ಜನವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ Hero Motocorp
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ 2022ರ ಜನವರಿ ತಿಂಗಳ ಮಾಸಿಕ ಮಾರಾಟದ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಒಟ್ಟಾರೆ 3,80,476 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದಾರೆ.

2021ರ ಜನವರಿ ತಿಂಗಳಿನಲ್ಲಿ 4,85,889 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.22 ರಷ್ಟು ಕುಸಿತವನ್ನು ದಾಖಲಿಸಿದೆ. ಹೀರೋ ಮೋಟೊಕಾರ್ಪ್ ಮಾರಾಟಗೊಳಿಸಿದ ಒಟ್ಟು ಯುನಿಟ್‌ಗಳಲ್ಲಿ 3,57,845 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದ್ದರೆ, ಸ್ಕೂಟರ್ ಕೇವಲ 22,631 ಯುನಿಟ್‌ಗಳನ್ನು ಕೊಡುಗೆ ನೀಡಿದೆ. ಮಾರಾಟದಲ್ಲಿನ ಕುಸಿತವು ಪ್ರಾಥಮಿಕವಾಗಿ ಮೂರನೇ ಕರೋನಾ ಅಲೆಯಾಗಿದೆ. ಅಲ್ಲದೇ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಕೂಡ ಜಾರಿಯಾಗಿತ್ತು ಎಂದು ಬ್ರ್ಯಾಂಡ್ ಹೇಳಿಕೊಂಡಿದೆ.

ಇನ್ನು ದೇಶೀಯ ಮಾರಾಟವು 3,58,660 ರಷ್ಟಿದ್ದರೆ, 21,816 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಹೀರೋ ಮೋಟೊಕಾರ್ಪ್ ಬ್ರ್ಯಾಂಡ್-ವಾರು ಮಾರಾಟದ ಅಂಕಿಅಂಶಗಳನ್ನು ಹಂಚಿಕೊಳ್ಳದಿದ್ದರೂ, ಸ್ಪ್ಲೆಂಡರ್ ಮತ್ತು ಪ್ಯಾಶನ್ ಬ್ರ್ಯಾಂಡ್‌ಗಳು ಹೆಚ್ಚಿನ ಕೊಡುಗೆ ನೀಡುತ್ತವೆ.

ಇನ್ನು ಹೀರೋ ಕಂಪನಿಯು ತಮ್ಮ ಮೊದಲ ಸಮೂಹ ಮಾರುಕಟ್ಟೆ ಎಲೆಕ್ಟ್ರಿಕ್-ಸ್ಕೂಟರ್ ಅನ್ನು ಅನಾವರಣಗೊಳಿಸಲು ಯೋಜಿಸಿದೆ. ಈ ಇ-ಸ್ಕೂಟರ್ ಅನ್ನು ಹೊಸ ಬ್ರ್ಯಾಂಡ್ ಅಡಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಮತ್ತು ಹೀರೋ ಮೋಟೋಕಾರ್ಪ್ ಅಲ್ಲ, ಏಕೆಂದರೆ 'ಹೀರೋ' ಪದವನ್ನು ಹೀರೋ ಎಲೆಕ್ಟ್ರಿಕ್ ಮಾತ್ರ ಇವಿ ವರ್ಗದಲ್ಲಿ ಬಳಸಬಹುದಾಗಿದೆ.

ಹೀರೋ ಮೋಟೊಕಾರ್ಪ್ ಹೊಸ ಇವಿ ಸ್ಕೂಟರ್ ಅನ್ನು 2022ರ ಮಾರ್ಚ್ ಮಧ್ಯಂತರದಲ್ಲಿ ಮಾರುಕಟ್ಟೆ ಪ್ರವೇಶಿಸಬಹುದು. ಅಂಗಸಂಸ್ಥೆಯಾದ ಹೀರೋ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ವಿವಿಧ ಇವಿ ಸ್ಕೂಟರ್ ನಿರ್ಮಾಣ ಮತ್ತು ಮಾರಾಟ ಹೊಂದಿದ್ದರೂ ಮಾಡುತ್ತಿದ್ದರೂ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಮುಖ್ಯ ಬ್ರಾಂಡ್ ಅಡಿಯಲ್ಲಿ ಪ್ರತ್ಯೇಕವಾಗಿ ಇವಿ ವಾಹನಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುವ ಯೋಜನೆಯನ್ನು ಹೊಂದಿದೆ.

