ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ರಾಯಲ್ ಎನ್‌ಫೀಲ್ಡ್ (Royal Enfield) ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ಹೊಸ ಬೈಕ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ವಿಭಾಗಗಳಲ್ಲಿ ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಬಲಪಡಿಸಲು ಸಹಾಯವಾಗುತ್ತದೆ. ಹೊಸ 350 ಸಿಸಿ, 450 ಸಿಸಿ ಮತ್ತು 650 ಸಿಸಿ ಮಾದರಿಗಳು ಸ್ಪಾಟ್ ಟೆಸ್ಟ್ ನಡೆಸುವ ವೇಳೆ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ರಾಯಲ್ ಎನ್‍ಫೀಲ್ಡ್ ಕಂಪನಿಯು ಮುಂದೆ ಬಡುಗಡೆಗೊಳಿಸುವ ಮಾದರಿಗಳಲ್ಲಿ ಹೊಸ ಹಂಟರ್ 350 ಕೂಡ ಒಳಗೊಂಡಿದೆ. ವರದಿಗಳ ಪ್ರಕಾರ, ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಬ್ರ್ಯಾಂಡ್‌ನ 350ಸಿಸಿ ವಿಭಾಗದಲ್ಲಿ ಇರಿಸಲಾಗುತ್ತದೆ. ಇನ್ನು ಈ ಹೊಸ ಹಂಟರ್ 350 ಬೈಕ್ ಅನ್ನು ಬ್ರ್ಯಾಂಡ್‌ನ ಹೊಸ ಜೆ-ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಈ ಹೊಸ ಬೈಕ್ ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ಈ ಬೈಕ್ ಸ್ಫಾಟ್ ಟೆಸ್ಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿತ್ತು. ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ವಿನ್ಯಾಸ, ಫೀಚರ್ ಮತ್ತು ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿವೆ. ಸ್ಫಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಮಾದರಿಯು ಕ್ಲಾಸಿಕ್-ರೋಡ್‌ಸ್ಟರ್ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ಈ ಬೈಕಿನ ವೃತಕಾರದ ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್ ಮತ್ತು ಟರ್ನ್ ಸಿಗ್ನಲ್ ಇಂಡಿಗೇಟರ್ ಗಳನ್ನು ಹೊಂದಿವೆ. ಇದರ ವೃತ್ತಾಕಾರದ ಹೆಡ್‌ಲ್ಯಾಂಪ್ ಕ್ಲಸ್ಟರ್ ಸಂಯೋಜಿತ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸ್ಕಲಪಡಡ್ ಫ್ಯೂಯಲ್ ಟ್ಯಾಂಕ್, ಮೆತ್ತನೆಯ ಸ್ಪ್ಲಿಟ್-ಸೀಟುಗಳು, ವಿಶಾಲವಾದ ಹ್ಯಾಂಡಲ್‌ಬಾರ್, ಅಪ್-ಸ್ವಿಪ್ಟ್ ಎಕ್ಸಾಸ್ಟ್ ಮತ್ತು ಸೈಡ್ ಕವರ್‌ಗಳು ಮಿಟಿಯೊರ್ 350 ಬೈಕಿನಲ್ಲಿರುವಂತೆ ಕಾಣುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ಇನ್ನು ಈ ಹೊಸ ಹಂಟರ್ 350 ಬೈಕಿನಲ್ಲಿ ಸಣ್ಣ-ಸಿಂಗಲ್-ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ಒಳಗೊಂಡಿರಲಿದೆ. ಮೊಬೈಲ್ ಅಪ್ಲಿಕೇಶನ್‌ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಒಮ್ಮೆ ಜೋಡಿಸಿದಾಗ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಒದಗಿಸಲು ಇದು ಸಣ್ಣ ಟಿಎಫ್‌ಟಿ ಡಿಸ್ ಪ್ಲೇಯನ್ನು ಕೂಡ ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ಇದು ಸ್ಪೀಡ್, ಒಡೋಮೀಟರ್, ಟ್ರಿಪ್ ಮೀಟರ್, ಫ್ಯೂಯಲ್ ಗೇಜ್ ಮತ್ತು ಇತರ ಟೆಲ್ಟೇಲ್ ಚಿಹ್ನೆಗಳಂತಹ ಉಳಿದ ವಿವರಗಳನ್ನು ಒದಗಿಸಲು ಮುಖ್ಯ ಕ್ಲಸ್ಟರ್ ಯುನಿಟ್ ಅನ್ನು ಕಾಯ್ದಿರಿಸಲಾಗುತ್ತದೆ. ಇನ್ನು ಈ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನಲ್ಲಿ ಮಿಟಿಯೊರ್ 350 ಮಾದರಿಯಲ್ಲಿರುವ ಅದೇ ಎಂಜಿನ್ ಅನ್ನು ಹೊಂದಿರಬಹುದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ಇದು ಹೊಸ ಎಸ್‌ಒಹೆಚ್‌ಸಿ 349ಸಿಸಿ ಸಿಂಗಲ್ ಸಿಲಿಂಡರ್ ಏರ್-ಆಯಿಲ್ ಕೂಲ್ಡ್ ಎಸ್‌ಒಹೆಚ್‌ಸಿ ಎಂಜಿನ್ ಆಗಿದೆ. ಈ ಎಂಜಿನ್ 6100 ಆರ್‌ಪಿಎಂನಲ್ಲಿ 20.2 ಬಿಹೆಚ್‍ಪಿ ಪವರ್ ಮತ್ತು 4000 ಆರ್‌ಪಿಎಂನಲ್ಲಿ 27 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ,

