Just In
- 11 hrs ago
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- 11 hrs ago
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- 14 hrs ago
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- 14 hrs ago
ಕೈಗೆಟಕುವ ಬೆಲೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್!... ಫೆ. 9 ರಂದು ಓಲಾದಿಂದ ಮಹತ್ವದ ಘೋಷಣೆ
Don't Miss!
- News
ಫೆಬ್ರವರಿ 3ರಂದು 303 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Movies
Pavitra Naik: ಅರಸನ ಕೋಟೆಯ ಸೊಸೆಗೆ ಕಿರುತೆರೆಯೊಂದಿಗೆ ವಿಶೇಷ ನಂಟು
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Sports
2015ರ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಜಗಳದ ಬಗ್ಗೆ ಆಘಾತಕಾರಿ ವಿಷಯ ಬಿಚ್ಚಿಟ್ಟ ಪಾಕ್ ಮಾಜಿ ವೇಗಿ
- Finance
ಕರ್ನಾಟಕದಲ್ಲಿ ಇ-ಬಸ್ಗಳ ಮಾರಾಟವೆಷ್ಟು? ಭಾರತದಲ್ಲಿ ಹೆಚ್ಚಿದ ಬೇಡಿಕೆ ಪ್ರಮಾಣವೆಷ್ಟು? ತಿಳಿಯಿರಿ
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಯಲ್ ಎನ್‌ಫೀಲ್ಡ್ ಹೊಸ ಹಂಟರ್ 350 ಮಾದರಿಯಲ್ಲಿ ಖರೀದಿ ಮಾಡಬಹುದಾದ 5 ಅತ್ಯುತ್ತಮ ಆಕ್ಸೆಸರಿಸ್‌ಗಳಿವು!
ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಸ ಹಂಟರ್ 350 ಕ್ರಾಸ್ಓವರ್ ಅಡ್ವೆಂಚರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿ ವಿತರಣೆ ಚಾಲನೆ ನೀಡಿದೆ.
Recommended Video
ಹೊಸ ಬೈಕ್ ಮಾದರಿಯೊಂದಿಗೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಬೈಕ್ ಮಾದರಿಗಾಗಿ ಅತ್ಯುತ್ತಮ ಆಕ್ಸೆಸರಿಸ್ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಹಂಟರ್ 350 ಮಾದರಿಯು ವಿನೂತನ ವಿನ್ಯಾಸದೊಂದಿಗೆ ಅರ್ಬನ್ ಸ್ಕ್ರ್ಯಾಂಬ್ಲರ್ ಅಥವಾ ಕ್ರಾಸ್ಓವರ್ ಅಡ್ವೆಂಚರ್ ಮಾದರಿಯಾಗಿ ಗುರುತಿಸಲಾಗುತ್ತಿದ್ದು, ಹೊಸ ಮಾದರಿಯು ವಿಶೇಷವಾಗಿ ಸಿಟಿ ರೈಡ್ ಜೊತೆಗೆ ಅಡ್ವೆಂಚರ್ ರೈಡ್ ಉದ್ದೇಶಕ್ಕಾಗಿ ನಿರ್ಮಾಣ ಮಾಡಲಾಗಿದೆ. ಹೊಸ ಮಾದರಿಯು ರಾಯಲ್ ಎನ್‌ಫೀಲ್ಡ್ ಇತರೆ ಮಾದರಿಗಿಂತಲೂ ಕೈಗೆಟುಕುವ ಬೆಲೆ ಹೊಂದಿದ್ದು, ಹೊಸ ಮಾದರಿಗಾಗಿ ಇದೀಗ ಆಕರ್ಷಕ ಬೆಲೆಯಲ್ಲಿ ಆಕ್ಸೆಸರಿಸ್ ಪ್ಯಾಕೇಜ್ ಸಹ ಬಿಡುಗಡೆ ಮಾಡಲಾಗಿದೆ.

ಹೊಸ ಬೈಕಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಹೊರತಾಗಿಯೂ ಕಂಪನಿಯು ಹೊಸ ಬೈಕ್ ಅಂದವನ್ನು ಹೆಚ್ಚಿಸುವ ಮತ್ತು ಉತ್ತಮ ಸುರಕ್ಷತೆ ಖಾತ್ರಿಪಡಿಸುವ ಆಕ್ಸೆಸರಿಸ್ ಪ್ಯಾಕೇಜ್ ಸಿದ್ದಪಡಿಸಿದ್ದು, ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸಾಕಷ್ಟು ಹೊಸ ಸೌಲಭ್ಯಗಳನ್ನು ನೀಡಲಾಗಿದೆ.

