ಬೆಂಗಳೂರಿನಲ್ಲಿ ಹೊಸ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪ್ರಾರಂಭ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ಭಾರತದಲ್ಲಿ ತನ್ನ ಮೊದಲ ಬಹುನಿರೀಕ್ಷಿತ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ದೆಹಲಿ, ಬೆಂಗಳೂರು ಮತ್ತು ಜೈಪುರದಲ್ಲಿ ಬುಕಿಂಗ್‌ಗೆ ಲಭ್ಯವಿದೆ.

ಹೊಸ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು ರೂ.2,499 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಬಳಕೆದಾರರು ತಮ್ಮ ವಿಡಾವನ್ನು ಕಾಯ್ದಿರಿಸಬಹುದು. ಇದು ಸಂಪೂರ್ಣವಾಗಿ ಮರುಪಾವತಿಸಲ್ಪಡುತ್ತದೆ ಅಥವಾ ಖರೀದಿಯ ಸಮಯದಲ್ಲಿ ಅಂತಿಮ ಬೆಲೆಗೆ ಅನುಗುಣವಾಗಿ ಸರಿಹೊಂದಿಸಲಾಗುತ್ತದೆ. 2022ರ ವೇಳೆಗೆ, ದೇಶದಾದ್ಯಂತ 200 ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಾಗುವಂತೆ ಹೀರೋ ಯೋಜಿಸಿದೆ. ಇನ್ನು ಇತ್ತೀಚೆಗೆ, ಹೀರೋ ವಿಡಾ ತಮ್ಮ ಎಕ್ಸ್ಪೀರಿಯೆನ್ಸ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ತೆರೆಯಿತು.

ಹೊಸ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪ್ರಾರಂಭ

ಮುಂಬರುವ ವಾರಗಳಲ್ಲಿ, ವಿಡಾ ಎಕ್ಸ್ಪೀರಿಯೆನ್ಸ್ ಸೆಂಟರ್ ದೆಹಲಿ ಮತ್ತು ಜೈಪುರದಲ್ಲಿ ವ್ಯಾಪಾರಕ್ಕಾಗಿ ತೆರೆದಿರುತ್ತವೆ. ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಗಳು ಬೆಂಗಳೂರಿನಲ್ಲಿ ಅಧಿಕೃತವಾಗಿ ಪ್ರಾರಂಭವಾಗಿವೆ. ಹೀರೋ ಮೋಟೋಕಾರ್ಪ್‌ನ ಅಧ್ಯಕ್ಷ ಮತ್ತು ಸಿಇಒ ಡಾ. ಪವನ್ ಮುಂಜಾಲ್ ಅವರು ಬೆಂಗಳೂರಿನ ಗ್ರಾಹಕರಿಗೆ ಮೊಟ್ಟಮೊದಲ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿತರಿಸಿದರು. ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ V1 Plus ಮತ್ತು V1 Pro ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಎರಡರ ನಡುವಿನ ಪ್ರಾಥಮಿಕ ವ್ಯತ್ಯಾಸವೆಂದರೆ ಅವುಗಳ ಸ್ಥಾಪಿಸಲಾದ ಬ್ಯಾಟರಿ ಸಾಮರ್ಥ್ಯ ಮತ್ತು ರೇಂಜ್ ನಲ್ಲಿ V1 Plus 3.44 kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ, ಆದರೆ V1 Pro 3.94 kWh ಹೊಂದಿದೆ. ಎರಡೂ ಸ್ಕೂಟರ್‌ಗಳು ಕ್ರಮವಾಗಿ 1.72 kWh ಮತ್ತು 1.97 kWh ಡ್ಯುಯಲ್ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿವೆ. ಇನ್ನು ವಿ1 ಪ್ಲಸ್‌ರೂಪಾಂತರವು 143 ಕಿಮೀ ರೇಂಜ್ ಅನ್ನು ನೀಡಿದರೆ ವಿ1 ಪ್ರೊ ರೂಪಾಂತರವು 165 ಕಿಮೀ ರೇಂಜ್ ಅನ್ನು ನೀಡುತ್ತದೆ.

ಈ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ 3.2 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಪ್ಲಸ್ ರೂಪಾಂತರವು ಅದನ್ನು 3.4 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಎರಡೂ ವಿಡಾ ರೂಪಾಂತರಗಳು 6 kW ಗರಿಷ್ಠ ಪವರ್ ಮತ್ತು 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಗ್ರೇಡೆಬಿಲಿಟಿ 20° ಆಗಿದ್ದರೆ ಗರಿಷ್ಠ ವೇಗ ಗಂಟೆಗೆ 80 ಕಿಮೀ ಆಗಿದೆ. ಎರಡೂ ರೂಪಾಂತರಗಳು ಇಕೋ, ರೈಡ್ ಮತ್ತು ಸ್ಪೋರ್ಟ್‌ನ ರೈಡಿಂಗ್ ಮೋಡ್‌ಗಳನ್ನು ಹೊಂದಿವೆ.

