ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು 2022ರ ಮಾರ್ಚ್ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 59,160 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 66,058 ಯುನಿಟ್‌ಗಳನ್ನು ಮಾರಾಟಗೊಳಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಸುಮಾರು ಶೇಕಡಾ 2.39 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 58,477 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಆದರೆ ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ 60,173 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ದೇಶಿಯ ಮಾರುಕಟ್ಟೆಯ ಮಾರಾಟದಲ್ಲಿ ಶೇಕಡಾ 3 ರಷ್ಟು ಕುಸಿತವನ್ನು ಕಂಡಿದೆ.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಫ್ತು ವಿಭಾಗದಲ್ಲಿ, ಕಳೆದ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 9,200 ಯುನಿಟ್‌ಗಳನ್ನು ರಫ್ತು ಮಾಡಿದೆ. 2021ರ ಮಾರ್ಚ್ ತಿಂಗಳಿನಲ್ಲಿ 5,885 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇಕಡಾ 56 ರಷ್ಟು ಏರಿಕೆಯಾಗಿದೆ.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ತನ್ನ ಉತ್ಪನ್ನಗಳಿಗೆ ಬಲವಾದ ಬೇಡಿಕೆ ಮತ್ತು ಪೂರೈಕೆ ಸರಪಳಿಯ ನಿರ್ಬಂಧಗಳನ್ನು ಕ್ರಮೇಣ ಸರಾಗಗೊಳಿಸುವ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಚೇತರಿಕೆಯ ಹಾದಿಯಲ್ಲಿದೆ ಎಂದು ಹೇಳಿದೆ.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

2022ರ ಸವಾಲಿನ ಹಣಕಾಸಿನ ವರ್ಷ ಮುಕ್ತಾಯವಾಗುತ್ತಿದ್ದಂತೆ, ರಾಯಲ್ ಎನ್‌ಫೀಲ್ಡ್ ಅಲ್ಪಾವಧಿಯ ಸವಾಲುಗಳ ಮೂಲಕ ಸವಾರಿ ಮಾಡುವ ವಿಶ್ವಾಸವನ್ನು ಹೊಂದಿದೆ ಮತ್ತು ಭಾರತದಿಂದ ಮೊದಲ ಪ್ರೀಮಿಯಂ ಜಾಗತಿಕ ಗ್ರಾಹಕ ಬ್ರ್ಯಾಂಡ್ ಆಗುವ ದೃಷ್ಟಿಗೆ ಬದ್ಧತೆಯನ್ನು ಮುಂದುವರೆಸಿದೆ.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ದೀರ್ಘಾವಧಿಯ ಕಾರ್ಯತಂತ್ರದ ಉದ್ದೇಶಗಳನ್ನು ಪೂರೈಸಲು ಅಂಗಡಿಯಲ್ಲಿ ಬಲವಾದ ಉತ್ಪನ್ನ ಶ್ರೇಣಿಯನ್ನು ಹೊಂದಿದೆ ಮತ್ತು ಸಂಸ್ಥೆಯ ಕಾರ್ಯತಂತ್ರದ ಯೋಜನೆಗಳನ್ನು ಹೊಂದಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

