Just In
- 8 min ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- 1 hr ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
Don't Miss!
- News
ಶ್ರೀರಾಮುಲು-ಸಂತೋಷ್ ಲಾಡ್ ಆಲಿಂಗನ: ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯನ್ನು ಹಣಿಯಲು ಹೊಸ ತಂತ್ರ?
- Technology
ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- Finance
Union Budget: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Sports
ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ರೋಡ್ ಟೆಸ್ಟ್ ನಡೆಸಿದ ಹೊಸ ಬಜಾಜ್ ಟ್ರಯಂಫ್ ಸ್ಕ್ರ್ಯಾಂಬ್ಲರ್ ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಬಜಾಜ್ ಆಟೋ ಮತ್ತು ಟ್ರಯಂಫ್ ಮೋಟಾರ್‌ಸೈಕಲ್‌ಗಳು 250ಸಿಸಿ ಮತ್ತು 350-450ಸಿಸಿ ವಿಭಾಗಕ್ಕೆ ಹಲವಾರು ಹೊಸ ಬೈಕ್‌ಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿವೆ ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ಈ ಹೊಸ ಬೈಕ್‌ಗಳನ್ನು ಶೀಘ್ರದಲ್ಲೇ ಅನಾವರಣಗೊಳಿಸಲಿದೆ.

ಮುಂಬರುವ ಬಜಾಜ್ ಟ್ರಯಂಫ್ 350ಸಿಸಿ ಬೈಕ್ ಅನ್ನು ಇತ್ತೀಚೆಗೆ ಭಾರತದಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಬಜಾಜ್ ಆಟೋ ಉತ್ಪಾದನಾ ಸೌಲಭ್ಯದ ಬಳಿ ಟೆಸ್ಟ್‌ಗೆ ಒಳಪಡಿಸಲಾಯಿತು. ಈ ಹೊಸ ಸ್ಕ್ರ್ಯಾಂಬ್ಲರ್-ಮಾದರಿಯ ರೆಟ್ರೊ-ಸ್ಟೈಲಿಂಗ್ ಅನ್ನು ಒಳಗೊಂಡಿದೆ. ಈ ಬೈಕಿನಲ್ಲಿ ರೌಂಡ್ ಹೆಡ್‌ಲ್ಯಾಂಪ್‌ಗಳು, ರೌಂಡ್ ರಿಯರ್ ವ್ಯೂ ಮಿರರ್‌ಗಳು, ಸೂಕ್ಷ್ಮ ವಿನ್ಯಾಸ ಪ್ಯಾನೆಲ್ ಗಳು, ಚಿಸೆಲ್ಡ್ ಫ್ಯೂಯಲ್ ಟ್ಯಾಂಕ್ ಮತ್ತು ಕ್ರೋಮ್ ಫಿಲ್ಲರ್ ಕ್ಯಾಪ್‌ನಿಂದ ಪೂರಕವಾಗಿದೆ. ಇದು ಎಲ್ಇಡಿ ಲ್ಯಾಂಪ್ ಗಳು, ಕ್ವಿಲ್ಟೆಡ್ ಪ್ಯಾಟರ್ನ್ ಸ್ಟಿಚಿಂಗ್‌ನೊಂದಿಗೆ ಟ್ವಿನ್-ಪೀಸ್ ಸೀಟ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಅನ್ನು ಸಹ ಪಡೆಯುತ್ತದೆ.

ಈ ಹೊಸ ಬಜಾಜ್ ಟ್ರಯಂಫ್ ಸ್ಕ್ರ್ಯಾಂಬ್ಲರ್ ಬೈಕ್ ತೆರೆದ ಎಂಜಿನ್ ಭಾಗಗಳು ಮತ್ತು ಸ್ಮಾರ್ಟ್ ಅಲಾಯ್ ವ್ಹೀಲ್ ಗಳನ್ನು ಸಹ ಪಡೆಯುತ್ತದೆ.ಈ ಹೊಸ ಬೈಕ್ ಕಾಸ್ಟ್ ಸ್ವಿಂಗಾರ್ಮ್‌ನೊಂದಿಗೆ ಟ್ಯೂಬಲರ್ ಫ್ರೇಮ್ ಅನ್ನು ಒಳಗೊಂಡಿದೆ,