ಪ್ರೊ ರೂಪಾಂತರವು ಹೆಚ್ಚುವರಿ ಕಸ್ಟಮ್ ರೈಡಿಂಗ್ ಮೋಡ್ ಅನ್ನು ಪಡೆಯುತ್ತದೆ. ಇದು 100 ಕ್ಕೂ ಹೆಚ್ಚು ಸಂಯೋಜನೆಗಳನ್ನು ನೀಡುತ್ತದೆ. ವಿಡಾ ಪ್ರೊ ರೂಪಾಂತರವು 125 ಕೆಜಿ ತೂಕವನ್ನು ಹೊಂದಿದೆ. ಇನ್ನು ಪ್ಲಸ್ ರೂಪಾಂತರಕ್ಕಿಂತ 1 ಕೆಜಿ ಹೆಚ್ಚು ಹೊಂದಿದೆ. ಮನೆಯ ವಾತಾವರಣದಲ್ಲಿ, ಪ್ಲಸ್‌ ರೂಪಾಂತರವನ್ನು 5 ಗಂಟೆ 15 ನಿಮಿಷಗಳು ಮತ್ತು Vida Pro ವೇರಿಯಂಟ್‌ಗೆ 5 ಗಂಟೆ 55 ನಿಮಿಷಗಳು ಚಾರ್ಜಿಂಗ್ ಮಾಡಬಹುದು.

ಫಾಸ್ಟ್ ಚಾರ್ಜರ್‌ನೊಂದಿಗೆ, ಪೂರ್ಣ ಚಾರ್ಜ್‌ಗೆ ತೆಗೆದುಕೊಳ್ಳುವ ಸಮಯವು V1 ಪ್ಲಸ್‌ಗೆ ಸುಮಾರು 2 ಗಂಟೆಗಳು ಮತ್ತು V1 Pro ಗೆ 2 ಗಂಟೆ 20 ನಿಮಿಷಗಳಾಗಿದೆ. ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡೂ ರೂಪಾಂತರಗಳ ಸಾಮಾನ್ಯ ವೈಶಿಷ್ಟ್ಯಗಳು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, OTA ಬೆಂಬಲದೊಂದಿಗೆ 7-ಇಂಚಿನ TFT ಡಿಸ್ಪ್ಲೇ, ಬ್ಲೂಟೂತ್, 4G, Wi-Fi, ಆಂಟಿ-ಥೆಫ್ಟ್ ಅಲಾರ್ಮ್, ಜಿಯೋಫೆನ್ಸ್, ಟ್ರ್ಯಾಕ್ ಮೈ ಬೈಕ್, ವೆಹಿಕಲ್ ಡಯಾಗ್ನೋಸ್ಟಿಕ್ಸ್, ಕ್ರೂಸ್ ಕಂಟ್ರೋಲ್, SOS ಅಲರ್ಟ್, ಪುನರುತ್ಪಾದಕ ಬ್ರೇಕಿಂಗ್ ಮತ್ತು ರಿವರ್ಸ್ ಫಂಕ್ಷನ್ ಅನ್ನು ಹೊಂದಿದೆ.

ವಾಹನದ ವಾರಂಟಿ ಮತ್ತು ಬ್ಯಾಟರಿ ವಾರಂಟಿ ಕ್ರಮವಾಗಿ 5 ವರ್ಷಗಳು/50,000 ಕಿಮೀ ಮತ್ತು 3 ವರ್ಷಗಳು/30,000 ಕಿಮೀ ಆಗಿದೆ. (FAME II ಸಬ್ಸಿಡಿ ನಂತರ) ದೆಹಲಿಯಲ್ಲಿ V1 ಪ್ಲಸ್‌ಗೆ ರೂ 1.28 ಲಕ್ಷ ಮತ್ತು V1 ಪ್ರೊ ರೂಪಾಂತರಕ್ಕೆ ರೂ 1.39 ಲಕ್ಷ. Vida ಎಕ್ಸ್ ಶೋರೂಂ ಬೆಲೆಯು ಎಲ್ಲಾ ಮೂರು ನಗರಗಳಲ್ಲಿ ಒಂದೇ ಆಗಿರುತ್ತದೆ ಮತ್ತು ಕೇಂದ್ರ ಸರ್ಕಾರದ FAME II ಸಬ್ಸಿಡಿಯನ್ನು ಪಡೆಯುತ್ತದೆ.

ನಗರಗಳಾದ್ಯಂತ ಬೆಲೆಯಲ್ಲಿನ ವ್ಯತ್ಯಾಸವು ಆಯಾ ರಾಜ್ಯ ಸರ್ಕಾರಗಳು ನೀಡುವ ವಿವಿಧ ಹಂತದ ಸಬ್ಸಿಡಿಯಿಂದ ಬರುತ್ತದೆ. ಕೆಲವು ರಾಜ್ಯಗಳು ತಮ್ಮ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ, ಇದರಿಂದಾಗಿ ಹೆಚ್ಚಿನ ಬೆಲೆ ಇದೆ. ಹೀರೋ ಮೋಟೊಕಾರ್ಪ್ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳಿಗಾಗಿ ಮೊದಲ 'ಅನುಭವ ಕೇಂದ್ರ' (Experience centre)ವನ್ನು ನಮ್ಮ ಬೆಂಗಳೂರಿನಲ್ಲಿ ತೆರೆದಿದೆ. ಈಗ ಕಂಪನಿಯು ಹೊಸ ವಿಡಾ 'ಅನುಭವ ಕೇಂದ್ರ'ವನ್ನು ಪರಿಚಯಿಸಿದೆ, ಇದು ಹೀರೋ ಮೋಟೋಕಾರ್ಪ್‌ನಿಂದ ಸ್ಥಾಪನೆಯಾದ ಮೊದಲ ಮೊದಲ ಇವಿ ಕೇಂದ್ರವಾಗಿದೆ.

Most Read Articles

Kannada
English summary
New hero vida electric scooter delivery commenced in bengaluru details
Story first published: Saturday, December 31, 2022, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X