ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಸ್ಟಾರ್ಟ್ಅಪ್ ಕಂಪನಿಗಳು ಮುಂಚೂಣಿ ಸಾಧಿಸುತ್ತಿದ್ದು, ನಮ್ಮ ಬೆಂಗಳೂರು ಮೂಲದ ಒಬೆನ್ ಎಲೆಕ್ಟ್ರಿಕ್ ಕಂಪನಿಯು ಕೂಡಾ ಶೀಘ್ರದಲ್ಲಿಯೇ ತನ್ನ ಹೊಸ ಇವಿ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ಒಬೆನ್ ಇವಿ(OBEN EV) ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಆಧರಿಸಿ ಆಕರ್ಷಕವಾದ ಇವಿ ಬೈಕ್ ಮಾದರಿಯೊಂದನ್ನು ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ಬೈಕ್ ಮಾದರಿಯು ಇದೇ ತಿಂಗಳು 15ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳಲಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ಇವಿ ವಾಹನಗಳಿಗೆ ಉತ್ತಮ ಬೇಡಿಕೆ ಹರಿದುಬರುತ್ತಿರುವುದರಿಂದ ಒಬೆನ್ ಇವಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ವೈಶಿಷ್ಟ್ಯತೆಯ ಹೈ ಸ್ಪೀಡ್ ಇವಿ ಬೈಕ್ ಮಾದರಿಯನ್ನು ಅಭಿವೃದ್ದಿಪಡಿಸಿದ್ದು, ಹೊಸ ಇವಿ ಬೈಕ್ ಮಾದರಿಯು ರೊರ್(Rorr) ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ಒಬೆನ್ ಇವಿ ಕಂಪನಿಯ ಹೊಸ ಇವಿ ಬೈಕ್ ಮಾದರಿಯು ಮಾರುಕಟ್ಟೆಯಲ್ಲಿರುವ ಇತರೆ ಇವಿ ದ್ವಿಚಕ್ರ ವಾಹನ ಮಾದರಿಗಳಿಂತಲೂ ಅತ್ಯುತ್ತಮ ತಾಂತ್ರಿಕ ಅಂಶಗಳೊಂದಿಗೆ ಹೈ ಸ್ಪೀಡ್ ಮತ್ತು ಅಧಿಕ ಮೈಲೇಜ್ ಖಾತ್ರಿಪಡಿಸಿದ್ದು, ಹೊಸ ಒಬೆನ್ ಇವಿ ಬೈಕ್ ಮಾದರಿಯು ಪ್ರತಿ ಗಂಟೆಗೆ ಗರಿಷ್ಠ 100 ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ಆದರೆ ಹೊಸ ಬೈಕ್ ಮಾದರಿಯ ಬ್ಯಾಟರಿ ಮಾಹಿತಿ ಲಭ್ಯವಾಗಿಲ್ಲವಾದರೂ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯತೆಯೊಂದಿಗೆ ಕೇವಲ 2 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗಲಿದ್ದು, ಬೈಕ್ ಅನಾವರಣದ ಸಂದರ್ಭದಲ್ಲಿ ಹೊಸ ಇವಿ ಬೈಕಿಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಳು ಖರೀದಿಗೆ ಲಭ್ಯವಾಗಲಿವೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ವಿಶೇಷವೆಂದರೆ ಹೊಸ ಒಬೆನ್ ಇವಿ ಬೈಕ್ ಮಾದರಿಯು ನಮ್ಮ ಬೆಂಗಳೂರಿನಲ್ಲಿಯೇ ಸಿದ್ದವಾಗುತ್ತಿದ್ದು, ಬೆಂಗಳೂರಿನ ನಿವಾಸಿಗಳಾದ ದಿನಕರ್ ಮತ್ತು ಮಧುಮತಿ ಅಗರವಾಲ್ ದಂಪತಿಯು ಈ ಹೊಸ ಇವಿ ಬೈಕ್ ಮಾದರಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ಮೆಕ್ಯಾನಿಕಲ್ ಇಂಜಿನಿಯರಿಂಗ್ ವೃತ್ತಿ ಅನುಭವ ಹಿನ್ನಲೆ ಹೊಂದಿರುವ ದಿನಕರ್ ಅಗರ್‌ವಾಲ್ ಮತ್ತು ಮಧುಮತಿ ಅಗರವಾಲ್ ದಂಪತಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಒಬೆನ್ ಇವಿ ಬ್ರಾಂಡ್ ಹುಟ್ಟುಹಾಕಿದ್ದು, ಒಬೆನ್ ಬ್ರಾಂಡ್ ಅಡಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಇವಿ ಬೈಕ್ ಉತ್ಪಾದನಾ ಯೋಜನೆಗಾಗಿ ಒಬೆನ್ ಕಂಪನಿಯು ಮೊದಲ ಹಂತದಲ್ಲಿ ಸುಮಾರು ರೂ. 18 ಕೋಟಿ ಹೂಡಿಕೆಯೊಂದಿಗೆ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಪ್ರಮುಖ ನಾಲ್ಕು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ಮುಂದಿನ ಎರಡು ವರ್ಷಗಳಲ್ಲಿ ಕಂಪನಿಯು ಪ್ರತಿ ಆರು ತಿಂಗಳಿಗೆ ಒಂದರಂತೆ ಇವಿ ಬೈಕ್ ಬಿಡುಗಡೆ ಮಾಡುವ ಯೋಜನೆ ಹೊಂದಿರುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಪೋಟೋಟೈಪ್ ಮಾದರಿಯೊಂದಿಗೆ ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಇವಿ ಬೈಕ್ ಮಾದರಿಯ ನಿರ್ಮಾಣಕ್ಕಾಗಿ ಒಬೆನ್ ಕಂಪನಿಯು ಸಂಪೂರ್ಣವಾಗಿ ಸ್ಥಳೀಯವಾಗಿ ನಿರ್ಮಾಣದ ಬಿಡಿಭಾಗಗಳನ್ನೇ ಬಳಕೆ ಮಾಡುತ್ತಿದ್ದು, ಜೊತೆಗೆ ಹೊಸ ಇವಿ ಬೈಕ್ ಮಾದರಿಯ ರೈಡಿಂಗ್ ಸುಲಭಗೊಳಿಸಲು ಕನೆಕ್ಟೆಡ್ ಫೀಚರ್ಸ್ ನೀಡಲಾಗಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಬೈಕಿನಲ್ಲಿ ಸ್ಮಾರ್ಟ್ ಕನೆಕ್ಟ್ ಮೂಲಕ ಹಲವಾರು ತಾಂತ್ರಿಕ ಅಂಶಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದಾಗಿದ್ದು, ಈ ಮೂಲಕ ಹೊಸ ಬೈಕ್ ಮಾದರಿಯು ಸಾಂಪ್ರಾದಾಯಿಕ ವಾಹನಗಳಿಂದ ಇವಿ ವಾಹನಗಳತ್ತ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