ರೈಡರ್‌ಗೆ ಪೂರಕವಾಗಿ ಹೊಸ ಬೈಕಿನಲ್ಲಿ 10ಕ್ಕೂ ಹೆಚ್ಚು ಆಕ್ಸೆಸರಿಸ್‌ಗಳನ್ನು ಪರಿಚಯಿಸಲಾಗಿದ್ದು, ಬ್ಲ್ಯಾಕ್ ಕಮ್ಯೂಟರ್ ಪ್ಯಾನಿಯರ್, ಪ್ಯಾನಿಯರ್ ರೈಲ್, ಬ್ಲ್ಯಾಕ್ ಕಮ್ಯೂಟರ್ ವಾಟರ್‌ಪ್ರೂಫ್, ಹಿಂಬದಿಯ ಸವಾರರಿಗೆ ಬ್ಯಾಕ್ ರೇಸ್ಟ್ ಪ್ಯಾಡ್, ಸಿಗ್ನಿಚೆರ್ ಬೆಂಚ್ ಸೀಟ್, ಬ್ಲ್ಯಾಕ್ ಟೂರಿಂಗ್ ಮಿರರ್, ವಾಟರ್ ರೆಸಿಸ್ಟೆಂಟ್ ಬೈಕ್ ಕವರ್, ಸಿಲ್ವರ್ ಎಲ್ಇಡಿ ಇಂಡಿಕೇಟರ್, ಸಿಲ್ವರ್ ಆಯಿಲ್ ಫಿಲ್ಲರ್ ಕ್ಯಾಪ್ ಮತ್ತು ಸಿಲ್ವರ್ ಸಂಪ್ ಗಾರ್ಡ್ ಲಭ್ಯವಿವೆ.

ಇದರಲ್ಲಿ ಬ್ಲ್ಯಾಕ್ ಸಿಗ್ನೆಚರ್ ಬೆಂಚ್ ಸೀಟ್, ವಾಟರ್ ರೆಸಿಸ್ಟೆಂಟ್ ಬೈಕ್ ಕವರ್, ಸಿಲ್ವರ್ ಎಲ್ಇಡಿ ಇಂಡಿಕೇಟರ್, ಬ್ಲ್ಯಾಕ್ ಟೂರಿಂಗ್ ಮಿರರ್, ಸಿಲ್ವರ್ ಸಂಪ್ ಗಾರ್ಡ್ ಆಕ್ಸೆಸರಿಸ್‌ಗಳು ಉತ್ತಮವಾಗಿವೆ

ಬ್ಲ್ಯಾಕ್ ಸಿಗ್ನೆಚರ್ ಬೆಂಚ್ ಸೀಟ್ ರೂ. 4,500 ಬೆಲೆ ಹೊಂದಿದ್ದರೆ, ವಾಟರ್ ರೆಸಿಸ್ಟೆಂಟ್ ಬೈಕ್ ಕವರ್ ರೂ. 1,100 ಬೆಲೆ ಹೊಂದಿದೆ. ಹಾಗೆಯೇ ಸಿಲ್ವರ್ ಎಲ್ಇಡಿ ಇಂಡಿಕೇಟರ್ ರೂ. 4,750, ಬ್ಲ್ಯಾಕ್ ಟೂರಿಂಗ್ ಮಿರರ್ ರೂ. 6,850 ಮತ್ತು ಸಿಲ್ವರ್ ಸಂಪ್ ಗಾರ್ಡ್ ರೂ. 3,500 ಬೆಲೆ ಹೊಂದಿದೆ.

ಮೇಲೆ ತಿಳಿಸಲಾಗಿರುವ ಪ್ರಮುಖ ಐದು ಆಕ್ಸೆಸರಿಸ್‌ಗಳು ಹೊಸ ಬೈಕಿನ ಅಂದವನ್ನು ಹೆಚ್ಚಿಸುವುದರ ಜೊತೆಗೆ ಅರಾಮದಾಯಕ ರೈಡಿಂಗ್ ಮತ್ತು ಸುರಕ್ಷತೆಗೂ ಸಹಕಾರಿಯಾಗಿವೆ ಎನ್ನಬಹುದು.

ಈ ಮೂಲಕ 350 ಮೋಟಾರ್‌ಸೈಕಲ್ ವಿಭಾಗದಲ್ಲಿ ಇದು ಅತ್ಯುತ್ತಮ ಬೈಕ್ ಮಾದರಿಯಾಗಿದೆ ಎಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಪ್ರತಿಸ್ಪರ್ಧಿಗಳಿಗೆ ಪೈಪೋಟಿಯಾಗಿ ಬಿಡುಗಡೆ ಮಾಡಿದ್ದು, ಇದು ಯುವ ಗ್ರಾಹಕರ ಹಾಟ್ ಫೇವರಿಟ್ ಮಾದರಿಯಾಗುವ ವಿಶ್ವಾಸ ವ್ಯಕ್ತಪಡಿಸಿದೆ.

ಹಂಟರ್ 350 ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಹೊಂದಿದ್ದು, ಮೆಟ್ರೋ ಮತ್ತು ರೆಟ್ರೋ ಎನ್ನುವ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಹೊಸ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 1.69 ಲಕ್ಷ ಬೆಲೆ ಹೊಂದಿವೆ.

