ನಿಮ್ಮ ಬೈಕ್ ಅಥವಾ ಕಾರನ್ನು ನಾಯಿಗಳು ಎಂದಾದರೂ ಬೆನ್ನಟ್ಟಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಬೈಕ್ ಅಥವಾ ಕಾರಿನಲ್ಲಿ ಹೋಗುವಾಗ ನಾಯಿಗಳು ನಿಮ್ಮನ್ನು ಹಿಂಬಾಲಿಸಿವೆಯೇ? ಅವು ಏಕೆ ಬೆನ್ನಟ್ಟುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದು ನಿಜವಾಗಿಯೂ ಸಣ್ಣ ವಿಷಯವಾದರು ಇದರ ಹಿಂದೆ ಕೆಲವು ಬಲವಾದ ಕಾರಣಗಳಿವೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಹಗಲು, ರಾತ್ರಿ ಎನ್ನದೆ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ನಾಯಿಗಳು ವಾಹನಗಳನ್ನು ಹಿಂಬಾಲಿಸುತ್ತವೆ. ಆದರೆ, ನಾಯಿಗಳು ಎಲ್ಲಾ ರೀತಿಯ ವಾಹನಗಳನ್ನು ಹಿಂಬಾಲಿಸುವುದಿಲ್ಲ. ಅವು ಕೆಲವು ಆಯ್ದ ಬಣ್ಣಗಳನ್ನು ಹೊಂದಿರುವ ಕಾರುಗಳು ಅಥವಾ ದ್ವಿಚಕ್ರ ವಾಹನಗಳನ್ನು ಮಾತ್ರ ಬೆನ್ನಟ್ಟುತ್ತವೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಇಂತಹ ಘಟನೆಗಳಲ್ಲಿ ಪ್ರಾಣಿಗಳಷ್ಟೇ ಅಲ್ಲ, ವಾಹನಗಳ ಚಾಲಕರಿಗೂ ಅಪಾಯವಿದೆ. ಹಳ್ಳಿ ಮತ್ತು ನಗರಗಳೆಂಬ ಭೇದವಿಲ್ಲದೆ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಈ ಸಮಸ್ಯೆಯನ್ನು ವಾಹನ ಚಾಲಕರು ಎದುರಿಸಿರುತ್ತಾರೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಸಾಮಾನ್ಯವಾಗಿ, ಯಾರಾದರೂ ಹೊಸಬರು ಮನೆಗೆ ಬಂದಾಗ ಅಥವಾ ನಾಯಿಗಳು ಇರುವ ಪ್ರದೇಶದಲ್ಲಿ ಯಾರಾದರೂ ಹೊಸಬರನ್ನು ಕಂಡಾಗ ಅವು ಬೊಗಳುತ್ತವೆ. ನಾಯಿಗಳು ಸಾಮಾನ್ಯವಾಗಿ ಪ್ರತಿದಿನ ಕಾಣುವ ಮತ್ತು ಅವಕ್ಕೆ ಆಹಾರ ನೀಡುವವರನ್ನು ನಂಬಿ ಅವರೊಂದಿಗೆ ನಿಷ್ಠವಾಗಿರುತ್ತವೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಆದರೆ ಹೊಸ ಜನರನ್ನು ಮೊದಲು ನೋಡಿದಾಗ ಬೇಗನೆ ಗಾಬರಿಗೊಳಗಾಗಿ ಅಪಾಯದಲ್ಲಿರುವಂತೆ ಬೊಗಳುತ್ತವೆ ಅಥವಾ ದಾಳಿ ಮಾಡುತ್ತವೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ, ಆದರೆ ನಾಯಿಗಳು ವಾಹನಗಳನ್ನು ಏಕೆ ಬೆನ್ನಟ್ಟುತ್ತವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆದರೆ ಈ ಬಗ್ಗೆ ಪಶು ವೈದ್ಯರು ಕೆಲ ಕಾರಣಗಳನ್ನು ನೀಡಿದ್ದಾರೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ನಾಯಿಗಳು ಗುಂಪುಗಳಾಗಿ ಅಥವಾ ಒಂಟಿಯಾಗಿ ವಾಹನಗಳನ್ನು ಹಿಂಬಾಲಿಸುವ ಹಿಂದೆ ಹಲವು ಕಾರಣಗಳಿವೆ. ನಾಯಿ ಎನ್ನುವುದು ನಂಬಿಕೆಗೆ ಇಟ್ಟ ಹೆಸರು. ನಾಯಿಗೆ ಒಮ್ಮೆ ತಿನ್ನಿಸಿದರೂ ಅವು ತಮ್ಮ ಜೀವನದುದ್ದಕ್ಕೂ ನಿಮಗೆ ವಿಧೇಯವಾಗಿರುತ್ತವೆ. ಹಾಗೆಯೇ ತಮ್ಮಿಷ್ದದ ವ್ಯಕ್ತಿಗಳು ಬಳಸುವ ವಾಹನಗಳನ್ನೂ ಅವು ಗುರ್ತಿಸಬಲ್ಲವು.