ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಪ್ರಮುಖ 5 ಪೆಟ್ರೋಲ್ ಸ್ಕೂಟರ್‌ಗಳು
ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಗೇರ್‌ಲೆಸ್ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ಉತ್ತಮ ಪ್ರಗತಿಯನ್ನು ದಾಖಲಿಸುತ್ತಿವೆ. ಈ ವರ್ಷ, ವಿವಿಧ ಸ್ಕೂಟರ್‌ಗಳು ಮಾರುಕಟ್ಟೆಗೆ ಬಂದಿದ್ದು, ಹಲವು ನವೀನ ವೈಶಿಷ್ಟ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ ಎಂದು ಹೇಳಬಹುದು. 2022ರ ಟಾಪ್ 5 ಪೆಟ್ರೋಲ್ ಸ್ಕೂಟರ್ ಕುರಿತಾದ ಮಾಹಿತಿ ಇಲ್ಲಿದೆ.
ಟಿವಿಎಸ್ Ntorq 125 XT:
ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಟಿವಿಎಸ್ ಕಂಪನಿಯ 'Ntorq 125' ಸ್ಕೂಟರ್‌ನ ಹಲವು ರೂಪಾಂತರಗಳಿದ್ದರೂ, ಈ ಸ್ಪೋರ್ಟಿ ಗೇರ್‌ಲೆಸ್ ಸ್ಕೂಟರ್‌ನ ಹೊಸ ರೂಪಾಂತರವನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. 'Ntorq 125 XT' ಸ್ಕೂಟರ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ, ಹಿಂದಿನ ಸ್ಕೂಟರ್‌ಗಳಂತೆ ಅದೇ ತಂತ್ರಜ್ಞಾನವನ್ನು ನೂತನ Ntorq 125 XT ಸ್ಕೂಟರ್ ಸಹ ಹೊಂದಿದೆ ಎಂದು ಹೇಳಬಹುದು.

ವಾಸ್ತವವಾಗಿ, ಟಿವಿಎಸ್ Ntorq 125 XT ಎಲ್ಲಾ-ಹೊಸ LCD ಇನ್ಸ್ಟ್ರುಮೆಂಟಲ್ ಕ್ಲಸ್ಟರ್‌ನೊಂದಿಗೆ ವಾಯ್ಸ್ ಅಸ್ಸಿಸ್ಟನ್ಸ್, ಬ್ಲೂಟೂತ್ ಸಂಪರ್ಕ, ಸೋಶಿಯಲ್ ಮೀಡಿಯಾ ನೋಟಿಫಿಕೇಶನ್, ವೇದರ್ ನೋಟಿಫಿಕೇಶನ್ ಅಲರ್ಟ್, ಸೈಲೆಂಟ್ ಸ್ಟಾರ್ಟ್, ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಇದಕ್ಕಾಗಿ Ntorq 125 XT ಮೂಲ ರೂಪಾಂತರಕ್ಕಿಂತ ಸುಮಾರು 23,000 ರೂ.ಗಳಷ್ಟು ದುಬಾರಿಯಾಗಿರುತ್ತದೆ (ಎಕ್ಸ್-ಶೋರೂಂ, ದೆಹಲಿ) . ಆದರೂ ಈ ಸ್ಕೂಟರ್ ದೇಶದ ಮಾರುಕಟ್ಟೆಯಲ್ಲಿ ಹೊಸ ಖರೀದಿದಾರರನ್ನು ತನ್ನತ್ತ ಸುಲಭವಾಗಿ ಸೆಳೆಯುತ್ತಿದೆ.
ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್:
ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ಅನ್ನು ಸುಮಾರು 1.12 ಲಕ್ಷ ರೂ. ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು (ಎಕ್ಸ್-ಶೋರೂಂ). ಹೊಸದಾಗಿ ಬಿಡುಗಡೆಯಾದ ರೂಪಾಂತರವು ಸ್ಕೂಟರ್‌ನ ಸ್ಟ್ಯಾಂಡರ್ಡ್ ರೂಪಾಂತರಕ್ಕಿಂತ ಸುಮಾರು 19,000 ರೂ. ದುಬಾರಿಯಾಗಿದೆ. ಈ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ದೊಡ್ಡ 12-ಇಂಚಿನ ರೇರ್ ಟೈರ್, ಹೈ-ಸ್ವೀಡ್ ಸ್ಟೆಬಿಲಿಟಿ ಮತ್ತು ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಹೊಂದಿದೆ.
