Just In
- 54 min ago
ಕೈಗೆಟುಕುವ ಬೆಲೆ, ಹಲವು ಫೀಚರ್ಸ್ಗಳೊಂದಿಗೆ ಲಭ್ಯವಿರುವ ಟಾಪ್ 5 ಅಡ್ವೆಂಚರ್ ಬೈಕ್ಗಳಿವು!
- 58 min ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್ಯುವಿ
- 1 hr ago
ಎಂಜಿ ಮೊದಲ ಕಮ್ಯೂನಿಟಿ ಇವಿ ಚಾರ್ಜರ್ ಆರಂಭ- 1 ಸಾವಿರ ನಿಲ್ದಾಣಗಳನ್ನು ಆರಂಭಿಸುವ ಗುರಿ..
- 2 hrs ago
ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
Don't Miss!
- Finance
ರಷ್ಯಾದಿಂದ ಹಳದಿ ಲೋಹ ಆಮದಿಗೆ ಜಿ7 ನಿರ್ಬಂಧ ಹೇರಿಕೆ: ಚಿನ್ನದ ದರ ಏರಿಕೆ
- Movies
ಬಾಕ್ಸಾಫೀಸ್ ಉಳಿಸಿಕೊಳ್ಳಲು ಬಾಲಿವುಡ್ ಹರಸಾಹಸ: ಸಾಲು ಸಾಲು ಸಿನಿಮಾ ರಿಲೀಸ್!
- News
ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ
- Lifestyle
ಆರೋಗ್ಯಕರ ಮಗುವನ್ನು ಪಡೆಯಲು ಪುರುಷರಿಗೆ ಸರಿಯಾದ ವಯಸ್ಸು ಯಾವುದು?
- Education
NEET UG Exam 2022 : ನೀಟ್ ಮುಂದೂಡಿಕೆಗೆ ಒತ್ತಾಯ !...ಪರೀಕ್ಷೆಯ ಸಂಪೂರ್ಣ ವಿವರ
- Technology
ಡೇಟಾ ಲಿಮಿಟ್ ಬಯಸದ ಗ್ರಾಹಕರಿಗೆ ಬಿಎಸ್ಎನ್ಎಲ್ನ ಈ ಪ್ಲಾನ್ ಬೆಸ್ಟ್!
- Sports
Ind vs Eng: ರೋಹಿತ್ ಶರ್ಮಾಗೆ ಕೊರೊನಾ; ಇಂಗ್ಲೆಂಡ್ಗೆ ಹಾರಿದ ಕರ್ನಾಟಕ ಆಟಗಾರ
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಮಹಿಳಾ ದಿನದಂದು 50 ಸ್ಕೂಟರ್‌ಗಳು, 500 ಹೆಲ್ಮೆಟ್‌ಗಳನ್ನು ನಾಗ್ಪುರ ಪೊಲೀಸರಿಗೆ ನೀಡಿದ ಹೀರೋ ಮೋಟೋಕಾರ್ಪ್
ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್, 50 ಹೀರೋ ಸ್ಕೂಟರ್‌ಗಳು ಮತ್ತು 500 ಹೆಲ್ಮೆಟ್‌ಗಳನ್ನು ನಾಗ್ಪುರ ಪೊಲೀಸ್ ಕಮಿಷನರೇಟ್ (NMC) ಮತ್ತು ಅಗ್ನಿಶಾಮಕ ಇಲಾಖೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಹಸ್ತಾಂತರಿಸಿದೆ.

ಈ ಹೀರೋ ಸ್ಕೂಟರ್‌ಗಳು ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಮತ್ತು ವೇಗವಾಗಿ ಸೇವೆಗಳನ್ನು ಒದಗಿಸಲು ಸಹಾಯವಾಗುತ್ತದೆ. ಇದರಿಂದಾಗಿ ನಾಗಪುರದ ನಾಗರಿಕರಿಗೆ - ವಿಶೇಷವಾಗಿ ಮಹಿಳೆಯರಿಗೆ ಉತ್ತಮ ಭದ್ರತೆಯನ್ನು ಒದಗಿಸಲು ಸಹಾಯ ಮಾಡುತ್ತವೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರ ಸಮ್ಮುಖದಲ್ಲಿ ಹೀರೋ ಮೋಟೋಕಾರ್ಪ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಕ್ರಮ್ ಕಸ್ಬೇಕರ್ ಅವರು ಪೊಲೀಸ್ ಕಮಿಷನರೇಟ್ ಮತ್ತು ಅಗ್ನಿಶಾಮಕ ಇಲಾಖೆಗೆ ಸ್ಕೂಟರ್ ಗಳನ್ನು ಹಸ್ತಾಂತರಿಸಿದರು.