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಹೀರೋ ಮೋಟೊಕಾರ್ಪ್ ದ್ವಿಚಕ್ರ ವಾಹನ ಉತ್ಪಾದನಾ ಘಟಕದಲ್ಲಿಯೇ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ವಾಹನ ಅಭಿವೃದ್ದಿ ಮತ್ತು ಉತ್ಪಾದನಾ ಘಟಕ ನಿರ್ಮಿಸುತ್ತಿದೆ. ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕಕ್ಕೆ ಹೀರೋ ಕಂಪನಿಯು ಗಾರ್ಡನ್ ಫ್ಯಾಕ್ಟರಿ ಎಂದು ನಾಮಕರಣ ಮಾಡಲಾಗಿದೆ.

ಹೊಸ ಸ್ಕೂಟರ್‌ಗಳ ಉತ್ಪಾದನಾ ಆವೃತ್ತಿಯ ಅನಾವರಣಕ್ಕೂ ಮುನ್ನ ಕಂಪನಿಯ ವರ್ಚುವಲ್ ಸೆಲೆಬ್ರೆಷನ್‌ನಲ್ಲಿ ಬಿಡುಗಡೆಯಾಗಲಿರುವ ವಿವಿಧ ವಿನ್ಯಾಸದ ಹೊಸ ಸ್ಕೂಟರ್‌ಗಳ ಚಿತ್ರಗಳನ್ನು ಬಹಿರಂಗಪಡಿಸಿದೆ. ಹೀರೋ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಸಾಮಾನ್ಯ ಮಾದರಿಗಳೊಂದಿಗೆ ಟ್ರೈ ಸೈಕಲ್ ಮಾದರಿಯು ಸಹ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ,

ಇನ್ನು ಕಳೆದ ವರ್ಷ ಹೀರೋ ಮೋಟೋಕಾರ್ಪ್ ಅರ್ಜೆಂಟೀನಾದಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಿದ್ದಾರೆ, ಹೀರೋ ಮೋಟೋಕಾರ್ಪ್ ಕಂಪನಿಯು ಅರ್ಜೆಂಟೀನಾದಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಲು ಗಿಲೆರಾ ಮೋಟಾರ್ಸ್‌ನೊಂದಿಗೆ ಕೈಜೋಡಿಸಿದ್ದಾರೆ.

ಹೀರೋ ಮೋಟೋಕಾರ್ಪ್ ಕಂಪನಿಯು ಗಿಲೆರಾ ಮೋಟಾರ್ಸ್ ಅರ್ಜೆಂಟೀನಾ ಜೊತೆ ಸೇರಿ ಲ್ಯಾಟಿನ್ ಅಮೇರಿಕನ್ ದೇಶದಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಿದೆ ಮತ್ತು ಅರ್ಜೆಂಟೀನಾದಲ್ಲಿ ಪ್ರಮುಖ ಡೀಲರ್‌ಶಿಪ್ ಅನ್ನು ಇತ್ತೀಚೆಗೆ ಉದ್ಘಾಟಿಸಿದೆ. ಹೀರೋ ಇತ್ತೀಚೆಗೆ ಅರ್ಜೆಂಟೀನಾದಲ್ಲಿ ಮೋಟಾರು ವಾಹನ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾದ ಗಿಲೆರಾ ಮೋಟಾರ್ಸ್‌ನೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಅರ್ಜೆಂಟೀನಾದಲ್ಲಿ ತನ್ನ ಅಸ್ತಿತ್ವವನ್ನು ಪುನಶ್ಚೇತನಗೊಳಿಸಿದೆ ಮತ್ತು ಲ್ಯಾಟಿನ್ ಅಮೆರಿಕದ ಅತ್ಯಂತ ಅನುಭವಿ ಮೋಟಾರ್‌ಸೈಕಲ್ ತಯಾರಕರಲ್ಲಿ ಒಂದಾಗಿದೆ.

