ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ ಮಾಡಿದ್ದು, ಸೆಪ್ಟೆಂಬರ್ 22ರಿಂದ ಅನ್ವಯಿಸುವಂತೆ ಕಂಪನಿಯು ಹೊಸ ದ್ವಿಚಕ್ರ ವಾಹನಗಳ ಬೆಲೆ ಏರಿಕೆ ಮಾಡಿದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೊಸ ದರಪಟ್ಟಿಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ವಿವಿಧ ಮಾದರಿಗಳಿ ಅನ್ವಯಿಸುವಂತೆ ಎಕ್ಸ್‌ಶೋರೂಂ ದರದಲ್ಲಿ ರೂ. 1 ಸಾವಿರ ತನಕ ಹೆಚ್ಚಳ ಮಾಡಿದ್ದು, ಬೈಕ್ ಮಾದರಿಗಳ ಜೊತೆಗೆ ಸ್ಕೂಟರ್ ಬೆಲೆಯೂ ಕೂಡಾ ಏರಿಕೆಯಾಗಿದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಪ್ರಸ್ತುತ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಸ್ಪ್ಲೆಂಡರ್ ಪ್ಲಸ್, ಹೆಚ್‌ಎಫ್ ಡಿಲಕ್ಸ್, ಹೆಚ್ಎಫ್ 100, ಗ್ಲ್ಯಾಮರ್, ಸೂಪರ್ ಸ್ಪ್ಲೆಂಡರ್, ಪ್ಯಾಶನ್, ಎಕ್ಸ್‌ಟ್ರಿಮ್160ಆರ್, ಎಕ್ಸ್‌ಟ್ರಿಮ್200ಎಸ್, ಎಕ್ಸ್‌ಪಲ್ಸ್ 200ವಿ, ಎಕ್ಸ್‌ಪಲ್ಸ್ 200ಟಿ, ಪ್ಲೆಷರ್ ಪ್ಲಸ್ ಟೆಕ್, ಡೆಸ್ಟಿನಿ 125 ಟೆಕ್, ಮ್ಯಾಸ್ಟ್ರೋ ಎಡ್ಜ್ 125 ಮತ್ತು ಮ್ಯಾಸ್ಟ್ರೋ ಎಡ್ಜ್ 110 ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಎಕ್ಸ್‌ಶೋರೂಂ ದರದಲ್ಲಿ ಪ್ರತಿ ಮಾದರಿಯ ಬೆಲೆಯಲ್ಲೂ ರೂ. 600ರಿಂದ ರೂ. 1 ಸಾವಿರ ತನಕ ಹೆಚ್ಚಳ ಮಾಡಲಾಗಿದ್ದು, ಹೆಚ್ಚುತ್ತಿರುವ ಉತ್ಪಾದಾನಾ ವೆಚ್ಚದ ಪರಿಣಾಮ ಬೆಲೆ ಹೆಚ್ಚಿಸಲಾಗಿದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಉತ್ಪಾದನಾ ವೆಚ್ಚ ಹೆಚ್ಚುತ್ತಿರುವುದರಿಂದ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಹೊಸ ವಾಹನಗಳ ಬೆಲೆಯು ಶೇ. 5 ರಿಂದ ಶೇ. 10 ರಷ್ಟು ಹೆಚ್ಚಳವಾಗಿದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಇನ್ನು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ತನ್ನ ಪ್ರಮುಖ ದ್ವಿಚಕ್ರ ವಾಹನ ಉತ್ನನಗಳಲ್ಲಿ ನಿರಂತವಾಗಿ ಬದಲಾವಣೆ ತರುತ್ತಿದ್ದು, ಉತ್ಪಾದನಾ ಗುಣಮಟ್ಟದ ಜೊತೆಗೆ ಸುರಕ್ಷಾ ಫೀಚರ್ಸ್ ಹೆಚ್ಚಳಕ್ಕೂ ಆದ್ಯತೆ ನೀಡುತ್ತಿದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯ ಪ್ರಮುಖ ಬೈಕ್ ಮಾದರಿಗಳಲ್ಲಿ ಸ್ಪ್ಲೆಂಡರ್ ಆವೃತ್ತಿಯು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಈ ಬೈಕ್ ಹೀರೋ ಮೋಟೋಕಾರ್ಪ್ ಕಂಪನಿಗೆ ಮಾರಾಟದಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಇದಕ್ಕಾಗಿ ಹೀರೋ ಕಂಪನಿಯು ತನ್ನ 100ಸಿಸಿ ಕಮ್ಯೂಟರ್-ಸೆಗ್ಮೆಂಟ್ ಮೋಟಾರ್‌ಸೈಕಲ್ ಸ್ಪ್ಲೆಂಡರ್ ಪ್ಲಸ್‌ಗೆ ಹೊಸ ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಸ್ಪ್ಲೆಂಡರ್ ಪ್ಲಸ್‌ ಬೈಕ್ ಇದೀಗ ಹೊಸದಾಗಿ ಸಿಲ್ವರ್ ನೆಕ್ಸಸ್ ಬ್ಲೂ ಬಣ್ಣದಲ್ಲಿ ಲಭ್ಯವಿದ್ದು, ಇದೀಗ ಹೊಸ ಬೈಕ್ ಒಟ್ಟು ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಉಳಿದ ಬಣ್ಣಗಳ ಆಯ್ಕೆಯು ಬ್ಲ್ಯಾಕ್ ಜೊತೆ ಪರ್ಪಲ್, ಬ್ಲ್ಯಾಕ್ ಜೊತೆ ಸ್ಪೋರ್ಟ್ಸ್ ರೆಡ್, ಹೆವಿ ಗ್ರೇ ಜೊತೆ ಗ್ರೀನ್, ಮ್ಯಾಟ್ ಶೀಲ್ಡ್ ಗೋಲ್ಡ್ ಮತ್ತು