ಭಾರತದಲ್ಲಿ ಬಹುನಿರೀಕ್ಷಿತ ಹೀರೋ 'ಎಕ್ಸ್‌ಪಲ್ಸ್ 200T 4V' ಬೈಕ್ ಬಿಡುಗಡೆ

ಬೈಕ್ ಪ್ರಿಯರ ಇಷ್ಟದ ಬ್ರ್ಯಾಂಡ್ ಹೀರೋ ಮೋಟೊಕಾರ್ಪ್ ಕಂಪನಿ, ಭಾರತೀಯ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ 'ಎಕ್ಸ್‌ಪಲ್ಸ್ 200T 4V' ಬೈಕ್ ಅನ್ನು ಬಿಡುಗಡೆ ಮಾಡಿದೆ. ಆತ್ಯಾಕರ್ಷಕ ವೈಶಿಷ್ಟ್ಯಗಳು ಹಾಗೂ ಲುಕ್ ಹೊಂದಿರುವ ಈ ಬೈಕ್ ಬಹುತೇಕ ಖರೀದಿದಾರರನ್ನು ತನ್ನತ್ತ ಸೆಳೆಯುತ್ತಿದ್ದು, ನಿರೀಕ್ಷಿತ ಬೆಲೆಗಿಂತ ಕೊಂಚ ಕಡಿಮೆ ಬೆಲೆಯಲ್ಲಿಯೇ ಸಿಗಲಿದೆ.

ಆಕರ್ಷಕ ವಿನ್ಯಾಸ ಹೊಂದಿರುವ 'ಎಕ್ಸ್‌ಪಲ್ಸ್ 200T 4V' ಮೋಟಾರ್‌ಸೈಕಲ್ ಅನ್ನು ರೂ.1,25,726 ಬೆಲೆಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿ ಬಿಡುಗಡೆ ಮಾಡಿದೆ (ಎಕ್ಸ್ ಶೋ ರೂಂ, ಮುಂಬೈ). ಆಸಕ್ತ ಗ್ರಾಹಕರು ತಮ್ಮ ಹತ್ತಿರದ ಹೀರೋ ಡೀಲರ್‌ಶಿಪ್‌ ಭೇಟಿ ನೀಡುವ ಮೂಲಕ ಈ ಮೋಟಾರ್‌ಸೈಕಲ್ ಅನ್ನು ಖರೀದಿಸಬಹುದು. ಹೊಸ ಹೀರೋ 'ಎಕ್ಸ್‌ಪಲ್ಸ್ 200T 4V ಮೂರು ಹೊಸ ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಸ್ಪೋರ್ಟ್ಸ್ ರೆಡ್, ಮ್ಯಾಟ್ ಫಂಕ್ ಲೈಮ್ ಯೆಲ್ಲೋ ಮತ್ತು ಮ್ಯಾಟ್ ಶೀಲ್ಡ್ ಗೋಲ್ಡ್.

ನೂತನ ಹೀರೋ ಎಕ್ಸ್‌ಪಲ್ಸ್ 200T 4V ಮೋಟಾರ್‌ಸೈಕಲ್ ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಈ ಬೈಕ್ BS6 200 ಸಿಸಿ 4 ವಾಲ್ವ್ ಆಯಿಲ್-ಕೂಲ್ಡ್ ಎಂಜಿನ್ ಹೊಂದಿದ್ದು, ಅದು 8,500 rpm ನಲ್ಲಿ 19.1 PS ಪವರ್ ಹಾಗೂ 6,500 rpm ನಲ್ಲಿ 17.3Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ 6% ಅಧಿಕ ಪವರ್ ಮತ್ತು 5% ಹೆಚ್ಚುವರಿ ಟಾರ್ಕ್ ಉತ್ಪಾದಿಸಲಿದೆ.

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು, ಗೇರ್ ರೇಶಿಯೋವನ್ನು ಉತ್ತಮ ಟ್ರಾಕ್ಟಿವ್ ಎಫರ್ಟ್ ಮತ್ತು ವೇಗವರ್ಧನೆಗಾಗಿ ಅಪ್‌ಗ್ರೇಡ್ ಮಾಡಲಾಗಿದೆ ಎಂದು ಹೀರೋ ಕಂಪನಿ ಹೇಳಿದೆ. ಅಲ್ಲದೆ, ಹೀರೋ ಎಕ್ಸ್‌ಪಲ್ಸ್ 200T 4Vಯು ಸ್ಮಾರ್ಟ್‌ಫೋನ್ ಕನೆಕ್ಟ್ ಮತ್ತು ಕಾಲ್ ಅಲರ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, USB ಚಾರ್ಜರ್, ಗೇರ್ ಇಂಡಿಕೇಟರ್ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್‌ನೊಂದಿಗೆ ಸಂಪೂರ್ಣ-ಡಿಜಿಟಲ್ LCD ಇನ್ಸ್ಟ್ರುಮೆಂಟಲ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಹೀರೋ ಎಕ್ಸ್‌ಪಲ್ಸ್ 200T 4V ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ನಿಯೋ-ರೆಟ್ರೋ ಸ್ಟೈಲಿಂಗ್ ಮತ್ತು ಬೋಲ್ಡ್ರ್ ಗ್ರಾಫಿಕ್ಸ್ ಒಳಗೊಂಡಿರುವ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಕ್ರೋಮ್ ರಿಂಗ್‌ ಜೊತೆಗೆ ಸ್ಪೋರ್ಟ್ಸ್ ಸರ್ಕ್ಯುಲರ್ ಫುಲ್-ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಪೊಸಿಷನ್ ಲ್ಯಾಂಪ್‌ಗಳನ್ನು 20 ಎಂಎಂ ಕಡಿಮೆ ಮಾಡಲಾಗಿದೆ. ಇದಲ್ಲದೆ, ರಿಲ್ಯಾಕ್ಸ್ಡ್ ಸೀಟ್ ಪೊಸಿಷನ್ ಮತ್ತು ಟ್ಯೂಬ್ ಮಾದರಿಯ ರೆಟ್ರೊ ಪಿಲಿಯನ್ ಗ್ರಾಬ್ ಅನ್ನು ಈ ಬೈಕ್ ಪಡೆದುಕೊಂಡಿದೆ.

