Just In
- 4 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 4 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 6 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 7 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- News
ಒಂದು ಲೀ ಪೆಟ್ರೋಲ್ ಇದ್ದಿದ್ದರೆ ಶಿಶು ಪ್ರಾಣ ಉಳಿಯುತ್ತಿತ್ತಾ? ಲಂಕಾದಲ್ಲೊಂದು ದುರಂತ
- Sports
GT vs RR: ಅಂತಿಮ ಓವರ್ನಲ್ಲಿ ಅತಿ ಹೆಚ್ಚು ಬಾರಿ ರನ್ ಚೇಸ್ ಮಾಡಿದ ಗುಜರಾತ್ ಟೈಟನ್ಸ್ ದಾಖಲೆ
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್
ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೊಸ ಬೈಕ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ವಿಭಾಗಗಳಲ್ಲಿ ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಬಲಪಡಿಸಲು ಸಹಾಯವಾಗುತ್ತದೆ. ಮುಂದಿನ 2-3 ವರ್ಷಗಳವರೆಗೆ ಪ್ರತಿ 3 ತಿಂಗಳಿಗೊಮ್ಮೆ ಹೊಸ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುವುದಾಗಿ ರಾಯಲ್ ಎನ್‌ಫೀಲ್ಡ್ ಈಗಾಗಲೇ ಘೋಷಿಸಿದೆ. ರಾಯಲ್ ಎನ್ಫೀಲ್ಡ್ ಕಂಪನಿಯು ಮುಂದೆ ಬಿಡುಗಡೆಗೊಳಿಸುವ ಮಾದರಿಗಳಲ್ಲಿ ನ್ಯೂ ಜನರೇಷನ್ ಬುಲೆಟ್ 350 ಕೂಡ ಒಳಗೊಂಡಿದೆ. ಈ ನ್ಯೂ ಜನರೇಷನ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಇತ್ತೀಚೆಗೆ ಮೊದಲ ಬಾರಿಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಈ ನ್ಯೂ ಜನರೇಷನ್ ಬುಲೆಟ್ 350 ಬೈಕ್ ಹೊರಹೋಗುವ ಮಾದರಿಯಂತೆಯೇ ಹಲವು ಅಂಶಗಳನ್ನು ಉಳಿಸಿಕೊಂಡಿರುತ್ತದೆ. ಆದರೆ ಕೆಲವು ಬದಲಾವಣೆಗಳೊಂದಿಗೆ ರೆಟ್ರೊ-ಪ್ರೇರಿತ ವಿನ್ಯಾಸವನ್ನು ಮುಂದುವರೆಸುತ್ತದೆ. ಅತ್ಯಂತ ಗಮನಾರ್ಹ ವ್ಯತ್ಯಾಸವೆಂದರೆ ಹೊಸ ಟೈಲ್‌ಲೈಟ್ (ಅದರ ಹೋಲ್ಡರ್ ಸೇರಿದಂತೆ) ಮತ್ತು ಹೊಸ ಫೆಂಡರ್‌ಗಳು. ಹೆಡ್‌ಲ್ಯಾಂಪ್ ಕೌಲ್ ಮರುಹೊಂದಿಸಲಾದ ಪೈಲಟ್ ಲ್ಯಾಂಪ್ ಗಳನ್ನು ಹೊಂದಿರುತ್ತದೆ.

ಈ ಬೈಕಿನಲ್ಲಿ ಹೊಸ ಹ್ಯಾಂಡಲ್‌ಬಾರ್ ಹೊಂದಿದೆ. ಪ್ಯಾಡಿಂಗ್ ಮತ್ತು ಹೊಸ ಪಿಲಿಯನ್ ಗ್ರಾಬ್ರೈಲ್‌ನೊಂದಿಗೆ ಸೀಟ್ ಸಿಂಗಲ್-ಪೀಸ್ ಯೂನಿಟ್ ಆಗಿ ಮುಂದುವರಿಯುತ್ತದೆ, ಈ ಹೊಸ ಮಾದರಿಯು ಸಿಂಗಲ್-ಡೌನ್‌ಟ್ಯೂಬ್ ಫ್ರೇಮ್ ಅನ್ನು ಡ್ಯುಯಲ್-ಕ್ರೇಡಲ್ ಫ್ರೇಮ್‌ನ ಪರವಾಗಿ ಕೈ ಬಿಡುತ್ತದೆ.

ಇನ್ನು ಸಸ್ಪೆಂಕ್ಷನ್ ಸಿಸ್ಟಂ ನವೀಕರಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ನ್ಯೂ ಜನರೇಷನ್ ಬುಲೆಟ್ 350 ಪ್ರಸ್ತುತ ಆವೃತ್ತಿಗಿಂತ ದಪ್ಪವಾದ ಮುಂಭಾಗದ ಫೋರ್ಕ್‌ಗಳು ಮತ್ತು ಹಿಂಭಾಗದ ಶಾಕರ್‌ಗಳನ್ನು ಪಡೆಯುತ್ತದೆ, ಇದು ಸವಾರಿ ಮತ್ತು ನಿರ್ವಹಣೆಯನ್ನು ಸುಧಾರಿಸುತ್ತದೆ.

