ಪ್ರತಿಸ್ಪರ್ಧಿಗಳಿಗೆ ಆಘಾತ ನೀಡಿದ ಓಲಾ: ಅದರ ಮುಂದಿನ ಯೋಜನೆಗಳು ಬಹಿರಂಗ

Ola Electric ತನ್ನ ಗ್ರಾಹಕರಿಗಾಗಿ MoveOS-3 ಅಪ್ಡೇಟ್ ಪರಿಚಯಿಸಿದ್ದು, ಇದೀಗ ಭವಿಷ್ಯದ ಯೋಜನೆಗಳನ್ನು ಪ್ರಕಟಿಸಿದೆ. ಕಂಪನಿಯು ಇತ್ತೀಚೆಗೆ S1 ಏರ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಿತ್ತು. ಇದರ ಬೆಲೆ 80,000 ರೂ. ಇದ್ದು, ಈ ಮೂಲಕ ಹೆಚ್ಚಿನ ಖರೀದಿದಾರರನ್ನು ಸೆಳೆಯಲು ಓಲಾ ಸಜ್ಜಾಗಿದೆ.

ಸಸ್ಪೆನ್ಷನ್ ವೈಫಲ್ಯ ಮತ್ತು ಸಾಫ್ಟ್‌ವೇರ್ ಗ್ಲಿಚ್‌ಗಳಂತಹ ಕೆಲವು ಸಮಸ್ಯೆಗಳ ಹೊರತಾಗಿಯೂ, ಓಲಾ, ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಉತ್ತಮವಾಗಿ ಮುನ್ನುಗುತ್ತಿದೆ. ಮಾರಾಟದ ಅಂಕಿಅಂಶಗಳು ಸಹ ಅದನ್ನು ಸಾಬೀತುಪಡಿಸುತ್ತಿವೆ. ಓಲಾ ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್ ಆಗಿದೆ. ಕಳೆದ ತಿಂಗಳು ತನ್ನ ಬರೋಬ್ಬರಿ 16,000 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಓಲಾ ಸಿಇಒ ಭವಿಶ್ ಅಗರ್ವಾಲ್ ಬ್ಲಾಗ್ ಪೋಸ್ಟ್‌ನಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ.

ಪ್ರತಿಸ್ಪರ್ಧಿಗಳಿಗೆ ಆಘಾತ ನೀಡಿದ ಓಲಾ: ಅದರ ಮುಂದಿನ ಯೋಜನೆಗಳು ಬಹಿರಂಗ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಎಂಟ್ರಿಕೊಟ್ಟ ಕೇವಲ ಒಂದು ವರ್ಷದಲ್ಲಿ ಶೇಕಡ 1 ರಿಂದ ಶೇಕಡ 6 ರಷ್ಟು ಪ್ರಗತಿ ಸಾಧಿಸಲಾಗಿದೆ. ಓಲಾ ಎಲೆಕ್ಟ್ರಿಕ್ 2022ರಲ್ಲಿ ಸುಮಾರು 1,50,000 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿ, ದಾಖಲೆ ನಿರ್ಮಿಸಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಸಂಖ್ಯೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಜನಪ್ರಿಯತೆ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. ಬುಕ್ಕಿಂಗ್ ಆರಂಭವಾಗಿದಾಗಿನಿಂದಲೇ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುದ್ದಿಯಾಗಿದ್ದವು. 2023ರಲ್ಲಿ ಈ ಮಾರಾಟ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ಬ್ಲಾಗ್ ಪೋಸ್ಟ್‌ನಲ್ಲಿ, ದೇಶದ ದ್ವಿಚಕ್ರ, ನಾಲ್ಕು ಚಕ್ರಗಳ ವಾಹನ ಮಾರುಕಟ್ಟೆಗೆ ಪ್ರವೇಶಿಸುವ ಸಂಬಂಧ ಓಲಾ ಭವಿಷ್ಯದ ಮಾರ್ಗಸೂಚಿಯನ್ನು ಬಹಿರಂಗಪಡಿಸಲಾಗಿದೆ. ಕಂಪನಿಯು 'ICE ಚಾಲಿತ ವಾಹನಗಳ ಯುಗದ ಅಂತ್ಯ'ವನ್ನು ಸೂಚಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂಬುದನ್ನು ತಿಳಿಸಿದ್ದು, 2025ರ ವೇಳೆಗೆ ಎಲ್ಲಾ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಾಗಿ ಹಾಗೂ 2030ರ ವೇಳೆಗೆ ಎಲ್ಲಾ ಪ್ಯಾಸೆಂಜರ್ ವಾಹನಗಳನ್ನು ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನಗಳಾಗಿ ಬದಲಾವಣೆ ಮಾಡುವುದು ಓಲಾದ ಪ್ರಮುಖ ಉದ್ದೇಶವಾಗಿದೆ.

