ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ ಹೊಸ ನಿಂಜಾ 300 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಕವಾಸಕಿ ಕಂಪನಿಯು ಈ 2022ರ ನಿಂಜಾ 300 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಕಳೆದ ವರ್ಷ ಮಾರ್ಚ್‌ನಲ್ಲಿ ಬಿಎಸ್4 ನಿಂದ ಬಿಎಸ್6 ಹೊರಸೂಸುವಿಕೆ ಮಾನದಂಡಗಳಿಗೆ ನವೀಕರಿಸಿದಾಗ ಮೋಟಾರ್‌ಸೈಕಲ್ ಕೊನೆಯದಾಗಿ ನವೀಕರಣವನ್ನು ಸ್ವೀಕರಿಸಿದೆ. ನವೀಕರಣಗಳ ಸ್ವರೂಪವನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಇದು ಕೇವಲ ಕಾಸ್ಮೆಟಿಕ್ ಬದಲಾವಣೆಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಜಪಾನಿನ ಸೂಪರ್‌ಬೈಕ್ ಬ್ರ್ಯಾಂಡ್ ತನ್ನ ಸರಣಿಯನ್ನು ನಿರಂತರವಾಗಿ ನವೀಕರಿಸಲು ಹೆಸರುವಾಸಿಯಾಗಿದೆ. ಆದರೂ ನವೀಕರಣಗಳ ಕ್ರಮ ಮತ್ತು ವ್ಯಾಪ್ತಿಯು ಸೂಕ್ಷ್ಮ ಮತ್ತು ಸೀಮಿತವಾಗಿರುತ್ತದೆ.

ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಈ ಸಂದರ್ಭದಲ್ಲಿ, 2022ರ ಕವಾಸಕಿ ನಿಂಜಾ 300 ಹೊಸ ಬಣ್ಣ ಆಯ್ಕೆಗಳ ರೂಪದಲ್ಲಿ ಕಾಸ್ಮೆಟಿಕ್ ನವೀಕರಣಗಳನ್ನು ಹೊಂದುವ ನಿರೀಕ್ಷೆಯಿದೆ. ಈ ಕವಾಸಕಿ ನಿಂಜಾ 300 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಅತ್ಯಂತ ಉತ್ತಮ ಮಾದರಿಯಾಗಿದೆ. ಬಿಎಸ್6 ಕವಾಸಕಿ ನಿಂಜಾ 300 ಬೈಕಿನಲ್ಲಿ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ. ಅದೇ 296ಸಿಸಿ ಪ್ಯಾರೆಲಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ.

ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಈ ಎಂಜಿನ್ 38.4 ಬಿಹೆಚ್‌ಪಿ ಪವರ್ ಮತ್ತು 27 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದ್ದು, ಇದರೊಂದಿಗೆ ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಅನ್ನು ಪಡೆಯುತ್ತದೆ.

ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಹೊಸ ಕವಾಸಕಿ ನಿಂಜಾ 300 ಬೈಕ್ ಸ್ಟೀಲ್ ಟ್ಯೂಬ್ ಡೈಮಂಡ್ ಫ್ರೇಮ್‌ನಿಂದ ಆಧಾರವಾಗಿದೆ, ಈ ಬೈಕಿನ ಸಸ್ಪೆಂಕ್ಷಬ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳ ಮೇಲೆ ಮತ್ತು 5-ವೇ ಅಡ್ಜಸ್ಟ್ ಮಾಡಬಹುದಾದ ಪ್ರಿಲೋಡ್‌ನೊಂದಿಗೆ ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಮೊನೊ-ಶಾಕ್‌ನಲ್ಲಿ ಇರುತ್ತದೆ.

ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಇನ್ನು ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಕವಾಸಕಿ ನಿಂಜಾ 300 ಬೈಕಿನ ಮುಂಭಾಗ ಡ್ಯುಯಲ್-ಪಿಸ್ಟನ್ ಕ್ಯಾಲಿಪರ್‌ಗಳಿಂ 290 ಎಂಎಂ ಪೆಡಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗ 220 ಎಂಎಂ ಪೆಡಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಈ ಬೈಕಿನಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಕವಾಸಕಿ ತನ್ನ ಕಿಟ್‌ಗೆ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ನೀಡಬಹುದು ಆದರೆ ಯಾವುದೇ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ. ಆದರೆ ನಿಂಜಾ ಸರಣಿಯ ಇತರ ದೊಡ್ಡ ಬೈಕ್‌ಗಳಿಂದ ಪ್ರೇರಿತವಾದ ಹೊಸ ಡೆಕಲ್‌ಗಳೊಂದಿಗೆ ಹೊಸ ಮೂರು ಬಣ್ಣಗಳ ಆಯ್ಕೆಗಳನ್ನು ಕೂಡ ಪಡೆದುಕೊಂಡಿದೆ.

ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕವಾಸಕಿ ನಿಂಜಾ 300 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,3.37 ಲಕ್ಷವಾಗಿದೆ. ಈ ಬೈಕ್ ಲೈಮ್ ಗ್ರೀನ್, ಕ್ಯಾಂಡಿ ಲೈಮ್ ಗ್ರೀನ್ ಮತ್ತು ಎಬೊನಿ ಎಂಬ ಮೂರು ಬಣ್ಣದ ಆಯ್ಕೆಗಳೊಂದಿಗೆ ಎಂಟ್ರಿ ಲೆವೆಲ್ ಫೇರ್ಡ್ ಮೋಟಾರ್‌ಸೈಕಲ್ ಒಂದೇ ಟ್ರಿಮ್‌ನಲ್ಲಿ ಲಭ್ಯವಿದೆ.

ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಇದರ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಬದಲಾಯಿಸಲಾಗಿಲ್ಲ. ಎಂಆರ್ಎಫ್ ನೈಲೋಗ್ರಿಪ್ ಟಯರ್ ಗಳನ್ನು ಇದರಲ್ಲಿ ನೀಡಲಾಗಿದೆ. ಹೊಸ ಕವಾಸಕಿ ನಿಂಜಾ 300 ಬೈಕಿನ ವಿನ್ಯಾಸದಲ್ಲಿ ಯಾವುದೇ ಪ್ರಮಖ ಬದಲಾವಣೆಗಳನ್ನು ಹೊಂದಿರುವುದಿಲ್ಲ

ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಕವಾಸಕಿ ತನ್ನ ನವೀಕರಿಸಿದ ನಿಂಜಾ ಝಡ್ಎಕ್ಸ್-25ಆರ್ ಬೈಕ್ ಜಪಾನ್‌ನಲ್ಲಿ ಈ ವರ್ಷದ ಜನವರಿ ಬಿಡುಗಡೆಗೊಳಿಸಿತ್ತು. 2022ರ ಕವಾಸಕಿ ನಿಂಜಾ ಝಡ್ಎಕ್ಸ್-25ಆರ್ (Kawasaki Ninja ZX-25R) ಬೈಕ್ ಯಾಂತ್ರಿಕವಾಗಿ ಬದಲಾಗದೆ ಉಳಿದಿದೆ ಮತ್ತು ಸಣ್ಣ ಕಾಸ್ಮೆಟಿಕ್ ನವೀಕರಣವನ್ನು ಮಾತ್ರ ಹೊಂದಿದೆ. ನವೀಕರಣದ ಭಾಗವಾಗಿ, 2022ರ ಕವಾಸಕಿ ನಿಂಜಾ ಝಡ್ಎಕ್ಸ್-25ಆರ್ ಬೈಕ್ ಟ್ವಿಲೈಟ್ ಬ್ಲೂ ಎಂಬ ಹೊಸ ಬಣ್ಣದ ಆಯ್ಕೆಯನ್ನು ಪಡೆಯುತ್ತದೆ. ಈ ಬೈಕ್ ಗ್ರೇ ಮತ್ತು ರೆಡ್ ಬಣ್ಣದ ಯೋಜನೆಯು ಬೈಕ್‌ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಹೊಸ ಛಾಯೆಯನ್ನು ಹೊರತುಪಡಿಸಿ, ಸೂಪರ್ ಬೈಕ್‌ನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಇದು ಪ್ರಮುಖ ನಿಂಜಾ ZX-10R ನಿಂದ ಸ್ಫೂರ್ತಿ ಪಡೆದ ಬೈಕಿನ ಒಟ್ಟಾರೆ ವಿನ್ಯಾಸವನ್ನು ಒಳಗೊಂಡಿದೆ. ಕವಾಸಕಿ ನಿಂಜಾ ಝಡ್ಎಕ್ಸ್-25ಆರ್ ಬೈಕ್ ಕವಾಸಕಿಯ ಸುಧಾರಿತ ಡೈನಾಮಿಕ್ ರಿಜಿಡಿಟಿ ವಿಶ್ಲೇಷಣೆಯನ್ನು ಬಳಸಿಕೊಂಡು ವಿನ್ಯಾಸಗೊಳಿಸಲಾದ ಹಗುರವಾದ ಟ್ರೆಲ್ಲಿಸ್ ಫ್ರೇಮ್‌ನಿಂದ ಆಧಾರವಾಗಿದೆ. ವೇಗವುಳ್ಳ ಸೂಪರ್ ಸ್ಪೋರ್ಟ್-ಶೈಲಿಯ ನಿರ್ವಹಣೆಯನ್ನು ಸಾಧಿಸಲು ಫ್ರೇಮ್ ಅಗತ್ಯವಿರುವ ಸಮತೋಲನ ಪವರ್ ಮತ್ತು ಚಾಸಿಸ್ ಸಮ್ಯತೆಯನ್ನು ನೀಡುತ್ತದೆ. ಇದು ವಿಶಿಷ್ಟವಾದ ಕಮಾನಿನ ಸ್ವಿಂಗರ್ಮ್ ವಿನ್ಯಾಸವನ್ನು ಸಹ ಪಡೆಯುತ್ತದೆ, ಇದು ಚಿಕ್ಕದಾದ ಎಕ್ಸಾಸ್ಟ್ ಹೆಚ್ಚು ಕೇಂದ್ರೀಯವಾಗಿ ಇರಿಸಲು ಅನುವು ಮಾಡಿಕೊಡುತ್ತದೆ.

ಬಹುನಿರೀಕ್ಷಿತ 2022ರ ಕವಾಸಕಿ ನಿಂಜಾ 300 ಬೈಕ್ ಟೀಸರ್ ಬಿಡುಗಡೆ

ಈ ಕವಾಸಕಿ ನಿಂಜಾ 300 ಬೆಲೆಯನ್ನು ಅದೇ ಸರಣಿಯ ಬೈಕ್ ಗಳಿಗೆ ಹೋಲಿಸಿದರೆ ತುಸು ದುಬಾರಿಯಾಗಿದೆ. ಇನ್ನು 2022ರ ಕವಾಸಕಿ ನಿಂಜಾ 300 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಿವಿಎಸ್ ಅಪಾಚೆ ಆರ್​ಆರ್310 ಮತ್ತು ಕೆಟಿಎಂ ಆರ್‍‍ಸಿ 390 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Wednesday, April 20, 2022, 10:28 [IST]
English summary
Kawasaki released teaser for 2022 ninja 300 features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+