ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಬಹುನಿರೀಕ್ಷಿತ ಸ್ಕ್ರಾಮ್ 411 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ರಾಯಲ್ ಎನ್‍ಫೀಲ್ಡ್ ಸ್ಕ್ರಾಮ್ 411 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.03 ಲಕ್ಷಗಳಾಗಿದೆ.

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಜನಪ್ರಿಯ ಹಿಮಾಲಯನ್ ಅಡ್ವೆಂಚರ್ ಟೂರರ್ ಆಧಾರಿತ ಬೈಕ್ ಆಗಿದೆ. ಹಿಮಾಲಯದಿಂದ ತನ್ನನ್ನು ಪ್ರತ್ಯೇಕಿಸಲು ದೃಶ್ಯ ಬದಲಾವಣೆಗಳನ್ನು ಪಡೆಯುತ್ತದೆ. ಈ ಹೊಸ ಬೈಕಿನಲ್ಲಿ ವೃತ್ತಾಕಾರದ ಹೆಡ್‌ಲ್ಯಾಂಪ್, ಡರ್ಟ್‌ಬೈಕ್-ಶೈಲಿಯ ಮಡ್‌ಗಾರ್ಡ್‌ಗಳು, ಸಿಂಗಲ್ ಪೀಸ್ ಸೀಟ್, ದೊಡ್ಡ ಇಂಧನ ಟ್ಯಾಂಕ್ ಮತ್ತು ಡ್ಯುಯಲ್-ಪರ್ಪಸ್ ಟೈರ್‌ಗಳು ಹೊಂದಿದೆ, ಇವುಗಳು ಸರಿಯಾದ ಸ್ಕ್ರಾಂಬ್ಲರ್‌ನ ವಿನ್ಯಾಸದ ಲಕ್ಷಣಗಳಾಗಿವೆ. ಇದರೊಂದಿಗೆ ಇದೀಗ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಸ್ಕ್ರಾಮ್ 411 ಬೈಕ್ ಗಾಗಿ ಅಕ್ಸೆಸರೀಸ್ ಗಳನ್ನು ಪರಿಚಯಿಸಿದ್ದಾರೆ.

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಸ್ಟೈಲಿಂಗ್‌ಗೆ ಸಂಬಂಧಿಸಿದಂತೆ, ರೂ.800ಕ್ಕೆ ಮುಂಭಾಗದ ರೆಸಿರ್ವಿಯರ್ ಕ್ಯಾಪ್ ಅನ್ನು ಆಯ್ಕೆ ಮಾಡಬಹುದು. ಇದು ಬಿಲ್ಲೆಟ್ ಅಲ್ಯೂಮಿನಿಯಂನಿಂದ ತಯಾರಿಸಲ್ಪಟ್ಟಿದೆ ಮತ್ತು ಆನೋಡೈಸ್ಡ್ ಫಿನಿಶ್‌ನೊಂದಿಗೆ ಕಪ್ಪು ಮತ್ತು ಬೆಳ್ಳಿ ಬಣ್ಣಗಳಲ್ಲಿ ಲಭ್ಯವಿದೆ. ಈ ಅಕ್ಸೆಸರೀಸ್ ನೊಂದಿಗೆ ಕಾಕ್‌ಪಿಟ್ ಪ್ರದೇಶದ ಒಟ್ಟಾರೆ ನೋಟವನ್ನು ಸ್ಪೋರ್ಟಿಯರ್ ಆಗಿ ಮಾಡಬಹುದು.

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಇದೇ ರೀತಿಯ ಮತ್ತೊಂದು ಅಕ್ಸೆಸರೀಸ್ ಆಯಿಲ್ ಫಿಲ್ಲರ್ ಕ್ಯಾಪ್‌ಗಾಗಿ ಬ್ರಾಂಡ್ ಇನ್‌ಫಿಲ್ ಮಾಡಲಾಗಿದೆ. ಇದನ್ನು ರೂ.1,050ಗೆ ನೀಡಲಾಗುತ್ತಿದೆ. ಕಪ್ಪು ಮತ್ತು ಬೆಳ್ಳಿಯ ಎರಡೂ ಬಣ್ಣದ ಕ್ಯಾಪ್‌ಗಳು ಲಭ್ಯವಿದೆ.

