ಭಾರತದ ಯುವ ಗ್ರಾಹಕರ ಮನಗೆದ್ದ ಈ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು...

ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದ್ದು, ಇದರ ಬೈಕ್ ಗಳು ದಾಖಲೆಯ ಮಾರಾಟವಾಗುತ್ತಿದೆ. ಸತತವಾಗಿ ಕ್ಲಾಸಿಕ್ 350 ಮಾರಾಟದಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿದೆ. ಇದರ ಬಳಿಕ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಹಂಟರ್ 350 ಕೂಡ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ರಾಯಲ್ ಎನ್‌ಫೀಲ್ಡ್ ಕಳೆದ ವರ್ಷ ಹೊಸ ತಲೆಮಾರಿನ ಕ್ಲಾಸಿಕ್ 350 ಅನ್ನು ಬಿಡುಗಡೆಗೊಳಿತು, , ಇದು ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮಧ್ಯಮ ತೂಕದ ಮೋಟಾರ್‌ಸೈಕಲ್ ಅನ್ನು ಆಧುನಿಕತೆಯೊಂದಿಗೆ ಮಿಂಚುತ್ತಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಕಳೆದ ತಿಂಗಳು ಬ್ರ್ಯಾಂಡ್‌ನ ಸ್ಥಳೀಯ ಪೋರ್ಟ್‌ಫೋಲಿಯೊದಲ್ಲಿ ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್ ಆಗಿ ಮುಂದುವರೆದಿದೆ, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಕಳೆದ ತಿಂಗಳು ಬ್ರ್ಯಾಂಡ್‌ನ ಸ್ಥಳೀಯ ಪೋರ್ಟ್‌ಫೋಲಿಯೊದಲ್ಲಿ ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್ ಆಗಿ ಮುಂದುವರೆದಿದೆ.

ಭಾರತದ ಯುವ ಗ್ರಾಹಕರ ಮನಗೆದ್ದ ಈ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು...

ಏಕೆಂದರೆ 2021 ರಲ್ಲಿ ಅದೇ ಅವಧಿಯಲ್ಲಿ 19,601 ಯುನಿಟ್‌ಗಳ ವಿರುದ್ಧ 26,702 ಯುನಿಟ್‌ಗಳು ದಾಖಲಾಗಿವೆ. 2022ರ ನವೆಂಬರ್ ತಿಂಗಳಿನಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಒಂಬತ್ತನೇ ಮೋಟಾರ್‌ಸೈಕಲ್ ಆಗಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮಾದರಿಯು ರೆಡ್‌ಡಿಚ್, ಹಾಲ್ಕೈನ್, ಸಿಗ್ನಲ್ಸ್, ಡಾರ್ಕ್ ಮತ್ತು ಕ್ರೋಮ್ ಎಂಬ ಐದು ವೆರಿಯೆಂಟ್ ಗಳಲ್ಲಿ ಲಭ್ಯವಿದೆ, ಈ ಹೊಸ ಬೈಕ್ J1A ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗಿದೆ. ಈ ಬೈಕ್ ಮಾದರಿಯು ಮಿಟಿಯೊರ್ 350 ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದೆ.

ಈ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಸಸ್ಷೆಂಷನ್ ಸೆಟಪ್ ಮತ್ತು ಬ್ರೇಕಿಂಗ್ ಸಿಸ್ಟಂ ಅನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಿದೆ, ಈ ಹೊಸ ಬೈಕಿನಲ್ಲಿ ಫ್ಯೂಲ್ ಗೇಜ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಪ್ರಮುಖ ಆಕರ್ಷಣೆಯಾಗಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಮಿಟಿಯೊರ್ 350 ಮಾದರಿಗಾಗಿ ಪರಿಚಯಿಸಿರುವ 349 ಸಿಸಿ SOHC ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 19.1 ಬಿಎಚ್‌ಪಿ ಪವರ್ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ, ಇನ್ನು ಈ ಹಿಂದಿನ ಮಾದರಿಗಳಲ್ಲಿ ಇದ್ದ ವೈಬ್ರೆಷನ್ ಪ್ರಮಾಣವು ಗಣನೀಯವಾಗಿ ಸುಧಾರಣೆಯಾಗಿದೆ. ಜೊತೆಗೆ ಎಲೆಕ್ಟ್ರಾನಿಕ್ಸ್ ಸೌಲಭ್ಯಗಳು ಬೈಕ್ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದ್ದು, ಹೊಸ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಎಲ್‌ಸಿಡಿ ಜೊತೆಗೆ ಪ್ರತ್ಯೇಕವಾದ ಫ್ಯೂಲ್ ಗೇಜ್ ಮತ್ತು ಟ್ರಿಪ್ಲರ್ ಮೀಟರ್ ನೀಡಲಾಗಿದ್ದು, ಮಿಟಿಯೊರ್ ಮಾದರಿಯಲ್ಲಿರುವಂತೆ ಪ್ರತ್ಯೇಕವಾದ ಟ್ವಿನ್ ಪಾಡ್ ನೀಡದೆ ಇಂಟ್ರಾಗ್ರೆಟೆಡ್ ಮಾಡಲಾಗಿದೆ.