ಹೊಸ ಹಂಟರ್ ಬೈಕ್ ಮಾದರಿಯು ಮಿಟಿಯೊರ್ 350 ಮತ್ತು ಕ್ಲಾಸಿಕ್ 350 ಮಾದರಿಯಲ್ಲಿರುವಂತೆಯೇ 349 ಸಿಸಿ ಸಿಂಗಲ್ ಸಿಲಿಂಡರ್, ಟು ವಾಲ್ವ್, ಎಸ್‌ಓಹೆಚ್‌ಸಿ ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಹೊಂದಿದ್ದು, ಈ ಹೊಸ ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್ ಮೂಲಕ 20.2 ಬಿಹೆಚ್‌ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಂಟರ್ ಬೈಕ್ ಮಾದರಿಯು ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಇತರೆ ಮೋಟಾರ್‌ಸೈಕಲ್‌ಗಳಿಂತಲೂ ತುಸು ಹಗುರವಾಗಿದ್ದು, ಪ್ರತಿ ಗಂಟೆಗೆ 114 ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಲೀಟರ್‌ಗೆ ಗರಿಷ್ಠ 36.1 ಕಿ.ಮೀ ಇಂಧನ ದಕ್ಷತೆ ಖಾತ್ರಿಪಡಿಸಿದೆ.

ಹೊಸ ಬೈಕ್ ಮಾದರಿಯು ಕ್ಲಾಸಿಕ್ ಮತ್ತು ಮಿಟಿಯೊರ್ ರೀತಿಯಲ್ಲಿಯೇ ಡಬಲ್ ಕ್ರೇಡಲ್ ಫ್ರೇಮ್ ಆಧರಿಸಿ ನಿರ್ಮಾಣವಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಸಿಂಗಲ್ ಚಾನೆಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಆಯ್ಕೆಗಳನ್ನು ಹೊಂದಿದೆ.

ಜೊತೆಗೆ ಹೊಸ ಬೈಕಿನಲ್ಲಿ ಡ್ವಯಲ್ ಟೋನ್ ಹೊಂದಿರುವ ಟಿಯರ್-ಡ್ರಾಪ್ ವಿನ್ಯಾಸದ ಇಂಧನ ಟ್ಯಾಂಕ್, ಉದ್ದವಾದ ಸಿಂಗಲ್-ಪೀಸ್ ಸೀಟ್, ವೃತ್ತಾಕಾರವಾದ ಹಾಲೋಜೆನ್ ಹೆಡ್‌ಲ್ಯಾಂಪ್‌ಗಳು, ಟರ್ನ್ ಇಂಡಿಕೇಟರ್‌ಗಳು, ರಿಯರ್-ವ್ಯೂ ಮಿರರ್‌ಗಳು ಮತ್ತು ಸ್ವಲ್ಪ ಎತ್ತರದ ವಿನ್ಯಾಸದೊಂದಿಗೆ ಸ್ಕ್ರ್ಯಾಂಬ್ಲರ್ ಮಾದರಿಯಾಗಿರುವುದು ಸ್ಪಷ್ಟವಾಗುತ್ತದೆ.

ಇದರೊಂದಿಗೆ ಹೊಸ ಬೈಕಿನಲ್ಲಿ ಬೆಲೆ ಕಡಿತಕ್ಕಾಗಿ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗಿದ್ದು, ಹೊಸ ಬೈಕಿನಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಹೈ ಎಂಡ್ ಮಾದರಿಯಲ್ಲಿ ಮಾತ್ರ ನೀಡಲಾಗಿದೆ. ಆರಂಭಿಕ ಮಾದರಿಯಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮಾತ್ರ ನೀಡಲಾಗಿದ್ದು, ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಆಕ್ಸೆಸರಿಸ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ಕ್ಲಾಸಿಕ್ 350 ಬೈಕಿಗೆ ಹೋಲಿಸಿದರೆ ಹಂಟರ್ ಬೈಕ್ ಮಾದರಿಯು 90 ಎಂಎಂ ಉದ್ದ ಮತ್ತು 35 ಎಂಎಂ ಎತ್ತರದಲ್ಲಿ ಕಡಿಮೆಯಿದ್ದು, 15 ಎಂಎಂ ನಷ್ಟು ಹೆಚ್ಚು ಅಗಲವಾಗಿರುತ್ತದೆ. ಇದರ ವೀಲ್ಹ್ ಬೇಸ್ ಉದ್ದವು ಕ್ಲಾಸಿಕ್‌ಗಿಂತಲೂ 20 ಎಂಎಂ ಉದ್ದವಾಗಿದ್ದು, 181 ಕೆಜಿಯಷ್ಟು ಭಾರವಾಗಿರಲಿದೆ.