ಮೋಸ ಹೋಗಬೇಡಿ... ರಾಯಲ್ ಎನ್‌ಫೀಲ್ಡ್ ಬೈಕ್‌ನ ಈ 6 ವಿಷಯಗಳನ್ನು ನಿಮಗೆ ಯಾರೂ ಹೇಳುವುದಿಲ್ಲ!

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸುವ ಮುನ್ನ ನೀವು ತಿಳಿದುಕೊಳ್ಳಬೇಕಾದ ಹಾಗೂ ಯಾರೂ ತಿಳಿಸಿದ 6 ಪ್ರಮುಖ ವಿಷಯಗಳು ಇಲ್ಲಿವೆ.

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಬಹಳ ಜನಪ್ರಿಯವಾಗಿದ್ದು, ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿವೆ. ಇನ್ನು ಭಾರತದಲ್ಲಿ ಇತರ ದೇಶಗಳಿಗೆ ಹೋಲಿಸಿಕೊಂಡರೆ ಇದರ ಕ್ರೇಜ್ ಹತ್ತು ಪಟ್ಟು ಹೆಚ್ಚಾಗಿರುತ್ತದೆ.

ನಮ್ಮಲ್ಲಿಯೂ ಅನೇಕರಿಗೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಮಾಲೀಕರಾಗುವುದು ಕನಸಾಗಿದೆ. ಮುಖ್ಯವಾಗಿ ಈ ಬೈಕ್‌ಗಳನ್ನು ಹೆಮ್ಮೆಗಾಗಿ ಖರೀದಿಸುತ್ತಾರೆ. ಆದರೆ ನೀವು ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಖರೀದಿಸುತ್ತಿದ್ದರೆ, ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ, ಅವುಗಳನ್ನು ಇಲ್ಲಿ ನೋಡೋಣ...

ಈ ಬೈಕ್ ವೇಗಕ್ಕಾಗಿ ಅಲ್ಲ!
ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್‌ಗಳ ಶ್ರೇಣಿಯನ್ನು ಕ್ರೂಸರ್‌ಗಳು ಎಂದು ಕರೆಯಲಾಗುತ್ತದೆ. ಇದರಿಂದಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಪ್ರವಾಸಕ್ಕೆ ಹೋಗುವವರು ಹೆಚ್ಚಾಗಿ ಬಳಸುತ್ತಾರೆ. ಹೆದ್ದಾರಿಗಳಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಗಳಲ್ಲಿ ಹಿಂದೆ ಬಂಡಲ್ ಗಂಟುಗಳನ್ನು ಕಟ್ಟಿಕೊಂಡು ದೂರದ ಪ್ರಯಾಣ ಮಾಡುವವರನ್ನು ನೋಡಬಹುದು.

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ವೇಗವನ್ನು ಆನಂದಿಸಲು ಅಥವಾ ಹೆಚ್ಚಿನ ವೇಗದಲ್ಲಿ ಪ್ರಯಾಣಿಸಲು ಸೂಕ್ತವಲ್ಲ. ಬದಲಾಗಿ ಈ ಬೈಕ್‌ಗಳು ಗಂಟೆಗೆ 80 ರಿಂದ 100 ಕಿ.ಮೀ ವೇಗದಲ್ಲಿ 'ಕ್ರೂಸ್' ಮಾಡಲಿವೆ. ಈ ವೇಗವು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಎಂಜಿನ್‌ನ 'ಸ್ವೀಟ್ ಸ್ಪಾಟ್' ಆಗಿದೆ.

ಎಂದಿಗಿಂತಲೂ ಹೆಚ್ಚು ಆಧುನಿಕ!
ರಾಯಲ್ ಎನ್‌ಫೀಲ್ಡ್ ಈಗ ತನ್ನ ಮೋಟಾರ್‌ಸೈಕಲ್‌ಗಳಲ್ಲಿ ಎಬಿಎಸ್ ಬ್ರೇಕ್ ಸೌಲಭ್ಯವನ್ನು ನೀಡುತ್ತವೆ. ಇದಕ್ಕೆ ಕೇಂದ್ರ ಸರ್ಕಾರ ತಂದಿರುವ ಸುರಕ್ಷತಾ ನಿಯಮಗಳೇ ಕಾರಣ. ಎಬಿಎಸ್ ಬ್ರೇಕ್‌ಗಳನ್ನು ಮುಂಭಾಗ ಮತ್ತು ಹಿಂಭಾಗದ ಎರಡೂ ಚಕ್ರಗಳಲ್ಲಿ ನೀಡಲಾಗಿದೆ. ಇದು ಒತ್ತಡದ ಸಂದರ್ಭಗಳಲ್ಲಿ ಬ್ರೇಕ್ ಮಾಡುವಾಗ ಕೆಳಗೆ ಬೀಳುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಈಗ ಕಾರ್ಬೋರೇಟರ್‌ಗಳ ಬದಲಿಗೆ ಫ್ಯೂಲ್ ಇಂಜೆಕ್ಷನ್‌ನೊಂದಿಗೆ ಬರುತ್ತವೆ. BS-6 ಹೊರಸೂಸುವಿಕೆಯ ಮಾನದಂಡಗಳ ನಂತರ ಈ ಬದಲಾವಣೆ ಬಂದಿದೆ. ಇದು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಎಂಜಿನ್ ಅನ್ನು ಸುಗಮಗೊಳಿಸಿದೆ. ಒಟ್ಟಾರೆಯಾಗಿ, ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳು ಈಗ ಮೊದಲಿಗಿಂತ ಹೆಚ್ಚು ಆಧುನಿಕವಾಗಿವೆ.

