ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ಎಂಟಿ-15 ವಿ2.0 ಬೈಕ್ ಅನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಹೊಸ ಯಮಹಾ ಎಂಟಿ-15 ವಿ2.0 ಬೈಕ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.60 ಲಕ್ಷವಾಗಿದೆ.

ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಯಮಹಾ ಎಂಟಿ-15 ವಿ2.0 ಬೈಕ್ ಗ್ರಾಹಕರು ಅಧಿಕೃತ ಅಕ್ಸೆಸರೀಸ್ ನೊಂದಿಗೆ ಕಸ್ಟಮೈಸ್ ಮಾಡಬಹುದು. ಅಕ್ಸೆಸರೀಸ್ ಪಟ್ಟಿ ಮತ್ತು ಅವುಗಳ ಬೆಲೆಯನ್ನು ಬಹಿರಂಗಪಡಿಸಲಾಗಿದೆ.ಬಳಕೆದಾರರು ಈ ಅಕ್ಸೆಸರೀಸ್ ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು ಮತ್ತು ಆಯ್ಕೆಮಾಡಿದ ಡೀಲರ್‌ಶಿಪ್‌ನಿಂದ ಅವುಗಳನ್ನು ಪಡೆಯಬಹುದು. ಕಾಕ್‌ಪಿಟ್ ಪ್ರದೇಶವನ್ನು ಆಕರ್ಷವಾಗಿಸಲು ಬಳಕೆದಾರರು ಟ್ಯಾಂಕ್ ಪ್ಯಾಡ್ ಅನ್ನು ಆಯ್ಕೆ ಮಾಡಬಹುದು, ರೂ 350 ಕ್ಕೆ ಲಭ್ಯವಿದೆ. ಎರಡು ಬಣ್ಣ ಆಯ್ಕೆಗಳು ಲಭ್ಯವಿದೆ, ಬಳಕೆದಾರರು ತಮ್ಮ ನಿರ್ದಿಷ್ಟ ಅಭಿರುಚಿ ಮತ್ತು ಆದ್ಯತೆಗಳ ಪ್ರಕಾರ ಅಥವಾ ಬೈಕ್‌ನ ಬಣ್ಣವನ್ನು ಆಧರಿಸಿ ಆಯ್ಕೆ ಮಾಡಬಹುದು.

ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಹೊಸ ಯಮಹಾ ಎಂಟಿ-15 ವಿ2.0 ಬೈಕ್ ಗಾಗಿ ಟ್ಯಾಂಕ್ ಪ್ಯಾಡ್ ಅನ್ನು ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಇದು ಸ್ಕ್ರಾಚ್ ನಿರೋಧಕ, ವಾಟರ್ ಫ್ರೊಫ್ ಮತ್ತು ದೀರ್ಘಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಇದು ವಾಹನದ ಬಣ್ಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಹೊಸ ಯಮಹಾ ಎಂಟಿ-15 ವಿ2.0 ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿರುವುದರಿಂದ, ಬಳಕೆದಾರರು ಮೊಬೈಲ್ ಹೋಲ್ಡರ್ ಮತ್ತು USB ಚಾರ್ಜರ್‌ನಂತಹ ಅಕ್ಸೆಸರೀಸ್ ಗಳನ್ನು ಖರೀದಿಸಬಹುದು. ಇವುಗಳ ಬೆಲೆ ಕ್ರಮವಾಗಿ ರೂ.350 ಮತ್ತು ರೂ.750 ಆಗಿದೆ. ಮೊಬೈಲ್ ಹೋಲ್ಡರ್ ಸ್ಟ್ಯಾಂಡರ್ಡ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ. ಇದು ವಿಭಿನ್ನ ಗಾತ್ರದ ಸ್ಮಾರ್ಟ್‌ಫೋನ್‌ಗಳನ್ನು ಹೊಂದಬಲ್ಲ ಹೊಂದಾಣಿಕೆಯ ಯುನಿಟ್ ಆಗಿದೆ.

ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಯುಎಸ್‌‍ಬಿ ಚಾರ್ಜರ್ ಅನ್ನು ಹ್ಯಾಂಡಲ್‌ಬಾರ್‌ನಲ್ಲಿ ಇರಿಸಬಹುದು. ಯುಎಸ್‌‍ಬಿ ಚಾರ್ಜರ್ ಕಿಟ್ ಯುಎಸ್‌ಬಿ ಸ್ಲಾಟ್ ಮತ್ತು ವೈರಿಂಗ್, ನಟ್ ಬೋಲ್ಟ್ ಮತ್ತು ಜಿಪ್ ಟೈಗಳನ್ನು ಒಳಗೊಂಡಿದೆ. ಪಟ್ಟಿಯಲ್ಲಿರುವ ಅಗ್ಗದ ಪರಿಕರವೆಂದರೆ ಯಮಹಾ ಬ್ರಾಂಡ್ ಸ್ಟಿಕ್ಕರ್, ಇದರ ಬೆಲೆ ರೂ.80 ಆಗಿದೆ.

ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಸ್ಪೋರ್ಟಿಯರ್ ಲುಕ್ ಗಾಗಿ ಬಳಕೆದಾರರು ರೂ.1,490 ಬೆಲೆಯ ಎಲ್ಇಡಿ ಫ್ಲಾಷರ್ ಅನ್ನು ಆಯ್ಕೆ ಮಾಡಬಹುದು. ಇದು ಹೆಚ್ಚಿನ ಗೋಚರತೆಯನ್ನು ಹೊಂದಿದೆ, ಸ್ಟ್ಯಾಂಡರ್ಡ್ ಬಲ್ಬ್ ಫ್ಲಾಷರ್‌ಗೆ ಹೋಲಿಸಿದರೆ ಇದು ಹೆಚ್ಚು ಕಾಲ ಇರುತ್ತದೆ.

ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ರೈಡರ್‌ಗಾಗಿ, ಯಮಹಾ ಎಂಟಿ ಬ್ರಾಂಡ್‌ನ ಪೊಲೊ ಟಿ-ಶರ್ಟ್ ಅನ್ನು ರೂ 900 ನಲ್ಲಿ ನೀಡುತ್ತಿದೆ. ಟಿ-ಶರ್ಟ್ ಮುಂಭಾಗದಲ್ಲಿ ಎಂಟಿ ಲೋಗೋ ಮತ್ತು ಹಿಂಭಾಗದಲ್ಲಿ ಯಮಹಾ ಲೋಗೋವನ್ನು ಹೊಂದಿದೆ. ಟೀ ಶರ್ಟ್ ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಇತರ ಬ್ರಾಂಡ್ ಉಡುಪುಗಳಲ್ಲಿ ಎಂಟಿ ಬ್ಲ್ಯಾಕ್ ಬೈಕಿಂಗ್ ಜಾಕೆಟ್ ಮತ್ತು ಯಮಹಾ ಬ್ಲ್ಯಾಕ್ ಬೈಕಿಂಗ್ ಜಾಕೆಟ್ ಸೇರಿವೆ.

ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಪಿಲಿಯನ್ ಸೌಕರ್ಯಕ್ಕಾಗಿ, ಬಳಕೆದಾರರು 500 ರೂಗಳಲ್ಲಿ ನೀಡಲಾಗುವ ಟಂಡೆಮ್ ಫುಟ್‌ರೆಸ್ಟ್ ಅನ್ನು ಆಯ್ಕೆ ಮಾಡಬಹುದು. ಬೈಕ್ ರಕ್ಷಣೆಗಾಗಿ, ಸೀಟ್ ಕವರ್ ಮತ್ತು ಸ್ಕಿಡ್ ಪ್ಲೇಟ್ ಲಭ್ಯವಿರುವ ಪರಿಕರಗಳು. ಇವುಗಳ ಬೆಲೆ ಕ್ರಮವಾಗಿ 400 ಮತ್ತು 500 ರೂ. ಸೀಟ್ ಕವರ್ ಪ್ರಮಾಣಿತ ಕಪ್ಪು ಬಣ್ಣದಲ್ಲಿ ಲಭ್ಯವಿದೆ..

ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಯಮಹಾ ಎಂಟಿ-15 ವಿ2.0 ಎಂದು ಕರೆಯಲ್ಪಡುವ, ನವೀಕರಿಸಿದ ನೇಕೆಡ್ ಸ್ಟ್ರೀಟ್‌ಫೈಟರ್ ಅದರ ಫೇರ್ಡ್ ಸ್ಪೋರ್ಟ್ಸ್ ಬೈಕ್ ಸಹೋದರ ಮಾದರಿ ಆರ್15 ವಿ4 ಅನ್ನು ಆಧರಿಸಿದೆ. ಈ ಹೊಸ ಯಮಹಾ ಎಂಟಿ-15 ವಿ2.0 ಬೈಕ್ ಸಯಾನ್ ಸ್ಟಾರ್ಮ್, ರೇಸಿಂಗ್ ಬ್ಲೂ, ಐಸ್ ಫ್ಲೂ-ವರ್ಮಿಲಿಯನ್ ಮತ್ತು ಮೆಟಾಲಿಕ್ ಬ್ಲ್ಯಾಕ್‌ ಎಂಬ ನಾಲ್ಕು ಬಣ್ಣದ ಆಯ್ಕೆಗಳೊಂದಿಗೆ ಬರುತ್ತದೆ.

ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಹೊಸ ಯಮಹಾ ಎಂಟಿ-15 ಬೈಕ್ ಅದರ ಹಿಂದಿನ ಅದೇ ಪವರ್‌ಟ್ರೇನ್ ಅನ್ನು ಉಳಿಸಿಕೊಂಡಿದೆ. ಈ ಬೈಕ್ ನೇಕೆಡ್ ಸ್ಟ್ರೀಟ್‌ಫೈಟರ್ ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, SOHC, 4-ವಾಲ್ವ್, 155ಸಿಸಿ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ವೇರಿಯಬಲ್ ವಾಲ್ವ್ ಆಕ್ಚುಯೇಶನ್ (VVA) ಸಿಸ್ಟಮ್‌ ಅನ್ನು ಹೊಂದಿದೆ. ಈ ಎಂಜಿನ್ 10,000 ಆರ್‌ಪಿಎಂನಲ್ಲಿ 18.1 ಬಿಹೆಚ್‍ಪಿ ಪವರ್ ಮತ್ತು 7,500 ಆರ್‌ಪಿಎಂನಲ್ಲಿ 14 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಜೋಡಿಸಲಾಗಿದೆ.

ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಹೊಸ ಯಮಹಾ ಎಂಟಿ-15 ಬೈಕ್ ಅನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಪ್ರಮುಖವಾದ ಬದಲಾವಣೆಗಳನ್ನು ಸ್ವೀಕರಿಸುವುದಿಲ್ಲ. ವಾಸ್ತವವಾಗಿ, ಹುಬ್ಬು-ಆಕಾರದ ಎಲ್ಇಡಿ ಡಿಆರ್ಎಲಲ್ ಗಳೊಂದಿಗೆ ಸಿಂಗಲ್-ಪಾಡ್ ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲ್ಯಾಂಪ್ ಸೇರಿದಂತೆ ಅದರ ಹೆಚ್ಚಿನ ಸಿಗ್ನೇಚರ್ ವಿನ್ಯಾಸ ಅಂಶಗಳನ್ನು ಹೊರಹೋಗುವ ಮಾದರಿಯಿಂದ ಮುಂದಕ್ಕೆ ಸಾಗಿಸಲಾಗಿದೆ. ಹೊಸ ಯಮಹಾ ಎಂಟಿ-15 ಬೈಕ್ ಇತರ ಸ್ಟೈಲಿಂಗ್ ಮುಖ್ಯಾಂಶಗಳು ಮಸ್ಕಲರ್ ಬಾಡಿ, ಟೇಲ್ ವಿಭಾಗ ಮತ್ತು ಸೈಡ್-ಸ್ಲಂಗ್ ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಮಫ್ಲರ್ ಅನ್ನು ಒಳಗೊಂಡಿವೆ. ಒಟ್ಟಾರೆಯಾಗಿ ಈ ಹೊಸ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಯಮಹಾ ಎಂಟಿ-15 ವಿ2.0 ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಎಂಟಿ-15 ವಿ2.0 ಎಂದು ಕರೆಯಲ್ಪಡುವ 2022ರ ಯಮಹಾ ಎಂಟಿ-15 ನೇಕೆಡ್ ಸ್ಟ್ರೀಟ್‌ಫೈಟರ್‌ಗೆ ಅಗತ್ಯವಿರುವ ಕೆಲವು ವೈಶಿಷ್ಟ್ಯಗಳನ್ನು ಸೇರಿಸುತ್ತದೆ, ಹಿಂದಿನ ಮಾದರಿಗೆ ಹೋಲಿಸಿದರೆ ಬೆಲೆ ಏರಿಕೆಯ ಹೊರತಾಗಿಯೂ ಇನ್ನೂ ಉತ್ತಮ ಆಯ್ಕೆಯ ಬೈಕ್ ಆಗಿದೆ. ಹೊಸ ಬಣ್ಣದ ಆಯ್ಕೆಗಳೊಂದಿಗೆ ಈ ಯಮಹಾ ಎಂಟಿ-15 ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

More from DriveSpark

Article Published On: Friday, April 15, 2022, 12:49 [IST]
English summary
New yamaha mt 15 v2 0 accessories range introduced price details
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+