ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಜನಪ್ರಿಯ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ಸೀಮಿತ ಸಂಖ್ಯೆಯ ರ‍್ಯಾಲಿ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.52 ಲಕ್ಷ ಬೆಲೆ ಹೊಂದಿದೆ.

ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಸೀಮಿತ ಸಂಖ್ಯೆಯಲ್ಲಿ ಉತ್ಪಾದಿಸುವುದಾಗಿ ಹೇಳಿಕೊಂಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ಬೈಕ್ ಆವೃತ್ತಿಯ ಖರೀದಿಗಾಗಿ ಇದೇ ತಿಂಗಳು 22 ರಂದು ಮಧ್ಯಾಹ್ನ 12ರಿಂದ ಆನ್‌ಲೈನ್ ಬುಕಿಂಗ್ ಆರಂಭಿಸುತ್ತಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿ 29ರ ವರೆಗೆ ಬುಕಿಂಗ್ ಲಭ್ಯವಿರಲಿದೆ.

ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಸ್ಟ್ಯಾಂಡರ್ಡ್ ಎಕ್ಸ್‌ಪಲ್ಸ್ 200 4ವಿ ಮಾದರಿಗಿಂತಲೂ ವಿಭಿನ್ನವಾದ ಸಸ್ಷೆಂಷನ್ ಸೆಟ್ಅಪ್ ಹೊಂದಿದ್ದು, ಡಾಕರ್ ರ‍್ಯಾಲಿಗಾಗಿ ಬಳಕೆ ಮಾಡುವ ರ‍್ಯಾಲಿ ಎಡಿಷನ್ ಪ್ರೇರಣೆಯೊಂದಿಗೆ ಹೊಸ 200 4ವಿ ರ‍್ಯಾಲಿ ಎಡಿಷನ್ ಪರಿಚಯಿಸಲಾಗಿದೆ.

ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್‌ನಲ್ಲಿ 250 ಎಂಎಂ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಕಾರ್ಟ್‌ರಿಡ್ಜ್ ಫ್ರಂಟ್ ಟ್ರಾವೆಲ್ ಸಸ್ಷೆಂಷನ್‌ನೊಂದಿಗೆ ಹತ್ತು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ 220 ಎಂಎಂ ರಿಯರ್ ಸಸ್ಷೆಂಷನ್ ನೀಡಲಾಗಿದೆ.

ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಹೀರೊ ಮೋಟೊಕಾರ್ಪ್ ಕಂಪನಿಯು ಹೊಸ ಬೈಕಿನಲ್ಲಿ 270 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಿದ್ದು, ಅದರ ಆಸನವು ನೆಲದಿಂದ 885 ಎಂಎಂ ಎತ್ತರದಲ್ಲಿದೆ. ಹಾಗೆಯೇ ರ‍್ಯಾಲಿ ಆವೃತ್ತಿಯ ಟ್ರಯಲ್ ಅನ್ನು 116 ಎಂಎಂಗೆ ವಿಸ್ತರಿಸಲಾಗಿದ್ದು, ವೀಲ್ಹ್‌ಬೇಸ್ 1,426 ಎಂಎಂ ಉದ್ದಳತೆ ಹೊಂದಿದೆ, ಇದು ಸ್ಟ್ಯಾಂಡರ್ಡ್ ಎಕ್ಸ್‌ಪಲ್ಸ್ 200 4ವಿ ಮಾದರಿಗಿಂತ 16ಎಂಎಂಗಿಂತಲೂ ಹೆಚ್ಚಾಗಿದ್ದು, ಹೊಸ ಮಾದರಿಯು 160 ಕಿ.ಮೀ ತೂಕ ಹೊಂದಿದೆ.

ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಹಾಗೆಯೇ ಹೊಸ ಬೈಕ್ ಸವಾರಿಯನ್ನು ಮತ್ತಷ್ಟು ಸುಲಭವಾಗಿಸಲು ರ‍್ಯಾಲಿ ಎಡಿಷನ್ ಆವೃತ್ತಿಯಲ್ಲಿ ಕಂಪನಿಯು 21-ಇಂಚಿನ (ಮುಂಭಾಗ)ದ ಮತ್ತು 18-ಇಂಚಿನ (ಹಿಂಭಾಗದ) ಸ್ಪೋಕ್ಡ್ ವೀಲ್ಹ್‌ಗಳನ್ನು ಜೋಡಣೆ ಮಾಡಿದೆ.

ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಹೊಸ ಬೈಕಿನಲ್ಲಿರುವ ಹೊಸ ಮಾದರಿಯ ಟೈರ್‌ಗಳು ಡ್ಯುಯಲ್-ಪರ್ಪಸ್ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಬೈಕ್ ಅನ್ನು ವಿಶೇಷವಾಗಿ ರ‍್ಯಾಲಿ ಮಾದರಿಯಾಗಿ ಗುರುತಿಸಲು ರ‍್ಯಾಲಿ ಕೋಡ್ ಗ್ರಾಫಿಕ್ಸ್ ಮತ್ತು ಹೀರೋ ಮೋಟಾರ್‌ಸ್ಪೋರ್ಟ್ಸ್ ವಿಭಾಗದ ಜನಪ್ರಿಯ ರೈಡರ್ ಸಿ ಎಸ್ ಸಂತೋಷ್ ಅವರ ಆಟೋಗ್ರಾಫ್ ಅನ್ನು ಸಹ ಒಳಗೊಂಡಿದೆ.

ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಹೊಸ ಮಾದರಿಯು ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿರುವಂತೆಯೇ 199.6 ಸಿಸಿ, ಆಯಿಲ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಇದು 8,500 ಆರ್‌ಪಿಎಂನಲ್ಲಿ 18.9 ಬಿಎಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 17.35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಹೀರೋ ಕಂಪನಿಯು ಹೊಸ ಮಾದರಿಯಲ್ಲಿ ಎಲ್ಇಡಿ ಹೆಡ್‌ಲೈಟ್‌ ಮತ್ತು ಟೈಲ್ ಲೈಟ್, ಅಪ್‌ಸ್ವೆಪ್ಟ್ ಎಕ್ಸಾಸ್ಟ್, ಎಂಜಿನ್ ಅನ್ನು ರಕ್ಷಿಸಲು ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ಗರಿಷ್ಠ ಹಿಡಿತ ಮತ್ತು ನಿಯಂತ್ರಣಕ್ಕಾಗಿ ಥ್ರೂತ್ ಬ್ರೇಕ್ ಪೆಡಲ್ ಮತ್ತು ವಿಸ್ತೃತವಾದ ಗೇರ್ ಲಿವರ್ ಮತ್ತು ಉದ್ದವಾದ ಸೈಡ್ ಸ್ಟ್ಯಾಂಡ್ ಹೊಂದಿರಲಿದೆ.

ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಇದಲ್ಲದೆ ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು ಸ್ಮಾರ್ಟ್‌ಫೋನ್ ಸಂಪರ್ಕವನ್ನು ಒದಗಿಸುತ್ತಿದ್ದು, ಈ ಮೂಲಕ ಸವಾರರು ಕಾಲ್ ಅಲರ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಇಂಡಿಕೇಟರ್, ಇಕೋ ಮೋಡ್ ಮತ್ತು ಎರಡು ಟ್ರಿಪ್ ಮೀಟರ್‌ಗಳು ಮತ್ತು ಸಿಂಗಲ್ ಚಾನೆಲ್ ಎಬಿಎಸ್ ಜೊತೆಗೆ ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಹೊಂದಿದೆ.

ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಹೊಸ ಬೈಕ್ ಬಿಡುಗಡೆಯ ಕುರಿತು ಮಾತನಾಡಿರುವ ಹೀರೋ ಮೋಟೋಕಾರ್ಪ್‌ನ ಸ್ಟ್ರಾಟಜಿ ಮತ್ತು ಗ್ಲೋಬಲ್ ಪ್ರಾಡಕ್ಟ್ ಪ್ಲಾನಿಂಗ್ ಮುಖ್ಯಸ್ಥ ಮಾಲೋ ಲೆ ಮ್ಯಾಸನ್ ಅವರು ಫ್ಯಾಕ್ಟರಿಯಿಂದ ಅಳವಡಿಸಲಾದ ರ‍್ಯಾಲಿ ಕಿಟ್‌ ರೈಡರ್‌ಗಳಿಗೆ ಅಸಾಧಾರಣವಾದ ಆಫ್-ರೋಡ್ ಸಾಮರ್ಥ್ಯ ಹೊಂದಿದ್ದು, ಡಾಕರ್ ರ‍್ಯಾಲಿ ಮಾದರಿಗಳಿಂದ ಪ್ರೇರಿತವಾದ ಈ ವಿಶಿಷ್ಟ ವಿನ್ಯಾಸಗಳು ರೈಡರ್‌ಗಳಿಗೆ ಅತ್ಯುತ್ತಮ ಆಯ್ಕೆಯಾಗಿ ಎಂದಿದ್ದಾರೆ.

ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಎಡಿಷನ್ ಬಿಡುಗಡೆ

ಈ ಮೂಲಕ ಹೀರೋ ಎಕ್ಸ್‌ಪಲ್ಸ್ 200 4ವಿ ‌ರ‍್ಯಾಲಿ ಆವೃತ್ತಿಯು ತನ್ನೊಂದಿಗೆ ಹಲವಾರು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಸೀಮಿತ ಆವೃತ್ತಿಯ ಈ ಬೈಕ್ ಸಾಮಾನ್ಯ ರೈಡ್ ಜೊತೆಗೆ ಅಡ್ವೆಂಚರ್ ರೈಡ್ ಬಯಸುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದು.

Most Read Articles

Kannada
English summary
Hero xpulse 200 4v rally edition launched in india details
Story first published: Tuesday, July 19, 2022, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X