ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು..

ಇಟಾಲಿ ಮೂಲದ ಐಕಾನಿಕ್ ಸ್ಕೂಟರ್ ತಯಾರಕ ಕಂಪನಿ ಲ್ಯಾಂಬ್ರೆಟ್ಟಾ ಹೊಸ ರೂಪದಲ್ಲಿ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಿದ್ದಗೊಳ್ಳುತ್ತಿದ್ದು, ಕಳೆದ ಎರಡು ದಶಕಗಳಿಂದ ಮಾರುಕಟ್ಟೆಯಿಂದ ಮಾಯವಾಗಿದ್ದ ಜನಪ್ರಿಯ ಸ್ಕೂಟರ್‌ಗಳು ಇದೀಗ ಮತ್ತೊಮ್ಮೆ ಛಾಪು ಮೂಡಿಸಲು ಸಿದ್ದಗೊಳ್ಳತ್ತಿವೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

80 ಮತ್ತು 90ರ ದಶಕದಲ್ಲಿ ಜನಪ್ರಿಯಗೊಂಡು ಕಾರಣಾಂತರಗಳಿಂದ ಸ್ಕೂಟರ್ ಉತ್ಪಾದನೆದಿಂದ ದೂರ ಉಳಿದಿದ್ದ ಇಟಾಲಿ ಮೂಲದ ಐಕಾನಿಕ್ ಸ್ಕೂಟರ್ ಬ್ರ್ಯಾಂಡ್ ಲ್ಯಾಂಬ್ರೆಟ್ಟಾ ಇದೀಗ ಮತ್ತಷ್ಟು ಹೊಸ ಸ್ಕೂಟರ್ ಉತ್ಪನ್ನಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜಾಗುತ್ತಿದ್ದು, 2018ರ ಇಟಾಲಿಯ ಮಿಲಾನ್ ಶೋ(ಇಐಸಿಎಂಎ)ನಲ್ಲಿ ಹೊಸ ಮಾದರಿಯ ಸ್ಕೂಟರ್ ಉತ್ಪನ್ನಗಳನ್ನು ಪ್ರದರ್ಶನ ಮಾಡಿದ್ದ ಲ್ಯಾಂಬ್ರೆಟ್ಟಾ ಕಂಪನಿಯು ಇದೀಗ ಎರಡು ಪ್ರಮುಖ ಉತ್ಪನ್ನಗಳ ಮಾಹಿತಿ ಹಂಚಿಕೊಂಡಿದೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಇಟಾಲಿಯ ಮಿಲಾನ್ ಶೋ ನಲ್ಲಿ ಹೊಸ ಸ್ಕೂಟರ್ ಬಿಡುಗಡೆಯ ಬಗೆಗೆ ತಟಸ್ಥವಾಗಿದ್ದ ಲ್ಯಾಂಬ್ರೆಟ್ಟಾ ಕಂಪನಿಯು ಇದೀಗ ಮತ್ತೆ ಹೊಸ ಸ್ಕೂಟರ್‌ಗಳ ಬಿಡುಗಡೆಯ ಕುರಿತಂತೆ ಸುದ್ದಿಗೆ ಬಂದಿದ್ದು, ಶೀಘ್ರದಲ್ಲಿಯೇ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಪ್ರಮುಖ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಸುಮಾರು ಎರಡು ದಶಕಗಳಿಂದ ಜಾಗತಿಕ ಮಾರುಕಟ್ಟೆಯಿಂದಲೇ ಮರೆಯಾಗಿದ್ದ ಲ್ಯಾಂಬ್ರೆಟ್ಟಾ ಇದೀಗ ಹೊಸ ಸ್ಕೂಟರ್ ಬಿಡುಗಡೆ ಮಾಡುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ತಾಂತ್ರಿಕ ಅಂಶಗಳನ್ನು ಒಳಗೊಂಡಿರುವ ಜಿ350 ಮತ್ತು ಎಕ್ಸ್300 ಎನ್ನುವ ಎರಡು ಪ್ರೀಮಿಯಂ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಲ್ಯಾಂಬ್ರೆಟ್ಟಾ ಅನಾವರಣಗೊಳಿಸಿರುವ ಜಿ350 ಸ್ಕೂಟರ್ ಮಾದರಿಯು ಮಾರ್ಡನ್ ಕ್ಲಾಸಿಕ್ ವಿನ್ಯಾಸವನ್ನು ಅನುಸರಿಸಿದ್ದಲ್ಲಿ ಲ್ಯಾಂಬ್ರೆಟ್ಟಾ ಎಕ್ಸ್300 ಮಾದರಿಯು ತುಸು ತೀಕ್ಷ್ಣವಾದ ಮತ್ತು ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿರಲಿದ್ದು, ಎರಡೂ ಸ್ಕೂಟರ್‌ಗಳು ಕ್ರೋಮ್‌ನಲ್ಲಿ ಮುಂಭಾಗದ ಹಾರ್ನ್ ಎರಕಹೊಯ್ದಂತಹ ಸಾಂಪ್ರದಾಯಿಕ ಲ್ಯಾಂಬ್ರೆಟ್ಟಾ ವಿನ್ಯಾಸ ಅಂಶಗಳನ್ನು ಪಡೆಯುತ್ತವೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಮಾರ್ಡನ್ ಕ್ಲಾಸಿಕ್ ವಿನ್ಯಾಸದೊಂದಿಗೆ ಎರಡೂ ಸ್ಕೂಟರ್‌ಗಳು ಐಷಾರಾಮಿ ಮಾದರಿಗಳಾಗಿ ಗುರುತಿಸಿಕೊಳ್ಳಲಿದ್ದು, ಕ್ಲಾಸಿಕ್ ಸ್ಕೂಟರ್‌ಗಳಾಗಿದ್ದರೂ ಹೊಸ ಸ್ಕೂಟರ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಎಬಿಎಸ್, ಅತ್ಯಾಧುನಿಕ ಸಸ್ಪೆಷನ್, ಆರ್ಮ್ ಲಿಂಕೇಜ್ ಮತ್ತು ಎಲ್‌ಇಡಿ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಜೊತೆಗೆ ಲ್ಯಾಂಬ್ರೆಟ್ಟಾ ಡಿಎನ್‌ಎ ವಿನ್ಯಾಸದಲ್ಲಿ ಸಿಗ್ನೇಚರ್ ಹೆಡ್‌ಲೈಟ್‌ಗಳನ್ನು ಬಳಸಲಾಗಿದ್ದು, ಆಧುನಿಕ ಸೌಲಭ್ಯಗಳಾದ ಟಿಎಫ್‌ಟಿ ಡಿಸ್ಪ್ಲೇ, ಆಕರ್ಷಕ ಮತ್ತು ಅರಾಮದಾಯಕವಾಗಿರುವ ಆಸನ ಸೌಲಭ್ಯಗಳು ಹೊಸ ಸ್ಕೂಟರ್ ಸವಾರಿಯನ್ನು ಮತ್ತಷ್ಟು ಅರಾಮದಾಯಕಗೊಳಿಸುತ್ತವೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಹೊಸ ಸ್ಕೂಟರ್‌ಗಳಲ್ಲಿ ಕಂಪನಿಯು ಜಿ350 ಮಾದರಿಯಲ್ಲಿ 330.1 ಸಿಸಿ ಸಿಂಗಲ್-ಸಿಲಿಂಡರ್, 4-ವಾಲ್ವ್ ಪೆಟ್ರೋಲ್ ಎಂಜಿನ್‌ ಜೋಡಣೆ ಮಾಡಲಿದ್ದು, ಇದು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 7,500ಆರ್‌ಪಿಎಂನಲ್ಲಿ 27 ಬಿಎಚ್‌ಪಿ ಮತ್ತು 6,250ಆರ್‌ಪಿಎಂನಲ್ಲಿ 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಹಾಗೆಯೇ ಎಕ್ಸ್300 ಸ್ಕೂಟರ್ ಮಾದರಿಯಲ್ಲಿ 275 ಸಿಸಿ, ಸಿಂಗಲ್-ಸಿಲಿಂಡರ್, 4-ವಾಲ್ವ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದ್ದು, ಇದು 8,250 ಆರ್‌ಪಿಎಂನಲ್ಲಿ 24.8 ಬಿಎಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 24.