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಸ್ಪೋರ್ಟಿಯರ್ ಎಂಡ್ಯೂರೋ ಲುಕ್‌ಗಾಗಿ, ಬಳಕೆದಾರರು ರೂ.3,550 ನಲ್ಲಿ ಲಭ್ಯವಿರುವ ಅಲ್ಯೂಮಿನಿಯಂ ಹ್ಯಾಂಡಲ್‌ಬಾರ್‌ಗಳನ್ನು ಖರೀದಿಸಬಹುದು. ಇವುಗಳು ಸುಮಾರು 20% ಹಗುರವಾಗಿರುತ್ತವೆ ಮತ್ತು ಸುಧಾರಿತ ಶಕ್ತಿ ಮತ್ತು ಬಾಳಿಕೆಗಾಗಿ ಹೆಚ್ಚುವರಿ ಬ್ರೇಸ್‌ನೊಂದಿಗೆ ಬರುತ್ತವೆ. ಬಾರ್ ಎಂಡ್ ಫಿನಿಶರ್‌ಗಳೊಂದಿಗೆ ಈ ಹ್ಯಾಂಡಲ್‌ಬಾರ್ ಬರುತ್ತದೆ.

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಇವುಗಳು ಆನೋಡೈಸ್ಡ್ ಬ್ಲ್ಯಾಕ್ ಫಿನಿಶ್‌ನಲ್ಲಿ ಲಭ್ಯವಿವೆ ಮತ್ತು ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡಿಂಗ್ ಅನ್ನು ಹೊಂದಿದ್ದು, ಇದರ ಬೆಲೆಯು ರೂ.1,200 ಆಗಿದೆ.ಎಂಜಿನ್ ರಕ್ಷಣೆಗಾಗಿ, ರಾಯಲ್ ಎನ್‌ಫೀಲ್ಡ್ ಕಾಂಪ್ಯಾಕ್ಟ್ ಎಂಜಿನ್ ಗಾರ್ಡ್ ಅನ್ನು ರೂ.1,450ಗೆ ನೀಡಲಾಗುತ್ತದೆ. ಇದು ಹಿಂದಕ್ಕೆ ಬಾಗುತ್ತದೆ, ಅಪಘಾತದ ಸಂದರ್ಭದಲ್ಲಿ ಎಂಜಿನ್ ಅನ್ನು ಮಾತ್ರ ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ.

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಸವಾರನ ಕಾಲುಗಳನ್ನು ಭದ್ರಪಡಿಸುವ ಹೆಚ್ಚು ಸಮಗ್ರ ರಕ್ಷಣೆಗಾಗಿ, ಬಳಕೆದಾರರು ದೊಡ್ಡ ಎಂಜಿನ್ ಗಾರ್ಡ್ ಅನ್ನು ಆಯ್ಕೆ ಮಾಡಬಹುದು. ಇದು ರೂ,1,650 ಗಳಲ್ಲಿ ಲಭ್ಯವಿದೆ. ಈ ಎರಡೂ ಎಂಜಿನ್ ಗಾರ್ಡ್‌ಗಳನ್ನು 22 ಎಂಎಂ ಸ್ಟೀಲ್ ಟ್ಯೂಬ್‌ನಿಂದ ತಯಾರಿಸಲಾಗುತ್ತದೆ

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಆಫ್-ರೋಡಿಂಗ್‌ಗಾಗಿ ಬೈಕ್ ಅನ್ನು ಆಗಾಗ್ಗೆ ಬಳಸಲು ಯೋಜಿಸುವ ಬಳಕೆದಾರರು ಆಯಿಲ್ ಕೂಲರ್ ಗಾರ್ಡ್ ಮತ್ತು ಮಾಸ್ಟರ್ ಸಿಲಿಂಡರ್ ಗಾರ್ಡ್‌ನಂತಹ ಅಕ್ಸೆಸರೀಸ್ ಅನ್ನು ಖರೀದಿಸಬಹುದು. ಇವುಗಳು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ ಮತ್ತು ಕಪ್ಪು ಮತ್ತು ಬೆಳ್ಳಿಯ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಮಾಸ್ಟರ್ ಸಿಲಿಂಡರ್ ಗಾರ್ಡ್'ಗೆ ರೂ.700 ಆಯಿಲ್ ಕೂಲರ್ ಗಾರ್ಡ್ ಗೆ ರೂ.1,250 ಆಗಿದೆ. ರಾಯಲ್ ಎನ್‌ಫೀಲ್ಡ್ ಲೋಗೋವನ್ನು ಹೊಂದಿರುವ ಹ್ಯಾಂಡಲ್‌ಬಾರ್ ಬ್ರೇಸ್ ಪ್ಯಾಡ್ ಅನ್ನು ಬಳಕೆದಾರರು ಆಯ್ಕೆ ಮಾಡಬಹುದು. ಬೆಲೆ ರೂ.600 ಆಗಿದೆ. ಇನು ರೂ. 1,100 ಗಳಲ್ಲಿ ಲಭ್ಯವಿರುವ ನೀರಿನ ನಿರೋಧಕ ಬೈಕ್ ಕವರ್ ಅನ್ನು ಆಯ್ಕೆ ಮಾಡಬಹುದು. ಇವುಗಳು ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡಿಂಗ್ ಅನ್ನು ಹೊಂದಿವೆ ಮತ್ತು ಸುಲಭವಾಗಿ ಮಡಚಬಹುದು .

