ಬಹುನಿರೀಕ್ಷಿತ ಹೀರೋ 'ಎಕ್ಸ್‌ಪಲ್ಸ್ 200T 4V' ಬೈಕ್ ಟೀಸರ್ ಬಿಡುಗಡೆ

ಹೀರೋ ಮೋಟೊಕಾರ್ಪ್ ಕಂಪನಿ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ರೆಡಿಯಾಗಿರುವ 'ಎಕ್ಸ್‌ಪಲ್ಸ್ 200T 4V'ನ ಮತ್ತೊಂದು ಟೀಸರ್ ಅನ್ನು ಬಿಡುಗಡೆ ಮಾಡಿದೆ. ಅಧಿಕೃತ ವಿವರಗಳನ್ನು ಈವರೆಗೆ ಘೋಷಣೆ ಮಾಡಿಲ್ಲ. ಈ ತಿಂಗಳ ಅಂತ್ಯದೊಳಗೆ ಈ ಹೊಸ ಮೋಟಾರ್‌ಸೈಕಲ್ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಈ ಬೈಕ್, ಮಾರುಕಟ್ಟೆಯಿಂದ ದೂರವಾದ ಹಿಂದಿನ ಮಾದರಿ (Expuls 200 2V)ಯಂತೆಯೇ ಕಾಣಿಸಿಕೊಂಡರೂ ಕೆಲವೊಂದು ಪ್ರಮುಖ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಈಗ ನೂತನವಾಗಿ ಗೈಟರ್‌ಗಳನ್ನು ಹೊಂದಿದೆ. ಆದರೆ, ಹೆಡ್‌ಲ್ಯಾಂಪ್‌ಗಳನ್ನು ಮರು-ವಿನ್ಯಾಸಗೊಳಿಸಲಾಗಿದ್ದು, ಮೊದಲಿಗಿಂತಲ್ಲೂ ಆಕರ್ಷಕವಾಗಿ ಕಾಣುತ್ತದೆ. ಇಷ್ಟೇ ಅಲ್ಲದೆ, ಬೆಲ್ಲಿ ಪ್ಯಾನ್ ಅನ್ನು ಸಹ ರೀ-ಡಿಸೈನ್ ಮಾಡಲಾಗಿದೆ. ಹಲವು ಹೊಸ ಬಣ್ಣಗಳ ಆಯ್ಕೆಯಲ್ಲಿ ಈ 'Xpulse 200T 4V' ಖರೀದಿಗೆ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

ಬಹುನಿರೀಕ್ಷಿತ ಹೀರೋ ಎಕ್ಸ್‌ಪಲ್ಸ್ 200T 4V ಬೈಕ್ ಟೀಸರ್ ಬಿಡುಗಡೆ

Expuls 200 2Vಯಂತೆಯೇ ಮುಂಬರುವ ಹೀರೋ Xpulse 200T 4Vಯು ಸಹ 199.6 ಸಿಸಿ ಸಿಂಗಲ್-ಸಿಲಿಂಡರ್ ಏರ್-ಮತ್ತು ಆಯಿಲ್-ಕೂಲ್ಡ್ 4-ವಾಲ್ವ್ ಎಂಜಿನ್‌ ಅನ್ನು ಹೊಂದಿದ್ದು, ಇದು 8,500 rpm ನಲ್ಲಿ 18.8 bhp ಪವರ್ ಮತ್ತು 6,500 rpm ನಲ್ಲಿ 17.35 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಬಹುದು. ಈ ಬೈಕಿನ ಪವರ್‌ಟ್ರೇನ್ ಸಾಕಷ್ಟು ಉತ್ತಮವಾಗಿದ್ದು, ಇದು 5-ಸ್ವೀಡ್ ಟ್ರಾನ್ಸ್ಮಿಷನ್ ನೊಂದಿಗೆ ಸಂಪರ್ಕ ಹೊಂದಿದೆ.

ಈ ನೂತನ ಹೀರೋ Xpulse 200T 4V ಪ್ರಾಥಮಿಕವಾಗಿ ನೋಡಲು 'ಯಮಹಾ FZ-X' ರೀತಿಯೇ ಕಾಣುತ್ತದೆ. ಆದರೆ, ರಾಯಲ್ ಎನ್‌ಫೀಲ್ಡ್ ಹಂಟರ್ 350 ಮತ್ತು TVS ರೋನಿನ್ 225ಗಿಂತ ಭಿನ್ನವಾಗಿದೆ ಎಂದು ಹೇಳಬಹುದು. ಸಸ್ಪೆನ್ಷನ್ ಬಗ್ಗೆ ಹೇಳುವುದಾದರೆ, 7-ಸ್ಟೆಪ್ ಅಡ್ಜಸ್ಟ್ಏಬಲ್ ಮೊನೊಶಾಕ್ ರೇರ್ ಸಸ್ಪೆನ್ಷನ್ ಈ ಹೊಸ ಬೈಕಿನಲ್ಲಿಯೂ ಇದೆ. ಬ್ರೇಕುಗಳು 276 ಎಂಎಂ ಮುಂಭಾಗದ ಡಿಸ್ಕ್ ಮತ್ತು 220 ಎಂಎಂ ಹಿಂಭಾಗದ ಡಿಸ್ಕ್ ಸಿಂಗಲ್-ಚಾನೆಲ್ ಎಬಿಎಸ್ ಸಿಸ್ಟಮ್‌ನೊಂದಿಗೆ ಕಾರ್ಯ ನಿರ್ವಹಿಸುತ್ತವೆ.

