ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ 2022ರ ಜುಲೈ ತಿಂಗಳ ಮಾಸಿಕ ಮಾರಾಟದ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 0.34 ಪ್ರತಿಶತದಷ್ಟು ಮಾರಾಟದ ಬೆಳವಣಿಗೆಯನ್ನು ದಾಖಲಿಸಿದೆ.

ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ಕಳೆದ ತಿಂಗಳಿನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 4,30,684 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಕಂಪನಿಯು ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ಮಾರಾಟವಾದ 4,29,208 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಜುಲೈ 2022 ರಲ್ಲಿ ರಫ್ತು ಮಾಡಲಾದ 14,896 ಯುನಿಟ್‌ಗಳಿಗೆ ಹೋಲಿಸಿದರೆ ಕಳೆದ ವರ್ಷ ಇದೇ ತಿಂಗಳಲ್ಲಿ ರಫ್ತು ಮಾಡಲಾದ 25,190 ಯುನಿಟ್‌ಗಳಿಗೆ ಹೋಲಿಸಿದರೆ, ಕಂಪನಿಯು ತನ್ನ ರಫ್ತಿನಲ್ಲಿ ಶೇಕಡಾ 40.86 ರಷ್ಟು ಕುಸಿತವನ್ನು ಕಂಡಿದೆ.

ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಕಂಪನಿಯು ಒಟ್ಟಾರೆಯಾಗಿ (ದೇಶೀಯ + ರಫ್ತುಗಳು), 4,45,580 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇದು ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ 4,54,398 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 1.94 ರಷ್ಟು ಕುಸಿತವನ್ನು ಕಂಡಿದೆ.

ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿಯು, ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಮಾನ್ಸೂನ್, ಮತ್ತು ಮುಂಬರುವ ಹಬ್ಬದ ಸೀಸನ್ ನೊಂದಿಗೆ ಮಾರಾಟದಲ್ಲಿ ಮತ್ತಷ್ಟು ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ಮೊದಲ ತಿಂಗಳಲ್ಲಿ ಎರಡನೇ ತ್ರೈಮಾಸಿಕದಲ್ಲಿ, ಹೀರೋ ಮೋಟೊಕಾರ್ಪ್ ತನ್ನ ವ್ಯಾಪಕವಾಗಿ ಜನಪ್ರಿಯವಾದ ಮೋಟಾರ್‌ಸೈಕಲ್ Xpulse 200 4V ನ ವಿಶೇಷ ರ್ಯಾಲಿ ಆವೃತ್ತಿಯನ್ನು ಮತ್ತು ಕ್ಯಾನ್ವಾಸ್ ಬ್ಲ್ಯಾಕ್ ಆವೃತ್ತಿಯಲ್ಲಿನ ಐಕಾನಿಕ್ ಸೂಪರ್ ಸ್ಪ್ಲೆಂಡರ್‌ನ ಇತ್ತೀಚಿನ ಆವೃತ್ತಿಯನ್ನು ಬಿಡುಗಡೆ ಮಾಡಿತು, ಇದು ಸೂಪರ್ - ಪವರ್, ಸೂಪರ್ - ಮೈಲೇಜ್ ಮತ್ತು ಸೂಪರ್ - ಟ್ರಿಪಲ್ ಭರವಸೆಯೊಂದಿಗೆ ಬರುತ್ತದೆ. "

ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ಕಳೆದ ತಿಂಗಳಲ್ಲಿ, ಕಂಪನಿಯು ತನ್ನ ಮೋಟಾರ್‌ಸೈಕಲ್ ಮಾರಾಟದಲ್ಲಿ 4,21,288 ಯುನಿಟ್‌ಗಳಲ್ಲಿ ಒಂದು ವರ್ಷದ ಹಿಂದೆ ಮಾರಾಟವಾದ 4,24,126 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 0.66 ರಷ್ಟು ಕಡಿಮೆ ಕುಸಿತವನ್ನು ದಾಖಲಿಸಿದೆ. ಇದರ ಸ್ಕೂಟರ್ ಮಾರಾಟವು ಒಂದು ವರ್ಷದ ಹಿಂದೆ ಮಾರಾಟವಾದ 30,272 ಯುನಿಟ್‌ಗಳಿಗೆ ಹೋಲಿಸಿದರೆ 24,292 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಶೇಕಡಾ 19.75 ರಷ್ಟು ಕುಸಿತವನ್ನು ಕಂಡಿದೆ.

ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ಹೀರೋ ಮೋಟೊಕಾರ್ಪ್ ಕಂಪನಿಯು ಏಪ್ರಿಲ್ 2022 - ಜುಲೈ 2022 ರ ಅವಧಿಯಲ್ಲಿ 18,35,773 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಮಾರಾಟವಾದ 14,78,905 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 24.13 ರಷ್ಟು ಏರಿಕೆ ದಾಖಲಿಸಿದೆ.

ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ಇನ್ನು ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೊಕಾರ್ಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕವಾದ ವಿಡಾ(Vida) ಬ್ರ್ಯಾಂಡ್ ಆರಂಭಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಹೊಸ ಸ್ಕೂಟರ್ ಮಾದರಿಯು ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿದೆ. ಎಲೆಕ್ಟ್ರಿಕ್ ವಾಹನಗಳಿಗಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದರೂ ಹೀರೋ ಮೋಟೊಕಾರ್ಪ್ ಕಂಪನಿ ಪ್ರತ್ಯೇಕ ಇವಿ ಬ್ರಾಂಡ್ ಆರಂಭಿಸುತ್ತಿದೆ.

ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ವಿಡಾ ಬ್ರ್ಯಾಂಡ್ ಅಡಿ ಕಂಪನಿಯು ಪ್ರಮುಖ ಇವಿ ದ್ವಿಚಕ್ರವಾಹನಗಳನ್ನು ಹೊರತರಲಿದೆ. ಹೊಸ ಬ್ರಾಂಡ್ ಮೂಲಕ ಮಾರುಕಟ್ಟೆ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನು 100 ಮಿಲಿಯನ್ ಯುಎಸ್ಎ ಡಾಲರ್ ಜಾಗತಿಕ ಸುಸ್ಥಿರತೆ ನಿಧಿ ಘೋಷಿಸಿದ್ದಾರೆ.

ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ಇನ್ನು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಹೊಸ ಉದ್ಯಮಗಳನ್ನು ಪ್ರೋತ್ಸಾಹಿಸುವ ಗುರಿಯೊಂದಿಗೆ ಈ ನಿಧಿಯನ್ನು ಬಳಸಲಾಗುವುದು ಎಂದು ಹೀರೋ ಮೋಟೊಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಮಾಹಿತಿ ನೀಡಿದೆ. ಭವಿಷ್ಯದ ಯೋಜನೆಗಳೊಂದಿಗೆ ಕಂಪನಿಯು ಭಾರೀ ಪ್ರಮಾಣದ ಆದಾಯದ ನೀರಿಕ್ಷೆಯಲ್ಲಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಕೇವಲ ತನ್ನ ಹೊಸ ಯೋಜನೆಗಳಿಗೆ ಮಾತ್ರವಲ್ಲದೆ ಹಲವು ಇವಿ ಸ್ಟಾರ್ಟ್ಅಪ್ ಕಂಪನಿಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಹೊಸ ಬಂಡವಾಳ ಯೋಜನೆ ಅಡಿ ಮತ್ತಷ್ಟು ಇವಿ ಸ್ಕೂಟರ್‌ಗಳು ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿವೆ.

ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ಇನ್ನು ಹೀರೋ ಮೋಟೋಕಾರ್ಪ್ ತನ್ನ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಅನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.52 ಲಕ್ಷವಾಗಿದೆ. ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಸಂಪೂರ್ಣವಾಗಿ ಮಾರಾಟವಾಗಿದೆ. ಈ ಹೊಸ ರ್‍ಯಾಲಿ ಎಡಿಷನ್ ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿತ್ತು. ಇದೀಗ ಈ ಎಲ್ಲಾ ಯುನಿಟ್ ಗಳು ಮಾರಾಟವಾಗಿದೆ ಎಂದು ವರದಿಗಳಾಗಿದೆ. ಈ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಆವೃತ್ತಿಯೊಂದಿಗೆ, ಗ್ರಾಹಕರು ಎಕ್ಸ್‌ಪಲ್ಸ್ 200 4ವಿಯ ಫ್ಯಾಕ್ಟರಿ ಕಸ್ಟಮ್ ರೂಪಾಂತರವನ್ನು ಹೆಚ್ಚು ಆಫ್-ರೋಡ್ ಸಿದ್ಧ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೊಂದಿಗೆ ಪಡೆಯಬಹುದು.

ಭಾರತದಲ್ಲಿ ಮುಂದುವರೆದ ಹೀರೋ ದ್ವಿಚಕ್ರ ವಾಹನಗಳ ಅಬ್ಬರ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಒಟ್ಟಾರೆ 4,45,580 ಯುನಿಟ್‌ಗಳನ್ನು ಮಾರಾಟಗೊಳಿಸುವಲ್ಲಿ ಯಶಸ್ವಿಯಾಗಿದೆ. ಹೀರೋ ಕಂಪನಿಯ ಬೈಕ್ ಗಳು ಮಾರಾಟವು ಉತ್ತಮವಾಗಿದ್ದರೆ. ಸ್ಕೂಟರ್ ಗಳು ಮಾರಾಟದಲ್ಲಿ ಕಂಪನಿಗೆ ಹೆಚ್ಚಿನ ಕೊಡುಗೆಯನು ನೀಡುತ್ತಿಲ್ಲ.

Most Read Articles

Kannada
English summary
Hero motocorp records flat growth in domestic sales in july 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X