ನ್ಯೂ ಜನರೇಷನ್ ಬುಲೆಟ್ ವೆಚ್ಚವನ್ನು ಕಡಿಮೆ ಮಾಡಲು, ಕ್ಲಾಸಿಕ್ 350 ಗಿಂತ ಕಡಿಮೆ ಉಪಕರಣಗಳನ್ನು ನೀಡುತ್ತದೆ. ಈ ಬೈಕ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ನೀಡಲಾಗುತ್ತದೆ. ಇನ್ನು ಹೆಚ್ಚಿನ ಸುರಕ್ಷಯೆಗಾಗಿ ಎಬಿಎಸ್ ಅನ್ನು ಪಡೆಯುತ್ತದೆ.

ನ್ಯೂ ಜನರೇಷನ್ ಬುಲೆಟ್ 350 ಬೈಕಿನಲ್ಲಿ ಬಹುಶಃ ಕ್ಲಾಸಿಕ್ 350 ಮತ್ತು ಮೆಟಿಯರ್ 350 ಯಂತೆಯೇ ಇರುತ್ತದೆ, ಇದು ಪ್ರಸ್ತುತ ಜನರೇಷನ್ 350 ಗಿಂತ ದೊಡ್ಡ ಸುಧಾರಣೆಯಾಗಿದೆ. ಕ್ಲಾಸಿಕ್‌ನಲ್ಲಿರುವಂತೆ ಇನ್ಸ್ ಟ್ರೂಮೆಂಟ್ ಕನ್ಸೋಲ್ ಸೆಮಿ-ಡಿಜಿಟಲ್ ಯುನೀಟ್ ಆಗಿಯೇ ಇದೆ ಎಂದು ನಮಗೆ ಖಚಿತವಿಲ್ಲ. ಈ ಬುಲೆಟ್ ಬೈಕಿನ ಹೆಚ್ಚಿನ ಸ್ಪೈ ಚಿತ್ರಗಳು ಆನ್‌ಲೈನ್‌ನಲ್ಲಿ ಹೊರಹೊಮ್ಮುತ್ತಿದ್ದಂತೆ ಇನ್ನಷ್ಟು ಮಾಹಿತಿಗಳು ಬಹಿರಂಗವಾಗಲಿದೆ.

ನ್ಯೂ ಜನರೇಷನ್ ಬುಲೆಟ್ 350 ಬೈಕಿನಲ್ಲಿ ಅದೇ 349 ಸಿಸಿ, ಏರ್/ಆಯಿಲ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಕ್ಲಾಸಿಕ್ 350 ಮತ್ತು ಮೆಟಿಯರ್ 350 ನಂತೆ ಪಡೆಯುತ್ತದೆ. ಈ SOHC ಪವರ್‌ಪ್ಲಾಂಟ್ ಪ್ರಸ್ತುತ ಮಾದರಿಯ ಪುಶ್ರೋಡ್‌ಗಿಂತ ಸುಗಮ ಮತ್ತು ಹೆಚ್ಚು ಪವರ್ ಫುಲ್ ಆಗಿರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಸೀಕ್ವೆನ್ಷಿಯಲ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿರುತ್ತದೆ.

ಈ ನ್ಯೂ ಜನರೇಷನ್ ಬುಲೆಟ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹೊಸ ಮಾದರಿಯು ಪ್ರಸ್ತುತ ಜನರೇಷನ್ ಮಾದರಿಗಿಂತ ಗಮನಾರ್ಹವಾಗಿ ಹೆಚ್ಚು ದುಬಾರಿಯಾಗಿದೆ, ಇದು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗೆ ಕೈಗೆಟುಕುವ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

ಈ ನ್ಯೂ ಜನರೇಷನ್ ಬುಲೆಟ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಬಿ350 ಹೈನಸ್, ಜಾವಾ ಮತ್ತು ಬೆನೆಲ್ಲಿ ಇಂಪೀರಿಯಲ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

ಇನ್ನು ರಾಯಲ್ ಎನ್ಫೀಲ್ಡ್ ಕಂಪನಿಯು 2022ರ ಜನವರಿ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ಕಳೆದ ತಿಂಗಳು ರಾಯಲ್ ಎನ್ಫೀಲ್ಡ್ ಕಂಪನಿಯು 58,838 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿಯು 68,887 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.15 ರಷ್ಟು ಕುಸಿತವಾಗಿದೆ. ಕೊರೋನಾ ಮೂರನೇ ಅಲೆ ಪ್ರಾರಂಭ ಮತ್ತು ಸೆಮಿಕಂಡೆಕ್ಟರ್ ಚಿಪ್ ಕೊರತೆಯಿಂದ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.

ಆದರೆ ರಾಯಲ್ ಎನ್ಫೀಲ್ಡ್ ಕಂಪನಿಯು ರಫ್ತಿನಲ್ಲಿ ಬಲವಾದ ಬೆಳವಣಿಗೆಯನ್ನು ಸಾಧಿಸಿದೆ. ಇದುವರೆಗೆ ಅತ್ಯಧಿಕ ಮಾಸಿಕ ರಫ್ತುಗಳನ್ನು ವರದಿ ಮಾಡಿದೆ, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರ ರಾಯಲ್ ಎನ್ಫೀಲ್ಡ್ ಕಂಪನಿಯು 2022ರ ಜನವರಿ ತಿಂಗಳಿನಲ್ಲಿ 49,726 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು ಒಂದು ವರ್ಷದ ಹಿಂದೆ ಅದೇ ತಿಂಗಳಲ್ಲಿ 64,372 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೆ.23 ರಷ್ಟು ಕುಸಿತವಾಗಿದೆ.