ಹೀರೋ ಸ್ಕೂಟರ್‌ಗಳು ಸೈರನ್‌ಗಳು, ಧ್ವನಿವರ್ಧಕಗಳು ಮತ್ತು ಇತರ ಅಗತ್ಯ ಪೊಲೀಸ್ ಪರಿಕರಗಳನ್ನು ಹೊಂದಿದ್ದು, ನಗರದಲ್ಲಿನ ಅಧಿಕಾರಿಗಳಿಗೆ ತಮ್ಮ ಗಸ್ತು ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರ ನೀಡುತ್ತವೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರು ಮಾತನಾಡಿ, ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ನಾಗ್ಪುರ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯೊಂದಿಗೆ ಪಾಲುದಾರಿಕೆಗಾಗಿ ಹೀರೋ ಮೋಟೋಕಾರ್ಪ್ ಅನ್ನು ನಾವು ಪ್ರಶಂಸಿಸುತ್ತೇವೆ. ನಾಗರಿಕರ, ವಿಶೇಷವಾಗಿ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸಲು ಕಾರ್ಪೊರೇಟ್ ಮತ್ತು ಸ್ಥಳೀಯ ಪ್ರಾಧಿಕಾರವು ಒಟ್ಟಾಗಿ ಸಹಕರಿಸುವ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೆಳಿದರು,

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ಕಳೆದ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಕಂಪನಿಯು 3,58,254 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 5,05,467 ಯುನಿಟ್‌ಗಳನ್ನು ಮಾರಾಟ ಮಾಡಿತ್ತು, ಇದು ಈ ವರ್ಷ ಕಂಪನಿಯ ಮಾರಾಟದಲ್ಲಿ ಕುಸಿತಕ್ಕೆ ಕಾರಣವಾಗಿದೆ.

ಮಾಹಿತಿಯ ಪ್ರಕಾರ, ಹೀರೋ ಮೋಟೋಕಾರ್ಪ್ 2022ರ ಫೆಬ್ರವರಿ ಒಟ್ಟು 3,38,454 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಕಂಪನಿಯು 4,63,723 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿತ್ತು, ಈ ಕಾರಣದಿಂದಾಗಿ ಈ ವರ್ಷದ ಫೆಬ್ರವರಿಯಲ್ಲಿ ಮೋಟಾರ್‌ಸೈಕಲ್‌ಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದೆ.

2022ರ ಫೆಬ್ರವರಿ ತಿಂಗಳಿನಲ್ಲಿ ಸ್ಕೂಟರ್‌ಗಳ ಮಾರಾಟದ ಕುರಿತು ಮಾತನಾಡುತ್ತಾ, ಕಂಪನಿಯು ಈ ವಿಭಾಗದಲ್ಲಿ ನಕಾರಾತ್ಮಕ ಮಾರಾಟವನ್ನು ಎದುರಿಸಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಕಂಪನಿಯು 41,744 ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದರೆ, ಈ ವರ್ಷದ ಫೆಬ್ರವರಿಯಲ್ಲಿ ಹೀರೋ 19,800 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಇನ್ನು ಹೀರೋ ಮೋಟೊಕಾರ್ಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಬ್ರ್ಯಾಂಡ್ ವಿಡಾ ತೆರೆದಿದೆ. ಹೊಸ ವಿಡಾ ಬ್ರಾಂಡ್ ಕುರಿತಾಗಿ ಹೀರೋ ಮೋಟೊಕಾರ್ಪ್ ಕಂಪನಿಯ ಅಧ್ಯಕ್ಷರೇ ಮಾಹಿತಿ ಹಂಚಿಕೊಂಡಿದ್ದಾರೆ.

