ಟಿವಿಎಸ್ ಐಕ್ಯೂಬ್ ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಕೋಟಿ ಹೂಡಿಕೆ!

ಟಿವಿಎಸ್ ಮೋಟಾರ್ ಕಂಪನಿಯು ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಹೊಸ ಸ್ಕೂಟರ್ ಉತ್ಪಾದನಾ ಪ್ರಮಾಣ ಹೆಚ್ಚಳಕ್ಕೆ ಎರಡನೇ ಹಂತದ ಹೂಡಿಕೆ ಮಾಡಿದೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯುತ್ತಮ ಇವಿ ಸ್ಕೂಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಐಕ್ಯೂಬ್ ಇವಿ ಸ್ಕೂಟರ್ ಆವೃತ್ತಿಯು ಬಜೆಟ್ ಬೆಲೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಕಳೆದ ತಿಂಗಳು ಕಂಪನಿಯು 4,667 ಯುನಿಟ್ ಇವಿ ಸ್ಕೂಟರ್ ಉತ್ಪಾದನೆ ಮಾಡುವ ಮೂಲಕ ಇವಿ ಸ್ಕೂಟರ್ ಬೇಡಿಕೆ ಹೆಚ್ಚಳವನ್ನು ಸಂಭ್ರಮಿಸುತ್ತಿದೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಈ ವರ್ಷಾಂತ್ಯಕ್ಕೆ ಕಂಪನಿಯು ಪ್ರತಿ ತಿಂಗಳು 20 ಸಾವಿರ ಯುನಿಟ್ ಉತ್ಪಾದನೆಗಾಗಿ ಎದುರುನೋಡುತ್ತಿದ್ದು, ಇವಿ ಸ್ಕೂಟರ್ ಉತ್ಪಾದನಾ ಸೌಲಭ್ಯವನ್ನು ವಿಸ್ತರಿಸಲು ಸುಮಾರು ರೂ. 1 ಸಾವಿರ ಕೋಟಿ ಹೆಚ್ಚುವರಿಯಾಗಿ ಹೂಡಿಕೆ ಮಾಡಿದೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಹೀಗಾಗಿ ಐಕ್ಯೂಬ್ ಮಾದರಿಗಾಗಿ ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ವಿತರಣೆ ಮಾಡುವ ಭರವಸೆ ನೀಡಿರುವ ಟಿವಿಎಸ್ ಕಂಪನಿಯು ಮುಂಬರುವ ದಿನಗಳಲ್ಲಿ ಇನ್ನೆರಡು ಹೊಸ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಪ್ರತಿಸ್ಪರ್ಧಿ ಮಾದರಿಗಳಿಂತಲೂ ಕಡಿಮೆ ಮೈಲೇಜ್ ಹೊಂದಿರುವ ಹೊಂದಿದ್ದರೂ ಟಿವಿಎಸ್ ಐಕ್ಯೂಬ್ ಮಾದರಿಯು ಸುರಕ್ಷತೆ ಮತ್ತು ಬಜೆಟ್ ಬೆಲೆಯೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, 2022ರ ಐಕ್ಯೂಬ್ ಬಿಡುಗಡೆಯು ಕಂಪನಿಯ ಬೇಡಿಕೆಯನ್ನು ದ್ವಿಗುಣಗೊಳಿಸಿದೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

