ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸ್ಟೈಲಿಷ್ ಮತ್ತು ಒರಟಾದ ಮೋಟಾರ್‌ಸೈಕಲ್ ಆಗಿದ್ದು, ಎಂತಹ ರಸ್ತೆಗಳಲ್ಲೂ ಗಮ್ಯಸ್ಥಾನ ತಲುಪಲು ವಿನ್ಯಾಸಗೊಳಿಸಲಾಗಿದೆ. ಆದರೆ ಈ ಮೋಟಾರ್‌ಸೈಕಲ್ ಸಂಪೂರ್ಣವಾಗಿ ಸಮರ್ಥವಾಗಿಲ್ಲ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಹಾಗಾಗಿ ರಾಯಲ್ ಎನ್‌ಫೀಲ್ಡ್ ಈಗ ಹಿಮಾಲಯನ್ ಮೋಟಾರ್‌ಸೈಕಲ್‌ನ ಹೆಚ್ಚು ಶಕ್ತಿಶಾಲಿ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ.

ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ಅಭಿವೃದ್ಧಿ ಹಂತದಲ್ಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನೊಂದಿಗೆ, KTM 390 ಅಡ್ವೆಂಚರ್ ಮತ್ತು BMW G310 GS ನಂತಹ ಹೆಚ್ಚು ಶಕ್ತಿಶಾಲಿ ಮೋಟಾರ್‌ಸೈಕಲ್‌ಗಳೊಂದಿಗೆ ಸುಲಭವಾಗಿ ಸ್ಪರ್ಧಿಸವಂತಹ ಮಾದರಿಯನ್ನು ತರಲು ವಾಹನ ತಯಾರಕರು ಸಜ್ಜಾಗಿದ್ದಾರೆ.

ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ವಿವಿಧ ಮೂಲಗಳ ಪ್ರಕಾರ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸುಧಾರಿತ ಲಿಕ್ವಿಡ್-ಕೂಲ್ಡ್, 450 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ಸುಮಾರು 45bhp ಗರಿಷ್ಠ ಶಕ್ತಿ ಮತ್ತು 50Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ನಿರೀಕ್ಷೆಯಿದೆ.

ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ಪವರ್ ಯೂನಿಟ್‌ನ ಟಾರ್ಕ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಕಡಿಮೆ-ಮಟ್ಟದ ಪ್ರತಿಕ್ರಿಯೆಗಾಗಿ ರಾಯಲ್ ಎನ್‌ಫೀಲ್ಡ್ ಗರಿಷ್ಠ ಪವರ್ ಉತ್ಪಾದನೆಯನ್ನು ತ್ಯಾಗ ಮಾಡುವ ಸಾಧ್ಯತೆಯಿದೆ. ಅಂತಹ ಪವರ್‌ಟ್ರೇನ್ ಪಾತ್ರವು ಪ್ರಯೋಜನಕಾರಿಯಾಗಿರಲಿದೆ. ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮೋಟಾರ್‌ಸೈಕಲ್‌ ಪ್ರಸ್ತುತವಿರುವ ಹಿಮಾಲಯನ್ ಪುನರಾವರ್ತನೆಯೊಂದಿಗೆ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ಏಕೆಂದರೆ ಎರಡೂ ಮೋಟಾರ್‌ಸೈಕಲ್‌ಗಳು ಸ್ವಲ್ಪ ವಿಭಿನ್ನ ಗ್ರಾಹಕರನ್ನು ಗುರಿಯಾಗಿಸಿಕೊಂಡಿವೆ. ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450ನ ಹಲವಾರು ಸ್ಪೈ ಶಾಟ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಈ ಚಿತ್ರಗಳನ್ನು ವಿಶ್ಲೇಷಿಸುವುದಾದರೆ ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮೋಟಾರ್‌ಸೈಕಲ್ ಪ್ರಸ್ತುತ ಇರುವ ಮಾದರಿಗಿಂತ ಸ್ವಲ್ಪ ದೊಡ್ಡದಾಗಿದೆ ಎಂದು ತಿಳಿಸುತ್ತದೆ.

ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ಇದಲ್ಲದೆ, ಸೋರಿಕೆಯಾದ ಚಿತ್ರಗಳು ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಸ್ಪೋರ್ಟಿ ವಿನ್ಯಾಸದ ಲಕ್ಷಣಗಳಾದ ಕೊಕ್ಕಿನ ಮೂಗು, ದುಂಡಗಿನ ಹೆಡ್‌ಲೈಟ್‌ಗಳು, ದೊಡ್ಡ ಇಂಧನ ಟ್ಯಾಂಕ್, ಸ್ಪೋಕ್ಡ್ ವೀಲ್‌ಗಳು ಮತ್ತು ಹಗುರವಾದ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಅನ್ನು ಖಚಿತಪಡಿಸುತ್ತವೆ. ಈ ಮೂಲಕ ಹಳೇ ಮಾದರಿಯಂತೆ ಹೆಚ್ಚು ಸ್ಟೈಲಿಷ್ ಲುಕ್‌ನಲ್ಲಿ ಮಿಂಚಲಿದ್ದು, ಹೆಚ್ಚು ಪವರ್‌ನೊಂದಿಗೆ ಬರಲಿದೆ.

ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ಅದರ ಜೊತೆಗೆ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಎಲ್‌ಇಡಿ ಹೆಡ್‌ಲೈಟ್‌ಗಳು, ಬ್ಲೂಟೂತ್-ಸಕ್ರಿಯಗೊಳಿಸಿದ ಇನ್‌ಸ್ಟ್ರುಮೆಂಟ್ ಕನ್ಸೋಲ್, ಸ್ವಿಚ್ ಮಾಡಬಹುದಾದ ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಇನ್ನೂ ಕೆಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಯೋಗ್ಯವಾದ ವೈಶಿಷ್ಟ್ಯಗಳ ಪಟ್ಟಿಯೊಂದಿಗೆ ಹಳೆಯ ಮಾದರಿಗಿಂತ ತುಸು ಹೆಚ್ಚಿನ ಫೀಚರ್ಸ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ಮುಂಬರುವ ಮೋಟಾರ್‌ಸೈಕಲ್ ಅನೇಕ ರೈಡ್ ಮೋಡ್‌ಗಳನ್ನು ಸಹ ಹೊಂದಿರಬಹುದು. ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮೋಟಾರ್‌ಸೈಕಲ್ ಮುಂಭಾಗದಲ್ಲಿ ದೊಡ್ಡ 21-ಇಂಚಿನ ವೀಲ್‌ಗಳನ್ನು ಮತ್ತು ಹಿಂಭಾಗದಲ್ಲಿ ಪ್ರಮಾಣಿತ 17-ಇಂಚಿನ ವೀಲ್‌ಗಳನ್ನು ಹೊಂದಿರಲಿದ್ದು ಇವೆರಡೂ ನಾಬ್ಡ್ ಟೈರ್‌ಗಳೊಂದಿಗೆ ಬರಲಿವೆ.

ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ಇದಲ್ಲದೆ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮುಂಭಾಗದಲ್ಲಿ USD ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್‌ಗಳನ್ನು ಹೊಂದಿದೆ ಎಂದು ಸ್ಪೈ ಚಿತ್ರಗಳು ಖಚಿತಪಡಿಸಿವೆ. ಪ್ರಸ್ತುತ, KTM 390 ಅಡ್ವೆಂಚರ್ ಬೆಲೆ ರೂ. 3.37 ಲಕ್ಷ (ಎಕ್ಸ್ ಶೋ ರೂಂ, ಭಾರತ) ಇದ್ದು, ಹಾಗೇ BMW G310 GS ರೂ. 3.10 ಲಕ್ಷದಿಂದ (ಎಕ್ಸ್ ಶೋ ರೂಂ, ಭಾರತ) ಇದೆ.

ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ಈ ಬೆಲೆಗಳನ್ನು ನೋಡಿದಾಗ ರಾಯಲ್ ಎನ್‌ಫೀಲ್ಡ್ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಲು ಕಡಿಮೆ ಬೆಲೆಯೊಂದಿಗೆ ಬರಬಹುದು. ಮುಂಬರುವ ಹಿಮಾಲಯನ್ 450 ಗೆ ಸುಮಾರು 3 ಲಕ್ಷ ರೂ, ಎಕ್ಸ್ ಶೋರೂಂ ಬೆಲೆ ನೀಡುತ್ತದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 411cc, ಏರ್-ಕೂಲ್ಡ್, SOHC, ಇಂಧನ-ಇಂಜೆಕ್ಟೆಡ್, BS6 ಎಂಜಿನ್ ಅನ್ನು ಹೊಂದಿದೆ.

ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ಈ ಎಂಜಿನ್ 6,500 rpm ನಲ್ಲಿ 24.3bhp ಗರಿಷ್ಠ ಶಕ್ತಿಯನ್ನು ಮತ್ತು 4,500rpm ನಲ್ಲಿ 32Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 5-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲ್ಪಟ್ಟಿದೆ. ಇನ್ನು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೆಲೆಗಳು ರೂ 2.41 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋ ರೂಂ, ಭಾರತ).

ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ RE ಹಿಮಾಲಯನ್ 450

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಭಾರೀ ಬೇಡಿಕೆ ಹೋಮದಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ತನ್ನ ವಿಭಾಗದಲ್ಲಿ ಅತ್ಯಂತ ವಿಶ್ವಾಸಾರ್ಹ ವಾಹನವಾಗಿ ಗುರ್ತಿಸಿಕೊಂಡಿದೆ. ಆದರೆ ಇತರ ಬ್ರಾಂಡ್‌ಗಳ ಪೈಪೋಟಿಯಿಂದಾಗಿ ಹಾಗೂ ಗ್ರಾಹಕರ ಬೇಡಿಕೆಯಂತೆ ಹಿಮಾಲಯನ್ ಬೈಕ್ ಅನ್ನು ಮತ್ತಷ್ಟು ಶಕ್ತಿಶಾಲಿಗೊಳಿಸಲು ತಯಾರಕರು ಸಜ್ಜಾಗಿದ್ದಾರೆ. ಇನ್ನು ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಭಾರತ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಾಹನ ತಯಾರಕರಿಗೆ ಪ್ರಮುಖ ಉತ್ಪನ್ನವಾಗಲಿದೆ.

Most Read Articles

Kannada
English summary
The new RE Himalayan 450 will soon hit the market with a more powerful engine
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X