದೆ.
4.ಯಮಹಾ FZ-25:
ಯಮಹಾ FZ25ನ 2022 ಆವೃತ್ತಿಯನ್ನು ಈ ವರ್ಷದ ಜನವರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಯಾಂತ್ರಿಕವಾಗಿ ಅದರ ಹಿಂದಿನ ಆವೃತ್ತಿಯಂತೆ ಕಂಡರೂ ಕೆಲವೊಂದು ಸ್ಟೈಲಿಂಗ್ ನಲ್ಲಿ ಪರಿಷ್ಕರಣೆಯನ್ನು ಪಡೆದುಕೊಂಡಿದೆ. ಈ ಮೋಟಾರ್‌ಸೈಕಲ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಅವುಗಳೆಂದರೆ, FZ 25, FZS-25. ಇವುಗಳ ಬೆಲೆ 1.38 ಲಕ್ಷ ಮತ್ತು 1.43 ಲಕ್ಷ ರೂ. ಯಮಹಾ FZ 25 ರೇಸಿಂಗ್ ಬ್ಲೂ ಮತ್ತು ಮೆಟಾಲಿಕ್ ಬ್ಲ್ಯಾಕ್, ಮ್ಯಾಟ್ ಕಾಪರ್ ಪೇಂಟ್ ಸ್ಕೀಮ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.
5.ಟಿವಿಎಸ್ ರೋನಿನ್:
ಟಿವಿಎಸ್‌ನ ರೋನಿನ್ ಈ ವರ್ಷದ ಅತ್ಯಂತ ಜನಪ್ರಿಯ ಬೈಕ್ ಎಂದರೇ ತಪ್ಪಾಗುವುದಿಲ್ಲ. ಟಿವಿಎಸ್ ರೋನಿನ್ ಕ್ರೂಸರ್ ಬೈಕ್ ಆರಂಭಿಕ ಬೆಲೆ ರೂ.1,49,000 ಇದ್ದು, 3 ರೂಪಾಂತರಗಳು ಮತ್ತು 6 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಟಾಪ್ ವೆರಿಯಂಟ್ ಬೆಲೆ ರೂ.1,68,750 ಇದೆ. ಹೊಸ ಟಿವಿಎಸ್ ರೋನಿನ್, 225.9ಸಿಸಿ BS6 ಎಂಜಿನ್ ಹೊಂದಿದ್ದು, ಇದು 20.1 bhp ಪವರ್ ಮತ್ತು 19.93 Nm ಟಾರ್ಕ್ ಉತ್ಪಾದಿಸಲಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.


Click it and Unblock the Notifications