2022ರ ಐಕ್ಯೂಬ್ ಇವಿ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್‌ಟಿ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಸದ್ಯ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ಗಳ ಬೆಲೆ ಬಹಿರಂಗಪಡಿಸುವ ಮೂಲಕ ವಿತರಣೆಗೆ ಚಾಲನೆ ನೀಡಿದೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ಗಳಿಂತಲೂ ಐಕ್ಯೂಬ್ ಎಸ್‌ಟಿ ವೆರಿಯೆಂಟ್ ಹೆಚ್ಚಿನ ಫೀಚರ್ಸ್ ಮತ್ತು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ದುಬಾರಿ ಬೆಲೆ ಪಡೆದುಕೊಂಡಿದ್ದು, ಕಂಪನಿಯು ಟಾಪ್ ಎಂಡ್ ವೆರಿಯೆಂಟ್ ಬೆಲೆ ಮಾಹಿತಿಯನ್ನು ಇದುವರೆಗೂ ಅಧಿಕೃತವಾಗಿ ಹಂಚಿಕೊಂಡಿಲ್ಲ. ಸದ್ಯಕ್ಕೆ ಮೊದಲೆಡು ಮಾದರಿಗಳ ಬೆಲೆ ಹಂಚಿಕೊಂಡಿದ್ದು, ಟಾಪ್ ಎಂಡ್ ಮಾದರಿಯನ್ನು ಮುಂದಿನ ತಿಂಗಳು ಅಗಸ್ಟ್‌ನಲ್ಲಿ ಬೆಲೆ ಮಾಹಿತಿ ಬಹಿರಂಗಪಡಿಸುವ ಮೂಲಕ ವಿತರಣೆ ಆರಂಭಿಸಲಿದೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಹೊಸ ಐಕ್ಯೂಬ್ ಮಾದರಿಯ ಮೊದಲ ಎರಡು ಸಾಮಾನ್ಯ ಮಾದರಿಗಳು ಸದ್ಯ ಬೆಂಗಳೂರಿನಲ್ಲಿ ಆನ್‌ ರೋಡ್ ಪ್ರಕಾರ ಆರಂಭಿಕವಾಗಿ ರೂ. 1,11,663 ಬೆಲೆ ಹೊಂದಿದ್ದರೆ ಐಕ್ಯೂಬ್ ಎಸ್ ಮಾದರಿಯು ರೂ. 1,19,663 ಬೆಲೆ ಹೊಂದಿದೆ. ಆದರೆ ಹೆಚ್ಚಿನ ಫೀಚರ್ಸ್ ಹೊಂದಿರುವ ಐಕ್ಯೂಬ್ ಎಸ್‌ಟಿ ವೆರಿಯೆಂಟ್ ಆನ್ ರೋಡ್ ಪ್ರಕಾರ ರೂ. 1.40 ಲಕ್ಷ ಬೆಲೆ ಪಡೆದುಕೊಳ್ಳಬಹುದಾದ ನೀರಿಕ್ಷೆಗಳಿವೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ಗಳಲ್ಲಿ ಈ ಹಿಂದಿನ 3.4kwh ಬ್ಯಾಟರಿ ಪ್ಯಾಕ್ ಅನ್ನೇ ನವೀಕರಿಸಿ ಜೋಡಣೆ ಮಾಡಲಾಗಿದ್ದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ನಲ್ಲಿ 5.1kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ. 3.4kwh ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ಮಾದರಿಗಳು ಪ್ರತಿ ಚಾರ್ಜ್‌ಗೆ 100 ಕಿ.ಮೀ ಮೈಲೇಜ್ ನೀಡಿದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್ ಪ್ರತಿ ಚಾರ್ಜ್‌ಗೆ ಗರಿಷ್ಠ 140 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಹೊಸ ಇವಿ ಸ್ಕೂಟರಿನಲ್ಲಿರುವ ಬ್ಯಾಟರಿ ಪ್ಯಾಕ್ UL2271, ISO 12405 ಮತ್ತು UN38.3 ಮಾನದಂಡಗಳೊಂದಿಗೆ IP67 ಮತ್ತು AIS156 ನಿಂದ ಪ್ರಮಾಣೀಕರಿಸಲಾಗಿದ್ದು, ಬ್ರಶ್‌ಲೆಸ್ ಹಬ್ ಮೌಟೆಂಡ್ ಎಲೆಕ್ಟ್ರಿಕ್ ಮೋಟಾರ್ ಸಹ ಸಾಕಷ್ಟು ಸುಧಾರಣೆಗೊಂಡಿದೆ. ಐಕ್ಯೂಬ್ ಮಾದರಿಯಲ್ಲಿ ಸುಧಾರಿತ ಎಲೆಕ್ಟ್ರಿಕ್ ಮೋಟಾರ್ ಇದೀಗ 5.9 ಬಿಎಚ್‌ಪಿ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 4.2 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳುತ್ತವೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಟಿವಿಎಸ್ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ವೆರಿಯೆಂಟ್‌ಗಳಲ್ಲಿ ಪ್ರತಿ ಗಂಟೆಗೆ 78 ಕಿ.ಮೀ ಟಾಪ್ ಸ್ಪೀಡ್ ನೀಡಿದ್ದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ನಲ್ಲಿ ಪ್ರತಿ ಗಂಟೆಗೆ 84 ಕಿ.ಮೀ ಟಾಪ್ ಸ್ಪೀಡ್ ನೀಡಿದೆ.

