ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಲ್ಯಾಂಬ್ರೆಟ್ಟಾ(ಲ್ಯಾಂಬಿ) ದ್ವಿಚಕ್ರ ವಾಹನ ಒಂದು ಕಾಲದಲ್ಲಿ ಭಾರತದ ಮನೆಮಾತಾಗಿತ್ತು. ಇಟಾಲಿಯನ್ ತಯಾರಕರ ರೆಟ್ರೊ ಸ್ಕೂಟರ್‌ಗಳು ಭಾರತದ ರಸ್ತೆಗಳಲ್ಲಿ ಸಾಮಾನ್ಯ ದೃಶ್ಯವಾಗಿತ್ತು. ಇದೀಗ ಮತ್ತೆ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು ಈಗ ಭಾರತೀಯ ಮಾರುಕಟ್ಟೆಗೆ ಮರಳಲು ಯೋಜಿಸುತ್ತಿದೆ.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಇಟಾಲಿಯನ್ ಸ್ಕೂಟರ್ ಬ್ರ್ಯಾಂಡ್ ಭಾರತದಲ್ಲಿ ತನ್ನ ಪುನರಾಗಮನಕ್ಕಾಗಿ ಬರ್ಡ್ ಮೊಬಿಲಿಟಿಯೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಎ ಕನಾಮಿಕ್ ಟೈಮ್ಸ್‌ನೊಂದಿಗೆ ಲ್ಯಾಂಬ್ರೆಟ್ಟಾವನ್ನು ಜಾಗತಿಕವಾಗಿ ಹೊಂದಿರುವ ಇನೊಸೆಂಟಿ ಎಸ್‌ಎ ಮಾಲೀಕ ವಾಲ್ಟರ್ ಶೆಫ್ರಾನ್ ಮಾತನಾಡಿ, ಬ್ರಾಂಡ್ ಭಾರತದಲ್ಲಿ ತನ್ನ ಆತ್ಮವನ್ನು ಹೊಂದಿದೆ ಮತ್ತು ಇದು ಜನಸಾಮಾನ್ಯರ ನಡುವೆ ಅಪಾರವಾದ ಬಾಂಧವ್ಯವನ್ನು ಹೊಂದಿದೆ. ನಾವು ಹಿಂದಿನ ಮ್ಯಾಜಿಕ್ ಅನ್ನು ಮರುಸೃಷ್ಟಿಸಲು ಬಯಸುತ್ತೇವೆ. ನಮ್ಮ ಟಾಪ್-ಎಂಡ್ ಶ್ರೇಣಿಯೊಂದಿಗೆ ಭಾರತದಲ್ಲಿ ಸ್ಕೂಟರ್‌ಗಳ ಫೆರಾರಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಅವರು ಮಾತನ್ನು ಮುಂದುವರೆಸಿ, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ $200 ಮಿಲಿಯನ್‌ಗಿಂತಲೂ ಹೆಚ್ಚು ಹಣ ಹೊಡಿಕೆ ಮಾಡುವ ಯೋಜನೆಯನ್ನು ಬ್ರ್ಯಾಂಡ್ ಹೊಂದಿದೆ. ಇನೊಸೆಂಟಿ ಎಸ್‌ಎ ಮಾರುಕಟ್ಟೆಯಲ್ಲಿ ವಿವಿಧ ಮಾದರಿಗಳನ್ನು ಅನಾವರಣಗೊಳಿಸುತ್ತದೆ ಮತ್ತು 2024 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತರಲು ಯೋಜಿಸಿದೆ. ಲ್ಯಾಂಬ್ರೆಟ್ಟಾದ ಹೆಚ್ಚಿನ ಮಾದರಿಗಳು 200 ಸಿಸಿ - 300 ಸಿಸಿ ನಡುವಿನ ಸಾಮರ್ಥ್ಯದ ಸ್ಕೂಟರ್‌ಗಳಿಂದ ಹೆಚ್ಚಿನ ಶಕ್ತಿಯನ್ನು ಪಡೆಯುತ್ತವೆ ಎಂದು ಹೇಳಿದರು.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಭಾರತದಲ್ಲಿ ಹೊಸ ಉತ್ಪನ್ನಗಳನ್ನು ಪ್ರಾರಂಭಿಸುವುದಕ್ಕಿಂತಲೂ ಮುಖ್ಯವಾದ ಅಂಶವೆಂದರೆ ಲ್ಯಾಂಬ್ರೆಟ್ಟಾ ಸ್ಥಳೀಯ ಉತ್ಪಾದನೆಯನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದೆ. ಭಾರತದಲ್ಲಿ ಉತ್ಪಾದನೆಯೊಂದಿಗೆ, ಲ್ಯಾಂಬ್ರೆಟ್ಟಾ ಇಟಲಿ ಸೇರಿದಂತೆ ಇತರ ಮಾರುಕಟ್ಟೆಗಳಿಗೆ ರಫ್ತು ಮಾಡುವತ್ತ ಗಮನಹರಿಸುತ್ತದೆ.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು ಬಿಡುಗಡೆಯಾದಾಗ ಭಾರತದಲ್ಲಿ ಅತ್ಯಂತ ಕೈಗೆಟುಕುವ ಸ್ಕೂಟರ್ ಆಗುವುದಿಲ್ಲ. ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಯಾವುದೇ ಪ್ರೀಮಿಯಂ ಸ್ಕೂಟರ್‌ಗಳಿಗಿಂತ ಇದು ಹೆಚ್ಚು ದುಬಾರಿಯಾಗಿದೆ. ಮೇಲೆ ತಿಳಿಸಿರುವಂತೆ ಲ್ಯಾಂಬ್ರೆಟ್ಟಾ ಬರ್ಡ್ ಮೊಬಿಲಿಟಿ ಜೊತೆ ಪಾಲುದಾರಿಕೆಯ ನಂತರ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. 51 ಘಟಕ ಲ್ಯಾಂಬ್ರೆಟ್ಟಾ ಮತ್ತು ಉಳಿದ 49 ಪ್ರತಿಶತವು ಬರ್ಡ್ ಗ್ರೂಪ್‌ನ ಒಡೆತನದಲ್ಲಿದೆ.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಲ್ಯಾಂಬ್ರೆಟ್ಟಾ ಜಾಗತಿಕವಾಗಿ 1 ಲಕ್ಷ ಯೂನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಮಾರುಕಟ್ಟೆಗೆ ಪ್ರವೇಶದೊಂದಿಗೆ, ಸಂಖ್ಯೆಗಳು ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಸ್ತುತ, ಲ್ಯಾಂಬ್ರೆಟ್ಟಾ ಸುಮಾರು 70 ದೇಶಗಳಲ್ಲಿ ಲಭ್ಯವಿದೆ.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಉತ್ಪಾದನಾ ಘಟಕಗಳು ಪ್ರಸ್ತುತ ಯುರೋಪ್ ಮತ್ತು ಆಗ್ನೇಯ ಏಷ್ಯಾದಲ್ಲಿ ನೆಲೆಗೊಂಡಿವೆ. ಅವರು ಭಾರತದಲ್ಲಿ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಿದರೆ, ಅದು ಇನ್ನೂ ವಿಸ್ತಾರವಾಗಲಿದೆ. ತಯಾರಕರು 2024ರ ವೇಳೆಗೆ ಮಾನೇಸಾದಲ್ಲಿ 1,00,000 ಯುನಿಟ್ ಗಳ ಸಾಮರ್ಥ್ಯದ ಘಟಕವನ್ನು ಸ್ಥಾಪಿಸಲು ಯೋಜಿಸಿದ್ದಾರೆ.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಈ ವರ್ಷದ ಆರಂಭದಲ್ಲಿ, ಇಟಲಿಯ ಸಾಂಪ್ರದಾಯಿಕ ದ್ವಿಚಕ್ರ ವಾಹನ ತಯಾರಕ ಲ್ಯಾಂಬ್ರೆಟ್ಟಾ ಮಿಲನ್‌ನಲ್ಲಿ ಎರಡು ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿತು. G350 ಮತ್ತು X300 ಸ್ಕೂಟರ್‌ಗಳನ್ನು ಮಿಲನ್ ಡಿಸೈನ್ ವೀಕ್ 2022 ರಲ್ಲಿ ಪ್ರದರ್ಶಿಸಲಾಯಿತು

