YouTube

ಹೊಸ ಮೂರು ಬಣ್ಣಗಳೊಂದಿಗೆ ಬಿಡುಗಡೆಯಾದ 'ರಾಯಲ್ ಎನ್‌ಫೀಲ್ಡ್ ಹಿಮಾಲಯನ್'

ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ ಬೈಕ್‌ಗಳು ಯುವಕರ ಹಾಟ್ ಫೆವರೇಟ್ ಆಗಿದ್ದು, ಅಡ್ವೆಂಚರ್ಸ್ ರೈಡ್ ಮಾಡುವವರಿಗೆ ಹೇಳಿ ಮಾಡಿದಂತಿದೆ. ಸದ್ಯ, ಕಂಪನಿಯು ಈಗಿರುವ ಗ್ರೇವೆಲ್ ಗ್ರೇ, ಪೈನ್ ಗ್ರೀನ್, ಗ್ರಾನೈಟ್ ಬ್ಲ್ಯಾಕ್ ಜೊತೆಗೆ ಗ್ಲೇಸಿಯರ್ ಬ್ಲೂ, ಸ್ಲೀಟ್ ಬ್ಲ್ಯಾಕ್ ಮತ್ತು ಡ್ಯೂನ್ ಬ್ರೌನ್ ಬಣ್ಣಗಳ ಆಯ್ಕೆಯಲ್ಲಿ ಬೈಕ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

'ರೈಡರ್ ಮೇನಿಯಾ 2022'ರಲ್ಲಿ ಪ್ರದರ್ಶಿಸಲಾದ ಹಿಮಾಲಯನ್ ಬೈಕ್, ಗ್ರಿಲ್ ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ಡಿಬಾಸ್ಡ್ ಲೋಗೋ ಮತ್ತು USB ಚಾರ್ಜಿಂಗ್ ಪೋರ್ಟ್ ಅನ್ನು ಒಳಗೊಂಡಿದೆ. ಈಗಾಗಲೇ ನವೆಂಬರ್ 24 ರಿಂದ ಪ್ರಾರಂಭವಾಗಿರುವ ಹೊಸ ಹಿಮಾಲಯನ್ ಬೈಕ್‌ಗಳ ಬುಕ್ಕಿಂಗ್ ಮತ್ತು ಟೆಸ್ಟ್ ರೈಡ್‌ಗಳಿಗೆ ಭಾರತದ ಯಾವುದೇ ರಾಯಲ್ ಎನ್‌ಫೀಲ್ಡ್ ಶೋರೂಂಗೆ ಭೇಟಿ ನೀಡಬಹುದಾಗಿದೆ, ಬೆಲೆ ವಿಚಾರಕ್ಕೆ ಬಂದರೆ 2.15 ಲಕ್ಷ ರೂ. (ಎಕ್ಸ್ ಶೋರೂಂ, ಚೆನ್ನೈ) ಖರೀದಿಗೆ ಲಭ್ಯವಿದೆ.

2016ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಹಿಮಾಲಯನ್ ಬೈಕ್‌ಗಳು, ಲಾಂಗ್ ಡ್ರೈವ್ ಮಾಡುವ ಅಡ್ವೆಂಚರ್ಸ್ ರೈಡರ್‌ಗಳಿಗಂತಲೇ ವಿಭಿನ್ನ ವೈಶಿಷ್ಟಗಳೊಂದಿಗೆ ವಿನ್ಯಾಸ ಮಾಡಲಾಗಿದೆ. ರಾಯಲ್ ಎನ್‌ಫೀಲ್ಡ್ ಪ್ರಕಾರ, ಬಿಡುಗಡೆಯಾಗಿರುವ ಬೈಕಿನ ಮೂರು ಹೊಸ ಬಣ್ಣಗಳು ಹಿಮಾಲಯ ಕಣಿವೆಯ ಸೌಂದರ್ಯ ಮತ್ತು ಭವ್ಯತೆಯಿಂದ ಪ್ರೇರಿತವಾಗಿದೆಯಂತೆ. 'ಗ್ಲೇಶಿಯರ್ ಬ್ಲೂ' ಗ್ಲೇಶಿಯಲ್ ಸರೋವರಗಳಿಂದ, 'ಡ್ಯೂನ್ ಬ್ರೌನ್' ಲಡಾಖ್‌ನ ನುಬ್ರಾ ಕಣಿವೆಯಲ್ಲಿರುವ ಹಂಡರ್‌ನ ಪ್ರದೇಶವನ್ನು ಪ್ರತಿನಿಧಿಸುತ್ತದೆ. ಹಿಂದಿನ ಸ್ಲೀಟ್ ಪ್ಯಾಟರ್ನ್ ರೀತಿಯಲ್ಲೇ ಹೊಸ ಆವೃತ್ತಿಗೆ ಸ್ಲೀಟ್ ಬ್ಲ್ಯಾಕ್ ಬಣ್ಣವಿದೆ.