ಬಿಡುಗಡೆಗೆ ಸಜ್ಜಾಗುತ್ತಿರುವ ಹೊಸ ಬಜಾಜ್ ಟ್ರಯಂಫ್ ಸ್ಕ್ರ್ಯಾಂಬ್ಲರ್ ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಹೊಸ ಬೈಕಿನ ಮುಂಭಾಗದಲ್ಲಿ USD ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅಬ್ಸಾರ್ಬರ್ ಅನ್ನು ಪಡೆಯುತ್ತದೆ.

ಇನ್ನು ಪ್ರಮುಖವಾಗಿ ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸುವ ಸಾಧ್ಯತೆಗಳಿದೆ. ಇದರ ಜೊತೆಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗುತ್ತದೆ.

ಈ ಹೊಸ ಬಜಾಜ್ ಟ್ರಯಂಫ್ ಸ್ಕ್ರ್ಯಾಂಬ್ಲರ್ ಬೈಕಿನ ಹೆಚ್ಚಿನ ವಿವರಗಳು ಇನ್ನೂ ತಿಳಿದಿಲ್ಲವಾದರೂ, ಈ ಹೊಸ ಬೈಕ್ 350-400cc, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಪಡೆಯುವ ನಿರೀಕ್ಷೆಯಿದೆ, ಇದು ವಿಭಾಗದಲ್ಲಿ ಮೋಜಿನ-ರೈಡ್ ಮತ್ತು ಪವರ್ ಫುಲ್ ಬೈಕ್ ಅನ್ನು ಬಯಸುವ ಖರೀದಿದಾರರನ್ನು ಆಕರ್ಷಿಸಲು ಬಲವಾದ ಕಾರ್ಯಕ್ಷಮತೆಯ ಅಂಕಿಅಂಶಗಳನ್ನು ಹೊಂದಿದೆ.

ಬ್ರ್ಯಾಂಡ್ ತನ್ನ ಭಾರತೀಯ ಚೊಚ್ಚಲ ಬೈಕ್ ಬಿಡುಗಡೆಯ ನಂತರ ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಬೈಕು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಮುಂಬರುವ ಬಜಾಜ್ ಟ್ರಯಂಫ್ 350cc ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋಶೂಂ ಪ್ರಕಾರ ರೂ.3.5 ಲಕ್ಷದಿಂದ ರೂ.4.5 ಲಕ್ಷವಾಗಿರಬಹುದು.

ಬ್ರ್ಯಾಂಡ್ 2022 ರ ಕೊನೆಯಲ್ಲಿ ಅಥವಾ 2023 ರ ಮಧ್ಯದಲ್ಲಿ ಹೊಸ ರೋಡ್‌ಸ್ಟರ್ ಶೈಲಿಯ ಬೈಕು ಜೊತೆಗೆ ಈ ಹೊಸ ಬೈಕನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಹೊಸ ಬೈಕ್‌ಗಳ ಅಧಿಕೃತ ಬಿಡುಗಡೆ ಟೈಮ್‌ಲೈನ್ ಕುರಿತು ಬ್ರ್ಯಾಂಡ್ ಇನ್ನೂ ಕೂಡ ಮಾಹಿತಿ ಬಹಿರಂಗಪಡಿಸಿಲ್ಲ. ಹೊಸ ಬಜಾಜ್ ಟ್ರಯಂಫ್ 350cc ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು 310 ಸೀರಿಸ್ ಮತ್ತು ಕೆಟಿಎಂ 390 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

ಇನ್ನು ಟ್ರಯಂಫ್ ಮೋಟರ್‌ಸೈಕಲ್ ತನ್ನ 2023ರ ಬೊನೊವೆಲ್ಲಿ ಟಿ120 ಬ್ಲ್ಯಾಕ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಟ್ರಯಂಫ್ ಬೊನೊವೆಲ್ಲಿ ಟಿ120 ಬ್ಲ್ಯಾಕ್ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.09 ಲಕ್ಷವಾಗಿದೆ. 2023ರ ಟ್ರಯಂಫ್ ಬೊನೊವೆಲ್ಲಿ ಟಿ120 ಬ್ಲ್ಯಾಕ್ ಎಡಿಷನ್ ಸ್ಯಾಫೈರ್ ಬ್ಲ್ಯಾಕ್ ಜೊತೆಗೆ ಮ್ಯಾಟ್ ಸಫೈರ್ ಬ್ಲ್ಯಾಕ್ ಎಂಬ ಹೊಸ ಬಣ್ಣದ ಥೀಮ್ ಅನ್ನು ಪಡೆಯುತ್ತದೆ.