ಟಾಪ್ ಎಂಡ್ ಮಾದರಿಗಳಿಗಾಗಿ ಮಾತ್ರವೇ ಕಂಪನಿಯು ಟ್ರಿಪ್ಪರ್ ಮೀಟರ್ ಅನ್ನು ಜೋಡಣೆ ಮಾಡಿದ್ದು, ಈ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮೂಲಕ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಹೊಸ ಬೈಕಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಬದಲಾಗಿ ಹಾಲೊಜೆನ್ ಬಲ್ಬ್ ಬಳಕೆ ಮಾಡಿದೆ. ಇದರ ಹೆಡ್‌ಲ್ಯಾಂಪ್ ಮಾತ್ರವಲ್ಲ ಟೈಲ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಹಾಲೊಜೆನ್ ಬಲ್ಬ್ ಸಹ ನೀಡಿದೆ, ಈ ಬೈಕ್ ಮಾದರಿಯನ್ನು ಸಿಂಗಲ್ ಕ್ರೆಡಲ್ ಫ್ರೆಮ್ ಬದಲಾಗಿ ಡ್ಯುಯಲ್ ಡೌನ್ ಟ್ಯೂಬ್ ಚಾರ್ಸಿ‌ಯೊಂದಿಗೆ ಅಭಿವೃದ್ದಿಗೊಳಿಸಿದೆ.

ಇನ್ನು ರಾಯಲ್ ಎನ್‌ಫೀಲ್ಡ್ ಹಂಟರ್ 350, ಕಳೆದ ತಿಂಗಳು 15,588 ಯುನಿಟ್‌ಗಳನ್ನು ನೋಂದಾಯಿಸಿದ್ದರಿಂದ ಭಾರತದಲ್ಲಿ ಹತ್ತನೇ ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್ ಆಗಿದೆ. ಕ್ಲಾಸಿಕ್ 350 ಮತ್ತು ಹಂಟರ್ 350 ರ ಸಂಯೋಜಿತ ಮಾರಾಟವು 42,290 ಯುನಿಟ್‌ಗಳಷ್ಟಿದೆ. ಈ ಹಂಟರ್ 350 ಯಶಸ್ಸಿಗೆ ಪ್ರಮುಖ ಕಾರಣವೆಂದರೆ ಅದರ ಉತ್ತಮ ರೈಡ್ ಗುಣಮಟ್ಟ ಮತ್ತು ಪ್ರಸ್ತುತ ಲಭ್ಯವಿರುವ ಹಗುರವಾದ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಆಗಿದ್ದು, ಇದು ಉತ್ತಮ ಗುಣಲಕ್ಷಣಗಳನ್ನು ಹೊಂದಿದೆ.

ಹಂಟರ್ 350 ಇತ್ತೀಚಿನ ಕ್ಲಾಸಿಕ್ 350 ಮತ್ತು ಮೆಟಿಯರ್ 350 ರಂತೆಯೇ ಅದೇ ಟ್ವಿನ್ ಕ್ರೇಡಲ್ ಚಾಸಿಸ್‌ನಿಂದ ಸಾಕಷ್ಟು ಯಾಂತ್ರಿಕ ಬಿಟ್‌ಗಳನ್ನು ಹಂಚಿಕೊಳ್ಳುತ್ತದೆ. ಈ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನಲ್ಲಿ ಡ್ವಯಲ್ ಟೋನ್ ಹೊಂದಿರುವ ಟಿಯರ್-ಡ್ರಾಪ್ ವಿನ್ಯಾಸದ ಇಂಧನ ಟ್ಯಾಂಕ್, ಉದ್ದವಾದ ಸಿಂಗಲ್-ಪೀಸ್ ಸೀಟ್, ವೃತ್ತಾಕಾರವಾದ ಹಾಲೋಜೆನ್ ಹೆಡ್‌ಲ್ಯಾಂಪ್‌ಗಳು, ಟರ್ನ್ ಇಂಡಿಕೇಟರ್‌ಗಳು, ರಿಯರ್-ವ್ಯೂ ಮಿರರ್‌ಗಳು ಮತ್ತು ಸ್ವಲ್ಪ ಎತ್ತರದ ವಿನ್ಯಾಸದೊಂದಿಗೆ ಸ್ಕ್ರ್ಯಾಂಬ್ಲರ್ ಮಾದರಿಯಾಗಿರುವುದು ಸ್ಪಷ್ಟವಾಗುತ್ತದೆ.

Most Read Articles

Kannada
English summary
Royal enfield 42000 units of sold hunter classic in nov 2022 details
Story first published: Tuesday, December 27, 2022, 19:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X