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಜಿ350 ಸ್ಕೂಟರ್‌ ಮಾದರಿಯು 9.5 ಲೀಟರ್ ಸಾಮಥ್ಯದ ದೊಡ್ಡದಾದ ಇಂಧನ ಟ್ಯಾಂಕ್‌ನೊಂದಿಗೆ 173 ಕೆ.ಜಿ ತೂಕ ಹೊಂದಿದ್ದರೆ ಎಕ್ಸ್300 ಮಾದರಿಯು 7-ಲೀಟರ್ ಇಂಧನ ಟ್ಯಾಂಕ್‌ನೊಂದಿಗೆ 165 ಕೆಜಿ ತೂಕ ಹೊಂದಿದೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೊಸ ಸ್ಕೂಟರ್‌ಗಳಲ್ಲಿ ಆಧುನಿಕ ಜೀವನಶೈಲಿಗೆ ಪೂರಕವಾಗಿ ಹಲವಾರು ಫೀಚರ್ಸ್‌ಗಳಿದ್ದು, ಯುಎಸ್‌ಬಿ ಫೋನ್ ಚಾರ್ಜರ್‌, ಕ್ಲಾಸಿಕ್ ಲ್ಯಾಂಬ್ರೆಟ್ಟಾ ಬ್ರ್ಯಾಂಡಿಂಗ್ ಬ್ಯಾಜ್ಡ್, ಎಲ್ಇಡಿ ಟರ್ನ್ ಇಂಡಿಕೇಟರ್, ಎಲ್ಇಡಿ ಟೈಲ್-ಲೈಟ್ ನಂತಹ ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಹೊಂದಿವೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಹೊಸ ಪ್ರೀಮಿಯಂ ಸ್ಕೂಟರ್‌ಗಳನ್ನು ಸದ್ಯಕ್ಕೆ ಯುರೋಪಿನ ಪ್ರಮುಖ ಮಾರಾಟಕಟ್ಟೆಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಕಂಪನಿಯು ಭಾರತದಲ್ಲೂ ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಹೊಸ ಸ್ಕೂಟರ್ ಬಿಡುಗಡೆಗಾಗಿ ಕಂಪನಿಯು ಕ್ಲಾಸಿಕ್ ಲೆಜೆಂಡ್ ಜೊತೆಗೂಡುವ ಸಾಧ್ಯತೆಗಳಿದ್ದು, ಭಾರತದಲ್ಲಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಸ್ಕೂಟರ್ ಉತ್ಪನ್ನಗಳನ್ನು ಅಭಿವೃದ್ದಿಗೊಳಿಸುವ ಸಾಧ್ಯತೆಗಳಿವೆ.

ಮಾರ್ಡನ್ ಕ್ಲಾಸಿಕ್ ವಿನ್ಯಾಸದಲ್ಲಿ ಅನಾವರಣಗೊಂಡ ಲ್ಯಾಂಬ್ರೆಟ್ಟಾ ಪ್ರೀಮಿಯಂ ಸ್ಕೂಟರ್‌ಗಳು

ಹೊಸ ಸ್ಕೂಟರ್ ಮಾದರಿಗಳನ್ನು ಕಂಪನಿಯು ಮುಂಬರುವ 2023ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿದ್ದು, ಕಂಪನಿಯು ದುಬಾರಿ ಬೆಲೆ ಕಾರಣಕ್ಕೆ ಭಾರತದಲ್ಲಿ 300 ಸಿಸಿ ಸ್ಕೂಟರ್‌ಗಳ ಬದಲಾಗಿ 125 ಸಿಸಿ 150 ಸಿಸಿ ಮಾದರಿಗಳನ್ನು ಬಿಡುಗಡೆ ಮಾಡಬಹುದಾಗಿದೆ.

Most Read Articles

Kannada
English summary
Lambretta to launch two new premium scooters g350 and x300 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X