ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಹೊಸ ಹಣಕಾಸಿನ ವರ್ಷದ ಆರಂಭದೊಂದಿಗೆ, ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ತನ್ನ ಬೈಕ್‌ಗಳು ಬೆಲೆಗಳನ್ನು ಹೆಚ್ಚಿಸಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು ಮತ್ತಷ್ಟು ದುಬಾರಿಯಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು

ಬೆಲೆ ಏರಿಕೆ ಪಡೆದುಕೊಂದ ಬಳಿಕ, ಎಂಟ್ರಿ ಲೆವೆಲ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಕಿಕ್ ಸ್ಟಾರ್ಟ್ ರೂಪಾಂತರದ ಬೆಲೆಯು ರೂ,1.48 ಲಕ್ಷವಾಗಿದೆ. ಇನ್ನು ಸ್ಟ್ಯಾಂಡರ್ಡ್ ಬುಲೆಟ್ 350 ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.56 ಲಕ್ಷವಾಗಿದೆ. ಇನ್ನು ಕಿಕ್-ಸ್ಟಾರ್ಟ್ ಮಾಡೆಲ್‌ಗೆ ರೂ.1.48 ಲಕ್ಷವಾದರೆ, ಎಲೆಕ್ಟ್ರಿಕ್-ಸ್ಟಾರ್ಟ್ ಮಾದರಿಗೆ ರೂ.1.63 ಲಕ್ಷವಾಗಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್‌ನ ಹೆಚ್ಚು ಮಾರಾಟವಾಗುವ ಮಾದರಿ ಕ್ಲಾಸಿಕ್ 350 ಬಹು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕ್ ರೂ,3,000 ವರೆಗೂ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಬೆಲೆ ಏರಿಕೆಯ ಬಳಿಕ, ಕ್ಲಾಸಿಕ್ 350 ಬೆಲೆಗಳು ಈಗ ರೆಡ್ಡಿಚ್ ಟ್ರಿಮ್‌ಗೆ ರೂ 1.90 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ಕ್ರೋಮ್ ಸರಣಿಗೆ ರೂ.2.21 ಲಕ್ಷಕ್ಕೆ ಏರುತ್ತವೆ. ಇದರ ನಡುವೆ, ಇದು ಹ್ಯಾಲ್ಸಿಯಾನ್, ಸಿಗ್ನಲ್‌ಗಳು ಮತ್ತು ಡಾರ್ಕ್ ರೂಪಾಂತರಗಳಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಲಭ್ಯವಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು

ಬ್ರ್ಯಾಂಡ್‌ನ ಏಕೈಕ ಕ್ರೂಸರ್ ಕೊಡುಗೆಯಾದ ಮಿಟಿಯೊರ್ 350 ಬೈಕಿನ ಬೆಲೆಯನ್ನು ರೂ.4,000-5000 ವರೆಗೂ ಹೆಚ್ಚಿಸಲಾಗಿದೆ.ಮಿಟಿಯೊರ್ 350 ಬೈಕಿನ ಬೇಸ್ ಫೈರ್‌ಬಾಲ್ ರೂಪಾಂತರವು ಈಗ ರೂ 2.05 ಲಕ್ಷ, ಸ್ಟೆಲ್ಲರ್ ರೂಪಾಂತರವು ರೂ 2.11 ಲಕ್ಷ ಮತ್ತು ಟಾಪ್-ಎಂಡ್ ಸೂಪರ್‌ನೋವಾ ರೂಪಾಂತರವು ರೂ 2.22 ಲಕ್ಷ ಬೆಲೆಯಲ್ಲಿ ಲಭ್ಯವಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು

