ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಚೆನ್ನೈ ಮೂಲದ ಮೋಟಾರ್‌ಸೈಕಲ್ ತಯಾರಕರಾದ ರಾಯಲ್ ಎನ್‌ಫೀಲ್ಡ್ ತನ್ನ ಕ್ಲಾಸಿಕ್ 350 ಮತ್ತು ಮೆಟಿಯೊರ್ 350 ಬೈಕ್‌ಗಳನ್ನು ಮಲೇಷ್ಯಾದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ಮೆಟಿಯೊರ್ 350 ಬೈಕ್‌ಗಳು ಮೇಡ್ ಇನ್ ಇಂಡಿಯಾ ಮಾದರಿಗಳಾಗಿವೆ.

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬೆಲೆಯು 23,500 ರಿಂಗ್‌ಗಿಟ್ (ಸುಮಾರು ರೂ,4.14 ಲಕ್ಷ) ಮತ್ತು ಮೆಟಿಯೊರ್ 350 ಬೈಕಿನ ಬೆಲೆಯು 24,500 ರಿಂಗ್‌ಗಿಟ್ (ಸುಮಾರು ರೂ.4.32 ಲಕ್ಷ). ದೀದಿ ಗ್ರೂಪ್‌ನ ಭಾಗವಾಗಿರುವ ರಾಯಲ್ ಎನ್‌ಫೀಲ್ಡ್‌ನ ಮಲೇಷಿಯನ್ ವಿತರಕ ದಿದಿ ಆಟೋಮೋಟಿವ್ ಅಡಿಯಲ್ಲಿ ಬುಕಿಂಗ್‌ಗಳು ಈಗ ತೆರೆದಿವೆ. ಕಂಪನಿಯು ಆಗ್ನೇಯ ಏಷ್ಯಾದ ದೇಶದ ಪೆಟಾಲಿಂಗ್ ಜಯಾ ಗ್ಯಾಸ್ಕೆಟ್ ಅಲ್ಲೆಯಲ್ಲಿ ಪ್ರಮುಖ ಮಳಿಗೆಯನ್ನು ಸಹ ಉದ್ಘಾಟಿಸಿತು.

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಮೆಟಿಯೊರ್ 350 ಮತ್ತು ಕ್ಲಾಸಿಕ್ 350 ಭಾರತೀಯ ಆವೃತ್ತಿಯಂತೆಯೇ ಮಲೇಷ್ಯಾಕ್ಕೆ ಬರುತ್ತವೆ. ಎರಡೂ ಮೋಟಾರ್‌ಸೈಕಲ್‌ಗಳಲ್ಲಿ 349 cc ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ, ಈ ಎಂಜಿನ್ 19.1 ಬಿಎಚ್‌ಪಿ ಪವರ್ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ,

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬಗ್ಗೆ ಹೇಳುವುದಾದರೆ, 2021ರ ಕ್ಲಾಸಿಕ್ 350 ಬೈಕ್ ಅನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇತ್ತೀಚೆಗೆ ಈ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಉತ್ಪಾದನೆಯು 1 ಲಕ್ಷ ಮೈಲಿಗಲ್ಲನ್ನು ದಾಟಿದೆ. ಈ ಹೊಸ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಮಾರಾಟವಾಗುತ್ತಿದೆ.

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಯುರೋಪ್, ದಕ್ಷಿಣ ಏಷ್ಯಾ, ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ, ಇತ್ಯಾದಿ ದೇಶಗಳಲ್ಲಿ ಮಾರಾಟವಾಗುತ್ತಿದೆ. ಇದೀಗ ಮಲೇಷ್ಯಾದಲ್ಲಿಯು ಕೂಡ ಲಭ್ಯವಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಈ ಮೈಲಿಗಲ್ಲನ್ನು ಬಹಳ ಹಿಂದೆಯೇ ಸಾಧಿಸುತ್ತಿತ್ತು, ಆದರೆ ಬಿಡಿ ಭಾಗಗಳ ಜಾಗತಿಕ ಕೊರತೆಯಿಂದ ತಡವಾಗಿದೆ.

