ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯ ಇಂಟರ್‌ಸೆಪ್ಟರ್ 650 (Interceptor 650) ಮತ್ತು ಕಾಂಟಿನೆಂಟಲ್ ಜಿಟಿ650 (Continental GT 650) ಎಂಬ ಟ್ವಿನ್ ಬೈಕ್‌ಗಳ ಬೆಲೆಗಳನ್ನು ರೂ.4,681 ವರೆಗೆ ಹೆಚ್ಚಿಸಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಕಂಪನಿಯ ಇಂಟರ್‌ಸೆಪ್ಟರ್ 650 (Interceptor 650) ಮತ್ತು ಕಾಂಟಿನೆಂಟಲ್ ಜಿಟಿ650 (Continental GT 650) ಎಂಬ ಟ್ವಿನ್ ಬೈಕ್‌ಗಳು ಬಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಭಾರತದಲ್ಲಿ ಇತ್ತೀಚಿಗೆ ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿಗಳಾದಯೆ ಯಜ್ಡಿ ಬೈಕ್‌ಗಳು ಬಿಡುಗಡೆಯಾಗಿವೆ. ಇದರಿಂದ ರಾಯಲ್ ಎನ್‌ಫೀಲ್ಡ್ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ 650 ಟ್ವಿನ್ ಬೈಕ್‌ಗಳನ್ನು ಭಾರತದಲ್ಲಿ ಮೊದಲು ಬಿಡುಗಡೆಗೊಳಿಸಲಾಯಿತು.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ 2021ರ ಮಾದರಿಯಾಗಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಿತ್ತು. ಇದೀಗ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಮಾಡೆಲ್‌ಗಳು ಬೆಲೆ ಏರಿಕೆಯ ಹೊರತಾಗಿಯೂ ಮೆಕ್ಯಾನಿಕಲ್ ಅಪ್‌ಗ್ರೇಡ್‌ಗಳು ಅಥವಾ ಕಾಸ್ಮೆಟಿಕ್ ಬದಲಾವಣೆಗಳ ವಿಷಯದಲ್ಲಿ ಯಾವುದೇ ನವೀಕರಣಗಳನ್ನು ಸ್ವೀಕರಿಸಿಲ್ಲ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ಈ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಬೈಕ್‌ಗಳು ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿತ್ತು. ಈ ಎರಡು ಟ್ವಿನ್ ಬೈಕ್‌ಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್-ಗ್ಯಾಸ್ ಚಾರ್ಜ್ಡ್ ಶಾಕ್ ಗಳು 5-ಹಂತದ ಹೊಂದಾಣಿಕೆಯೊಂದಿಗೆ ಪ್ರಿ-ಲೋಡ್ ಡ್ಯಾಂಪಿಂಗ್‌ಗಾಗಿ ನಿರ್ವಹಿಸುತ್ತವೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ಪ್ರಮುಖವಾಗಿ ಈ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಬೈಕ್‌ಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ಈ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಬೈಕ್‌ಗಳಲ್ಲಿ ಹಿಂದಿನ ಮಾದರಿಗಳಲ್ಲಿರುವ ಅದೇ, 649ಸಿಸಿ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,250 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 5,250 ಆರ್‌ಪಿಎಂನಲ್ಲಿ 52 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ಈ ಟ್ವಿನ್ ಬೈಕ್‌ಗಳಲ್ಲಿ 18 ಇಂಚಿನ ಸ್ಪೋಕ್ಡ್ ವ್ಹೀಲ್ ಗಳನ್ನು ಹೊಂದಿವೆ. ಎರಡು ಬೈಕ್‌ಗಳ ವಿನ್ಯಾಸವು ಬದಲಾಗದೆ ಉಳಿದಿದೆ. ಇದು ಒಂದೇ ಮಾದರಿಯ ಹೆಡ್‌ಲ್ಯಾಂಪ್‌ಗಳು, ಟೈಲ್‌ಲ್ಯಾಂಪ್‌ಗಳು, ಟ್ವಿನ್ ಎಕ್ಸಾಸ್ಟ್ ಸೆಟಪ್, ಸಿಂಗಲ್-ಪೀಸ್ ಫ್ಲಾಟ್ ಸೀಟ್ ಮತ್ತು ಹೆಚ್ಚಿನದನ್ನು ಹೊಂದಿದೆ.

Interceptor 650
Colour Variant New Price Old Price Difference
Canyon Red / Ventura Blue / Orange Crush ₹2,88,815 ₹2,85,970 ₹2,845
Downtown Drag / Sunset Strip / Baker Express ₹2,97,229 ₹2,94,383 ₹2,846
Mark 2 ₹3,14,682 ₹3,10,001 ₹4,681
ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ಈ ಹೊಸ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ಉತ್ತಮ ಸೀಟಿಂಗ್ ಪೊಷಿಷನ್ ಅನ್ನು ಹೊಂದಿದೆ. ಇನ್ನು ಕಾಂಟಿನೆಂಟಲ್ ಜಿಟಿ 650 ಅದರ ಉದ್ದವಾದ ಟ್ಯಾಂಕ್ ವಿನ್ಯಾಸ ಮತ್ತು ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳೊಂದಿಗೆ ಹೆಚ್ಚು ಅಗ್ರೇಸಿವ್ ಲುಕ್ ನಿಂದ ಕೂಡಿದೆ.

