ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಜನಪ್ರಿಯ ಬೈಕ್ ಆವೃತ್ತಿಯಾದ ಎಕ್ಸ್‌ಪಲ್ಸ್ 200 4ವಿ ಮಾದರಿಗಾಗಿ ಆಕ್ರಮಣಕಾರಿಯಾದ ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾದ ರ‍್ಯಾಲಿ ಕಿಟ್ ಬಿಡುಗಡೆ ಮಾಡಿದ್ದು, ಗ್ರಾಹಕರು ಇದೀಗ ತಮ್ಮ ಆದ್ಯತೆಗೆ ಅನುಗುಣವಾಗಿ ರ‍್ಯಾಲಿ ಕಿಟ್ ಆಯ್ಕೆ ಮಾಡಬಹುದಾಗಿದೆ.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾದ ಹಲವಾರು ಅಂಶಗಳನ್ನು ಒಳಗೊಂಡಿರುವ ರ‍್ಯಾಲಿ ಕಿಟ್ ರೂ.46 ಸಾವಿರ ಬೆಲೆ ಹೊಂದಿದ್ದು, ರ‍್ಯಾಲಿ ಕಿಟ್‌ನಲ್ಲಿ ಎಂಜಿನ್ ಅಪ್‌ಡೇಟ್ ಜೊತೆಗೆ ಆಫ್ ರೋಡ್‌ಗೆ ಬೇಕಾದ ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ನಂತರ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗುವ ಅಡ್ವೆಂಚರ್ ಮೋಟಾರ್‌ಸೈಕಲ್‌ ಮಾದರಿಯಾಗಿದ್ದು, ಆಫ್ ರೋಡಿಂಗ್ ಮತ್ತು ಸಿಟಿ ರೈಡ್‌ಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ಇದೀಗ ಪರಿಚಯಿಸಲಾಗಿರುವ ಹೊಸ ರ‍್ಯಾಲಿ ಕಿಟ್ ಆಫ್ ರೋಡ್ ಕೌಶಲ್ಯತೆ ಇಷ್ಟಪಡುವ ಗ್ರಾಹಕರಿಗೆ ಉತ್ತಮವಾದ ಆಯ್ಕೆಯಾಗಿದ್ದು, ರ‍್ಯಾಲಿ ಕಿಟ್‌ನಲ್ಲಿ 250 ಎಂಎಂ ಪ್ರಿಲೋಡ್-ಹೊಂದಾಣಿಕೆಯ ಕಾರ್ಟ್ರಿಡ್ಜ್ ಶೈಲಿಯ ಟ್ರಾವೆಲ್ ಫೋರ್ಕ್ ಸಸ್ಷೆಷನ್ ಅನ್ನು ಪರಿಚಯಿಸಿದೆ.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ಹಾಗೆಯೇ ಪ್ರೀಲೋಡ್-ಹೊಂದಾಣಿಕೆ ಮಾಡಬಹುದಾದ ರಿಯರ್ ಮೊನೊಶಾಕ್ 220 ಎಂಎಂ ಸಸ್ಷೆಷನ್ ಹೊಂದಿದ್ದು, ಈ ಮೂಲಕ ರ‍್ಯಾಲಿ ಕಿಟ್ ಹೊಂದಿರುವ ರೂಪಾಂತರವು 275 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿರಲಿದೆ.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ಹೊಸ ಬದಲಾವಣೆಗಳ ನಂತರವೂ ಬೈಕ್ ಅನ್ನು ಸರಿಯಾದ ರೀತಿಯಲ್ಲಿ ನಿಲ್ಲಿಸಲು ಸಾಧ್ಯವಾಗುವಂತೆ ಬ್ರ್ಯಾಂಡ್‌ನ ಎತ್ತರದ ಸೈಡ್ ಸ್ಟ್ಯಾಂಡ್ ಅನ್ನು ಪರಿಚಯಿಸಿದ್ದು, ಇದರೊಂದಿಗೆ ಆಫ್-ರೋಡಿಂಗ್ ಅನ್ನು ಉತ್ತಮವಾಗಿ ನಿಯಂತ್ರಿಸಲು ಸಹಾಯಕವಾಗುವಂತೆ ಸಮತಟ್ಟಾದ ಮತ್ತು ಗಮನಾರ್ಹವಾಗಿರುವ ಎತ್ತರದ ಬೆಂಚ್-ಶೈಲಿಯ ಸೀಟ್ ಅನ್ನು ಪರಿಚಯಿಸಿದೆ.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ಆಫ್ ರೋಡ್ ಸವಾರಿ ಸಮಯದಲ್ಲಿ ಸವಾರರಿಗೆ ಎದ್ದುನಿಂತು ರೈಡ್ ಮಾಡಲು ಅನುಕೂಲಕರವಾಗುವಂತೆ ಉತ್ತಮವಾದ ಹಿಡಿತ ಒದಗಿಸಲಾಗಿದ್ದು, ಎತ್ತರವಾದ ರೈಸರ್‌ಗಳು ಮತ್ತು ಗೇರ್ ಶಿಫ್ಟಿಂಗ್‌ಗಾಗಿ ವಿಸ್ತೃತ ಗೇರ್ ಲಿವರ್ ಅನ್ನು ಪರಿಚಯಿಸಲಾಗಿದೆ.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ಹೀರೋ ಎಕ್ಸ್‌ಪಲ್ಸ್ 200 4ವಿ ರ‍್ಯಾಲಿ ಕಿಟ್ ಮಾದರಿಯ ಮತ್ತೊಂದು ಪ್ರಮುಖ ಅಂಶವೆಂದರೆ ಮ್ಯಾಕ್ಸ್‌ಸಿಸ್ ಟೈರ್‌ಗಳು. ಇವು ಕಡಿಮೆ ಹಿಡಿತದ ಪರಿಸ್ಥಿತಿಗಳಲ್ಲೂ ಉತ್ತಮ ಎಳೆತವನ್ನು ಒದಗಿಸಲು ಬ್ಲಾಕ್-ಆಕಾರದ ಚಕ್ರದ ಹೊರಮೈ ಮಾದರಿಯೊಂದಿಗೆ ಬರುತ್ತವೆ.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ರ‍್ಯಾಲಿ ಕಿಟ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಸಿಂಗಲ್-ಸಿಲಿಂಡರ್ ಏರ್-ಆಯಿಲ್-ಕೂಲ್ಡ್ ಎಂಜಿನ್ ಹೊಂದಿದ್ದು, ಬೈಕ್ ಕಾರ್ಯಕ್ಷಮತೆ ಮತ್ತು ಸವಾರಿಯನ್ನು ಸುಧಾರಿಸಲು ಹೀರೋ ಇತ್ತೀಚೆಗೆ ಮೋಟಾರ್‌ಸೈಕಲ್ ಅನ್ನು 4-ವಾಲ್ವ್ ಹೆಡ್‌ನೊಂದಿಗೆ ಮಾರ್ಪಡಿಸಿದೆ.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ಎಕ್ಸ್‌ಪಲ್ಸ್ 200 ನಲ್ಲಿರುವ 199.6 ಸಿಸಿ ಎಂಜಿನ್ ಮಾದರಿಯು 8,500 ಆರ್‌ಪಿಎಂನಲ್ಲಿ 19.1 ಬಿಎಚ್‌ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 17.35 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಎಂಜಿನ್ ಅನ್ನು ಕಂಪನಿಯು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಿದೆ.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

