L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

ರಾಯಲ್ ಎನ್‌ಫೀಲ್ಡ್ (Royal Enfield) ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ದ್ವಿಚಕ್ರ ವಾಹನ ಸಾಲವನ್ನು ನೀಡಲು L&T ಫೈನಾನ್ಸ್‌ನೊಂದಿಗೆ ಕೈಜೋಡಿಸಿದೆ.

L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

"ವೆಲ್‌ಕಮ್ 2022" ಎಂಬ ಯೋಜನೆಯ ಅಡಿಯಲ್ಲಿ ಆಕರ್ಷಕ ಬಡ್ಡಿ ದರಗಳಲ್ಲಿ (ಶೇ. 7.99 ರಿಂದ) ಮೂರು ನಿಮಿಷಗಳಲ್ಲಿ ತೊಂದರೆ-ಮುಕ್ತ, ತ್ವರಿತ ಸಾಲದ ಅನುಮೋದನೆಗಳನ್ನು ನೀಡುತ್ತದೆ.ಈ ಯೋಜನೆಯು 4 ವರ್ಷಗಳ ಮರುಪಾವತಿಯ ಮೇಲೆ ರಾಯಲ್ ಎನ್‌ಫೀಲ್ಡ್ ಬೈಕಿನ ಒಟ್ಟು ವೆಚ್ಚದ ಶೇಕಡಾ 90 ರಷ್ಟು ಹಣವನ್ನು ನೀಡುತ್ತದೆ, ಇದು ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಕೂದ ಕೂಡ ಗಮನಾರ್ಹವಾಗಿದೆ.

L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

ಯೋಜನೆಯನ್ನು ಪಡೆದುಕೊಳ್ಳಲು, ಗ್ರಾಹಕರು ತಮ್ಮ ರಾಯಲ್ ಎನ್‌ಫೀಲ್ಡ್ ಡೀಲರ್‌ಶಿಪ್ ಅಥವಾ L&T ಫೈನಾನ್ಸ್ ಶಾಖೆಗೆ ಭೇಟಿ ನೀಡಬಹುದು. ಅಲ್ಲದೇ ಆನ್ ಲೈನ್ ಮೂಲಕ L&T Finance ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

ರಾಯಲ್ ಎನ್‌ಫೀಲ್ಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಬಿ ಗೋವಿಂದರಾಜನ್ ಅವರು ಮಾತನಾಡಿ, ನಮ್ಮ ವಿವಿಧ ಗ್ರಾಹಕರ ವಿಭಾಗಗಳಿಗೆ ಹೊಂದಿಕೊಳ್ಳುವ, ಸುಲಭ ಮತ್ತು ಅಗತ್ಯತೆಗಳನ್ನು ಪೂರೈಸುವ ಹಣಕಾಸು ಪರಿಹಾರಗಳನ್ನು ಒದಗಿಸಲು L&T ಫೈನಾನ್ಸ್‌ನೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ.

L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

ಈ ಸಹಯೋಗವು ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳನ್ನು ಉತ್ಸಾಹಿಗಳಿಗೆ ಹೆಚ್ಚು ಸುಲಭವಾಗಿಸುತ್ತದೆ. ಗರಿಷ್ಠ ಉಳಿತಾಯದೊಂದಿಗೆ ಅನುಕೂಲಕರ ಮತ್ತು ತಡೆರಹಿತ ಪ್ರಕ್ರಿಯೆಯನ್ನು ಖಾತ್ರಿಪಡಿಸುವುದು ಎಂದು ಹೇಳಿದರು.

L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

L&T ಫೈನಾನ್ಸ್ ಪ್ರಕಾರ, ಅನಾಲಿಟಿಕ್ಸ್-ಆಧಾರಿತ ಕ್ರೆಡಿಟ್ ನಿರ್ಧಾರ, ಡಿಜಿಟಲ್ ಆನ್-ಬೋರ್ಡಿಂಗ್ ಮತ್ತು ಉತ್ತಮ-ಉದ್ಯಮ ಟರ್ನರೌಂಡ್ ಟೈಮ್ (TAT) ಕಂಪನಿಯ ದ್ವಿಚಕ್ರ ಹಣಕಾಸು ವ್ಯವಹಾರದ ಪ್ರಮುಖ ವ್ಯತ್ಯಾಸಗಳಾಗಿವೆ. L&T ಫೈನಾನ್ಸ್ ಮತ್ತು ರಾಯಲ್ ಎನ್‌ಫೀಲ್ಡ್ ನಡುವಿನ ಒಪ್ಪಂದವು ಶ್ರೇಣಿ I, ಶ್ರೇಣಿ II ಮತ್ತು ಶ್ರೇಣಿ III ನಗರಗಳು ಮತ್ತು ಪಟ್ಟಣಗಳಲ್ಲಿನ ಗ್ರಾಹಕರಿಗೆ ತಮ್ಮ ಆದ್ಯತೆಯ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಹೊಂದಲು ಸಹಾಯ ಮಾಡುತ್ತದೆ.

