ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಓಲಾ ಎಲೆಕ್ಟ್ರಿಕ್ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಕಂಪನಿಯು ತನ್ನ ಓಲಾ ಫ್ಯೂಚರ್‌ಫೌಂಡ್ರಿ ತೆರೆಯುವ ಮೂಲಕ ಆಟೋ ಉದ್ಯಮದಲ್ಲಿ ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿರಿಸಿದೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಸುಧಾರಿತ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸಕ್ಕಾಗಿ ಗ್ಲೊಬಲ್ ಸೆಂಟರ್ ಅನ್ನು ಯುಕೆಯ ಕೋವೆಂಟ್ರಿಯಲ್ಲಿ ಆರಂಭಿಸಿದ್ದು, ಇದು ಭವಿಷ್ಯದ ಇವಿ ವಾಹನ ವಿನ್ಯಾಸಕ್ಕಾಗಿ ಓಲಾ ಎಲೆಕ್ಟ್ರಿಕ್‌ ಕಂಪನಿಯ ಜಾಗತಿಕ ಕೇಂದ್ರವಾಗಿದೆ. ಓಲಾ ಎಲೆಕ್ಟ್ರಿಕ್ ಕಂಪನಿಯು ಜಾಗತಿಕ ಕೇಂದ್ರದ ಮೇಲೆ ಮುಂದಿನ 5 ವರ್ಷಗಳಲ್ಲಿ ಹಂತ-ಹಂತವಾಗಿ 100 ಯುಎಸ್ ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದ್ದು, ಇದು ವಿಶ್ವದ ಅತ್ಯುತ್ತಮ ಆಟೋಮೋಟಿವ್ ವಿನ್ಯಾಸ ಮತ್ತು ಎಂಜಿನಿಯರಿಂಗ್ ಪ್ರತಿಭೆಗಳಿಗೆ ಜಾಗತಿಕ ಕೇಂದ್ರವಾಗಲಿದೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಓಲಾ ಫ್ಯೂಚರ್‌ಫೌಂಡ್ರಿಯು ಬೆಂಗಳೂರಿನಲ್ಲಿರುವ ಓಲಾ ಕ್ಯಾಂಪಸ್‌ನಲ್ಲಿರುವ ವಿನ್ಯಾಸ ಮತ್ತು ಎಂಜಿನಿಯರಿಂಗ್ ತಂಡಗಳೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸಲಿದ್ದು,ಇದು ದ್ವಿಚಕ್ರ ಮತ್ತು ಕಾರು ವಿನ್ಯಾಸ, ಸುಧಾರಿತ ಉನ್ನತ-ಕಾರ್ಯಕ್ಷಮತೆಯ ಆಟೋಮೋಟಿವ್ ಇಂಜಿನಿಯರಿಂಗ್, ಡಿಜಿಟಲ್ ಮತ್ತು ಫಿಸಿಕಲ್ ಮಾಡೆಲಿಂಗ್ ಸಂಬಂಧಿಸಿದಂತೆ ಕಂಪನಿಗೆ ಸಹಕಾರ ನೀಡಲಿದೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಓಲಾ ಫ್ಯೂಚರ್‌ಫೌಂಡ್ರಿಯ ಗ್ಲೊಬಲ್ ಸೆಂಟರ್‌ನಲ್ಲಿ 200ಕ್ಕೂ ಹೆಚ್ಚು ವಿನ್ಯಾಸಕರು ಮತ್ತು ಆಟೋಮೋಟಿವ್ ಎಂಜಿನಿಯರ್‌ಗಳನ್ನು ಒಳಗೊಂಡ ಸಿಬ್ಬಂದಿಯನ್ನು ಹೊಂದಿದ್ದು, ಇದು ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಕರಿಸಲು ಯುಕೆಯಲ್ಲಿನ ವಿಶ್ವ ದರ್ಜೆಯ ಪ್ರಮುಖ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಸಹ ಹೊಂದಿದೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಈ ಮೂಲಕ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ವಾಹನಗಳ ವಿನ್ಯಾಸವನ್ನು ರಚಿಸಲು ಓಲಾ ಫ್ಯೂಚರ್‌ಫೌಂಡ್ರಿ ಅದ್ಭುತ ಆಟೋಮೋಟಿವ್ ವಿನ್ಯಾಸ ಮತ್ತು ಎಂಜಿನಿಯರಿಂಗ್ ಪ್ರತಿಭೆಯನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಓಲಾ ಸಂಸ್ಥಾಪಕ ಭಾವಿಶ್ ಅಗರ್‌ವಾಲ್ ಮಾಹಿತಿ ಹಂಚಿಕೊಂಡಿದೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಜೊತೆಗೆ ಓಲಾ ಫ್ಯೂಚರ್‌ಫೌಂಡ್ರಿ ಮೂಲಕ ನಾವು ಪ್ರಪಂಚದಾದ್ಯಂತ ವಿದ್ಯುತ್ ವಾಹನಗಳನ್ನು ಕೈಗೆಟುಕುವಂತೆ ಮಾಡುವುದರಿಂದ ಚಲನಶೀಲತೆಯ ಭವಿಷ್ಯವನ್ನು ನಿರ್ಮಿಸಲು ಇದು ನಮಗೆ ಸಹಾಯ ಮಾಡಿದ್ದು, ಬೆಂಗಳೂರಿನಲ್ಲಿರುವ ನಮ್ಮ ಪ್ರಧಾನ ಕಚೇರಿಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ಭಾವಿಶ್ ಅಗರ್‌ವಾಲ್ ಹೊಸ ಯೋಜನೆಯ ಬಗೆಗೆ ಹೆಮ್ಮೆ ವ್ಯಕ್ತಪಡಿದ್ದಾರೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಭಾರತದ ಇವಿ ಮಾರುಕಟ್ಟೆಯು ಕಳೆದ ಕೆಲ ವರ್ಷಗಳಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಕಂಡಿದ್ದು, ಹೊಸ ಫೇಮ್ 2 ಯೋಜನೆ ಮತ್ತು ಇವಿ ವಾಹನಗಳನ್ನು ಅಳವಡಿಸಿಕೊಳ್ಳುವ ಗ್ರಾಹಕರಿಗೆ ವಿವಿಧ ರಾಜ್ಯ ಸರ್ಕಾರಗಳ ಪ್ರೋತ್ಸಾಹದಂತಹ ಸರ್ಕಾರದ ನೀತಿಗಳು ಇವಿ ಯೋಜನೆಗೆ ಸಹಕಾರಿಯಾಗಿದ್ದು, ಓಲಾ ಫ್ಯೂಚರ್‌ಫೌಂಡ್ರಿ ಮೂಲಕ ನಾವು ಇನ್ನಷ್ಟು ಬೆಳವಣಿಗೆ ಸಾಧಿಸಲಿದ್ದೇವೆ ಎಂದು ಓಲಾ ಎಲೆಕ್ಟ್ರಿಕ್‌ನ ವೆಹಿಕಲ್ ಡಿಸೈನ್‌ ಉಪಾಧ್ಯಕ್ಷ ವೇಯ್ನ್ ಬರ್ಗೆಸ್ ಭಾರತ ಸರ್ಕಾರದ ಉಪಕ್ರಮಗಳನ್ನು ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಇನ್ನು ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಎಸ್1 ಮತ್ತು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆಯ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಕೇವಲ ದ್ವಿಚಕ್ರ ವಾಹನಗಳನ್ನು ಮಾತ್ರವಲ್ಲ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