‌ರ‍್ಯಾಲಿ ಕಿಟ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ಬ್ರೇಕ್ ಘಟಕಗಳನ್ನು ಜೋಡಿಸಲಾಗಿದ್ದು, ಇದರಲ್ಲಿ 276 ಎಂಎಂ ಮುಂಭಾಗದ ಡಿಸ್ಕ್ ಮತ್ತು 220 ಎಂಎಂ ಹಿಂಭಾಗದ ಡಿಸ್ಕ್‌ನೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಒಳಗೊಂಡಿದೆ.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ಹೊಸ ಮಾದರಿಯಲ್ಲಿ ಇಂಧನ ಟ್ಯಾಂಕ್ ಕೂಡಾ ಅದೇ ಸಾಮಾನ್ ಮಾದರಿಯಲ್ಲಿರುವಂತೆ 13 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದ್ದು, ಆಫ್-ರೋಡ್ ಗಾತ್ರದ ಸ್ಪೋಕ್ ರಿಮ್ಸ್ ಹೊಸ ಬೈಕಿನಲ್ಲಿ ಆಕರ್ಷಕವಾಗಿದೆ. ಮುಂಭಾಗದಲ್ಲಿ ಚಕ್ರಗಳಲ್ಲಿ 90/90-21 ಮತ್ತು ಹಿಂಭಾಗದಲ್ಲಿ 120/80-18 ಚಕ್ರಗಳನ್ನು ನೀಡಲಾಗಿದ್ದು, ಹೊಸ ತಾಂತ್ರಿಕ ಅಂಶಗಳು ತುಸು ದುಬಾರಿಯಾಗಿಲಿದೆ.

ಆಫ್ ರೋಡ್ ಪ್ರಿಯರಿಗಾಗಿ ಹೀರೋ ಎಕ್ಸ್‌ಪಲ್ಸ್ 200 4ವಿ ಮಾದರಿಯಲ್ಲಿ ರ‍್ಯಾಲಿ ಕಿಟ್ ಬಿಡುಗಡೆ

ಎಕ್ಸ್‌ಪಲ್ಸ್ 200 4ವಿ ಸ್ಟ್ಯಾಂಡರ್ಡ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.36 ಲಕ್ಷ ಬೆಲೆ ಹೊಂದಿದ್ದು, ಆಫ್ ರೋಡ್ ಕೌಶಲ್ಯತೆ ಬಯಸುವ ಗ್ರಾಹಕರು ಹೆಚ್ಚುವರಿಯಾಗಿ ರೂ. 46 ಸಾವಿರ ಮೌಲ್ಯದ ಆಫ್ ಕಿಟ್ ಪಡೆದುಕೊಳ್ಳಬೇಕಾಗುತ್ತದೆ.

Most Read Articles

Kannada
English summary
Hero xpulse 200 4v rally kit launched price details
Story first published: Tuesday, July 12, 2022, 20:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X