ನೂತನ ಹೀರೋ ಎಕ್ಸ್‌ಪಲ್ಸ್ 200T 4V ಬೈಕಿನ ಸಸ್ಪೆನ್ಷನ್ ಮತ್ತು ಬ್ರೇಕಿಂಗ್ ವ್ಯವಸ್ಥೆಯ ಬಗ್ಗೆ ಮಾತನಾಡುವುದಾದರೆ, ಸಸ್ಪೆನ್ಷನ್ ಡ್ಯೂಟಿಗಳನ್ನು 37 ಎಂಎಂ ಫ್ರಂಟ್ ಫೋರ್ಕ್‌ಗಳು ಮತ್ತು 7-ಸ್ಟೆಪ್ ಅಡ್ಜಸ್ಟ್ಏಬಲ್ ಮೊನೊ-ಶಾಕ್ ಯುನಿಟ್ ನಿಂದ ನಿರ್ವಹಿಸಲಾಗುತ್ತದೆ. ಅಲ್ಲದೆ, ಈ ಮೋಟಾರ್‌ಸೈಕಲ್ ಸುರಕ್ಷತೆಗಾಗಿ 276 ಎಂಎಂ ಮುಂಭಾಗ ಮತ್ತು 220 ಎಎಂ ಹಿಂಭಾಗದ ಪೆಟಲ್ ಡಿಸ್ಕ್ ಬ್ರೇಕ್‌ಗಳನ್ನು ಪಡೆದುಕೊಂಡಿದೆ. ಇಷ್ಟೆಲ್ಲ ಆಕರ್ಷಕ ವಿನ್ಯಾಸ ಹೊಂದಿರುವ ಈ ಬೈಕ್ ಅನ್ನು ಆಟೋಮೊಬೈಲ್ ಪ್ರಿಯರು ಲೈಕ್ ಮಾಡುತ್ತಾರೆ ಎಂದು ಹೇಳಬಹುದು.

ಈ ಬಗ್ಗೆ ಹೀರೋ ಮೋಟೋಕಾರ್ಪ್ ಚೀಫ್ ಗ್ರೋಥ್ ಆಫೀಸರ್ (CGO) ರಂಜಿವ್ಜಿತ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, 'ಎಕ್ಸ್‌ಪಲ್ಸ್ 200T 4V ಭಾರತದಲ್ಲಿ ಮೋಟಾರ್‌ಸೈಕ್ಲಿಂಗ್ ಆಸಕ್ತರ ಮನದಲ್ಲಿ ಗಟ್ಟಿಯಾಗಿ ಬೇರೂರಲಿದೆ. ಹೊಸ ಬೈಕ್ ಬಿಡುಗಡೆಯೊಂದಿಗೆ ಈ ಪ್ರವೃತ್ತಿಯು ಮತ್ತಷ್ಟು ಬಲಗೊಳ್ಳುತ್ತದೆ ಎಂದು ನಮಗೆ ಖಚಿತವಾಗಿದೆ. ಸವಾರರಿಗೆ ವಿಶಿಷ್ಟವಾದ ಅನುಭವವನ್ನು ನೀಡುವ ಮೂಲಕ ಎಕ್ಸ್‌ಪಲ್ಸ್ 200T 4V ನಿಜವಾಗಿಯೂ ಹೊಸ ಅವತಾರದಲ್ಲಿ ಬರುತ್ತಿದ್ದು, ಅದರ ರೆಟ್ರೋ ವಿನ್ಯಾಸ ಯುವ ಜನರನ್ನು ತನ್ನತ್ತ ಆಕರ್ಷಿಸುತ್ತದೆ' ಎಂದು ಹೇಳಿದ್ದಾರೆ.

ಇನ್ನು, ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಎಂದೇ ಖ್ಯಾತಿಗಳಿರುವ ಹೀರೋ ಮೋಟೊಕಾರ್ಪ್, ಈ ಎಕ್ಸ್‌ಪಲ್ಸ್ 200T 4V ಬಿಡುಗಡೆಯೊಂದಿಗೆ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರನ್ನು ಸೆಳೆಯಬಹುದು. ಇದು ರೆಟ್ರೋ ಲುಕ್ ಹೊಂದಿದ್ದು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಅಲ್ಲದೆ, ಇತ್ತೀಚೆಗೆ ಭಾರತದಲ್ಲಿ ಎಕ್ಸ್‌ಪಲ್ಸ್ 200 2ವಿ ಅನ್ನು ಸ್ಥಗಿತಗೊಳಿಸಿರುವುದು ಗಮನರ್ಹ ಸಂಗತಿಯಾಗಿದೆ. ಈ ಹೊಸ ಬೈಕ್ ತನ್ನ ಆಕರ್ಷಕ ವೈಶಿಷ್ಠ್ಯಗಳಿಂದ ಅದರ ಜಾಗವನ್ನು ಖಂಡಿತ ತುಂಬಲಿದೆ ಎಂದು ಹೇಳಬಹುದು.

Most Read Articles

Kannada
English summary
The much awaited retro steel hero expulse 200t 4v bike launched in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X