ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ ಬೈಕುಗಳ ಮತ್ತು ಸ್ಕೂಟರ್‌ಗಳ ಬೆಲೆಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಷ್ಕರಿಸಿದೆ. ಇದರ ಪರಿಣಾಮವಾಗಿ ಹೀರೋ ಸರಣಿಯಲ್ಲಿರುವ ಜನಪ್ರಿಯ ಗ್ಲ್ಯಾಮರ್ ಬೈಕ್ ಕೂಡ ದುಬಾರಿಯಾಗಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಗ್ಲ್ಯಾಮರ್ 125ಸಿಸಿ ಪ್ರೀಮಿಯಂ ಕಮ್ಯೂಟರ್ ಬೈಕಿನ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆಯು ರೂ.1,200 ಗಳಷ್ಟು ದುಬಾರಿಯಾಗಿದ್ದರೆ, ಟಾಪ್-ಸ್ಪೆಕ್ Xtec ಟ್ರಿಮ್ ಬೆಲೆಯು ರೂ. 1,300 ಹೆಚ್ಚಳವನ್ನು ಪಡೆದುಕೊಂಡಿದೆ. ಗಮನಾರ್ಹವಾಗಿ, ಇದು ಏಪ್ರಿಲ್ 2022 ರಿಂದ ಗ್ಲಾಮರ್‌ಗೆ ಎರಡನೇ ಮತ್ತು ಹೆಚ್ಚು ಮಹತ್ವದ ಬೆಲೆ ಏರಿಕೆಯಾಗಿದೆ. ಬೆಲೆ ಏರಿಲೆಯ ಬಳಿಕ ವೆರಿಯೆಂಟ್ ಗಳ ಪ್ರಕಾರ ಹೇಳುವುದಾದರೆ, ಗ್ಲ್ಯಾಮರ್ ಡ್ರಮ್ ವೆರಿಯೆಂಟ್ ಬೆಲೆಯು ರೂ.79,670, ಗ್ಲಾಮರ್ (ಡಿಸ್ಕ್) ವೆರಿಯೆಂಟ್ ಬೆಲೆಯು ರೂ.83,670, ಗ್ಲಾಮರ್ ಎಕ್ಸ್‌ಟೆಕ್ (ಡ್ರಮ್) ವೆರಿಯೆಂಟ್ ಬೆಲೆಯು ರೂ.84,220 ಗಳಾದರೆ ಗ್ಲಾಮರ್ ಎಕ್ಸ್‌ಟೆಕ್ (ಡಿಸ್ಕ್) ವೆರಿಯೆಂಟ್ ಬೆಲೆಯು ರೂ.88,820 ಆಗಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಹೀರೋ ಗ್ಲ್ಯಾಮರ್ ಬೈಕನ್ನು ಬಿಎಸ್-6 ಆಗಿ ಬಿಡುಗಡೆಗೊಳಿಸವಾಗ ಕೆಲವು ನವೀಕರಣಗಳೊಂದಿಗೆ ಪರಿಚಯಿಸಿದ್ದರು. ಈ ಬೈಕ್ ಫ್ರಂಟ್ ಎಂಡ್, ಫ್ಯೂಯಲ್ ಟ್ಯಾಂಕ್, ಮತ್ತು ಟ್ಯಾಲ್ ಲ್ಯಾಂಪ್ ಗಳ ವಿನ್ಯಾಸವನ್ನು ನವೀಕರಿಸಿದ್ದರು. ಇದು ಮೊದಲಿಗಿಂತ ಹೆಚ್ಚು ಸ್ಪೋರ್ಟಿಯರ್ ಆಗಿ ಕಾಣುತ್ತದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಈ ಹೀರೋ ಗ್ಲ್ಯಾಮರ್ ಬೈಕ್ ಎಲ್ಇಡಿ ಡಿಆರ್ಎಲ್ ಮತ್ತು ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿದೆ. ಹೀರೋ ಗ್ಲ್ಯಾಮರ್ ಬೈಕಿನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಹೀರೋ ಗ್ಲ್ಯಾಮರ್ ಬ್ಲೇಜ್ ಸ್ಪೆಷಲ್ ಎಡಿಷನ್ (ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ) ಅನ್ನು ಹೊಂದಿದೆ. ಹೀರೋ ಗ್ಲ್ಯಾಮರ್ ಬ್ಲೇಜ್ ಬೈಕ್ 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಅನ್ನು ಹೊಂದಿರುತ್ತದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಈ ಹೀರೋ ಗ್ಲ್ಯಾಮರ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಗಳನ್ನು ಹೊಂದಿದೆ. ಇನ್ನು ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ನೋಡುವುದಾದರೆ, ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಇನ್ನು ಹೊಸ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್‌ ಬೈಕ್ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಹೊಸ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್‌ ಬೈಕ್ ಎರಡು ರೂಪಾಂತರಗಳನ್ನು ಹೊಂದಿದೆ. ಹೊಸ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್‌ ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಈ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್‌ ಬೈಕ್ ಯುವಗ್ರಾಹಕರನ್ನು ಸೆಳೆಯುವಂತಹ ವಿನ್ಯಾಸ ಮತ್ತು ಉಪಯುಕ್ತವಾದ ಅತ್ಯಾಧುನಿಕ ತಂತ್ರಜ್ಙಾನಗಳನ್ನು ಹೊಂದಿವೆ. ಈ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇಂಟಿಗ್ರೇಟೆಡ್ ಯುಎಸ್‌ಬಿ ಚಾರ್ಜರ್ ಜೊತೆಗೆ ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಬ್ಯಾಂಕ್ ಆಂಗಲ್ ಸೆನ್ಸರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಈ ಗ್ಲ್ಯಾಮರ್ ಎಕ್ಸ್‌ಟೆಕ್‌ ಬೈಕಿನಲ್ಲಿ ಕರೆ ಮತ್ತು ಎಸ್‌ಎಂಎಸ್‌ನೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ ನೀಡುತ್ತದೆ ಮ್ಯಾಪ್ ಜೊತೆ ಅಲರ್ಟ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಒಳಗೊಂಡಿದೆ. ಇನ್ಸ್ ಟ್ರೂಮೆಂಟ್ ಕನ್ಸೋಲ್‌ನಲ್ಲಿ ಗೇರ್ ಪೊಸಿಷನ್ ಇಂಡಿಕೇಟರ್, ಇಕೋ ಮೋಡ್, ಟೆಕೋಮೀಟರ್ ಮತ್ತು ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್ (ಆರ್‌ಟಿಎಂಐ) ಮಾಹಿತಿಗಳನ್ನು ಕೂಡ ಪ್ರದರ್ಶಿಸುತ್ತದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಈ ಗ್ಲ್ಯಾಮರ್ ಎಕ್ಸ್‌ಟೆಕ್‌ ಬೈಕ್ 3ಡಿ ಬ್ರ್ಯಾಂಡಿಂಗ್, ರಿಮ್ ಟೇಪ್‌ಗಳು ಮತ್ತು ಹೊಸ ಮ್ಯಾಟ್ ಬಣ್ಣಕ್ಕಾಗಿ ಬ್ಲೂ ಅಸ್ಸೆಂಟ್ ಗಳನ್ನು ಒಳಗೊಂಡಿದೆ. ಎಚ್-ಸಿಗ್ನೇಚರ್ ಪೊಸಿಷನ್ ಲ್ಯಾಂಪ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್ ವಿಭಾಗದ ಅತ್ಯುತ್ತಮ ಬೆಳಕನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಹೀರೋ ಮೋಟೊಕಾರ್ಪ್ 2022ರ ಜೂನ್ ತಿಂಗಳ ಮಾಸಿಕ ಮಾರಾಟದ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಒಟ್ಟಾರೆ 4,84,867 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದಾರೆ. ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು 4,69,160 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ 3.3 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯ ಪ್ರಕಾರ, ಸಂಪುಟಗಳಲ್ಲಿನ ಬೆಳವಣಿಗೆಯು ನಿರಂತರವಾಗಿ ಸುಧಾರಿಸುತ್ತಿರುವ ಗ್ರಾಹಕರ ಭಾವನೆಯನ್ನು ಸೂಚಿಸುತ್ತದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಉತ್ತಮ ಮಾನ್ಸೂನ್ ಮತ್ತು ಕೃಷಿ ಚಟುವಟಿಕೆಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಸಕಾರಾತ್ಮಕ ಪ್ರವೃತ್ತಿಯು ಮುಂದುವರಿಯುತ್ತದೆ ಎಂದು ಹೀರೋ ಮೋಟೊಕಾರ್ಪ್ ನಿರೀಕ್ಷಿಸುತ್ತುದೆ,

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೀರೋ ಗ್ಲ್ಯಾಮರ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ನಿಂದ ಜನಪ್ರಿಯ ಪ್ರೀಮಿಯಂ ಕಮ್ಯೂಟರ್ ಬೈಕ್ ಆಗಿದೆ. ಈ ಹೀರೋ ಗ್ಲ್ಯಾಮರ್ ಬೈಕ್ ಹೋಂಡಾ ಶೈನ್ ಮತ್ತು ಎಸ್‌ಪಿ 125 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಬೆಲೆ ಏರಿಕೆಯು ಹೀರೋ ಗ್ಲ್ಯಾಮರ್ ಬೈಕ್ ಮಾರಾಟದಲ್ಲಿ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

Article Published On: Thursday, July 14, 2022, 17:49 [IST]
English summary
Hero glamour bike price increased in india latest price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+