Continental GT 650
Colour Variant New Price Old Price Difference
Rocker Red / British Racing Green ₹3,05,624 ₹3,02,780 ₹2,844
Ventura Storm / Dux Deluxe ₹3,14,038 ₹3,11,193 ₹2,845
Mr Clean ₹3,31,568 ₹3,26,887 ₹4,681
ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ಇನ್ನು ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಬೈಕ್‌ಗಳಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ನೀಡಲಾಗಿಲ್ಲ. ಆದರೆ ಕಸ್ಟಮೈಸ್ ಮಾಡಲು ಆಯ್ಕೆಯನ್ನು ರಾಯಲ್ ಎನ್‍ಫೀಲ್ಡ್ ಸಹ ಕಂಪನಿ ನೀಡಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಕಂಪನಿಯು 2022ರ ಏಪ್ರಿಲ್ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು 53,852 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. 2021ರ ಏಪ್ರಿಲ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 48,789 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 10 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಬೆಳವಣಿಗೆಯ ಸಂಖ್ಯೆಗಳು ಅಂತಿಮವಾಗಿ ತಮಿಳುನಾಡು ಮೂಲದ ಮೋಟಾರ್‌ಸೈಕಲ್ ತಯಾರಕರ ಮಾರಾಟಕ್ಕೆ ಚೇತರಿಕೆಯ ಹಾದಿಯನ್ನು ತೋರಿಸುತ್ತವೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ಕಳೆದ ಹಣಕಾಸು ವರ್ಷದಲ್ಲಿ (FY2021-22) ನಿರೀಕ್ಷೆಗಿಂತ ಕಡಿಮೆಯಾಗಿದೆ. ರಾಯಲ್ ಎನ್‌ಫೀಲ್ಡ್ ಕಳೆದ ತಿಂಗಳು ಒಟ್ಟು (ದೇಶೀಯ+ರಫ್ತು) 62,155 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ 53,298 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 16.62 ರಷ್ಟು ಏರಿಕೆಯಾಗಿದೆ. 2022ರ ಏಪ್ರಿಲ್ ತಿಂಗಳ ರಫ್ತಿಗೆ ಸಂಬಂಧಿಸಿದಂತೆ ರಾಯಲ್ ಎನ್‌ಫೀಲ್ಡ್ ತನ್ನ ಸಂಪುಟಗಳಲ್ಲಿ ಭಾರಿ ಏರಿಕೆಯನ್ನು ಕಂಡಿದೆ. ಕಂಪನಿಯು ಈ ವರ್ಷದ ಏಪ್ರಿಲ್‌ನಲ್ಲಿ 8,303 ಮೋಟಾರ್‌ಸೈಕಲ್‌ಗಳನ್ನು ರಫ್ತು ಮಾಡಿದೆ. 2021ರ ಏಪ್ರಿಲ್ ತಿಂಗಳಿನಲ್ಲಿ 4,509 ಯುನಿಟ್‌ಗಳನ್ನು ರಫ್ತು ಮಾಡಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.84 ರಷ್ಟು ಭಾರಿ ಬೆಳವಣಿಗೆಯಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಕಂಪನಿಯು 2022ರ ಮಾರ್ಚ್ ತಿಂಗಳಿನಲ್ಲಿ 9,200 ಯುನಿಟ್‌ಗಳ ರಫ್ತು ಮಾಡುವುದರೊಂದಿಗೆ ಶೇಕಡಾ 9.75 ರಷ್ಟು ಕುಸಿದಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು "ಪೂರೈಕೆ ಮುಂಭಾಗದಲ್ಲಿ ನಿರಂತರ ಸವಾಲುಗಳ ಹೊರತಾಗಿಯೂ" ಸ್ಥಿರವಾದ ಪರಿಮಾಣಗಳನ್ನು ನೋಂದಾಯಿಸಿದೆ ಎಂದು ಹೇಳಿದೆ. ಹಿಂದಿನ ತಿಂಗಳು ರಾಯಲ್ ಎನ್‌ಫೀಲ್ಡ್ ಮೆಟಿಯೊರ್ 50 ನಲ್ಲಿ ಹೊಸ ಬಣ್ಣ ಆಯ್ಕೆಗಳನ್ನು ಪರಿಚಯಿಸಿತು, ಈ ವಿಭಾಗದ ಮಾದರಿಗಳನ್ನು ತಾಜಾ ಮತ್ತು ಪ್ರಸ್ತುತವಾಗಿ ಇರಿಸಿಕೊಳ್ಳಲು ಬುಲೆಟ್ 350, ಕ್ಲಾಸಿಕ್ 350, ಮತ್ತು ಮೆಟಿಯೊರ್ 350 ನಂತಹ 350 ಸಿಸಿ ಮೋಟಾರ್‌ಸೈಕಲ್‌ಗಳು ಕಂಪನಿಗೆ ಅಗ್ರ ಕೊಡುಗೆಯಾಗಿ ಉಳಿದಿವೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಶಾಟ್‌ಗನ್, ಹಂಟರ್, ಫ್ಲೈಯಿಂಗ್ ಫ್ಲಿಯಾ, ಶೆರ್ಪಾ ಮತ್ತು ರೋಡ್ಸ್ಟರ್ ಸೇರಿದಂತೆ ಮುಂಬರುವ ಮಾದರಿಗಳಿಗಾಗಿ ಅನೇಕ ನೇಮ್‌ಪ್ಲೇಟ್‌ಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ. ಈ ವರ್ಷ ಹಲವಾರು ನವೀಕರಣಗಳನೊಂದಿಗೆ ತಮ್ಮ ಜನಪ್ರಿಯ ಮಾದರಿಗಳನ್ನು ಪರಿಚಯಿಸುತ್ತದೆ. ಇದರಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತದಲ್ಲಿ ನ್ಯೂ ಜನರೇಷನ್ ಬುಲೆಟ್ 350 ಬೈಕ್ ಅನ್ನು ಬಿಡುಗಡೆ ಮಾಡಬಹುದು ನಿರೀಕ್ಷೆಯಿದೆ.

Most Read Articles

Kannada
English summary
Royal enfield hikes prices of interceptor 650 continental gt 650 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X