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಹೊಸ ಜನರು ಅಥವಾ ಹೊಸ ವಾಹನಗಳನ್ನು ನೋಡಿದಾಗ ಅವು ಮುಂದೆ ಧಾವಿಸುತ್ತವೆ. ಆದರೆ ತಮ್ಮಿಷ್ಟದ ವ್ಯಕ್ತಿ ಹೆಲ್ಮಿಟ್ ಧರಿಸಿದ್ದರೂ ವಾಹನವನ್ನು ಕಂಡು ನಾಯಿಗಳು ಗರ್ತಿಸಬಲ್ಲವು, ಆದರೆ ಅವು ವಾಹನಗಳನ್ನು ಹೇಗೆ ನೆನಪಿಸಿಕೊಳ್ಳುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ವಾಸ್ತವವಾಗಿ ನಾಯಿಗಳು ವಾಹನವು ತಮ್ಮ ಪ್ರದೇಶಕ್ಕೆ ಸೇರಿದೆ ಎಂದು ಭಾವಿಸಿದರೆ ಅಥವಾ ಆ ವಾಹನವನ್ನು ಗುರುತಿಸಲು ಬಯಸಿದರೆ ಅದರ ಟೈರ್‌ಗಳ ಮೇಲೆ ಮೂತ್ರ ವಿಸರ್ಜಿಸುತ್ತವೆ. ಮೂತ್ರದ ವಾಸನೆಯನ್ನು ಗುರುತಿಸುವ ಮೂಲಕ ನಾಯಿಗಳು ವಾಹನಗಳನ್ನು ಸುರಕ್ಷಿತವೆಂದು ಗ್ರಹಿಸುತ್ತವೆ ಎಂದು ಪಶುವೈದ್ಯರು ಹೇಳುತ್ತಾರೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಯಾವುದೇ ಹೊಸ ವಾಹನವನ್ನು ಕಂಡಾಗ ಅಥವಾ ವಾಹನವು ತಮ್ಮ ಪ್ರದೇಶಕ್ಕೆ ಸೇರಿಲ್ಲ ಎಂದು ಕಂಡುಕೊಂಡ ತಕ್ಷಣ ನಾಯಿಗಳು ಬೊಗಳಲು ಪ್ರಾರಂಭಿಸುತ್ತವೆ. ನಾಯಿಗಳು ಹೊಸ ಜನರನ್ನು ಕಂಡರೆ ಬೊಗಳುವಂತೆ, ಹೊಸ ವಾಹನಗಳನ್ನು ಕಂಡಾಗಲೂ ವಾಹನಗಳನ್ನು ಬೆನ್ನಟ್ಟಲು ಪ್ರಾರಂಭಿಸುತ್ತವೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ತನಗೆ ಮತ್ತು ತಮ್ಮ ಪ್ರದೇಶದಲ್ಲಿ ಇತರರಿಗೆ ಅಪಾಯವನ್ನು ನಿರೀಕ್ಷಿಸುತ್ತವೆ. ನಾಯಿಗಳ ಮೇಲೆ ವಿಜ್ಞಾನಿಗಳು ನಡೆಸಿದ ಕೆಲವು ಅಧ್ಯಯನಗಳ ಪ್ರಕಾರ, ನಾಯಿಗಳು ಕೆಲವೊಮ್ಮೆ ಜಾಲಿ ಮೂಡ್‌ನಲ್ಲಿದ್ದರೂ ವಾಹನಗಳನ್ನು ಹಿಂಬಾಲಿಸಬಹುದು. ನಾಯಿಗಳು ಒಂಟಿತನ ಅನುಭವಿಸಿದಾಗ ಸಮಯವನ್ನು ಕಳೆಯಲು ವಾಹನಗಳನ್ನು ಬೆನ್ನಟ್ಟುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಹೀಗೆ ಮಾಡುವುದರಿಂದ ಬೇಸರ ಹೋಗಲಾಡಿಸಿ ಖುಷಿಯಾಗಿರುತ್ತವೆ. ನಾಯಿಗಳು ವಾಹನಗಳನ್ನು ಹಿಂಬಾಲಿಸಲು ಮತ್ತೊಂದು ಪ್ರಮುಖ ಕಾರಣವೆಂದರೆ ಅವುಗಳಿಗೆ ವಾಹನಗಳಿಂದ ಬರುವ ದೊಡ್ಡ ಶಬ್ದಗಳು ಇಷ್ಟವಾಗುವುದಿಲ್ಲ. ವಾಹನಗಳು ಕರ್ಕಶ ಶಬ್ದ ಮಾಡುತ್ತಾ ಸಂಚರಿಸಿದರೆ ಆ ಶಬ್ಧಗಳಿಗೆ ನಾಯಿಗಳು