ರಾಯಲ್ ಎನ್‌ಫೀಲ್ಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಗೋವಿಂದರಾಜನ್, 'ಹೊಸ ಬಣ್ಣಗಳ ಆಯ್ಕೆಯಲ್ಲಿ ಹಿಮಾಲಯನ್‌ ಬೈಕ್ ಬಿಡುಗಡೆ ಬಗ್ಗೆ ಮಾತನಾಡಿ, 'ಗುಡ್ಡಗಾಡು ಪ್ರದೇಶ ಮತ್ತು ಕಠಿಣ ರಸ್ತೆಗಳಲ್ಲಿ ಓಡಿಸಲು ಸಾಧ್ಯವಾಗುವಂತೆ ಈ ಬೈಕ್‌ಗಳನ್ನು ಹಲವು ವೈಶಿಷ್ಟ್ಯಗಳೊಂದಿಗೆ ವಿನ್ಯಾಸ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಲಾಂಗ್ ಡ್ರೈವ್ ಹೋಗುವ ಮೂಲಕ ಅಡ್ವೆಂಚರ್ ರೈಡ್ ಮಾಡುವವರಿಗೆ ಹೇಳಿ ಮಾಡಿಸಿದ ರೀತಿ ಇದ್ದು, ಸುಲಭವಾಗಿ ಎಲ್ಲಿ ಬೇಕಾದರೂ ತಲುಪಲು ಸಾಧ್ಯವಾಗುತ್ತದೆ' ಎಂದಿದ್ದಾರೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ನ ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಈ ಬೈಕ್ 411ಸಿಸಿ, ಏರ್-ಕೂಲ್ಡ್, SOHC ಎಂಜಿನ್‌ ಹೊಂದಿದೆ. ಈ ಎಂಜಿನ್ 6,500rpmನಲ್ಲಿ 24.3bhp ಪವರ್ ಮತ್ತು 4,000-4,500rpmನಲ್ಲಿ 32 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೆ, 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಈ ಬೈಕ್‌ನ ಗ್ರೌಂಡ್ ಕ್ಲಿಯರೆನ್ಸ್ 220 ಎಂಎಂ ಇದೆ. ಜೊತೆಗೆ 15 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಒಳಗೊಂಡಿದೆ.

ಈ ಹಿಮಾಲಯನ್ ಬೈಕ್ ಡ್ಯುಯಲ್-ಸ್ಪೋರ್ಟ್ ರಬ್ಬರ್, ಸ್ವಿಚ್ ಮಾಡಬಹುದಾದ ABS, ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುವ 21/17-ಇಂಚಿನ ಸ್ಪೋಕ್ ವೀಲ್‌ಗಳನ್ನು ಹೊಂದಿದೆ. ಅಲ್ಲದೆ, ಈ ಬೈಕಿನ ಮುಂಭಾಗದಲ್ಲಿ ಡ್ಯುಯೆಲ್ ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಪಿಸ್ಟನ್‌ನೊಂದಿಗೆ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದೆ. ಜೊತೆಗೆ ರೆಟ್ರೊ ವಿನ್ಯಾಸದ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದ್ದು ಎಲ್ಲರನ್ನು ಆಕರ್ಷಿಸುತ್ತದೆ.

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾಗಿರುವ ರಾಯಲ್ ಎನ್‌ಫೀಲ್ಡ್‌ ಇತ್ತೀಚಿನ ಹಂಟರ್ 350 ಸೇರಿದಂತೆ ಹಲವು ಬೈಕ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕ್ಲಾಸಿಕ್ 350, ಮೆಟಿಯರ್ 350 ಕ್ರೂಸರ್, ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ, ಹಿಮಾಲಯನ್ ಅಡ್ವೆಂಚರ್ ಟೂರರ್ ಮತ್ತು ಸ್ಕ್ರಾಮ್ 411 ಎಡಿವಿ ಕ್ರಾಸ್‌ಓವರ್ ಮತ್ತು ಬುಲೆಟ್ 350 ರಾಯಲ್‌ ಎನ್‌ಫೀಲ್ಡ್‌ನ ಜನಪ್ರಿಯ ಮಾದರಿಗಳಾಗಿವೆ. ಈ ಬೈಕ್‌ಗಳು ತನ್ನದೇ ಆದ ವಿಭಿನ್ನ ವೈಶಿಷ್ಟ್ಯಗಳೊಂದಿಗೆ ಯಾವಾಗಲು ಬೈಕ್ ಪ್ರಿಯರನ್ನು ಸೆಳೆಯುತ್ತಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Royal enfield himalayan launched in three color
Story first published: Friday, November 25, 2022, 14:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X