ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಪ್ರೀಮಿಯಂ ಹಾಗೂ ಪರ್ಫಾಮೆನ್ಸ್ ಬೈಕ್ ತಯಾರಕ ಕಂಪನಿಯಾದ ಟ್ರಯಂಫ್ ತನ್ನ ಹೊಸ ಟೈಗರ್ ಸ್ಪೋರ್ಟ್ 660 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.95 ಲಕ್ಷವಾಗಿದೆ.

ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕಿನ ಬೆಲೆಯನ್ನು ಟ್ರೈಡೆಂಟ್ 660 ಮಾದರಿಯ ಬೆಲೆಗೆ ಹೋಲಿಸಿದರೆ ರೂ.1.50 ಲಕ್ಷ ದುಬಾರಿಯಾಗಿದೆ. ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬ್ರ್ಯಾಂಡ್‌ನ ಇತ್ತೀಚಿನ ನೇಕೆಡ್ ಸ್ಟ್ರೀಟ್‌ಫೈಟರ್-ಟ್ರಿಡೆಂಟ್ 660 ನ ಅದೇ ಫ್ರೇಮ್ ಅನ್ನು ಆಧರಿಸಿದೆ. ಟ್ರಯಂಫ್ ಇಂಡಿಯಾ ಕಂಪನಿಯು ಈ ಟೈಗರ್ ಸ್ಪೋರ್ಟ್ 660 ಬೈಕ್ ಖರೀದಿಗಾಗಿ ಬುಕ್ಕಿಂಗ್‌ಗಳನ್ನು ಈಗಾಗಲೇ ಸ್ವೀಕರಿಸಲು ಪ್ರಾರಂಭಿಸಿದೆ. ಈ ಹೊಸ ಟೈಗರ್ ಸ್ಪೋರ್ಟ್ 660 ಅಡ್ವೆಂಚರ್ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಆಫ್-ರೋಡ್ ಅಧಾರಿತ ಅಡ್ವೆಂಚರ್ ಸ್ಪೋರ್ಟ್ಸ್ ಟೂರಿಂಗ್ ಬೈಕ್ ಆಗಿದೆ. ಇದು ಟ್ರೈಡೆಂಟ್ 660 ಮಾದರಿಯನ್ನು ಆಧರಿಸಿದ್ದರೂ, ಇದು ಸ್ಪೋರ್ಟ್ಸ್ ಟೂರಿಂಗ್ ಬೈಕ್ ಆಗಿದೆ. ಇದರಿಂದ ಈ ಬೈಕಿನಲ್ಲಿ ಕೆಲವು ವ್ಯತ್ಯಾಸಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಈ ಸ್ಪೋರ್ಟಿಯಾಗಿ ಕಾಣುವ ಅರ್ಧ-ಫೇರಿಂಗ್, ನೇರವಾದ ರೈಡಿಂಗ್ ಪೋಷಿಸನ್, ಹೆಚ್ಚು ಸಸ್ಪೆಂಕ್ಷನ್ ಟ್ರ್ಯಾವೆಲ್, ಎತ್ತರದ ಸೀಟ್ ಮತ್ತು ಉತ್ತಮ ಟ್ರ್ಯಾವೆಲ್ ಸಾಮರ್ಥ್ಯಕ್ಕಾಗಿ ಲಗೇಜ್ ಫ್ರೇಮ ಅನ್ನು ಹೊಂದಿದೆ. ಈ ಹೊಸ ಸ್ಪೋರ್ಟ್ಸ್ ಟೂರಿಂಗ್ ಬೈಕ್ ವಿನ್ಯಾಸವು ಖಂಡಿತವಾಗಿಯೂ ಆಕರ್ಷಕವಾಗಿದೆ,

ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಆದರೆ ಇದು ದೊಡ್ಡ ಟೈಗರ್ 900 ಬೈಕಿಗೆ ಹೋಲುವಂತಿಲ್ಲ, ಈ ಹೊಸ ಬೈಕಿನಲ್ಲಿ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎತ್ತರ-ಹೊಂದಿಸಬಹುದಾದ ವಿಂಡ್‌ಶೀಲ್ಡ್ ಅನ್ನು ಹೊಂದಿದೆ. ಹೊಸ ಟೈಗರ್ ಸ್ಪೋರ್ಟ್ 660 ಅಡ್ವೆಂಚರ್ ಬೈಕ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಟ್ರಯಂಫ್ ಟ್ರೈಡೆಂಟ್ 660 ಬೈಕಿನ 14-ಲೀಟರ್ ಇಂಧನ ಟ್ಯಾಂಕ್‌ಗೆ ಹೋಲಿಸಿದರೆ ಹೊಸ ಬೈಕಿನಲ್ಲಿ 17 ಲೀಟರ್‌ಗಳಿಗೆ ಹೆಚ್ಚಿಸಿದೆ.

ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಹೊಸ ಟೈಗರ್ ಸ್ಪೋರ್ಟ್ 660 ಹೊಸ ಕಾಕ್‌ಪಿಟ್ ಅನ್ನು ಪಡೆಯುತ್ತದೆ, ಜೊತೆಗೆ ಹೊಸ ಇನ್ಸ್ ಟ್ರೂಮೆಂಟ್ ಕನ್ಸೋಲ್ ಜೊತೆಗೆ ವಿಭಿನ್ನ ಏರೋಗಾಮಿಕ್ಸ್ ಮತ್ತು ಹೆಚ್ಚು ನೇರವಾದ ರೈಡಿಂಗ್ ಫೋಷಿಸನ್ ಅನ್ನು ಹೊಂದಿದೆ,

ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಇನ್ನು ಫೀಚರ್ಸ್ ಗಳ ವಿಭಾಗದಲ್ಲಿ. ಹೊಸ ಟೈಗರ್ ಸ್ಪೋರ್ಟ್ 66 ರೋಡ್ ಮತ್ತು ರೌನ್ ಎಂಬ ರೈಡಿಂಗ್ ಮೋಡ್ ಗಳನ್ನು ಪಡೆಯುತ್ತದೆ. ಈ ಬೈಕಿನಲ್ಲಿ ಬದಲಾಯಿಸಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿರಲಿದೆ. ಈ ಹೊಸ ಅಡ್ವೆಂಚರ್ ಸ್ಪೋರ್ಟ್ಸ್ ಟೂರಿಂಗ್ ಬೈಕ್ ಲುಸೆರ್ನ್ ಬ್ಲೂ ಮತ್ತು ಸೆಫರಿನ್ ಬ್ಲ್ಯಾಕ್, ಕೊರೊಸಿ ರೆಡ್ ಮತ್ತು ಗ್ರ್ಯಾಫೈಟ್, ಮತ್ತು ಮೂರನೆಯದು, ಗ್ರ್ಯಾಫೈಟ್ ಮತ್ತು ಬ್ಲ್ಯಾಕ್ ಬಣ್ಣಗಳಾಗಿದೆ,

ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕಿನಲ್ಲಿ 660 ಸಿಸಿ ಇನ್-ಲೈನ್ ಮೂರು ಸಿಲಿಂಡರ್ ಎಂಜಿನ್ ಅನ್ನು ಟ್ರೈಡೆಂಟ್ 660 ನೊಂದಿಗೆ ಹಂಚಿಕೊಳ್ಳಲಾಗಿದೆ. ಈ ಎಂಜಿನ್ 79 ಬಿಹೆಚ್‍ಪಿ ಪವರ್ ಮತ್ತು 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಈ ಹೊಸ ಬೈಕ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಒಂದು ಟಿಎಫ್ಟಿ ಡಿಸ್ ಪ್ಲೇಯೊಂದಿಗೆ ಬರಲಿದೆ ಮತ್ತು ಆಕ್ಸೆಸರಿ-ಫಿಟ್ ಮೈ ಟ್ರಯಂಫ್ ಕನೆಕ್ಟಿವಿಟಿ ಸಿಸ್ಟಂಗೆ ಸಿದ್ಧವಾಗಿದೆ. ಈ ಬೈಕ್ 835 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಇನ್ನು ಈ ಬೈಕ್ 206 ಕೆಜಿ ಕರ್ಬ್ ತೂಕವನ್ನು ಹೊಂದಿದೆ. ಇನ್ನು ಈ ಹೊಸ ಸ್ಪೋರ್ಟ್ಸ್ ಟೂರಿಂಗ್ ಬೈಕ್ 22.2 ಕಿ,ಮೀ ಮೈಲೇಜ್ ನೀಡುತ್ತದೆ ಎಂದು ಹೇಳಾಗುತ್ತಿದೆ.

ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಆಫ್-ರೋಡ್ ಆಧಾರಿತ ಬೈಕ್ ಆಗಿರುವುದರಿಂದ ಸ್ಪೋರ್ಟ್ ಮೋನಿಕರ್ ಟಾರ್ಮ್ಯಾಕ್ ಅಡ್ವೆಂಚರ್ ಆಗಿದೆ. ಈ ಬೈಕಿನಲ್ಲಿ ಟ್ರೈಡೆಂಟ್ 660 ಮಾದರಿಯಂತೆ 17 ಇಂಚಿನ ವ್ಹೀಲ್ ಗಳು ಮತ್ತು ಮೈಕೆಲಿನ್ ರೋಡ್ ಟೈರ್‌ಗಳನ್ನು ಹೊಂದಿರಲಿದೆ. ಹೊಸ ಟೈಗರ್ ಸ್ಪೋರ್ಟ್ 660 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಎರಡೂ ಕಡೆಗಳಲ್ಲಿ 150 ಎಂಎಂ ಟ್ರಾವೆಲ್ ನೊಂದಿಗೆ ಸಸ್ಪೆಂಕ್ಷನ್ ಟ್ರಾವೆಲ್ ಹೆಚ್ಚಿಸಲಾಗಿದೆ. ಇದರ ಮುಂಭಾಗದಲ್ಲಿ ಶೋವಾ 41 ಎಂಎಂ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ರಿಮೋಟ್ ಪ್ರಿಲೋಡ್ ಹೊಂದಾಣಿಕೆಯನ್ನು ಪಡೆಯುತ್ತದೆ.

ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಇನ್ನು ಪ್ರಮುಖವಾಗಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ ನಿಸ್ಸಿನ್ ಬ್ರೇಕ್‌ಗಳನ್ನು ಟ್ರೈಡೆಂಟ್ 660 ನೊಂದಿಗೆ ಹಂಚಿಕೊಳ್ಳಲಾಗಿದೆ, ಎರಡು-ಪಿಸ್ಟನ್ ಸ್ಲೈಡಿಂಗ್ ಕ್ಯಾಲಿಪರ್‌ಗಳು 310 ಎಂಎಂ ಟ್ವಿನ್ ಫ್ರಂಟ್ ಡಿಸ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್ 255 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿರುತ್ತದೆ. ಈ ಅಡ್ವೆಂಚರ್ ಬೈಕ್ ಅತ್ಯುತ್ತಮ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಬಿಡುಗಡೆ

ಕೊನೆಗೂ ಬ್ರಿಟಿಷ್ ಬ್ರ್ಯಾಂಡ್ ಭಾರತೀಯ ಮಾರುಕಟ್ಟೆಯ ಮಿಡಲ್ ವೇಟ್ ಸ್ಪೋರ್ಟ್ಸ್ ಟೂರರ್ ವಿಭಾಗದಲ್ಲಿ ತನ್ನ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಅನ್ನು ಬಿಡುಗಡೆಗೊಳಿಸಿದೆ, ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ವರ್ಸಿಸ್ 650 ಮತ್ತು ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್ ಟಿ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Tuesday, March 29, 2022, 14:00 [IST]
English summary
Triumph launched new tiger sport 660 in india price specs features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+