ಹೆದರುತ್ತವೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಹಾಗಾಗಿ ನಾಯಿಗಳು ವಾಹನಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ ಎನ್ನಲಾಗುತ್ತದೆ. ವಾಸ್ತವವಾಗಿ, ನಾಯಿಗಳು ಅತ್ಯುತ್ತಮ ಶ್ರವಣ ಶಕ್ತಿಯನ್ನು ಹೊಂದಿವೆ. ಸಾಮಾನ್ಯ ಮನುಷ್ಯರು ಕೇಳಲಾಗದ ಶಬ್ದಗಳನ್ನೂ ನಾಯಿಗಳು ಅತ್ಯಂತ ನಿಖರವಾಗಿ ಕೇಳಬಲ್ಲವು.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಆದ್ದರಿಂದ ವಾಹನಗಳು ಮಾಡುವ ದೊಡ್ಡ ಶಬ್ದವನ್ನು ಇಷ್ಟಪಡದ ಕಾರಣ ವಾಹನಗಳನ್ನು ಬೆನ್ನಟ್ಟಬಹುದು. ಚಕ್ರದ ವೇಗವು ನಾಯಿಗಳ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಅಂದರೆ, ನಾಯಿಗಳು ವೇಗವಾಗಿ ಅಥವಾ ಸುತ್ತುವ ಚಕ್ರಗಳನ್ನು ನೋಡಿದಾಗ ಆಕರ್ಷಿತವಾಗುತ್ತವೆ ಮತ್ತು ವಿಚಿತ್ರವಾಗಿ ವರ್ತಿಸುತ್ತವೆ ಎಂದು ಹೇಳಲಾಗುತ್ತದೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ನಾಯಿಗಳು ಅಂತಹ ದೃಶ್ಯವನ್ನು ನೋಡಿದಾಗ, ಕೆಲವೊಮ್ಮೆ ಅವು ಆಟವಾಡಲು ಸಮಯ ಎಂದು ಭಾವಿಸುತ್ತವೆ. ವಾಹನಗಳನ್ನು ಹಿಂಬಾಲಿಸುವುದು ನಾಯಿಗಳಿಗೆ ಚೆಂಡುಗಳು ಅಥವಾ ಆಟಿಕೆಗಳೊಂದಿಗೆ ಆಟವಾಡಿದಂತೆ ಎಂದು ಹೇಳಲಾಗುತ್ತದೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಮತ್ತೊಂದು ವರದಿಯ ಪ್ರಕಾರ, ಕಾರು ಅಥವಾ ದ್ವಿಚಕ್ರ ವಾಹನವು ಅಪಘಾತದಲ್ಲಿ ಸಿಲುಕಿ ನಾಯಿ ಅಥವಾ ಇತರ ನಾಯಿಗಳನ್ನು ಗಾಯಗೊಳಿಸಿದರೆ ಅಥವಾ ಸಾಯಿಸಿದರೆ ಅದೇ ಬಣ್ಣದ ವಾಹನವನ್ನು ಕಂಡಾಗ ನಾಯಿಗಳು ಪ್ರತೀಕಾರವಾಗಿ ವಾಹನಗಳನ್ನು ಬೆನ್ನಟ್ಟುತ್ತವೆ ಎಂದು ಹೇಳಲಾಗುತ್ತದೆ.

ನಿಮ್ಮ ವಾಹನವನ್ನು ನಾಯಿಗಳು ಎಂದಾದರೂ ಅಟ್ಟಿಸಿಕೊಂಡು ಬಂದಿವೆಯೇ? ಅದಕ್ಕೆ ಕಾರಣ ಏನ್ ಗೊತ್ತಾ..

ಆದರೆ, ಈ ರೀತಿ ರಸ್ತೆಯಲ್ಲಿ ವಾಹನ ಸವಾರರನ್ನು ಹಿಂಬಾಲಿಸುವ ನಾಯಿಗಳು ಅತ್ಯಂತ ಅಪಾಯಕಾರಿ ಚಟುವಟಿಕೆಯಾಗಿದೆ. ಈ ಕ್ರಮವು ನಾಯಿಗಳಿಗೆ ಮಾತ್ರವಲ್ಲ, ರಸ್ತೆ ಬಳಕೆದಾರರಿಗೂ ಅಪಾಯವನ್ನುಂಟುಮಾಡುತ್ತದೆ.

Most Read Articles

Kannada
English summary
Have dogs ever chased your bikes do you know the reason for that
Story first published: Saturday, November 5, 2022, 16:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X