ಒಬೆನ್ ಇವಿ ಕಂಪನಿಯು ಹೊಸ ಬೈಕ್ ಮಾದರಿಯನ್ನು ಇನ್ನಷ್ಟು ಹೊಸ ವೈಶಿಷ್ಟ್ಯತೆಗಳೊಂದಿಗೆ ಉತ್ಪಾದನಾ ಮಾದರಿಯನ್ನು ಶೀಘ್ರದಲ್ಲೇ ಅನಾವರಣಗೊಳಿಸಲಿದ್ದು, ಹೊಸ ಇವಿ ಬೈಕ್ ಮಾದರಿಯು ಈ ವರ್ಷದ ಮಧ್ಯಂತರದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ನೀಡುವ ಒಬೆನ್ ಇವಿ ಬೈಕ್ ಬಿಡುಗಡೆ ಮಾಹಿತಿ ಬಹಿರಂಗ

250 ಸಿಸಿ ಬೈಕ್ ಮಾದರಿಗಳ ಬಾಡಿ ಶೈಲಿ ಹೊಂದಿರುವ ಒಬೆನ್ ಇವಿ ಬೈಕ್ ಮಾದರಿಯು ಅತ್ಯುತ್ತಮ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, ಕೇವಲ 3 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗಪಡೆದುಕೊಳ್ಳುವುದರ ಜೊತೆಗೆ ಕ್ವಿಕ್ ಆಕ್ಸೆರೇಷನ್ ಮೂಲಕ ಯುವ ಗ್ರಾಹಕರ ಹಾಟ್ ಫೇವರಿಟ್ ಆಗಲಿದೆ.

ಹೊಸ ಬೈಕ್ ಮಾದರಿಗಾಗಿ ಸದ್ಯ ಯಾವುದೇ ಸ್ವತಂತ್ರ ಉತ್ಪಾದನಾ ಸೌಲಭ್ಯ ಹೊಂದಿರದ ಒಬೆನ್ ಇವಿ ಕಂಪನಿಯು ಉತ್ಪಾದನಾ ಸೌಲಭ್ಯಕ್ಕಾಗಿ ಶೀಘ್ರದಲ್ಲೇ ಹೊಸ ಯೋಜನೆಯನ್ನು ಪ್ರಕಟಿಸಬಹುದಾಗಿದ್ದು, ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.60 ಲಕ್ಷದಿಂದ ರೂ. 2 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

Article Published On: Thursday, March 10, 2022, 12:41 [IST]
English summary
Oben rorr hi speed electric bike to launch this month 15th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+