ಹೀರೋ ಮೋಟೊಕಾರ್ಪ್ ಕಂಪನಿಯ ಅಧ್ಯಕ್ಷ ಡಾ. ಪವನ್ ಮುಂಜಾಲ್ ಅವರು ಬ್ರ್ಯಾಂಡ್‌ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆ ವಿಡಾ ಬ್ರಾಂಡ್ ಲೋಗೋವನ್ನು ಬಹಿರಂಗಪಡಿಸಿದ್ದು, ಶೀಘ್ರದಲ್ಲೇ ಹೊಸ ಬ್ರಾಂಡ್ ಅಡಿ ಅಭಿವೃದ್ದಿಗೊಳ್ಳುತ್ತಿರುವ ಇವಿ ಸ್ಕೂಟರ್ ಮಾದರಿಯನ್ನು ಅನಾವರಣಗೊಳಿಸುವ ಸುಳಿವು ನೀಡಿದ್ದಾರೆ.

ಇನ್ನು ಎಲೆಕ್ಟ್ರಿಕ್ ವಾಹನಗಳಿಗಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಹೀರೋ ಮೋಟೊಕಾರ್ಪ್ ಕಂಪನಿಯ ಅಡಿ ಪ್ರತ್ಯೇಕ ಇವಿ ಬ್ರಾಂಡ್ ಅಭಿವೃದ್ದಿಗೊಳಿಸಲಾಗುತ್ತಿದ್ದು, ವಿಡಾ ಬ್ರಾಂಡ್ ಅಡಿ ಕಂಪನಿಯು ಪ್ರಮುಖ ಇವಿ ದ್ವಿಚಕ್ರವಾಹನಗಳನ್ನು ಹೊರತರಲಿದೆ. 2022ರ ಜುಲೈ 1 ರಂದು ವಿಡಾ ಬ್ರ್ಯಾಂಡ್ ಅಡಿಯಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದ್ದು, ಹೊಸ ಬ್ರಾಂಡ್ ಬಿಡುಗಡೆಯ ಹೊರತಾಗಿ ಹೀರೋ ಮೋಟೊಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ 100 ಮಿಲಿಯನ್ ಡಾಲರ್ ಜಾಗತಿಕ ಸುಸ್ಥಿರತೆ ನಿಧಿ ಘೋಷಿಸಿದರು.

ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಉದ್ಯಮಗಳನ್ನು ಪ್ರೋತ್ಸಾಹಿಸುವ ಗುರಿಯೊಂದಿಗೆ ಈ ನಿಧಿಯನ್ನು ಬಳಸಲಾಗುವುದು ಎಂದು ಮುಂಜಾಲ್ ಮಾಹಿತಿ ನೀಡಿದ್ದು, ಹೊಸ ಯೋಜನೆಗಳೊಂದಿಗೆ ನಾವು ನಮ್ಮ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನಿರ್ಮಿಸುವ ಗುರಿಹೊಂದಿದ್ದೇವೆ ಎಂದಿದ್ದಾರೆ. ಹೀರೋ ಮೋಟೊಕಾರ್ಪ್ ಕಂಪನಿಯು ಕೇವಲ ಕಂಪನಿಯ ಹೊಸ ಯೋಜನೆಗಳಿಗೆ ಮಾತ್ರ ಹಲವು ಇವಿ ಸ್ಟಾರ್ಟ್ಅಪ್ ಕಂಪನಿಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಭವಿಷ್ಯದ ಯೋಜನೆಗಳೊಂದಿಗೆ ಕಂಪನಿಯು ಭಾರೀ ಪ್ರಮಾಣದ ಆದಾಯದ ನೀರಿಕ್ಷೆಯಲ್ಲಿದೆ.

ಹೀರೋ ಮೊದಲ ಇವಿ ಸ್ಕೂಟರ್ ಸಹಭಾಗೀತ್ವ ಕಂಪನಿಯಾಗಿರುವ ಗೊಗೊರೊ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ವಿವಾ ಎನ್ನುವ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲೂ ಹೊಸ ವಾಹನ ಬಿಡುಗಡೆಗಾಗಿ ನೋಂದಣಿ ಕೂಡಾ ಮಾಡಲಾಗಿದೆ. ಈ ಮಾದರಿಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು.