ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇವಿ ವಾಹನ ವಾಹನಗಳಿಗೆ ಪೂರಕವಾದ ಹೊಸ ಯೋಜನೆಗಳು ರೂಪಗೊಳ್ಳುತ್ತಿವೆ. ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಆಧಾರಿತ ಲಾಜಿಸ್ಟಿಕ್ಸ್ ಕಂಪನಿ ಇವಿಫೈ ಕಂಪನಿಯು ಕೂಡಾ ತನ್ನ ಕಾರ್ಯಾಚರಣೆಗೆ ಇವಿ ಸ್ಕೂಟರ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಹೊಸ ಯೋಜನೆಗಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯೊಂದಿಗೆ ಮಹತ್ವದ ಪಾಲುದಾರಿಕೆ ಪ್ರಕಟಿಸಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಇವಿಫೈ ಕಂಪನಿಯು ತನ್ನ ಫ್ಲಿಟ್ ಕಾರ್ಯಾಚರಣೆಗಾಗಿ ಹೀರೋ ಎಲೆಕ್ಟ್ರಿಕ್ ನಿರ್ಮಾಣದ ಎನ್‌ವೈಎಕ್ಸ್ ಇವಿ ಸ್ಕೂಟರ್ ಮಾದರಿಯ 1 ಸಾವಿರ ಯುನಿಟ್ ಅಳವಡಿಸಿಕೊಳ್ಳಲು ನಿರ್ಧರಿಸಿದ್ದು, ಹೀರೋ ಕಂಪನಿಯು ಮುಂದಿನ ಎರಡು ವರ್ಷದೊಳಗೆ 1 ಸಾವಿರ ಯುನಿಟ್ ಇವಿ ಸ್ಕೂಟರ್‌ಗಳನ್ನು ಹಂತ-ಹಂತವಾಗಿ ವಿತರಣೆಗೊಳಿಸಲಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಫ್ಲೀಟ್ ಆಪರೇಟರ್‌ಗಳಿಗೆ ಇವಿಫೈ ಕಂಪನಿಯು ಮಾಸಿಕ ಚಂದಾದಾರಿಕೆಯ ಆಧಾರದ ಮೇಲೆ ಇವಿ ದ್ವಿಚಕ್ರ ಮತ್ತು ಇವಿ ಮೂರು ಚಕ್ರದ ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುತ್ತಿದ್ದು, ತನ್ನ ಯೋಜನೆಗಾಗಿ ಹೀರೋ ಎಲೆಕ್ಟ್ರಿಕ್ ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಬಿಟುಬಿ ಮತ್ತು ಗ್ಲೊಸರಿ ಪ್ಯಾಕೇಜ್ ವಿತರಣಾ ವಾಹನಗಳನ್ನು ವಿವಿಧ ಫ್ಲೀಟ್ ಆಪರೇಟರ್‌ ಕಂಪನಿಗಳು ಇಂಧನ ಆಧರಿತ ವಾಹನಗಳ ಬದಲಾಗಿ ಇವಿ ಮಾದರಿಗಳತ್ತ ಮುಖಮಾಡುತ್ತಿದ್ದು, ಕೊನೆಯ ಮೈಲಿ ತನಕವು ಇವಿ ವಾಹನಗಳನ್ನು ಬಳಕೆ ಮಾಡಲು ಯೋಜಿಸಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಸದ್ಯ ಮುಂಚೂಣಿ ಸಾಧಿಸುತ್ತಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ನಗರಗಳಲ್ಲಿ ತನ್ನ ಮಾರಾಟ ಸೌಲಭ್ಯವನ್ನು ವಿಸ್ತರಿಸುತ್ತಿದ್ದು, ಇವಿ ವಾಹನ ಮಾರಾಟದಲ್ಲಿ ಕಂಪನಿಯು ಮೈಲಿಗಲ್ಲು ಸಾಧಿಸಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಎಲೆಕ್ಟ್ರಿಕ್ ವಾಹನ ಕಂಪನಿಗಳು ದುಬಾರಿ ಇಂಧನ ಪರಿಣಾಮ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ದೇಶದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ಕಂಪನಿಯಾಗಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕೂಡಾ ಕಳೆದ ವರ್ಷದಿಂದಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದೆ. ಹೊಸ ಎಲೆಕ್ಟ್ರಿಕ್ ವಾಹನ ಮಾದರಿಗಳ ವಿಚಾರಣೆಯೂ ಕೂಡಾ ಹೆಚ್ಚಿದ್ದು, ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವ ಇವಿ ವಾಹನಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಇವಿ ಸ್ಕೂಟರ್ ಉತ್ಪಾದನೆಯನ್ನು ಆರಂಭಿಸಿ ಸುಮಾರು 13 ವರ್ಷಗಳನ್ನು ಪೂರೈಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಇದುವರೆಗೆ ಸುಮಾರು 4.50 ಲಕ್ಷ ಯುನಿಟ್‌ಗಳಿಗೂ ಹೆಚ್ಚು ಇವಿ ವಾಹನಗಳನ್ನು ಮಾರಾಟ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಇವಿ ಉತ್ಪನ್ನಗಳಲ್ಲಿ ಹಲವಾರು ಬದಲಾವಣೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಹೀರೋ ಎಲೆಕ್ಟ್ರಿಕ್ ಕಂಪನಿಯು ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಈ ಹಿಂದಿನ ಹತ್ತು ವರ್ಷಗಳಲ್ಲಿ ವಾಹನ ಮಾರಾಟ ಪ್ರಮಾಣವು ಕಳೆದ ಎರಡು ವರ್ಷಗಳಲ್ಲಿ ದ್ವಿಗುಣಗೊಂಡಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಈ ಮೂಲಕ ಕಂಪನಿಯು ಇವಿ ದ್ವಿಚಕ್ರ ವಾಹನ ಮಾರಾಟ ವಿಭಾಗದಲ್ಲಿ ಶೇ.36 ಪಾಲು ತನ್ನದಾಗಿಸಿಕೊಳ್ಳುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇವಿ ಸ್ಕೂಟರ್ ಮಾರಾಟವನ್ನು ಮುಂದಿನ ವರ್ಷ ಪ್ರಸಕ್ತ ವರ್ಷದ ಮಾರಾಟಕ್ಕಿಂತ ಶೇಕಡಾ 15ರಷ್ಟು ಹೆಚ್ಚಿಸುವ ನೀರಿಕ್ಷೆಯಲ್ಲಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಹೀಗಾಗಿ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ದೇಶಾದ್ಯಂತ ವಿಸ್ತರಿಸುತ್ತಿದ್ದು, ಈಗಾಗಲೇ ಮಾರಾಟ ಮಳಿಗೆಗಳನ್ನು ಹೊಂದಿರುವ ನಗರಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಯೋಜಿಸಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಕಳೆದ ಒಂದು ವರ್ಷದ ಅವಧಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ನಗರಗಳಲ್ಲಿ ಹಲವು ಹೊಸ ಮಾರಾಟ ಮಳಿಗೆಗಳನ್ನು ತೆರೆದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಪ್ರತಿವರ್ಷ 2.5 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಸದ್ಯ ದೇಶಾದ್ಯಂತ 500 ನಗರಗಳಲ್ಲಿ 700ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಅಗತ್ಯತೆಯ ಆಧಾರದ ಮೇಲೆ ಕಳೆದ ವರ್ಷ ಸುಮಾರು 1,500 ಹೊಸ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಸಿದ್ದವಾಗಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