2030ರ ವೇಳೆಗೆ ದೇಶಾದ್ಯಂತ ಶೇ.50ಕ್ಕಿಂತಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಮಾರಾಟಗೊಳ್ಳಬೇಕೆಂಬ ಮಹತ್ವದ ಗುರಿಹೊಂದಲಾಗಿದ್ದು, ಕೇಂದ್ರ ಸರ್ಕಾರದ ನಿರ್ಣಯದಂತೆ ಆಟೋ ಉತ್ಪಾದನಾ ಕಂಪನಿಗಳು ಇವಿ ವಾಹನಗಳ ಉತ್ಪಾದನೆಯತ್ತ ಗಮನಹರಿಸಿವೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಮಾರುಕಟ್ಟೆಗೆ ಈಗಾಗಲೇ ವಿವಿಧ ಹಲವು ಹೊಸ ಎಲೆಕ್ಟ್ರಿಕ್ ವಾಹನಗಳು ಪ್ರವೇಶಿಸಿದ್ದು, ಓಲಾ ಕಂಪನಿಯು ತನ್ನ ಸಹ ಹೊಸ ಎಸ್ ಸರಣಿ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ಡಿಸೈನ್ ಪ್ರೇರಿತ, ಧೀರ್ಘಕಾಲಿಕ ಬ್ಯಾಟರಿ ರೇಂಜ್ ಹೊಂದಿರುವ ಸ್ಕೂಟರ್ ಬಿಡುಗಡೆ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಓಲಾ ಕಂಪನಿಯು ಭವಿಷ್ಯದಲ್ಲಿ ಬೃಹತ್ ಯೋಜನೆಗಳೊಂದಿಗೆ ಆಟೋ ಉತ್ಪಾದನಾ ವಲಯದಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ವಿವಿಧ ವಾಹನ ಉತ್ಪಾದನಾ ಕಂಪನಿಗಳ ಸ್ಪರ್ಧೆಯ ನಡುವೆಯೂ ಮೊದಲ ಹಂತದಲ್ಲೇ ಬಜೆಟ್ ಬೆಲೆಯೊಂದಿಗೆ ಅತ್ಯಧಿಕ ಬ್ಯಾಟರಿ ರೇಂಜ್ ಹೊಂದಿರುವ ಸ್ಕೂಟರ್ ಬಿಡುಗಡೆ ಮಾಡಿರುವ ಓಲಾ ಕಂಪನಿಯು ಪ್ರಯಾಣಿಕ ಕಾರು ವಿಭಾಗಕ್ಕೂ ಹೊಸ ಎಲೆಕ್ಟ್ರಿಕ್ ಕಾರು ಉತ್ಪನ್ನಗಳೊಂದಿಗೆ ಲಗ್ಗೆಯಿಡುವ ಸುಳಿವು ನೀಡಿದೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಇವಿ ಸ್ಕೂಟರ್ ಬಿಡುಗಡೆಯ ನಂತರ ಮುಂದಿನ ಯೋಜನೆ ಕುರಿತಾಗಿ ಮಹತ್ವದ ಸುಳಿವು ನೀಡಿರುವ ಓಲಾ ಕಂಪನಿಯ ಸಿಇಒ ಭಾವಿಶ್ ಅಗರ್‌ವಾಲ್ ಅವರು ಶೀಘ್ರದಲ್ಲಿಯೇ ಎಲೆಕ್ಟ್ರಿಕ್ ಕಾರನ್ನು ಸಹ ಬಿಡುಗಡೆಯ ಮಾಹಿತಿ ನೀಡಿದ್ದು, ಗ್ರಾಹಕರೊಬ್ಬರಿಗೆ ಟ್ವಿಟರ್ ಪ್ರಕ್ರಿಯೆಯ ಮೂಲಕ ನಿಮ್ಮ ಮುಂಬರುವ ಇವಿ ಕಾರು ಓಲಾ ನಿರ್ಮಾಣದ್ದೆ ಆಗಿರಲಿ ಎಂದಿದ್ದಾರೆ.

ಯುಕೆಯಲ್ಲಿ ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ ಓಲಾ ಎಲೆಕ್ಟ್ರಿಕ್

ಓಲಾ ಇವಿ ಕಾರು ಬಿಡುಗಡೆಯ ಕುರಿತಂತೆ ಈ ಹಿಂದೆಯೂ ಗ್ರಾಹಕರರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಓಲಾ ಕಂಪನಿಯ ಮುಖ್ಯಸ್ಥರು ಹೊಸ ಯೋಜನೆಗಾಗಿ ಬೃಹತ್ ಪ್ರಮಾಣದ ಯೋಜನೆಯನ್ನೇ ಸಿದ್ದಗೊಳಿಸಲಾಗುತ್ತಿದೆ ಎಂದಿದ್ದರು.

Article Published On: Friday, January 28, 2022, 12:40 [IST]
English summary
Ola electric to setup global center for advanced engineering and vehicle design in uk
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+