ಮೈಲೇಜ್ ಅನ್ನು ಮರೆತುಬಿಡಿ!
ಭಾರತದಲ್ಲಿ ಇಂಧನ ಬೆಲೆ ತುಂಬಾ ಹೆಚ್ಚಿದೆ. ಎಷ್ಟೋ ಜನ ಹೆಚ್ಚು ಮೈಲೇಜ್ ಪಡೆಯಬೇಕು ಎಂದುಕೊಂಡಿರುತ್ತಾರೆ. ನೀವು ಅವರಲ್ಲಿ ಒಬ್ಬರಾಗಿದ್ದರೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ನಿಮಗಾಗಿ ಅಲ್ಲ. ಏಕೆಂದರೆ ರಾಯಲ್ ಎನ್ ಫೀಲ್ಡ್ ಬೈಕ್ ಗಳಿಗೆ ಅಷ್ಟು ಮೈಲೇಜ್ ಸಿಗುವುದಿಲ್ಲ. ಎಂಜಿನ್ ಗಾತ್ರವನ್ನು ಅವಲಂಬಿಸಿ, ನೀವು 25-35 kmpl ಮೈಲೇಜ್ ಪಡೆಯುವ ಸಾಧ್ಯತೆಯಿದೆ.

ನಿರ್ವಹಣೆ ವೆಚ್ಚಕ್ಕೆ ಸುಸ್ತಾಗಬಹುದು!
ರಾಯಲ್ ಎನ್‌ಫೀಲ್ಡ್ ಬೈಕು ಸವಾರಿ ಮಾಡುವುದು ನಿಮಗೆ ಸಂತೋಷವನ್ನು ನೀಡುತ್ತದೆ. ಆದರೆ ಅದು ನಿಮಗೆ ಅಷ್ಟೇ ನಿರ್ವಹಣಾ ವೆಚ್ಚವಾಗುತ್ತದೆ ಎಂದು ತಿಳಿದಿರಲಿ. ಸಾಮಾನ್ಯ ಬೈಕ್‌ಗೆ ಹೋಲಿಸಿದರೆ ರಾಯಲ್ ಎನ್‌ಫೀಲ್ಡ್ ಬೈಕಿನ ಸೇವಾ ವೆಚ್ಚವು ಸುಮಾರು ದ್ವಿಗುಣವಾಗಿದೆ. ಅಲ್ಲದೆ, ಬಿಡಿಭಾಗಗಳು ಸಾಕಷ್ಟು ದುಬಾರಿಯಾಗಿವೆ.

ಭಾರೀ ತೂಕ!
ಎಲ್ಲಾ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳು ತುಂಬಾ ಭಾರವಾಗಿರುತ್ತದೆ. ತೂಕ ಸುಮಾರು 200 ಕೆ.ಜಿ ಹಾಗಾಗಿ ಹೊಸಬರಿಂದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ನಿಭಾಯಿಸುವುದು ಸ್ವಲ್ಪ ಕಷ್ಟ. ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್ ಕೆಳಗೆ ಬಿದ್ದರೆ ಅದನ್ನು ನಿಭಾಯಿಸಿ ಮೇಲಕ್ಕೆತ್ತುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳುವುದು ಕೂಡ ಮುಖ್ಯ.

ನೀವು ತಪ್ಪಾಗಿ ಎತ್ತಿದರೆ, ನಿಮ್ಮ ಬೆನ್ನಿಗೆ ಹಾನಿಯಾಗಬಹುದು. ಒಟ್ಟಿನಲ್ಲಿ ಮಹಿಳೆಯರು ಸ್ಕೂಟರ್ ಸೆಂಟರ್ ಸ್ಟ್ಯಾಂಡ್ ಕೂಡ ಹಾಕುವುದಿಲ್ಲ ಎಂದು ಕೆಲವರು ತಮಾಷೆ ಮಾಡುತ್ತಾರೆ. ಆದರೆ ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕ್‌ಗಳ ವಿಷಯಕ್ಕೆ ಬಂದರೆ, ಕೆಲವೊಮ್ಮೆ ಪುರುಷರೂ ಸಹ ಸೆಂಟರ್ ಸ್ಟ್ಯಾಂಡ್ ಅನ್ನು ಎಳೆಯಲು ಪರದಾಡುತ್ತಾರೆ ಎಂಬುದು ಬೇಸರದ ಸಂಗತಿ!

ಮರುಮಾರಾಟ ಮೌಲ್ಯ!
ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಉತ್ತಮ ಮರುಮಾರಾಟ ಮೌಲ್ಯವನ್ನು ಹೊಂದಿವೆ. ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಉತ್ತಮ ಬೇಡಿಕೆ ಇರುವುದೇ ಇದಕ್ಕೆ ಕಾರಣ. ಅಲ್ಲದೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೀರ್ಘ ಕಾಯುವಿಕೆ ಇರುವ ಕಾರಣ, ಕೆಲವರು ಅವುಗಳನ್ನು ಸೆಕೆಂಡ್ ಹ್ಯಾಂಡ್ ಖರೀದಿಸುತ್ತಾರೆ. ಈ ಎಲ್ಲಾ ವಿಷಯಗಳನ್ನು ತಿಳಿದ ನಂತರ ಎನ್‌ಫೀಲ್ಡ್ ಬೈಕಿನ ಬಗ್ಗೆ ನಿಮಗೊಂದು ಅವಗಾಹನೆ ಬಂದಿರಬಹುದು. ಮೇಲೆ ತಿಳಿಸಿರುವ ಎಲ್ಲಾ ವಿಷಯಗಳು ನಿಮಗೆ ಸಮ್ಮತಿಯೆನಿಸಿದರೆ ನಿರಾಳವಾಗಿ ಬೈಕನ್ನು ಖರೀದಿಸಬಹುದು.

Most Read Articles

Kannada
English summary
These 6 things about royal enfield bike no one will tell you
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X