ಮುಂಬರಲಿರುವ 'ರಾಯಲ್ ಎನ್‌ಫೀಲ್ಡ್ ಬುಲೆಟ್' 650 ಸಿಸಿ ಬಗ್ಗೆ ಈ ವಿಚಾರಗಳು ಗೊತ್ತೇ?

ಭಾರತದ ಯುವ ಜನರಿಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳೆಂದರೇ ಅಚ್ಚುಮೆಚ್ಚು. ಸದ್ಯ ಇಂತಹವರಿಗಾಗಿಯೇ 'ರಾಯಲ್ ಎನ್‌ಫೀಲ್ಡ್' ಅನೇಕ ಹೊಸ ಬೈಕ್‌ಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 650ಸಿಸಿ ಮತ್ತು 450ಸಿಸಿ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಿದೆ. ಅದರಲ್ಲಿ ಬುಲೆಟ್ 650ಸಿಸಿ ಸಹ ಸೇರಿದೆ.

ವಿನ್ಯಾಸ:
ಮುಂಬರಲಿರುವ ನೂತನ ರಾಯಲ್ ಎನ್‌ಫೀಲ್ಡ್ ಬುಲೆಟ್ 650ಸಿಸಿ, ಬಹುತೇಕ ಬುಲೆಟ್ 350ನಂತೆಯೇ ವಿನ್ಯಾಸವನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ರೆಟ್ರೊ ಥೀಮ್ ಅನ್ನೇ ಒಳಗೊಂಡಿರಲಿದ್ದು, ಇದು ರೌಂಡ್ ಹೆಡ್‌ಲ್ಯಾಂಪ್‌ಗಳು, ವೈಡ್ ಹ್ಯಾಂಡಲ್‌ಬಾರ್, ದೊಡ್ಡದಾದ ಪ್ಯೂಯೆಲ್ ಟ್ಯಾಂಕ್, ರೌಂಡ್ ಟೈಲ್ ಲೈಟ್‌ಗಳು ಹಾಗೂ ರೌಂಡ್ ಇಂಡಿಕೇಟರ್‌ಗಳನ್ನು ಒಳಗೊಂಡಿರಲಿದೆ. ಇದಲ್ಲದೆ, ಬುಲೆಟ್ 350ನಂತೆಯೇ ಬಣ್ಣಗಳನ್ನು ಹೊಂದಿರುವ ನಿರೀಕ್ಷೆಯಿದ್ದು, ರೋಡ್ ನಲ್ಲಿ ಟ್ರಾವೆಲ್ ಮಾಡಲು ರೈಡರ್ ಗೆ ಉತ್ತಮವಾದ ಅನುಭವ ನೀಡುತ್ತದೆಯಂತೆ.

ಮುಂಬರಲಿರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 650 ಸಿಸಿ ಬಗ್ಗೆ ತಿಳಿದುಕೊಳ್ಳಬೇಕಾಗಿರುವ ಪ್ರಮುಖಾಂಶಗಳು

ಕಾರ್ಯಕ್ಷಮತೆ:
ದೇಶದ ಮಾರುಕಟ್ಟೆಯಲ್ಲಿ ಮುಂಬರುವ 650 ಸಿಸಿ ಬೈಕ್‌ಗಳಂತೆಯೇ, ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 650 ಸಹ ಅದೇ 648 ಸಿಸಿಗೆ ಪ್ಯಾರಲಲ್-ಟ್ವಿನ್ ಸಿಲಿಂಡರ್ ಫ್ಯೂಯೆಲ್-ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗಲಿದೆ ಎಂದು ಹೇಳಲಾಗಿದೆ. ಅದು 47 bhp ಗರಿಷ್ಠ ಪವರ್ ಹಾಗೂ 52 Nm ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ಆರು-ಸ್ಪೀಡ್ ಮ್ಯಾನುವಲ್ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ಪರ್ ಕ್ಲಚ್‌ನೊಂದಿಗೆ ಬರಬಹುದು ಎಂದು ಅಂದಾಜಿಲಾಗಿದೆ.

ವೈಶಿಷ್ಟ್ಯಗಳು ಹಾಗೂ ಬಿಡುಗಡೆ ದಿನಾಂಕ:
ಹೊಸ ಬುಲೆಟ್' 650ಸಿಸಿ ಬಗ್ಗೆ ಇನ್ನೂ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.ಇದು ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಿಪ್ಪರ್ ನ್ಯಾವಿಗೇಷನ್ ಸಿಸ್ಟಮ್, ಎಲೆಕ್ಟ್ರಿಕ್ ಸ್ಟಾರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಈ ಹೊಸ ಬೈಕ್ ಬಿಡುಗಡೆ ದಿನಾಂಕದ ಬಗ್ಗೆಯೂ ಬ್ರ್ಯಾಂಡ್ ಅಧಿಕೃತವಾಗಿ ದೃಢೀಕರಿಸದಿದ್ದರೂ, 2023ರ ಕೊನೆಯಲ್ಲಿ ಅಥವಾ 2024ರಲ್ಲಿ ಆರಂಭದಲ್ಲಿ ಮಾರಾಟಗಳು ಶುರುವಾಗಲಿದೆ ಎಂದು ವರದಿಯಾಗಿದೆ.

ಬೆಲೆ:
ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 650ಸಿಸಿ ಬೆಲೆ ವಿಚಾರವಾಗಿ ಹೇಳುವುದಾದರೆ, ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ಗಳಲ್ಲಿ ಅತ್ಯಂತ ಕೈಗೆಟುಕುವ 650 ಸಿಸಿ ಬೈಕ್‌ಗಳಲ್ಲಿ ಇದು ಒಂದಾಗಿದ್ದು, ಖರೀದಿದಾರರಿಗೆ ಈ ಬೈಕ್ ಅತ್ಯುನ್ನತ ಆಯ್ಕೆಯಾಗಬಹುದು. ಈ ಹೊಸ ಬೈಕ್ ಬೆಲೆ ರೂ. 2.75 - 3 ಲಕ್ಷ (ಎಕ್ಸ್ ಶೋ ರೂಂ)ವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಮುಂಬರುವ ಬೈಕ್‌ಗಳಾದ RE ಶಾಟ್‌ಗನ್ 650, ಸ್ಕ್ರ್ಯಾಂಬ್ಲರ್ 650, ಕ್ಲಾಸಿಕ್ 650, ಮತ್ತು ಕೆಫೆರೇಸರ್ 650 ಜೊತೆಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಸಹ ಸ್ಥಾನ ಪಡೆಯಲಿದೆ ಎಂದು ಹೇಳಲಾಗಿದೆ.

ಸದ್ಯ, ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಸಿಸಿ ಬೈಕ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದ್ದು, ಈ ಬೈಕ್ ಮಾರಾಟವು ಜನವರಿ 2023ರ ಆರಂಭಿಕ ವಾರಗಳಲ್ಲಿ ಶುರುವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಣೆಯಾಗಿಲ್ಲ. ಈ ಬೈಕ್ ಬೆಲೆ ಕೊಂಚ ದುಬಾರಿಯಂದೇ ಹೇಳಬಹುದು. ಇದು ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಸ್ಟ್ಯಾಂಡರ್ಡ್ ಮತ್ತು ಟೂರರ್ ಇದರ ಬೆಲೆ ಕ್ರಮವಾಗಿ ರೂ. 3.5 ಲಕ್ಷ ಮತ್ತು 4 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ಸ್ಟ್ಯಾಂಡರ್ಡ್ ರೂಪಾಂತರವು ಆಸ್ಟ್ರಲ್ (ಕಪ್ಪು, ನೀಲಿ, ಹಸಿರು), ಇಂಟರ್ ಸ್ಟೆಲ್ಲರ್ (ಗ್ರೇ ಮತ್ತು ಗ್ರೀನ್) ಬಣ್ಣಗಳನ್ನು ಹೊಂದಿರಬಹುದು. ಟೂರರ್ ರೂಪಾಂತರವು ಸೆಲೆಸ್ಟಿಯಲ್ (ಕೆಂಪು, ನೀಲಿ) ಕಲರ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಈ ಬೈಕ್‌ನ ಒಟ್ಟು ಉದ್ದ, ಅಗಲ ಮತ್ತು ಎತ್ತರ ಕ್ರಮವಾಗಿ 2260ಎಂಎಂ, 890ಎಂಎಂ, ಮತ್ತು 1155ಎಂಎಂ ಇದ್ದು, 1500ಎಂಎಂ ವ್ಹೀಲ್ ಬೇಸ್ ಮತ್ತು 135ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಬರೋಬ್ಬರಿ 241 ಕೆ.ಜಿ ತೂಕವಿದ್ದು, 15.7-ಲೀಟರ್ ಪ್ಯೂಯೆಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

ಈ ಬೈಕ್, 648 ಸಿಸಿ, ಏರ್ ಮತ್ತು ಆಯಿಲ್-ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿದ್ದು, ಇದು 2,500 rpmನಲ್ಲಿ 80 ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ ಎಂದು ರಾಯಲ್ ಎನ್‌ಫೀಲ್ಡ್ ಕಂಪನಿ ಹೇಳಿಕೊಂಡಿದ್ದು, ಇದರ ಮೋಟಾರ್ 7,250 rpmನಲ್ಲಿ 47bhp ಗರಿಷ್ಠ ಪವರ್ ಮತ್ತು 5,650 rpmನಲ್ಲಿ 52 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದು 6-ಸ್ಪೀಡ್ ಸ್ಥಿರ ಮೆಶ್ ಗೇರ್ ಬಾಕ್ಸ್ ಜೊತೆಗೆ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Important things to know about the upcoming royal enfield bullet 650cc
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X