ಮುಂಬರಲಿರುವ ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳು

ದೇಶದ ಯುವ ಜನರಿಗೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳೆಂದರೇ ತುಂಬಾ ಇಷ್ಟ. ಈ ವರ್ಷ ಹಲವಾರು ಹೊಸ ಮೋಟಾರ್‌ಸೈಕಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಕಂಪನಿ, ಮುಂದಿನ ವರ್ಷವು ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650, ಹಿಮಾಲಯನ್ 450 ಹಾಗೂ ಬುಲೆಟ್ 350 ಮೋಟಾರ್‌ಸೈಕಲ್‌ಗಳನ್ನು ಲಾಂಚ್ ಮಾಡಲಿದೆ.

ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650:
ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ GT 650 ಮೋಟಾರ್‌ಸೈಕಲ್‌ಗಳಿಗೆ ಪವರ್ ಒದಗಿಸಲು ಬಳಸಿರುವ 650 ಸಿಸಿ ಪ್ಯಾರಲಲ್- ಟ್ವಿನ್ ಎಂಜಿನ್ ಅನ್ನು ಇದೀಗ ಮುಂಬರುವ ಸೂಪರ್ ಮೀಟಿಯರ್ 650ಗಾಗಿಯು ಉಪಯೋಗಿಸಲಾಗಿದೆ. ಈ ಬೈಕ್ ಅನ್ನು ಮೊದಲು ಮಿಲನ್‌ನಲ್ಲಿ ನಡೆದ EICMA ಮೋಟಾರ್‌ಸೈಕಲ್ ಪ್ರದರ್ಶನದಲ್ಲಿ ಅನಾವರಣಗೊಳಿಸಲಾಯಿತು. ನಂತರ, ಗೋವಾದಲ್ಲಿ ನಡೆದ ರೈಡರ್ ಮೇನಿಯಾ 2022ರಲ್ಲಿ ಅದದನ್ನು ಚೊಚ್ಚಲ ಬಾರಿಗೆ ಪ್ರದರ್ಶಿಸಲಾಯಿತು.


ಮುಂಬರಲಿರುವ ಸೂಪರ್ ಮೀಟಿಯರ್ 650ಯ ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು ಏರ್-ಆಯಿಲ್-ಕೂಲ್ಡ್ ಎಂಜಿನ್ ಅನ್ನು ಹೊಂದಿದ್ದು, ಇದು 650 47 hp ಗರಿಷ್ಠ ಪವರ್ ಮತ್ತು 52 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಇದನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಸೂಪರ್ ಮೆಟಿಯರ್ 650, USD ಫೋರ್ಕ್‌ಗಳೊಂದಿಗೆ ಅತ್ಯಂತ ಆಧುನಿಕ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ ಆಗಿರಲಿದ್ದು, ಇದು ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಆಯ್ಕೆಯನ್ನು ಹೊಂದಿದ ಮೊದಲ ಬೈಕ್ ಆಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450:
ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿರುವ ಹಿಮಾಲಯನ್ 411ಸಿಸಿ ADVಗೆ ಹೋಲಿಸಿದರೆ, ಸ್ವಲ್ಪ ದೊಡ್ಡದಾದ ಮತ್ತು ಹೆಚ್ಚು ಶಕ್ತಿಶಾಲಿಯಾಗಿ ನೂತನ ಹಿಮಾಲಯನ್ 450 ಇರುತ್ತದೆ ಎಂದು ಹೇಳಬಹುದು. ಇದು 450 ಸಿಸಿ ಸಿಂಗಲ್ - ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿರಲಿದ್ದು, ಸುಮಾರು 40 hp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 6 - ಸ್ವೀಡ್ ಟ್ರಾನ್ಸ್ಮಿಷನ್ ಜೊತೆಗೆ ಗ್ರಾಹಕರಿಗೆ ಸಿಗಲಿದೆ.

2023ರ ದ್ವಿತೀಯಾರ್ಧದಲ್ಲಿ ಹೊಸ ಹಿಮಾಲಯನ್ 450 ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದು ಸುಮಾರು 2.8 ಲಕ್ಷ ರೂ.(ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿರಬಹುದು. ಅಲ್ಲದೆ, ಯುಎಸ್‌ಡಿ ಫ್ರಂಟ್ ಫೋರ್ಕ್ಸ್, ಹಿಂಭಾಗದಲ್ಲಿ ಮೊನೊ-ಶಾಕ್ ಅಬ್ಸಾರ್ಬರ್, 21-ಇಂಚಿನ ಮತ್ತು 18-ಇಂಚಿನ ವೈರ್-ಸ್ಪೋಕ್ ವೀಲ್‌ಗಳನ್ನು ಈ ಹೊಸ ಮೋಟಾರ್‌ಸೈಕಲ್‌ ಪಡೆದುಕೊಂಡಿರಲಿದೆಯಂತೆ. ಅಲ್ಲದೆ, ಹೊಸ 450 ಸಿಸಿ ಎಂಜಿನ್ ಪ್ಲಾಟ್‌ಫಾರ್ಮ್ ಆಧರಿಸಿ, ಹಂಟರ್ 450ನಂತಹ ಮೋಟಾರ್‌ಸೈಕಲ್‌ಗಳನ್ನು ರೆಡಿ ಮಾಡಲು ರಾಯಲ್ ಎನ್‌ಫೀಲ್ಡ್ ಮುಂದಾಗಿದೆ.