2022ರ ಆರ್ಥಿಕ ವರ್ಷದ ಕೊನೆಯಲ್ಲಿ ದೇಶಾದ್ಯಂತ ಒಟ್ಟು ಒಂದು ಸಾವಿರ ಟಚ್ ಪಾಯಿಂಟ್(ಮಾರಾಟ ಮಳಿಗೆಗಳನ್ನು) ಹೊಂದುವ ಗುರಿಹೊಂದಿದ್ದು, ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆಯ ಆಧಾರದ ಮೇಲೆ ಹೊಸ ಟಚ್ ಪಾಯಿಂಟ್ ತೆರೆಯಲಾಗುತ್ತಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ನಿರ್ಮಾಣದ 1 ಸಾವಿರ ಇವಿ ಸ್ಕೂಟರ್ ಖರೀದಿಸಿದ ಇವಿಫೈ

ಇದಲ್ಲದೆ ಹೀರೋ ಎಲೆಕ್ಟ್ರಿಕ್ ಮತ್ತು ಚಾರ್ಜರ್ ಕಂಪನಿಗಳು ಮುಂದಿನ ಮೂರು ವರ್ಷದಲ್ಲಿ ಒಟ್ಟು 1 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದ್ದು, ಮೊದಲ ವರ್ಷದಲ್ಲಿ ದೇಶದ ಪ್ರಮುಖ 30 ನಗರಗಳಲ್ಲಿ 10 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವ ಯೋಜನೆಯಲ್ಲಿದೆ.

More from DriveSpark

Article Published On: Tuesday, April 26, 2022, 8:30 [IST]
English summary
Hero electric deliver to 1000 electric scooters to evify
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+