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಈ 2021ರ ಕ್ಲಾಸಿಕ್ 350 ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಇದರ ಪರಿಣಾಮವಾಗಿ ಕಾಯುವ ಅವಧಿಯು ಹೆಚ್ಚಾಗುತ್ತಿದೆ. ಈ ಹೊಸ ಬೈಕ್ ಮಾದರಿಯು ರೆಡ್‌ಡಿಚ್, ಹಾಲ್ಕೈನ್, ಸಿಗ್ನಲ್ಸ್, ಡಾರ್ಕ್ ಮತ್ತು ಕ್ರೋಮ್ ಎಂಬ ಐದು ವೆರಿಯೆಂಟ್ ಗಳಲ್ಲಿ ಲಭ್ಯವಿದೆ, ಈ ಹೊಸ ಬೈಕ್ J1A ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗಿದೆ.

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಇನ್ನು ಈ ಬೈಕ್ ಕ್ರೋಮ್ ರೆಡ್, ಕ್ರೋಮ್ ಬ್ರೊಂಜ್, ಡಾರ್ಕ್ ಸ್ಟೆಲ್ತ್ ಬ್ಲ್ಯಾಕ್, ಡಾರ್ಕ್ ಗನ್‌ಮೆಟಲ್ ಗ್ರೇ, ಸಿಗ್ನಲ್ಸ್ ಮಾರ್ಷ್ ಗ್ರೇ, ಸಿಗ್ನಲ್ಸ್ ಸ್ಯಾಂಡ್ ಸ್ಟಾರ್ಮ, ಹಾಲ್ಸಿಯಾನ್ ಗ್ರೀನ್, ಹಾಲ್ಸಿಯಾನ್ ಬ್ಲ್ಯಾಕ್, ಹಾಲ್ಸಿಯಾನ್ ಗ್ರೇ, ರೆಡ್‌ಡಿಚ್ ಗ್ರೀನ್ ಮತ್ತು ರೆಡ್‌ಡಿಚ್ ಗ್ರೇ ಎಂಬ ಬಣ್ಣಗಳನ್ನು ಹೊಂದಿದೆ.

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಈ ಬೈಕ್ ಮಾದರಿಯು ಇತ್ತೀಚೆಗೆ ಬಿಡುಗಡೆಯಾಗಿರುವ ಮಿಟಿಯೊರ್ 350 ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದೆ. 2021ರ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಸಸ್ಷೆಂಷನ್ ಸೆಟಪ್ ಮತ್ತು ಬ್ರೇಕಿಂಗ್ ಸಿಸ್ಟಂ ಅನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಿದೆ, ಈ ಹೊಸ ಬೈಕಿನಲ್ಲಿ ಫ್ಯೂಲ್ ಗೇಜ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಪ್ರಮುಖ ಆಕರ್ಷಣೆಯಾಗಿದೆ.

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಈ ಹಿಂದಿನ ಮಾದರಿಗಳಲ್ಲಿ ಇದ್ದ ವೈಬ್ರೆಷನ್ ಪ್ರಮಾಣವು ಗಣನೀಯವಾಗಿ ಸುಧಾರಣೆಯಾಗಿದೆ. ಜೊತೆಗೆ ಎಲೆಕ್ಟ್ರಾನಿಕ್ಸ್ ಸೌಲಭ್ಯಗಳು ಬೈಕ್ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದ್ದು, ಹೊಸ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಎಲ್‌ಸಿಡಿ ಜೊತೆಗೆ ಪ್ರತ್ಯೇಕವಾದ ಫ್ಯೂಲ್ ಗೇಜ್ ಮತ್ತು ಟ್ರಿಪ್ಲರ್ ಮೀಟರ್ ನೀಡಲಾಗಿದ್ದು, ಮಿಟಿಯೊರ್ ಮಾದರಿಯಲ್ಲಿರುವಂತೆ ಪ್ರತ್ಯೇಕವಾದ ಟ್ವಿನ್ ಪಾಡ್ ನೀಡದೆ ಇಂಟ್ರಾಗ್ರೆಟೆಡ್ ಮಾಡಲಾಗಿದೆ.