ಹಿಮಾಲಯನ್, ರಾಯಲ್ ಎನ್‌ಫೀಲ್ಡ್‌ನ ಆಫ್-ರೋಡ್ ಕೇಂದ್ರೀಕೃತ ಮೋಟಾರ್‌ಸೈಕಲ್ ಆಗಿದ್ದು, ಇದು ಮೂರು ಹೊಸ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ ಎಂದು ಹೇಳಲಾಗಿದೆ. ಅವುಗಳೆಂದರೇ ಗ್ರಾನೈಟ್ ಬ್ಲಾಕ್, ಪೈನ್ ಗ್ರೀನ್ ಮತ್ತು ಮಿರಾಜ್ ಸಿಲ್ವರ್. ಇವುಗಳ ಜೊತೆಗೆ ರಾಕ್ ರೆಡ್, ಲೇಕ್ ಬ್ಲೂ ಮತ್ತು ಗ್ರೇವೆಲ್ ಗ್ರೇಯಂತಹ ಅಸ್ತಿತ್ವದಲ್ಲಿರುವ ಆಯ್ಕೆಗಳು ಇರಲಿವೆ. ಈ ಮಧ್ಯೆ ತಯಾರಕರು, ಅದರ ಕ್ಯಾಟಲಾಗ್‌ನಿಂದ ಸ್ನೋ ಮತ್ತು ಸ್ಲೀಟ್ ಗ್ರೇಗಾಗಿ ಬಣ್ಣದ ಆಯ್ಕೆಗಳನ್ನು ತೆಗೆದುಹಾಕಿದ್ದಾರೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ 350:
ಬ್ರ್ಯಾಂಡ್ ಈಗಾಗಲೇ ಕ್ಲಾಸಿಕ್ 350ಯನ್ನು ಹೊಸ ಜೆ ಸರಣಿಯ ಎಂಜಿನ್ ಪ್ಲಾಟ್‌ಫಾರ್ಮ್‌ಗೆ ಅಪ್‌ಗ್ರೇಡ್ ಮಾಡಿದೆ. ವಾಸ್ತವವಾಗಿ, ಬುಲೆಟ್ 350 ಹೊರತುಪಡಿಸಿ, ಕಂಪನಿಯ ಯಾವುದೇ ಮೋಟಾರ್‌ಸೈಕಲ್‌ಗಳು ಈಗ ಹಳೆಯ UCE ಎಂಜಿನ್‌ನಿಂದ ಚಾಲಿತವಾಗುವುದಿಲ್ಲ. ಮುಂದಿನ ತಿಂಗಳು ಮೀಟಿಯರ್ 650 ಬೆಲೆ ಘೋಷಣೆಯಾದ ನಂತರ, ರಾಯಲ್ ಎನ್‌ಫೀಲ್ಡ್ ಹೊಸ ಬುಲೆಟ್ 350 ಅನ್ನು ಕ್ಲಾಸಿಕ್ 350, ಮೀಟಿಯರ್ 350 ಮತ್ತು ಹಂಟರ್ 350ಗೆ ಶಕ್ತಿ ನೀಡುವ ಅದೇ ಎಂಜಿನ್‌ನೊಂದಿಗೆ ಪರಿಚಯಿಸಬಹುದು.

ಹೊಸ ಬುಲೆಟ್ 350 ಮೋಟಾರ್‌ಸೈಕಲ್‌ ಸಹ ಕ್ಲಾಸಿಕ್‌ ಮಾದರಿಯಂತೆ 20.4 hp ಗರಿಷ್ಠ ಪವರ್ ಮತ್ತು 27 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಬಹುದು. ಅಲ್ಲದೆ, ಜಾವಾ 42 ಬಾಬರ್ ಮತ್ತು ಜಾವಾ ಪೆರಾಕ್ ವಿರುದ್ಧ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ನೀಡಲು ರಾಯಲ್ ಎನ್‌ಫೀಲ್ಡ್ ಮುಂದಿನ ವರ್ಷ, ಕ್ಲಾಸಿಕ್ 350ನ ಸಿಂಗಲ್-ಸೀಟರ್ ಆವೃತ್ತಿಯನ್ನು ಪರಿಚಯಿಸಬಹುದು. ಇದರಲ್ಲಿ ಫುಟ್‌ಪೆಗ್‌ಗಳನ್ನು ಮರು-ವಿನ್ಯಾಸ ಮಾಡಲಾಗಿದ್ದು, ಎತ್ತರದ ಹ್ಯಾಂಡಲ್‌ಬಾರ್ ಸೆಟಪ್ ಅನ್ನು ಪಡೆದಿರಬಹುದು.

Most Read Articles

Kannada
English summary
The much awaited upcoming royal enfield motorcycles
Story first published: Friday, December 30, 2022, 15:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X