ಕೀವೇ ಸಿಕ್ಸ್ಟೀಸ್ 300i:
ಹಂಗೇರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯು ರೆಟ್ರೋ-ಥೀಮ್ ವಿನ್ಯಾಸದಲ್ಲಿ ಕೀವೇ ಸಿಕ್ಸ್ಟೀಸ್ 300i ಸ್ಕೂಟರ್ ಅನ್ನು ರೆಡಿ ಮಾಡಿದೆ. ಇದು 278 ಸಿಸಿ, ಸಿಂಗಲ್-ಸಿಲಿಂಡರ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಕೀವೇ Vieste 300 ಅನ್ನು ಹೋಲುತ್ತದೆ. ಆದಾಗ್ಯೂ, ಇದರ ಪವರ್‌ಟ್ರೇನ್ 18.4 bhp ಗರಿಷ್ಠ ಪವರ್ ಮತ್ತು 22Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕೀವೇ ಸಿಕ್ಸ್ಟೀಸ್ 300 ಬೆಲೆ ರೂ. 2.99 ಲಕ್ಷ (ಎಕ್ಸ್ ಶೋರೂಂ, ದೆಹಲಿ) ಇದೆ.
ಕೀವೇ Vieste 300:
ಈ ಕೀವೇ Vieste 300 ಸ್ಕೂಟರ್ ಬಿಡುಗಡೆಯೊಂದಿಗೆ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಹಂಗೇರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಎಂಟ್ರಿ ನೀಡಿತು. ಕೀವೇ Vieste 300 ಅದರ ದೊಡ್ಡ 278 ಸಿಸಿ ಪವರ್‌ಟ್ರೇನ್ ಮತ್ತು ಮ್ಯಾಕ್ಸಿ-ಸ್ಕೂಟರ್ ಸ್ಟೈಲಿಂಗ್‌ನೊಂದಿಗೆ ಮಾರುಕಟ್ಟೆಗೆ ಬಂದಿತು. ದೇಶೀಯ ಮಾರುಕಟ್ಟೆಯಲ್ಲಿರುವ ಇತರೆ ಸ್ಕೂಟರ್‌ಗಳಿಗೆ ಹೋಲಿಸಿದರೆ ಇದರ ಬೆಲೆಯು ಕೊಂಚ ದುಬಾರಿಯಾಗಿದೆ. 2.99 ಲಕ್ಷ ರೂ.(ಎಕ್ಸ್ ಶೋರೂಂ, ದೆಹಲಿ) ಬೆಲೆಯಲ್ಲಿದೆ.
ಹೀರೋ ಪ್ಲೆಷರ್+ 110 XTEC:
ಭಾರತದ ಮಾರುಕಟ್ಟೆಗೆ ಹೀರೋ ಪ್ಲೆಷರ್ ನ ಹಲವು ರೂಪಾಂತರಗಳು ಬಂದಿವೆ. ಇದರ ಮಾರಾಟವು ಉತ್ತವಾಗಿಯೇ ಇದೆ. ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಕಂಪನಿ ಹೀರೋ ಮೋಟೋಕಾರ್ಪ್, ಪ್ಲೆಷರ್+ 110 XTECಗೆ ಹಲವು ನವೀಕರಣಗಳನ್ನು ಮಾಡಿದೆ. ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್, ಪಿಲಿಯನ್ ಸೀಟ್ ಬ್ಯಾಕ್‌ರೆಸ್ಟ್, ಮೆಟಲ್ ಫ್ರಂಟ್ ಫೆಂಡರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ಹತ್ತು-ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಇದರಿಂದ ಹೆಚ್ಚು ಮಂದಿ ಈ ಸ್ಕೂಟರ್ ಖರೀದಿಸಲು ಇಷ್ಟಪಡುತ್ತಾರೆ.
2022 ರ ವರ್ಷವು ಭಾರತದ ಮಾರುಕಟ್ಟೆಯಲ್ಲಿ ಸ್ಕೂಟರ್ ವಿಭಾಗಕ್ಕೆ ಉತ್ತೇಜಕವಾಗಿದೆ. ಏಕೆಂದರೆ, ಹಲವು ತಯಾರಕರು ತಮ್ಮ ಸ್ಕೂಟರ್‌ಗಳಿಗೆ ಕೆಲವು ಗಮನಾರ್ಹ ನವೀಕರಣಗಳನ್ನು ಮಾಡುವ ಮೂಲಕ ಹೊಸ ಖರೀದಿದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಹಂಗೇರಿಯ ಕಂಪನಿ ನಿರ್ಮಿತ ಕೀವೇ Vieste 300 ಸ್ಕೂಟರ್ ದೇಶದಲ್ಲಿ ಬಿಡುಗಡೆಯಾಗಿದ್ದು, ಸ್ವಾಗತಾರ್ಹವಾಗಿದೆ ಎಂದು ಹೇಳಬಹುದು. ಇದು ಹೆಚ್ಚು ಶಕ್ತಿಶಾಲಿ ಸ್ಕೂಟರ್‌ಗಳನ್ನು ತಯಾರಿಸಲು ಭಾರತೀಯ ದ್ವಿಚಕ್ರ ವಾಹನ ತಯಾರಕರನ್ನು ಪ್ರೇರೇಪಿಸುತ್ತದೆ.


Click it and Unblock the Notifications