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಟಾಪ್ ಎಂಡ್ ಮಾದರಿಗಳಿಗಾಗಿ ಮಾತ್ರವೇ ಕಂಪನಿಯು ಟ್ರಿಪ್ಪರ್ ಮೀಟರ್ ಅನ್ನು ಜೋಡಣೆ ಮಾಡಿದ್ದು, ಈ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮೂಲಕ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಹೊಸ ಬೈಕಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಬದಲಾಗಿ ಹಾಲೊಜೆನ್ ಬಲ್ಬ್ ಬಳಕೆ ಮಾಡಿದ್ದು, ಹೆಡ್‌ಲ್ಯಾಂಪ್ ಮಾತ್ರವಲ್ಲ ಟೈಲ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಹಾಲೊಜೆನ್ ಬಲ್ಬ್ ಸಹ ಒಳಗೊಂದಿದೆ.

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಇನ್ನು ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕ್ ಅನ್ನು ತಮಿಳುನಾಡು ಮತ್ತು ಯುಕೆ ಮೂಲದ ಆರ್‌ಇ ತಂಡವು ವಿನ್ಯಾಸಗೊಳಿಸಿದೆ. ಹಿಂದಿನ ಥಂಡರ್‌ಬರ್ಡ್ ಎಕ್ಸ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಮಿಟಿಯೊರ್ 350 ಬೈಕ್ ಮಾದರಿಯು ಥಂಡರ್‌ಬರ್ಡ್ ಬೈಕಿಗಿಂತಲೂ ಸಾಕಷ್ಟು ವಿಭಿನ್ನವಾಗಿ ಮತ್ತು ಆಕರ್ಷಕವಾಗಿದೆ. ಇನ್ನು ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕ್ ಅನ್ನು ಕಂಪನಿಯ ಹೊಸ ಜೆ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಅದು ಹೊಸ ತಲೆಮಾರಿನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಅನ್ನು ಸಹ ಆಧಾರಗೊಳಿಸುತ್ತದೆ. ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಅನುಭವ ನೀಡುತ್ತದೆ. ಈ ಬೈಕಿನ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ಅನ್ನು ನೀಡಲಾಗಿದೆ.

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ಈ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನ ಮುಂಭಾಗ 19-ಇಂಚಿನ ಮತ್ತು ಹಿಂಭಾಗದಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಜೋಡಿಸಲಾಗಿದೆ. ಇದು ಕ್ರಮವಾಗಿ 100 / 90-19 57 ಪಿ ಮತ್ತು 140 / 70-17 66 ಪಿ ಸಿಯೆಟ್ ಟ್ಯೂಬ್‌ಲೆಸ್ ಟೈರ್ ಅನ್ನು ಒಳಗೊಂಡಿದೆ. ಇದರೊಂದಿಗೆ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ ಟಿಪ್ಪರ್ ಪಾಡ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಇದರೊಂದಿಗೆ ಹಲವಾರು ಫೀಚರ್ಸ್ ಗಳನ್ನು ಹೊಂದಿವೆ

ಮಲೇಷ್ಯಾದಲ್ಲಿ ಬಿಡುಗಡೆಗೊಂಡ ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು

ರಾಯಲ್ ಎನ್‍ಫೀಲ್ಡ್ ಮೆಟಿಯೊರ್ 350 ಬೈಕ್‌ ಅನ್ನು ಸಹ ವಿಶ್ವದ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕ್‌ಗಳನ್ನು ಥೈಲ್ಯಾಂಡ್, ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಇದು ಉತ್ತಮವಾಗಿ ಮಾರಾಟವಾಗುತ್ತಿದೆ. ಇದೀಗ ಮಲೇಷ್ಯಾದಲ್ಲಿಯು ಕೂಡ ಲಭ್ಯವಾಗುತ್ತಿದೆ.

Most Read Articles

Kannada
English summary
Made in India royal enfield classic 350 and meteor 350 launched in malaysia details
Story first published: Thursday, May 26, 2022, 19:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X