ಬ್ಲ್ಯಾಕ್ ಜೊತೆ ಸಿಲ್ವರ್ ಬಣ್ಣಗಳ ಆಯ್ಕೆ ಹೊಂದಿದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಸ್ಪ್ಲೆಂಡರ್ ಸರಣಿಯು ಪ್ರತಿ ತಿಂಗಳಿಗೆ ಸರಾಸರಿ 2.5 ಲಕ್ಷ ಯುನಿಟ್‌ಗಳ ಮಾರಾಟದೊಂದಿಗೆ ದೇಶದಲ್ಲಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದ್ದು, ಹೊಸ ಸಿಲ್ವರ್ ನೆಕ್ಸಸ್ ಬ್ಲೂ ಬಣ್ಣದ ಮಾದರಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 72,978 ರಿಂದ ಪ್ರಾರಂಭವಾಗುತ್ತದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಈ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್‌ ಬೈಕಿನಲ್ಲಿ 97.2 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.9 ಬಿಹೆಚ್‍ಪಿ ಪವರ್ ಮತ್ತು 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹಾಗೆಯೇ I3S ಎಂಜಿನ್-ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನವನ್ನು ಹೊಂದಿದ್ದು, ಇದರಿಂದ ಹೆಚ್ಚಿನ ಮೈಲೇಜ್ ಖಾತ್ರಿಪಡಿಸಲಾಗುತ್ತದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಸಸ್ಷೆಂಷನ್ ಸೆಟಪ್ ಬಗ್ಗೆ ಹೇಳುವುದಾದರೆ ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಹೊಂದಿದೆ ಮತ್ತು ಒರಟು ರಸ್ತೆಗಳಿಗೂ ಹೊಂದುವಂತೆ ಹಿಂಭಾಗದಲ್ಲಿ ಡ್ಯುಯಲ್ ಸ್ಪ್ರಿಂಗ್-ಲೋಡೆಡ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಇನ್ನು ಪ್ರಮುಖವಾಗಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ, ಇದು ಸಂಯೋಜಿತ ಬ್ರೇಕಿಂಗ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಬೈಕಿನಲ್ಲಿ ಎಂಜಿನ್ ಕಟ್-ಆಫ್ ಮತ್ತು ಸಂಯೋಜಿತ ಬ್ರೇಕಿಂಗ್ ಸಿಸ್ಟಂ ಅನ್ನು ಒಳಗೊಂಡಿದೆ. ಇತರೆ ವೈಶಿಷ್ಟ್ಯಗಳಲ್ಲಿ ಹ್ಯಾಲೊಜೆನ್ ಹೆಡ್‌ಲೈಟ್, ಬಲ್ಬ್ ಮಾದರಿಯ ಟರ್ನ್ ಇಂಡಿಕೇಟರ್ಸ್, ಹ್ಯಾಲೊಜೆನ್ ಟೈಲ್‌ಲೈಟ್ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಇದರೊಂದಿಗ ಹೀರೋ ಕಂಪನಿಯು ಅತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಎಕ್ಸ್‌ಟೆಕ್‌ ಆವೃತ್ತಿಯಲ್ಲಿ ಪರಿಚಯಿಸಿದ್ದು, ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಬೈಕ್ ಬ್ಲೂಟೂತ್-ಸಕ್ರಿಯಗೊಳಿಸಿದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಿಂದ ಜೊತೆಗೆ ಇತರೆ ವೈಶಿಷ್ಟ್ಯತೆಗಳನ್ನು ಪಡೆಯುತ್ತದೆ. ವಿನ್ಯಾಸದ ವಿಷಯದಲ್ಲಿ, ಈ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಬೈಕ್ ಹೊಸ ಎಲ್ಇಡಿ ಹೈ ಇಂಟೆನ್ಸಿಟಿ ಪೊಸಿಷನ್ ಲ್ಯಾಂಪ್ ಮತ್ತು ಹೊಸ ಗ್ರಾಫಿಕ್ಸ್ ಅನ್ನು ಪಡೆಯುತ್ತದೆ. ಅದು ಹೊಸ ಎಕ್ಸ್‌ಟೆಕ್ ಮಾದರಿಯನ್ನು ಉಳಿದ ಸ್ಪ್ಲೆಂಡರ್ ಪ್ಲಸ್ ಲೈನ್‌ಅಪ್‌ನಿಂದ ಪ್ರತ್ಯೇಕಿಸುತ್ತದೆ.

Most Read Articles

Kannada
English summary
Hero motocorp hike prices of two wheelers up to rs 1000
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X