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಅನೇಕ ಇತರ ತಯಾರಕರಂತೆಯೇ ಲ್ಯಾಂಬ್ರೆಟ್ಟಾ ಸಹ ತನ್ನ ಸ್ಕೂಟರ್‌ನೊಂದಿಗೆ ಆಧುನಿಕ ವೈಶಿಷ್ಟ್ಯಗಳನ್ನು ನೀಡುತ್ತಿದೆ ಮತ್ತು ರೆಟ್ರೊ ನೋಟವನ್ನು ಉಳಿಸಿಕೊಂಡಿದೆ. ಲ್ಯಾಂಬ್ರೆಟ್ಟಾ ಭಾರತದಲ್ಲಿ ಜಿ, ವಿ ಮತ್ತು ಎಕ್ಸ್ ಮಾದರಿಯ ಸ್ಕೂಟರ್‌ಗಳನ್ನು ಅನಾವರಣಗೊಳಿಸಲಿದೆ.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಲ್ಯಾಂಬ್ರೆಟ್ಟಾದಿಂದ ಬರುವ G350 ಸ್ಕೂಟರ್ TFT ಇನ್ಸ್ ಟ್ರೂಮೆಂಟ್ ಕ್ಲಸ್ಟರ್, USB ಚಾರ್ಜರ್, ಎಬಿಎಸ್‌ನೊಂದಿಗೆ ಡಬಲ್ ಆರ್ಮ್-ಲಿಂಕ್ ಸಸ್ಪೆನ್ಷನ್, ಲ್ಯಾಂಬ್ರೆಟ್ಟಾ ಸಿಗ್ನೇಚರ್ ಷಡ್ಭುಜೀಯ ವಿನ್ಯಾಸ ಪೂರ್ಣ LED ಹೆಡ್‌ಲ್ಯಾಂಪ್, LED ಟೈಲ್ ಲೈಟ್‌ಗಳು ಮತ್ತು ಮುಂತಾದವುಗಳನ್ನು ಪಡೆಯುತ್ತದೆ. ಇನ್ನುX300 ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಮಾರ್ಟ್ ಕೀಲೆಸ್ ಎಂಟ್ರಿ, ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು, ಎಬಿಎಸ್ ಜೊತೆಗೆ ಡಿಸ್ಕ್ ಬ್ರೇಕ್‌ಗಳು ಮತ್ತು ಇನ್ನೂ ಹಲವು ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಜಿ350 ಸ್ಕೂಟರ್ 300 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 27 ಬಿಹೆಚ್‍ಪಿ ಪವರ ಮತ್ತು 24.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು X300 275 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 24 ಬಿಹೆಚ್‍ಪಿ ಪವರ ಮತ್ತು 24.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಲ್ಯಾಂಬಿ ಎಂದೇ ಜನಪ್ರಿಯಗೊಂಡಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು ಮೊಟ್ಟಮೊದಲ ಬಾರಿಗೆ 1947ರಲ್ಲಿ ಇಟಲಿಯಲ್ಲಿ ಉತ್ಪಾದನೆಗೊಂಡಿದ್ದವು. ನಂತರದ ದಿನಗಳಲ್ಲಿ ಇಡೀ ಯುರೋಪ್ ಮಾರುಕಟ್ಟೆಯನ್ನೇ ಆವರಿಸಿದ್ದ ಲ್ಯಾಂಬಿ ಸ್ಕೂಟರ್ 1972ರಲ್ಲಿ ಭಾರತದಲ್ಲೂ ಬಿಡುಗಡೆಯಾಗಿತ್ತು.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಇಟಾಲಿಯನ್ ಸ್ಕೂಟರ್ ಬ್ರ್ಯಾಂಡ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದ ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್(ಎಸ್ಐಎಲ್) ಸಂಸ್ಥೆಯು ಉತ್ತರಪ್ರದೇಶದ ಲಕ್ನೋದಲ್ಲಿ ಮೊದಲ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿತ್ತು. 1972ರಿಂದ 1997ರ ಅವಧಿಯಲ್ಲಿ ಭಾರತದಲ್ಲಿ ಮಾರಾಟಕ್ಕಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಲ್ಯಾಂಬ್ರೆಟ್ಟಾ ಹೆಸರಿನ ಬದಲಿಗೆ 'ವಿಜಯ್ ಸೂಪರ್' ಸ್ಕೂಟರ್ ಹೆಸರಿನೊಂದಿಗೆ ಮಾರಾಟಗೊಳ್ಳುತ್ತಿದ್ದವು.