2021-22 ಹಣಕಾಸಿನ ವರ್ಷ ಸಾಲಿನ ಒಟ್ಟಾರೆ ಮಾರಾಟವು 6,02,268 ರಷ್ಟಿದೆ, ಇದು 2020-21ರ ಹಣಕಾಸಿನ ವರ್ಷ ಮಾರಾಟವಾದ 6,12,350 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 2 ರಷ್ಟು ಕುಸಿತವಾಗಿದೆ. 2021-22 ಹಣಕಾಸಿನ ವರ್ಷ ರಾಯಲ್ ಎನ್‌ಫೀಲ್ಡ್ ದೇಶೀಯ ಮಾರಾಟದಲ್ಲಿ ಶೇಕಡಾ 9 ರಷ್ಟು ಕುಸಿತವನ್ನು ವರದಿ ಮಾಡಿದೆ, ರಫ್ತುಗಳು 38,622 ಯೂನಿಟ್‌ಗಳಿಗೆ ವಿರುದ್ಧವಾಗಿ 81,032 ಯುನಿಟ್‌ಗಳಲ್ಲಿದ್ದು, ಶೇಕಡಾ 110 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ತನ್ನ ಮಾದರಿಗಳ ಸರಣಿಯನ್ನು ಹೊಸ ಭೌಗೋಳಿಕ ಪ್ರದೇಶಗಳಿಗೆ ವಿಸ್ತರಿಸುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೇಂದ್ರೀಕೃತ ಪ್ರದೇಶವಾಗಿ ಉಳಿದಿವೆ. 2021 ರಲ್ಲಿ ಭಾರತ ಮತ್ತು ಥೈಲ್ಯಾಂಡ್‌ನಲ್ಲಿ ಬಿಡುಗಡೆಯಾದ ನಂತರ ಹೊಸ ಕ್ಲಾಸಿಕ್ 350 ಅನ್ನು ಫಿಲಿಪೈನ್ಸ್, ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುಕೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‍ಫೀಲ್ಡ್ ತನ್ನ ಬಹುನಿರೀಕ್ಷಿತ ಸ್ಕ್ರಾಮ್ 411 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ. ಈ ಹೊಸ ರಾಯಲ್ ಎನ್‍ಫೀಲ್ಡ್ ಸ್ಕ್ರಾಮ್ 411 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.03 ಲಕ್ಷಗಳಾಗಿದೆ. ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಜನಪ್ರಿಯ ಹಿಮಾಲಯನ್ ಅಡ್ವೆಂಚರ್ ಟೂರರ್ ಆಧಾರಿತ ಬೈಕ್ ಆಗಿದೆ.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ಹಿಮಾಲಯದಿಂದ ತನ್ನನ್ನು ಪ್ರತ್ಯೇಕಿಸಲು ದೃಶ್ಯ ಬದಲಾವಣೆಗಳನ್ನು ಪಡೆಯುತ್ತದೆ. ಈ ಹೊಸ ಬೈಕಿನಲ್ಲಿ ವೃತ್ತಾಕಾರದ ಹೆಡ್‌ಲ್ಯಾಂಪ್, ಡರ್ಟ್‌ಬೈಕ್-ಶೈಲಿಯ ಮಡ್‌ಗಾರ್ಡ್‌ಗಳು, ಸಿಂಗಲ್ ಪೀಸ್ ಸೀಟ್, ದೊಡ್ಡ ಇಂಧನ ಟ್ಯಾಂಕ್ ಮತ್ತು ಡ್ಯುಯಲ್-ಪರ್ಪಸ್ ಟೈರ್‌ಗಳು ಹೊಂದಿದೆ, ಇವುಗಳು ಸರಿಯಾದ ಸ್ಕ್ರಾಂಬ್ಲರ್‌ನ ವಿನ್ಯಾಸದ ಲಕ್ಷಣಗಳಾಗಿವೆ. ಇದರೊಂದಿಗೆ ಇದೀಗ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಸ್ಕ್ರಾಮ್ 411 ಬೈಕ್ ಗಾಗಿ ಅಕ್ಸೆಸರೀಸ್ ಗಳನ್ನು ಪರಿಚಯಿಸಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ಈ ಬೈಕಿನ ಸ್ಟೈಲಿಂಗ್‌ಗೆ ಸಂಬಂಧಿಸಿದಂತೆ, ರೂ.800ಕ್ಕೆ ಮುಂಭಾಗದ ರೆಸಿರ್ವಿಯರ್ ಕ್ಯಾಪ್ ಅನ್ನು ಆಯ್ಕೆ ಮಾಡಬಹುದು. ಇದು ಬಿಲ್ಲೆಟ್ ಅಲ್ಯೂಮಿನಿಯಂನಿಂದ ತಯಾರಿಸಲ್ಪಟ್ಟಿದೆ ಮತ್ತು ಆನೋಡೈಸ್ಡ್ ಫಿನಿಶ್‌ನೊಂದಿಗೆ ಕಪ್ಪು ಮತ್ತು ಬೆಳ್ಳಿ ಬಣ್ಣಗಳಲ್ಲಿ ಲಭ್ಯವಿದೆ. ಈ ಅಕ್ಸೆಸರೀಸ್ ನೊಂದಿಗೆ ಕಾಕ್‌ಪಿಟ್ ಪ್ರದೇಶದ ಒಟ್ಟಾರೆ ನೋಟವನ್ನು ಸ್ಪೋರ್ಟಿಯರ್ ಆಗಿ ಮಾಡಬಹುದು.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಈ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 350ಸಿಸಿಯಿಂದ 650ಸಿಸಿ ವರೆಗಿನ ಬೈಕ್‌ಗಳನ್ನು ಬಿಡುಗಡೆಗೊಳಿಸಲಿವೆ. ಶೀಘ್ರದಲ್ಲೇ ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಿಡುಗಡೆಯಗಲಿವೆ.

ಮಾರ್ಚ್ ತಿಂಗಳಿನಲ್ಲಿ 67,677 ಬೈಕ್‌ಗಳನ್ನು ಮಾರಾಟ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಶಾಟ್‌ಗನ್, ಹಂಟರ್, ಫ್ಲೈಯಿಂಗ್ ಫ್ಲಿಯಾ, ಶೆರ್ಪಾ ಮತ್ತು ರೋಡ್ಸ್ಟರ್ ಸೇರಿದಂತೆ ಮುಂಬರುವ ಮಾದರಿಗಳಿಗಾಗಿ ಅನೇಕ ನೇಮ್‌ಪ್ಲೇಟ್‌ಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ. ಈ ವರ್ಷ ಹಲವಾರು ನವೀಕರಣಗಳನೊಂದಿಗೆ ತಮ್ಮ ಜನಪ್ರಿಯ ಮಾದರಿಗಳನ್ನು ಪರಿಚಯಿಸುತ್ತದೆ. ಇದರಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತದಲ್ಲಿ ನ್ಯೂ ಜನರೇಷನ್ ಬುಲೆಟ್ 350 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Article Published On: Saturday, April 2, 2022, 10:31 [IST]
English summary
Royal enfield march 2022 sales 67677 units details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+