ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಇವಿ ವಾಹನಗಳನ್ನು ಉತ್ತೇಜಿಸಲು ಚಾರ್ಜಿಂಗ್ ಸೌಲಭ್ಯವನ್ನು ಹೆಚ್ಚಿಸುವತ್ತ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಇವಿ ವಾಹನಗಳಿಗಾಗಿ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲು ಜಿತೇಂದ್ರ ನ್ಯೂ ಟೆಕ್ ಇವಿ ಕಂಪನಿಯು ಲಾಗ್9 ಮೆಟಿರಿಯಲ್ ಕಂಪನಿ ಜೊತೆಗೂಡಿ ಹೊಸ ಪಾಲುದಾರಿಕೆ ಪ್ರಕಟಿಸಿವೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಲಾಗ್9(Log9) ಕಂಪನಿಯು ಭವಿಷ್ಯದ ಇವಿ ವಾಹನಗಳಿಗೆ ಹೊಸ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಸೌಲಭ್ಯ ಅಳವಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಲಾಗ್9 ಮೆಟಿರಿಯಲ್ ಕಂಪನಿಯು ನಿರ್ಮಾಣ ಮಾಡಿರುವ ಇನ್‌ಸ್ಟಾಚಾರ್ಜ್ ಬ್ಯಾಟರಿ ಟೆಕ್ನಾಲಜಿಯು ಮೂಲಕ ಕೆಲವೇ ನಿಮಿಷಗಳಲ್ಲಿ ಹೆಚ್ಚಿನ ಚಾರ್ಜ್ ಮಾಡಬಹುದಾಗಿದೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಇನ್‌ಸ್ಟಾಚಾರ್ಜ್ ಬ್ಯಾಟರಿ ಟೆಕ್ನಾಲಜಿ ಕಾರ್ಯಕ್ಷಮತೆಯು ಭವಿಷ್ಯದ ಇವಿ ವಾಹನ ಮಾದರಿಗಳಿಗೆ ಪೂರಕವಾಗಿದ್ದು, ಇದೇ ಕಾರಣಕ್ಕೆ ಲಾಗ್9 ಕಂಪನಿಯ ಜೊತೆಗೆ ಈಗಾಗಲೇ ಪ್ರಮುಖ ಇವಿ ಕಂಪನಿಗಳು ಹೊಸ ಪಾಲುದಾರಿಕೆ ಪ್ರಕಟಿಸುತ್ತಿವೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಜಿತೇಂದ್ರ ನ್ಯೂ ಟೆಕ್ ಇವಿ ಕಂಪನಿಯು ಕೂಡಾ ತನ್ನ ಫ್ಲಿಟ್ ಇವಿ ಸ್ಕೂಟರ್ ಮಾದರಿಯಾದ ಜೆಎಂಟಿ 1000ಹೆಚ್ಎಸ್ ಸ್ಕೂಟರ್ ಮಾದರಿಯಲ್ಲೂ ಲಾಗ್9 ಇನ್‌ಸ್ಟಾಚಾರ್ಜ್ ಬ್ಯಾಟರಿ ಟೆಕ್ನಾಲಜಿ ಅಳವಡಿಕೆಗೆ ಪಾಲುದಾರಿಕೆ ಪ್ರಕಟಿಸಿದ್ದು, ಕೇವಲ 15 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜಿಂಗ್ ಮಾಡಬಹುದಾಗಿದೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಲಾಗ್9 ಇನ್‌ಸ್ಟಾಚಾರ್ಜ್ ಬ್ಯಾಟರಿಯು ಪ್ರತಿ ಚಾರ್ಜ್‌ಗೆ 82 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕಂಪನಿಯು ಹೊಸ ಬ್ಯಾಟರಿ ಪ್ಯಾಕ್ ಮೇಲೆ ಗರಿಷ್ಠ 10 ವರ್ಷಗಳ ವಾರಂಟಿ ನೀಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಜೊತೆಗೆ ಲಾಗ್9 ಕಂಪನಿಯು ರ‍್ಯಾಪಿಡ್ ಎಕ್ಸ್ ಬ್ಯಾಟರಿ ಪ್ಯಾಕ್ ಅಳವಡಿಕೆಯೊಂದಿಗೆ ಫ್ಲಿಟ್ ಕಂಪನಿಗಳ ಬೇಡಿಕೆ ಅನುಸಾರವಾಗಿ ಇನ್‌ಸ್ಟಾಚಾರ್ಜ್ ಬ್ಯಾಟರಿ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮತ್ತು ನಿರ್ವಹಣೆಯ ಉಸ್ತುವಾರಿ ವಹಿಸಲಿದ್ದು, ವಾಣಿಜ್ಯ ಬಳಕೆಗಾಗಿ ಇವಿ ವಾಹನಗಳನ್ನು ಹೊಂದಿರುವ ಕಂಪನಿಗಳಿಗೆ ಇದು