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಈ ರಾಯಲ್ ಎನ್‌ಫೀಲ್ಡ್ ಮೇಕ್ ಇಟ್ ಯುವರ್ಸ್ ಪ್ರೋಗ್ರಾಂ ಮೂಲಕ ಟ್ರಿಪ್ಪರ್ ಆಯ್ಕೆಯು ಹೆಚ್ಚುವರಿಯಾಗಿ ಮಾತ್ರ ಲಭ್ಯವಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಹೊಸ ಈ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಹಿಮಾಲಯನ್‌ನಿಂದ 411ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಪಡೆದುಕೊಂಡಿದೆ.

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಇದು ಏರ್-ಕೂಲ್ಡ್, 411ಸಿಸಿ, SOHC ಯುನಿಟ್ ಆಗಿದೆ. ರಾಯಲ್ ಎನ್‌ಫೀಲ್ಡ್ ಮೋಟಾರ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಮತ್ತು ಇದು 6,500 ಆರ್‌ಪಿಎಂನಲ್ಲಿ 24.3 ಬಿಹೆಚ್‍ಪಿ ಪವರ್ ಮತ್ತು 4,500 ಆರ್‌ಪಿಎಂನಲ್ಲಿ 32 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಸ್ಲಿಕ್-ಶಿಫ್ಟಿಂಗ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಈ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಡ್ಯೂಪ್ಲೆಕ್ಸ್ ಸ್ಪ್ಲಿಟ್ ಕ್ರೇಡಲ್ ಫ್ರೇಮ್ ನೊಂದಿಗೆ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಹೊಂದಿದ್ದು, ಇದು 190 ಎಂಎಂ ಟ್ರ್ವಾವೆಲ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಹೊಂದಿದೆ.

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಅನ್ನು ಹೊಂದಿದೆ. ಇದು ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸಹ ಹೊಂದಿದೆ. ಸ್ಕ್ರ್ಯಾಮ್ 411 ಬೈಕ್ ಒಂದು ಆಫ್-ರೋಡ್-ಆಧಾರಿತ ಮೋಟಾರ್‌ಸೈಕಲ್ ಆಗಿರುವುದರಿಂದ, ಇದು ಹಿಂಭಾಗಕ್ಕೆ ಬದಲಾಯಿಸಬಹುದಾದ ಎಬಿಎಸ್ ಅನ್ನು ಪಡೆಯುತ್ತದೆ.

ಹೊಸ ಸ್ಕ್ರಾಮ್ 411 ಬೈಕ್‌ಗಾಗಿ ಅಕ್ಸೆಸರೀಸ್ ಪರಿಚಯಿಸಿದ ರಾಯಲ್ ಎನ್‍ಫೀಲ್ಡ್

ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಗ್ರ್ಯಾಫೈಟ್ ರೆಡ್, ಗ್ರ್ಯಾಫೈಟ್ ಬ್ಲೂ, ಗ್ರ್ಯಾಫೈಟ್ ಯೆಲ್ಲೋ, ವೈಟ್ ಫ್ಲಾಮ್, ಸಿಲ್ವರ್ ಸ್ಪಿರಿಟ್, ಬ್ಲೇಜಿಂಗ್ ಬ್ಲ್ಯಾಕ್ ಮತ್ತು ಸ್ಕೈಲೈನ್ ಬ್ಲೂ ಎಂಬ ಏಳು ಬಣ್ಣಗಳ ಆಯ್ಕೆಗಳನ್ನು ಹೊಂದಿವೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಹೊಸ ರಾಯಲ್ ಎನ್‌ಫೀಲ್ಡ್ 2,16 ಎಂ ಉದ್ದ, 840 ಎಂಎಂ ಅಗಲ ಮತ್ತು 1,165 ಎಂಎಂ ಎತ್ತರವನ್ನು ಹೊಂದಿದೆ.

Article Published On: Wednesday, March 16, 2022, 19:32 [IST]
English summary
Royal enfield introduced official accessories and price for new scram 411 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+