ಇನ್ನು, Hero Xpulse 200T 4V ಬೆಲೆಯನ್ನು ಕಂಪನಿಯು ಈವರೆಗೆ ಘೋಷಿಸಿಲ್ಲ. ಆದರೆ, 1.29 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಬೈಕಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ನ್ಯಾವಿಗೇಶನ್‌ನೊಂದಿಗೆ ಆಲ್-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಯೂನಿಟ್, ಎಲ್‌ಇಡಿ ಹೆಡ್‌ಲ್ಯಾಂಪ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಸದ್ಯ ಈ ಮೋಟಾರ್‌ಸೈಕಲ್ ಮೇಲೆ ಗ್ರಾಹಕರಿಗೆ ನಿರೀಕ್ಷೆಗಳು ಸಾಕಷ್ಟು ಹೆಚ್ಚಾಗುತ್ತಿದೆ ಎಂದು ಹೇಳಬಹುದು.

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಎಂದೇ ಖ್ಯಾತಿಗಳಿರುವ ಈ ಹೀರೋ ಮೋಟೊಕಾರ್ಪ್, ಇತ್ತೀಚೆಗೆ ಭಾರತದಲ್ಲಿ ಎಕ್ಸ್‌ಪಲ್ಸ್ 200 2ವಿ ಅನ್ನು ಸ್ಥಗಿತಗೊಳಿಸಿರುವುದು ಗಮನರ್ಹ ಸಂಗತಿಯಾಗಿದೆ ಎಂದು ಹೇಳಬಹುದು. ಆದರೆ, ಹೀರೋ ಕಂಪನಿಯು ಸ್ಥಗಿತಗೊಳಿಸುವಿಕೆಗೆ ಕಾರಣವನ್ನು ಈವರೆಗೆ ನಿರ್ದಿಷ್ಟಪಡಿಸದಿದ್ದರೂ, ಇತರೆ Xpulse ಮಾದರಿಗಳ ಹಾದಿಯನ್ನು ಸುಗಮಗೊಳಿಸಲು ಜೊತೆಗೆ ಮುಂಬರುವ 300 ಸಿಸಿ ADVಗಾಗಿ ಮಾರುಕಟ್ಟೆಯಲ್ಲಿ ಜಾಗ ಮಾಡಿಕೊಡಲು ಈ ಕ್ರಮಕ್ಕೆ ಮುಂದಾಗಿದೆ ಎಂದು ಅಂದಾಜಿಸಲಾಗಿದೆ.

ಸ್ಥಗಿತಗೊಂಡಿರುವ ಈ ಎಕ್ಸ್‌ಪಲ್ಸ್ 200 2V ರೂಪಾಂತರದ ಬೆಲೆ ಭಾರತದ ಮಾರುಕಟ್ಟೆಯಲ್ಲಿ 1.27 ಲಕ್ಷ ರೂ. ಇತ್ತು. ಇದು 199.6 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 8,500 rpm ನಲ್ಲಿ 17.8 hp ಗರಿಷ್ಠ ಪವರ್ ಮತ್ತು 6,500 rpm ನಲ್ಲಿ 16.45 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಮುಂಬರಲಿರುವ ಎಕ್ಸ್‌ಪಲ್ಸ್ 200T 4V ಆವೃತ್ತಿಗೆ ಹೋಲಿಸಿದರೆ, 1.3 hp ಮತ್ತು 0.9 Nm ಕಡಿಮೆಯಾಗಿದೆ ಎಂದೇ ಹೇಳಬಹುದು.

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ 300-400 ಸಿಸಿ ಮೋಟಾರ್‌ಸೈಕಲ್ ಮಾರುಕಟ್ಟೆ ಗಣನೀಯವಾಗಿ ಬೆಳೆದಿದೆ. ADVಗಳಿಂದ ಹಿಡಿದು ಸೂಪರ್‌ಸ್ಪೋರ್ಟ್‌ಗಳವರೆಗೆ ವಿವಿಧ ಕಂಪನಿಗಳು ಹಲವು ಮಾದರಿಯನ್ನು ಬಿಡುಗಡೆ ಮಾಡಿವೆ. ಹೀರೋ ಮೋಟೊಕಾರ್ಪ್ ಸಹ ಅದೇ ವಿಭಾಗದ ಮೇಲೆ ಕಣ್ಣಿಟ್ಟಿದ್ದು, ಮುಂಬರುವ 300 ಸಿಸಿ ADV ಮತ್ತು ಸೂಪರ್‌ಸ್ಪೋರ್ಟ್‌ಗಳನ್ನು ಈಗ ಭಾರತದಲ್ಲಿ ಪರೀಕ್ಷಿಸಲಾಗಿದೆ. ADV ಟೆಸ್ಟ್ ಬೈಕ್, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ ಸೆಟಪ್ ಜೊತೆ ಸ್ಪೋಕ್ಡ್ ವೀಲ್ಸ್ ಅನ್ನು ಹೊಂದಿರಬಹುದು. 2023ರ ಅಂತ್ಯದ ವೇಳೆಗೆ ಹೀರೋ ಹೊಸ ಬೈಕ್ ಅನ್ನು ಅನಾವರಣಗೊಳಿಸಬಹುದು.

Most Read Articles

Kannada
English summary
The much awaited hero expulse 200t 4v bike teaser released
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X