ಸಹಕಾರಿಯಾಗಿದೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಇನ್ನು ಸಾಂಪ್ರದಾಯಿಕ ಬ್ಯಾಟರಿ ಪ್ಯಾಕ್‌ಗಿಂತಲೂ ಲಾಗ್9 ಕಂಪನಿಯ ರ‍್ಯಾಪಿಡ್ ಎಕ್ಸ್ ಬ್ಯಾಟರಿ ಪ್ಯಾಕ್ ಒಂಬತ್ತು ಪಟ್ಟು ಹೆಚ್ಚು ಜೀವಿತಾವಧಿ ಹೊಂದಿದ್ದು, ಲಾಗ್9 ಕಂಪನಿಯು ಮುಖ್ಯವಾಗಿ ಕೊನೆಯ ಮೈಲಿ ತನಕ ಸರಕು ಸಾಗಿಸುವ ಲಾಜಿಸ್ಟಿಕ್ಸ್ ವಿಭಾಗವನ್ನು ಗುರಿಯಾಗಿಸಿಕೊಂಡಿದೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಹಾಗೆಯೇ ಬ್ಯಾಟರಿ ರಿಪ್ಲೇಸ್‌ಮೆಂಟ್, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಆನ್ ಸ್ಪಾಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಒದಗಿಸಲಿದ್ದು, ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಮೂಲಕವೇ ಲಾಗ್9 ಬ್ಯಾಟರಿ ಪ್ಯಾಕ್ ಹೊಂದಿರುವ ವಾಹನಗಳನ್ನು ಅತಿ ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಇತ್ತೀಚೆಗೆ ಲಾಗ್9 ಜೊತೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಸಹ ಪಾಲುದಾರಿಕೆ ಪ್ರಕಟಿಸಿದ್ದು, ಹೊಸ ಪಾಲುದಾರಿಕೆ ಯೋಜನೆ ಅಡಿ ಹೀರೋ ಎಲೆಕ್ಟ್ರಿಕ್ ವಿವಿಧ ಸ್ಕೂಟರ್‌ಗಳಿಗೆ ಇಸ್ಟಾಚಾರ್ಜಿಂಗ್ ಬ್ಯಾಟರಿ ಪ್ಯಾಕ್‌ಗಳನ್ನು ಪೂರೈಸಲು ಒಪ್ಪಿಗೆ ಸೂಚಿಸಿದೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಇದರೊಂದಿಗೆ ರ‍್ಯಾಪಿಡ್ಎಕ್ಸ್ ಬ್ಯಾಟರಿ ಪ್ಯಾಕ್ ಸೌಲಭ್ಯವು -30° ನಿಂದ 60° ಸೆಲ್ಸಿಯಸ್ಸ್ ತನಕವು ಕಾರ್ಯಾಚರಣೆಯ ಉಷ್ಣತೆಯೊಂದಿಗೆ ತೀವ್ರತರವಾದ ಪರಿಸ್ಥಿತಿಗಳಲ್ಲೂ ಕಾರ್ಯನಿರ್ವಹಿಸಲು ಸಮರ್ಥವಾಗಿವೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಲಾಗ್9 ಸ್ಟಾರ್ಟ್-ಅಪ್ ಕಂಪನಿಯು ಇವಿ ವಾಹನಗಳ ಮಾರಾಟ ನಂತರದ ಸೇವೆಗಳಿಗೆ ಪೂರ್ಣ ಪ್ರಮಾಣದ ಬಿಡಿಭಾಗಗಳು, ಬ್ಯಾಟರಿ ಪ್ಯಾಕ್ ಒದಗಿಸಲು ಸಾಮರ್ಥ್ಯ ಹೊಂದಿರುವ ಭಾರತದ ಏಕೈಕ ಕಂಪನಿಯಾಗಿದ್ದು, ಲಾಗ್9 ಜೊತೆಗೆ ಪ್ರಮುಖ ಇವಿ ಉತ್ಪಾದನಾ ಕಂಪನಿಗಳು ಪಾಲುದಾರಿಕೆ ಪ್ರಕಟಿಸುತ್ತಿದೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಇನ್ನು ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.

ಜಿತೇಂದ್ರ ನ್ಯೂ ಟೆಕ್ ಇವಿ ಸ್ಕೂಟರ್ ಮಾದರಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸಲಿದೆ ಲಾಗ್9

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

Most Read Articles

Kannada
English summary
Log9 materials collaborates with jitendra new ev tech details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X