ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ ಝಡ್650ಆರ್‌ಎಸ್ 50ನೇ ಆನಿವರ್ಸರಿ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಕವಾಸಕಿ ಝಡ್650ಆರ್‌ಎಸ್ 50ನೇ ಆನಿವರ್ಸರಿ ಎಡಿಷನ್ ಬೈಕಿನ ಬೆಲೆಯು ಎಕ್ಸ್-ಶೋರೂಂ ಪ್ರಕಾರ ರೂ.6.79 ಲಕ್ಷವಾಗಿದೆ.

ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಕವಾಸಕಿ ಝಡ್650ಆರ್‌ಎಸ್ 50ನೇ ಆನಿವರ್ಸರಿ ಎಡಿಷನ್ ಮಾದರಿಯ ಬೆಲೆಯು ಸ್ಟ್ಯಾಂಡರ್ಡ್ ಆವೃತ್ತಿಗಿಂತ ರೂ.5,000 ಹೆಚ್ಚಾಗಿದೆ. ಈ 50ನೇ ಆನಿವರ್ಸರಿ ಎಡಿಷನ್ ಮಾದರಿಯು 20 ಯುನಿಟ್ ಗಳ ಸೀಮಿತ ಸಂಖ್ಯೆಯಲ್ಲಿ ಲಭ್ಯವಿರುತ್ತದೆ. ಕವಾಸಕಿ ಝಡ್650ಆರ್‌ಎಸ್ 50ನೇ ಆನಿವರ್ಸರಿ ಎಡಿಷನ್ ಮಾದರಿಯು ಸಾಂಪ್ರದಾಯಿಕ ಕವಾಸಕಿ ಝಡ್1 50ನೇ ಆನಿವರ್ಸರಿ ಎಡಿಷನ್ ಅನ್ನು ನೆನಪಿಸುವಂತಿದೆ. ಈ ಸೀಮಿತ ಆವೃತ್ತಿಯ ಬೈಕ್ ವಿಶೇಷ ಕ್ಯಾಂಡಿ ಡೈಮಂಡ್ ಬ್ರೌನ್ ಬಣ್ಣದ ಜೊತೆಗೆ ಗ್ಲೋಸ್ ಬ್ಲ್ಯಾಕ್ ಫ್ರೇಮ್ ಅನ್ನು ಒಳಗೊಂಡಿದೆ.

ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಈ ಪೇಂಟ್ ಥೀಮ್ ಮೂಲ ಕವಾಸಕಿ ಕವಾಸಕಿ ಝಡ್1 ನಿಂದ ಸ್ಫೂರ್ತಿ ಪಡೆದಿದೆ. ಸ್ಟೈಲಿಂಗ್ ಅನ್ನು ಗೋಲ್ಡನ್-ಕಲರ್ ರಿಮ್‌ಗಳು, ಫ್ಯೂಯಲ್ ಟ್ಯಾಂಕ್‌ನ ಮೇಲ್ಭಾಗದಲ್ಲಿ ಲೋಗೋ ಮತ್ತು ಕಾಂಟ್ರಾಸ್ಟ್ ಕಲರ್ ಸ್ಟಿಚಿಂಗ್‌ನೊಂದಿಗೆ ವಿಶೇಷ ಟೆಕ್ಸ್ಚರ್ಡ್ ಲೆದರ್ ಸೀಟ್‌ನಿಂದ ಪೂರಕವಾಗಿದೆ.

ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಬದಲಾವಣೆಗಳು ಹೊಸ ಪೇಂಟ್ ಸ್ಕೀಮ್ ರೂಪದಲ್ಲಿ ದೃಶ್ಯ ನವೀಕರಣಗಳಿಗೆ ಸೀಮಿತವಾಗಿವೆ. ಮತ್ತೊಂದೆಡೆ, ವಿನ್ಯಾಸವು ಸ್ಟ್ಯಾಂಡರ್ಡ್ ಝಡ್650ಆರ್‌ಎಸ್ ಬೈಕಿಗೆ ಹೋಲುತ್ತದೆ. ಹೀಗಾಗಿ ಒಂದು ಸುತ್ತಿನ ಹೆಡ್‌ಲೈಟ್, ಟ್ವಿನ್-ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸಿಂಗಲ್-ಪೀಸ್ ಸೀಟ್, ಕ್ರೋಮ್ ಪಿಲಿಯನ್ ಗ್ರಾಬ್ರೈಲ್ ಮತ್ತು ಅಂಡರ್‌ಬೆಲ್ಲಿ ಎಕ್ಸಾಸ್ಟ್ ಅನ್ನು ಒಳಗೊಂಡಿರುವ ರೆಟ್ರೊ ವಿನ್ಯಾಸವನ್ನು ಉಳಿಸಿಕೊಂಡಿದೆ.

ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಸ್ಟ್ಯಾಂಡರ್ಡ್ ಕವಾಸಕಿ ಝಡ್650ಆರ್‌ಎಸ್ ಬೈಕ್ ಇದರ ಹಿರಿಯ ಸಹೋದರ ಮಾದರಿ ಝಡ್900ಆರ್‌ಎಸ್ ಮಾದರಿಯಿಂದ ವಿನ್ಯಾಸ ಸ್ಫೂರ್ತಿ ಪಡೆದಿದೆ ಮತ್ತು ಇದು ಸೊಗಸಾದ ರೆಟ್ರೊ ವಿನ್ಯಾಸವನ್ನು ಹೊಂದಿದೆ. ಇನ್ನು ಕವಾಸಕಿ ಝಡ್650ಆರ್‌ಎಸ್ 50ನೇ ಆನಿವರ್ಸರಿ ಎಡಿಷನ್ ನಲ್ಲಿ ಕ್ರೋಮ್ ಬೆಜೆಲ್‌ಗಳೊಂದಿಗೆ ರೌಂಡ್-ಆಕಾರದ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿವೆ

ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಇದರೊಂದಿಗೆ ಈ ರೆಟ್ರೊ-ಶೈಲಿಯ ಮಾದರಿಯ ಇತರ ಮುಖ್ಯಾಂಶಗಳು ವೃತ್ತಾಕಾರದ ಹಿಂಬದಿಯ ಮೀರರ್ಸ್, ಸ್ಪೋಕ್ಡ್ ವ್ಹೀಲ್ ಗಳು, ಚದರ-ಆಕಾರದ ಫ್ಯೂಯಲ್ ಟ್ಯಾಂಕ್, ಸಿಂಗಲ್-ಪೀಸ್ ಸೀಟ್, ಅಂಡರ್ಬೆಲ್ಲಿ ಎಕ್ಸಾಸ್ಟ್ ಸಿಸ್ಟಮ್ ಮತ್ತು ಡ್ಯುಯಲ್-ಪಾಡ್ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್.ಅನ್ನು ಒಳಗೊಂಡಿದೆ.

ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಇತರ ಮುಖ್ಯಾಂಶಗಳು ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ, ಜೊತೆಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್, ಲಂಬವಾದ ಹ್ಯಾಂಡಲ್‌ಬಾರ್ ಪೊಸಿಶನಿಂಗ್, ಸ್ವಲ್ಪ ಹಿಂಭಾಗದಲ್ಲಿ ಸೆಟ್ ಫುಟ್‌ಪೆಗ್‌ಗಳು ಮತ್ತು ಇತ್ಯಾದಿ ಅಂಶಗಳನ್ನು ಹೊಂದಿವೆ.

ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಈ ಹೊಸ ಕವಾಸಕಿ ಝಡ್650ಆರ್‌ಎಸ್ 50ನೇ ಆನಿವರ್ಸರಿ ಎಡಿಷನ್ ಬೈಕಿನಲ್ಲಿ ಅದೇ 649 ಸಿಸಿ ಪ್ಯಾರಲಲ್ ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,700 ಆರ್‌ಪಿಎಮ್‌ನಲ್ಲಿ 67.3 ಬಿಹೆಚ್‌ಪಿ ಮತ್ತು 8,000 ಆರ್‌ಪಿಎಂನಲ್ಲಿ 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಮಾದರಿಯ ಪ್ರತಿಸ್ಪರ್ಧಿ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್ ಗಳಿಗೆ ಹೋಲಿಸಿದರೆ ಈ ಹೊಸ ಬೈಕ್ 20 ಬಿಹೆಚ್‍ಪಿ ಪವರ್ ಮತ್ತು 12 ಎನ್ಎಂ ಟಾರ್ಕ್ ಕಡಿಮೆ ಉತ್ಪಾದಿಸಲಾಗುತ್ತದೆ.

ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಅಂತರರಾಷ್ಟ್ರೀಯ ಮಾದರಿಯಂತೆ ಇದರ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಬ್ಯಾಕ್‌ಲಿಂಕ್ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ, ಇನ್ನು ಪ್ರಮುಖವಾಗಿ ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಡ್ಯುಯಲ್-ಪಿಸ್ಟನ್ ಫ್ರಂಟ್ ಕ್ಯಾಲಿಪರ್‌ಗಳೊಂದಿಗೆ 300 ಎಂಎಂ ಟ್ವಿನ್ ರೋಟರ್‌ಗಳು ಮತ್ತು ಸಿಂಗಲ್-ಪಿಸ್ಟನ್ ರಿಯರ್ ಕಾಲಿಪರ್ ಹೊಂದಿರುವ 220 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಕವಾಸಕಿ ಸ್ಟ್ಯಾಂಡರ್ಡ್ ಝಡ್650ಆರ್‌ಎಸ್ ರೆಟ್ರೊ ಶೈಲಿಯ ಬೈಕ್ ಅನ್ನು ಕಳೆದ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಳಿಸಿತು. ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ಯಾಂಡಿ ಎಮರಾಲ್ಡ್ ಗ್ರೀನ್ ಮತ್ತು ಮೆಟಾಲಿಕ್ ಮೂಂಡಸ್ಟ್ ಗ್ರೇ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್650ಆರ್‌ಎಸ್ ಬೈಕ್ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ Kawasaki Z650RS 50ನೇ ಆನಿವರ್ಸರಿ ಎಡಿಷನ್ ಬಿಡುಗಡೆ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಿಡ್ ಸೈಜ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಕವಾಸಕಿ ಕಂಪನಿಯು ಈ ಝಡ್650ಆರ್‌ಎಸ್ ಬೈಕ್ ಅನ್ನು ಬಿಡುಗಡೆಗೊಳಿಸಿದರು, ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಮಿಡ್ ಸೈಜ್ ಐಷಾರಾಮಿ ಬೈಕ್ ಪ್ರಿಯರನ್ನು ಸೆಳಯುತ್ತಿದೆ, ಈ ನಿಯೋ-ರೆಟ್ರೊ ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ CB650R ಮತ್ತು ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Wednesday, February 2, 2022, 15:14 [IST]
English summary
Kawasaki launched z650 rs 50th anniversary edition in india price features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+