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ಇನ್ನು ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಿಂಭಾಗದಲ್ಲಿ ಟ್ವಿನ್-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಸುರಕ್ಷತೆಗಾಗಿ ಎರಡು ಕಡೆಯಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಿ, ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು 53,852 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. 2021ರ ಏಪ್ರಿಲ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 48,789 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 10 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಬೆಳವಣಿಗೆಯ ಸಂಖ್ಯೆಗಳು ಅಂತಿಮವಾಗಿ ತಮಿಳುನಾಡು ಮೂಲದ ಮೋಟಾರ್‌ಸೈಕಲ್ ತಯಾರಕರ ಮಾರಾಟಕ್ಕೆ ಚೇತರಿಕೆಯ ಹಾದಿಯನ್ನು ತೋರಿಸುತ್ತವೆ. ಕಳೆದ ಹಣಕಾಸು ವರ್ಷದಲ್ಲಿ (FY2021-22) ನಿರೀಕ್ಷೆಗಿಂತ ಕಡಿಮೆಯಾಗಿದೆ. ರಾಯಲ್ ಎನ್‌ಫೀಲ್ಡ್ ಕಳೆದ ತಿಂಗಳು ಒಟ್ಟು (ದೇಶೀಯ+ರಫ್ತು) 62,155 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ 53,298 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 16.62 ರಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ಇನ್ನು 2022ರ ಏಪ್ರಿಲ್ ತಿಂಗಳ ರಫ್ತಿಗೆ ಸಂಬಂಧಿಸಿದಂತೆ ರಾಯಲ್ ಎನ್‌ಫೀಲ್ಡ್ ತನ್ನ ಸಂಪುಟಗಳಲ್ಲಿ ಭಾರಿ ಏರಿಕೆಯನ್ನು ಕಂಡಿದೆ. ಕಂಪನಿಯು ಈ ವರ್ಷದ ಏಪ್ರಿಲ್‌ನಲ್ಲಿ 8,303 ಮೋಟಾರ್‌ಸೈಕಲ್‌ಗಳನ್ನು ರಫ್ತು ಮಾಡಿದೆ. 2021ರ ಏಪ್ರಿಲ್ ತಿಂಗಳಿನಲ್ಲಿ 4,509 ಯುನಿಟ್‌ಗಳನ್ನು ರಫ್ತು ಮಾಡಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.84 ರಷ್ಟು ಭಾರಿ ಬೆಳವಣಿಗೆಯಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು 2022ರ ಮಾರ್ಚ್ ತಿಂಗಳಿನಲ್ಲಿ 9,200 ಯುನಿಟ್‌ಗಳ ರಫ್ತು ಮಾಡುವುದರೊಂದಿಗೆ ಶೇಕಡಾ 9.75 ರಷ್ಟು ಕುಸಿದಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು "ಪೂರೈಕೆ ಮುಂಭಾಗದಲ್ಲಿ ನಿರಂತರ ಸವಾಲುಗಳ ಹೊರತಾಗಿಯೂ" ಸ್ಥಿರವಾದ ಪರಿಮಾಣಗಳನ್ನು ನೋಂದಾಯಿಸಿದೆ ಎಂದು ಹೇಳಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್

ಒಟ್ಟಾರೆಯಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯ 350ಸಿಸಿ ವಿಭಾಗದ ಹಂಟರ್ ಬೈಕ್ ಹೊಸ ಮಾದರಿಯಾಗಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್ ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದುದೆಂದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಹೈನೆಸ್ ಸಿಬಿ 350 ಬೈಕಿಗೆ ಪೈಪೋಟಿ ನೀಡುತ್ತದೆ.

Article Published On: Tuesday, May 31, 2022, 10:33 [IST]
English summary
New royal enfield hunter 350 launch soon in india find here all details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+