L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

ರಾಯಲ್ ಎನ್‌ಫೀಲ್ಡ್‌ನ ಮಾದರಿ ಶ್ರೇಣಿಯು ಎಲ್ಲಾ-ಹೊಸ ಕ್ಲಾಸಿಕ್ 350, ಮಿಟಿಯೊರ್ 350, ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ GT 650, ಹಿಮಾಲಯನ್ ಮತ್ತು ಬುಲೆಟ್ 350 ಅನ್ನು ಒಳಗೊಂಡಿದೆ. L&T ಫೈನಾನ್ಸ್ ಜೊತೆಗಿನ ಸಂಬಂಧವನ್ನು ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಲೈನ್-ಅಪ್‌ನಾದ್ಯಂತ ನೀಡಲಾಗುವುದು.

L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು 2021ರ ಡಿಸೆಂಬರ್ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು 65,187 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. 2020ರ ಡಿಸೆಂಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 65,492 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.45 ರಷ್ಟು ಬೆಳವಣಿಗೆಯಾಗಿದೆ.

L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

ಇನ್ನು 2019ರ ಡಿಸೆಂಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 48,489 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು 2021ರ ಡಿಸೆಂಬರ್ ಮಾರಾಟಕ್ಕೆ ಹೋಲಿಸಿದರೆ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದ್ದಾರೆ.

L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

ಕಳೆದ ತಿಂಗಳ ಕಂಪನಿಯು 8,552 ಯುನಿಟ್‌ಗಳನ್ನು ವಿದೇಶಕ್ಕೆ ರಫ್ಟು ಮಾಡಲಾಗಿದೆ. 2020ರ ಡಿಸೆಂಬರ್ ತಿಂಗಳಿನಲ್ಲಿ 3,503 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.144.13 ರಷ್ಟು ಹೆಚ್ಚಳವಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು 2021ರ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ 60,898 ಯುನಿಟ್‌ಗಳನ್ನು ಮಾರಾಟ ಮಾಡಿದೆ,

L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

ಏಪ್ರಿಲ್ ಮತ್ತು ಡಿಸೆಂಬರ್ 2020 ರ ಅವಧಿಯಲ್ಲಿ ಮಾರಾಟವಾದ 383,779 ಯುನಿಟ್‌ಗಳಿಗೆ ಹೋಲಿಸಿದರೆ ಸುಮಾರು ಶೇ.6 ರಷ್ಟು ಕುಸಿತವಾಗಿದೆ. ಮತ್ತೊಂದೆಡೆ, ರಫ್ತುಗಳು, 55,695 ಯುನಿಟ್‌ಗಳಾದರೆ, ಹಿಂದಿನ ಹಣಕಾಸು ವರ್ಷದಲ್ಲಿ 23,677 ರಷ್ಟಿತ್ತು. ಇದು ರಫ್ತಿನಲ್ಲಿ 135 ಪ್ರತಿಶತದಷ್ಟು ಏರಿಕೆಯಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಈ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 350ಸಿಸಿಯಿಂದ 650ಸಿಸಿ ವರೆಗಿನ ಬೈಕ್‌ಗಳನ್ನು ಬಿಡುಗಡೆಗೊಳಿಸಳಿವೆ,

L&T ಫೈನಾನ್ಸ್‌ನೊಂದಿಗೆ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ Royal Enfield

ರಾಯಲ್ ಎನ್‌ಫೀಲ್ಡ್ ಇತ್ತೀಚೆಗೆ ಸ್ಕ್ರ್ಯಾಮ್, ಶಾಟ್‌ಗನ್, ಹಂಟರ್, ಫ್ಲೈಯಿಂಗ್ ಫ್ಲಿಯಾ, ಶೆರ್ಪಾ ಮತ್ತು ರೋಡ್ಸ್ಟರ್ ಸೇರಿದಂತೆ ಮುಂಬರುವ ಮಾದರಿಗಳಿಗಾಗಿ ಅನೇಕ ನೇಮ್‌ಪ್ಲೇಟ್‌ಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ. 2022ಕ್ಕೆ ಹಲವಾರು ನವೀಕರಣಗಳನೊಂದಿಗೆ ತಮ್ಮ ಜನಪ್ರಿಯ ಮಾದರಿಗಳನ್ನು ಪರಿಚಯಿಸುತ್ತದೆ. ಇದರಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತದಲ್ಲಿ ನ್ಯೂ ಜನರೇಷನ್ ಬುಲೆಟ್ 350 ಅನ್ನು 2022 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Most Read Articles

Kannada
English summary
Royal enfield partnered with l and t for finance to offer two wheeler loans details
Story first published: Friday, January 14, 2022, 17:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X