ಗಿಲೆರಾ ಮೋಟಾರ್ಸ್ ಅರ್ಜೆಂಟೀನಾ ತನ್ನ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನವೀಕರಿಸಲು ಮತ್ತು ಹೀರೋ ಮೋಟೋಕಾರ್ಪ್ ಮಾದರಿಗಳಲಿ ಅಳವಡಿಸಲಾಗಿರುವ ಇತ್ತೀಚಿನ ಆಟೋಮೋಟಿವ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಬ್ಯೂನಸ್ ಐರಿಸ್‌ನ ಕಾರ್ಲೋಸ್ ಸ್ಪೆಗಜ್ಜಿನಿ ಪ್ರಾಂತ್ಯದಲ್ಲಿ ತನ್ನ ಸ್ಥಾವರವನ್ನು ವಿಸ್ತರಿಸಿದೆ. ಇನ್ನು ಇತ್ತೀಚೆಗೆ ಹೀರೋ ಮೋಟೋಕಾರ್ಪ್ ಕಂಪನಿಯು ದುಬೈನಲ್ಲಿ ಹೊಸ ವಿಶೇಷ ಡೀಲರ್‌ಶಿಪ್ ಅನ್ನು ಉದ್ಘಾಟಿಸುವ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿದೆ. ಹೊಸ ಅತ್ಯಾಧುನಿಕ ಡೀಲರ್‌ಶಿಪ್ 625 ಚದರ ಅಡಿಗಳಿಂದ ಕೂಡಿದೆ. ಈ ಹೊಸ ಹೀರೋ ಡೀಲರ್‌ಶಿಪ್ ನಲ್ಲಿ ಸೇಲ್ಸ್, ಸರ್ವಿಸ್ ಮತ್ತು ಅಕ್ಸೆಸರೀಸ್ ಗಳು ಲಭ್ಯವಿರುತ್ತದೆ.

ಹೀರೋ ಮೋಟೋಕಾರ್ಪ್ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಸಂಪೂರ್ಣ ಸರಣಿಯನ್ನು ಸಹ ಪ್ರದರ್ಶಿಸುತ್ತದೆ. ಕಾರ್ಯಾಗಾರವು ಎರಡು ಸೇವಾ ವಿಭಾಗವನ್ನು ಹೊಂದಿದ್ದು, ಗ್ರಾಹಕರಿಗೆ ಉತ್ತಮ-ದರ್ಜೆಯ ಮಾರಾಟದ ನಂತರದ ಸೇವಾ ಅನುಭವ ಮತ್ತು ಬಿಡಿಭಾಗಗಳನ್ನು ಒದಗಿಸುತ್ತದೆ. ಮಧ್ಯಪ್ರಾಚ್ಯ ಮಾರುಕಟ್ಟೆಯಲ್ಲಿ ಹೀರೋ ಮೋಟೋಕಾರ್ಪ್ ಕಂಪನಿಯ ವಿಶೇಷ ವಿತರಕರಾದ Afriventures FZE ಸಹಯೋಗದೊಂದಿಗೆ. ಗಲ್ಫ್ ರಾಷ್ಟ್ರಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೀರೋ ಮೋಟೋಕಾರ್ಪ್ ಕಂಪನಿಯು ಹೊಂದಿದೆ.

ಒಟ್ಟಿನಲ್ಲಿ ಜನಪ್ರಿಯ ಹೀರೋ ಮೋಟೋಕಾರ್ಪ್ ಕಂಪನಿಯು ಜಾಗತಿಕವಾಗಿ ಮಾರುಕಟ್ಟೆಯನ್ನು ವಿಸ್ತರಿಸಲು ಯೋಜಿಸುತ್ತಿದೆ. ಇದರೊಂದಿಗೆ ಹಲವು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಇದರೊಂದಿಗೆ ಭಾರತದಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಲಿದೆ.


Click it and Unblock the Notifications