ಈ ಹೊಸ ಬಣ್ಣದ ಥೀಮ್ ಅಸ್ತಿತ್ವದಲ್ಲಿರುವ ಜೆಟ್ ಕಪ್ಪು ಬಣ್ಣವನ್ನು ಸೇರುತ್ತದೆ. ಬಣ್ಣದ ಆಯ್ಕೆಯು ಮೋಟಾರ್‌ಸೈಕಲ್‌ನ ಎಕ್ಸ್ ಶೋರೂಂ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಜೆಟ್ ಬ್ಲ್ಯಾಕ್ ಪೇಂಟ್ ರೂ 11.09 ಲಕ್ಷಕ್ಕೆ ಲಭ್ಯವಿದ್ದು, ಮ್ಯಾಟ್ ಸಫೈರ್ ಬ್ಲ್ಯಾಕ್ ಥೀಮ್ ಹೊಂದಿರುವ ಸ್ಯಾಫೈರ್ ಬ್ಲ್ಯಾಕ್ ಬೆಲೆ ರೂ .1.39 ಲಕ್ಷ. 2023ರ ಟ್ರಯಂಫ್ ಬೊನೊವೆಲ್ಲಿ ಟಿ120 ಬ್ಲ್ಯಾಕ್ ಎಡಿಷನ್ ಜೆಟ್ ಬ್ಲ್ಯಾಕ್ ಬಣ್ಣವು ಸಿಂಗಲ್-ಟೋನ್ ಫಿನಿಶ್ ಅನ್ನು ಹೊಂದಿದೆ. ಮ್ಯಾಟ್ ಸಫೈರ್ ಬ್ಲ್ಯಾಕ್ ಇಂಧನ ಟ್ಯಾಂಕ್‌ನಲ್ಲಿ ಸಿಲ್ವರ್ ಸ್ಟ್ರೀಪ್ ನೊಂದಿಗೆ ಡ್ಯುಯಲ್-ಟೋನ್ ಥೀಮ್ ಅನ್ನು ಪಡೆಯುತ್ತದೆ. ಇದಲ್ಲದೆ, ಮ್ಯಾಟ್ ಸಫೈರ್ ಬ್ಲ್ಯಾಕ್ ಬಣ್ಣದೊಂದಿಗೆ ಸಫೈರ್ ಬ್ಲ್ಯಾಕ್ ಕಂದು ಬಣ್ಣದ ಸೀಟ್ ಕವರ್ ಪಡೆಯುತ್ತದೆ.

ಎರಡೂ ಬಣ್ಣದ ಆಯ್ಕೆಗಳು ಹೆಡ್‌ಲೈಟ್ ಮಾಸ್ಕ್, ಇಂಜಿನ್ ಕೇಸ್, ಎಕ್ಸಾಸ್ಟ್ ಕ್ಯಾನಿಸ್ಟರ್‌ಗಳು ಮತ್ತು ವೈರ್-ಸ್ಪೋಕ್ ವೀಲ್‌ಗಳಿಗೆ ಸಂಪೂರ್ಣ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಈ 2023ರ ಟ್ರಯಂಫ್ ಬೊನೊವೆಲ್ಲಿ ಟಿ120 ಬ್ಲ್ಯಾಕ್ ಎಡಿಷನ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ 2023ರ ಟ್ರಯಂಫ್ ಬೊನೊವೆಲ್ಲಿ ಟಿ120 ಬ್ಲ್ಯಾಕ್ ಎಡಿಷನ್ 1,200 ಸಿಸಿ, ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.
Image Courtesy: Siddharth Shankar