ಮುಂದಿನ ಸಾಲಿನಲ್ಲಿ ಹಿಮಾಲಯವನ್ನು ಆಧರಿಸಿದ ಸ್ಕ್ರಾಮ್ 411 ಆಗಿದೆ. ಈ ವರ್ಷದ ಮಾರ್ಚ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸ್ಕ್ರ್ಯಾಂಬ್ಲರ್ ಬೈಕ್, 2,000 ರಿಂದ 3,000 ರೂ. ಇತ್ತೀಚಿನ ಬೆಲೆ ನವೀಕರಣದ ನಂತರ, ಸ್ಕ್ರಾಮ್ 411 ಈಗ 2.05 ಲಕ್ಷದಿಂದ 2.11 ಲಕ್ಷದ ನಡುವೆ ಬೆಲೆಯಿದೆ. ಇದು ಬಹು ಬಣ್ಣದ ಆಯ್ಕೆಗಳೊಂದಿಗೆ ಒಂದೇ ಟ್ರಿಮ್‌ನಲ್ಲಿ ಲಭ್ಯವಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್‌ ಹಿಮಾಲಯನ್ ಅಡ್ವೆಂಚರ್ ಟೂರರ್ ಬೈಕ್ ಬೆಲೆಯು ರೂ,4,000 ರಿಂದ 5,000 ರೂ.ವರೆಗಿನ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಬೆಲೆ ಏರಿಕೆಯ ಬಳಿಕ, ಹಿಮಾಲಯನ್ ಬೈಕಿನ ಆರಂಭಿಕ ಬೆಲೆಯು ರೂ.2.19 ಲಕ್ಷವಾಗಿದೆ. ಹಿಮಾಲಯನ್ ಅನ್ನು ಆಯ್ಕೆ ಮಾಡಲು ಬಹು ಬಣ್ಣದ ಆಯ್ಕೆಗಳೊಂದಿಗೆ ಒಂದೇ ಟ್ರಿಮ್‌ನಲ್ಲಿ ನೀಡಲಾಗುತ್ತದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು

ಬ್ರ್ಯಾಂಡ್‌ನ ಪ್ರಮುಖ 650 ಟ್ವಿನ್‌ಗಳು ಸಹ ಜನಪ್ರಿಯ ಮಾದರಿಗಳಾಗಿವೆ. ಇಂಟರ್‌ಸೆಪ್ಟರ್ ಬೈಕಿನ ಬೆಲೆಯು ರೂ.3,000-4,000 ಗಳವರೆಗೆ ಬೆಲೆ ಏರಿಕೆಯನ್ನು ಪಡೆದಿದ್ದರೆ, ಕಾಂಟಿನೆಂಟಲ್ ಜಿಟಿ ಬೈಕ್ ಬೆಲೆಯು ರೂ.3,000-5,000 ವರೆಗೂ ಏರಿಕೆಯಾಗಿದೆ. ಎಬೆಲ್ ಏರಿಕೆಯ ಬಳಿಕ ರಾಯಲ್ ಎನ್‌ಫೀಲ್ಡ್‌ ಇಂಟರ್‌ಸೆಪ್ಟರ್ 650 ಬೈಕಿನ ಬೆಲೆಯು ರೂ.2.88 ಲಕ್ಷವದರೆ, ಕಾಂಟಿನೆಂಟಲ್ ಜಿಟಿ ಬೈಕ್ ಎಬೆಲ್ಯು ರೂ.3.26 ಲಕ್ಷದ ವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು

ಇನ್ನು ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 2022ರ ಮಾರ್ಚ್ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 59,160 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು

ಕಳೆದ ವರ್ಷದ ಇದೇ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 66,058 ಯುನಿಟ್‌ಗಳನ್ನು ಮಾರಾಟಗೊಳಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಸುಮಾರು ಶೇಕಡಾ 2.39 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 58,477 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಆದರೆ ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ 60,173 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ದೇಶಿಯ ಮಾರುಕಟ್ಟೆಯ ಮಾರಾಟದಲ್ಲಿ ಶೇಕಡಾ 3 ರಷ್ಟು ಕುಸಿತವನ್ನು ಕಂಡಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು

ಇನ್ನು ರಫ್ತು ವಿಭಾಗದಲ್ಲಿ, ಕಳೆದ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 9,200 ಯುನಿಟ್‌ಗಳನ್ನು ರಫ್ತು ಮಾಡಿದೆ. 2021ರ ಮಾರ್ಚ್ ತಿಂಗಳಿನಲ್ಲಿ 5,885 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇಕಡಾ 56 ರಷ್ಟು ಏರಿಕೆಯಾಗಿದೆ. ಇನ್ನು ರಾಯಲ್ ಎನ್‍ಫೀಲ್ಡ್ ಮೆಟಿಯೊರ್ 350 ಬೈಕ್‌ ಅನ್ನು ಸಹ ವಿಶ್ವದ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕ್‌ಗಳನ್ನು ಥೈಲ್ಯಾಂಡ್, ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 350ಸಿಸಿಯಿಂದ 650ಸಿಸಿ ವರೆಗಿನ ಬೈಕ್‌ಗಳನ್ನು ಬಿಡುಗಡೆಗೊಳಿಸಲಿವೆ. ಶೀಘ್ರದಲ್ಲೇ ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಿಡುಗಡೆಯಗಲಿವೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Royal enfield price hike april 2022 find here more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X