ಭಾರತದಂತಹ ಅಭಿವೃದ್ಧಿಶೀಲ ಮಾರುಕಟ್ಟೆಗಳಲ್ಲಿ ಇದು ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ, ಭರವಸೆಯಂತೂ ಖಂಡಿತಯಿದೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಭವಿಶ್ ಹೇಳುತ್ತಾರೆ. ಶೀಘ್ರದಲ್ಲೇ ವಾಣಿಜ್ಯ ವಿಭಾಗದಲ್ಲಿಯೂ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಓಲಾ ಹೇಳಿದೆ. ACC PLI ಯೋಜನೆಯಡಿಯಲ್ಲಿ, ಓಲಾಗೆ ಕೇಂದ್ರ ಸರ್ಕಾರವು 20 GWh ಸಾಮರ್ಥ್ಯದ ಬ್ಯಾಟರಿಗಳನ್ನು ತಯಾರಿಸಲು ಅನುಮತಿ ನೀಡಿದೆ. ಇವಿಗಳನ್ನು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಓಲಾದ ಮೊದಲ ಹೆಜ್ಜೆ ಇದಾಗಿದೆ. ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಬ್ಯಾಟರಿಗಳು, ಕಡಿಮೆ ಬೆಲೆ ಹೊಂದಿರಲಿದ್ದು, ಇದರಿಂದ ಇವಿಗಳ ಒಟ್ಟಾರೆ ವೆಚ್ಚ ಕೊಂಚ ಇಳಿಕೆಯಾಗುತ್ತದೆ.

ಬ್ಲಾಗ್ ಪೋಸ್ಟ್‌ನಲ್ಲಿ, ಮಾರುಕಟ್ಟೆಯಲ್ಲಿ ವಿವಿಧ ವಿಭಾಗದಲ್ಲಿ ಮುಂಬರಲಿರುವ ಓಲಾದ 6 ಭವಿಷ್ಯದ ವಾಹನಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಓಲಾ 2023ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೀಡಲು ಸಿದ್ಧವಾಗಿದೆ. ಇದು ಸುಮಾರು 70,000 ರೂ.ಗಳ ಸಾಮಾನ್ಯ ಬೆಲೆಯೊಂದಿಗೆ ಎಂಟ್ರಿ ಕೊಡಬಹುದು. 110 ಸಿಸಿವರೆಗಿನ ICE ಸ್ಕೂಟರ್‌ಗಳನ್ನು ಗುರಿಯಾಗಿರಿಸಿಕೊಂಡಿದ್ಧು, ಅವುಗಳಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಪ್ರತಿಸ್ಪರ್ಧಿಯಾಗಲಿದೆ. 2024ರಲ್ಲಿ ಓಲಾ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ.

ಕಂಪನಿಯು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ನಂತರ, ಪ್ರೀಮಿಯಂ ಪ್ರಯಾಣಿಕ ಖರೀದಿದಾರರಿಗೆ ಪ್ರೀಮಿಯಂ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. 2025ರಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ. ಆ ಬಳಿಕ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಲಾಂಚ್ ಮಾಡಲಿದ್ದು, ಅಂತಿಮವಾಗಿ, 2026ಕ್ಕೆ ಎಲೆಕ್ಟ್ರಿಕ್ ಕಾರ್ ವಿಭಾಗಕ್ಕೆ ಓಲಾ ಪ್ರವೇಶಿಸಲಿದೆ. ಪ್ರಸ್ತುತ, ಟಾಟಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಭವಿಷ್ಯದಲ್ಲಿ ಓಲಾ ಮಾರ್ಗಸೂಚಿ ಹೇಗೆ ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು, ಓಲಾ S1 ಏರ್ ಬಗ್ಗೆ ಹೇಳುವುದಾದರೆ, ಇದು ಕಡಿಮೆ ಬೆಲೆಗೆ ಖರೀದಿಗೆ ಸಿಗಲಿದ್ದು, S1 ಮತ್ತು S1 Proಗಿಂತ ಕೆಲವು ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಈ ರೂಪಾಂತರವು 5 ಬಣ್ಣಗಳಲ್ಲಿ ಲಭ್ಯವಿದೆ. ಅವುಗಳೆಂದರೆ, ಕೋರಲ್ ಗ್ಲಾಮ್, ಜೆಟ್ ಬ್ಲಾಕ್, ಲಿಕ್ವಿಡ್ ಸಿಲ್ವರ್, ನಿಯೋ ಮಿಂಟ್, ಪೊರ್ಚೆಲೈನ್ ವೈಟ್, ಈ ಸ್ಕೂಟರ್ ಸಂಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 101 ಕಿ.ಮೀ ರೇಂಜ್ ನೀಡಲಿದೆ. ಚಾರ್ಜಿಂಗ್ ಸಮಯ 4 ಗಂಟೆಗಳು 30 ನಿಮಿಷಗಳು ಇದೆ.

More from DriveSpark

Article Published On: Saturday, December 31, 2022, 10:30 [IST]
English summary
Ola reveals next plans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+