ಭಾರತಕ್ಕೆ ಮತ್ತೆ ಬರಲಿದೆ ಲ್ಯಾಂಬಿ ಎಂದೇ ಮನೆಮಾತಾಗಿದ್ದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು

ಇನ್ನೊಂದು ವಿಶೇಷ ಅಂದ್ರೆ, ಭಾರತದಿಂದಲೇ ಯುರೋಪ್ ಮಾರುಕಟ್ಟೆಗಳಿಗೆ ಲ್ಯಾಂಬ್ರೆಟ್ಟ್ ಸ್ಕೂಟರ್‌ಗಳನ್ನು ರಫ್ತು ಮಾಡುತ್ತಿದ್ದ ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ವಿಜಯ್ ಸೂಪರ್ ಹೆಸರಿನ ಸ್ಕೂಟರ್‌ಗಳನ್ನೇ ಹೆಸರು ಬದಲಿಸಿ ವಿದೇಶಿ ಮಾರುಕಟ್ಟೆಗಳ ಬೇಡಿಕೆ ಪೂರೈಕೆ ಮಾಡುತ್ತಿತ್ತು. 1980ರ ದಶಕದಲ್ಲಿ ರಸ್ತೆಗಿಳಿದ ಬಜಾಜ್ ಚೇತಕ್ ಸ್ಕೂಟರ್‌ಗಳ ಅಬ್ಬರದ ಮುಂದೆ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳ ಸದ್ದು ಮರೆಯಲಾಗ ತೊಡಗಿತು. ಇದರಿಂದಾಗಿಯೇ 1997ರ ಹೊತ್ತಿಗೆ ಲ್ಯಾಂಬ್ರೆಟ್ಟಾ ಮಾರಾಟದಲ್ಲಿ ಭಾರೀ ನಷ್ಟ ಅನುಭವಿಸಿದ ಎಸ್ಐಎಲ್ ಸಂಸ್ಥೆಯು ಲ್ಯಾಂಬಿಗೆ ಗುಡ್ ಬೈ ಹೇಳಿತು.

More from DriveSpark

Article Published On: Tuesday, September 6, 2022, 13:18 [IST]
English summary
Lambretta scooters coming back to indian market details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+