ಹೊಸ ಇವಿ ಸ್ಕೂಟರ್‌ನಲ್ಲಿ ಚಾರ್ಜಿಂಗ್ ಸೌಲಭ್ಯಕ್ಕಾಗಿ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ವೆರಿಯೆಂಟ್‌ಗಳಿಗಾಗಿ 650W ಮತ್ತು 950W ಹೋಂ ಚಾರ್ಜಿಂಗ್ ಸೌಲಭ್ಯ ನೀಡಿದ್ದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ನಲ್ಲಿ 1.5kW ಸರ್ಪೊಟ್ ಮಾಡುವ ಚಾರ್ಜಿಂಗ್ ಆಯ್ಕೆ ನೀಡಿದ್ದು, ಸಂಪೂರ್ಣ ಚಾರ್ಜಿಂಗ್‌ಗಾಗಿ ಕನಿಷ್ಠ 4 ಗಂಟೆಗಳನ್ನು ತೆಗೆದುಕೊಳ್ಳಲಿದೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಇನ್ನು ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಟೆಲಿಸ್ಕೋಪಿಕ್ ಫ್ರಂಟ್ ಫೋಕ್ಸ್ ಮತ್ತು ಹೊಂದಾಣಿಕೆ ಮಾಡಬಹುದಾದ ಟ್ವಿನ್ ಶಾಕ್ ರಿಯರ್ ಅಬ್ಸಾರ್ವರ್ ನೀಡಲಾಗಿದ್ದು, 220 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯ ಚಕ್ರದಲ್ಲಿ 130 ಎಂಎಂ ಡ್ರಮ್ ಬ್ರೇಕ್‌ನೊಂದಿಗೆ 12 ಇಂಚಿನ ಅಲಾಯ್ ವ್ಹೀಲ್ ನೀಡಿದೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಹೊಸ ಸ್ಕೂಟರ್‌ನಲ್ಲಿ ಟಿವಿಎಸ್ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ಮಾದರಿಗಳಿಗಾಗಿ 5 ಇಂಚಿನ ಫುಲ್ ಕಲರ್ ಟಿಎಫ್‌ಟಿ ಡಿಸ್‌ಪ್ಲೇ ನೀಡಿದ್ದರೆ ಐಕ್ಯೂಬ್ ಎಸ್‌ಟಿ ಮಾದರಿಯಲ್ಲಿ 7 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ನೀಡಿದ್ದು, ಎಸ್‌ಟಿ ಮಾದರಿಗಾಗಿ ಮಾತ್ರ ಟಚ್‌ಸ್ಕೀನ್ ಸೌಲಭ್ಯ ನೀಡಲಾಗಿದೆ.

ಇವಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚಳ- ಉತ್ಪಾದನಾ ಹೆಚ್ಚಳಕ್ಕೆ ಮತ್ತೆ ರೂ. 1 ಸಾವಿರ ಹೂಡಿಕೆ!

ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಹೊಸ ಇವಿ ಸ್ಕೂಟರ್‌ನಲ್ಲಿ ಟಿವಿಎಸ್ ಕಂಪನಿಯು ಸ್ಮಾರ್ಟ್ಎಕ್ಸ್‌ಕನೆಕ್ಟ್ ಸಿಸ್ಟಂ ಜೋಡಣೆ ಮಾಡಿದ್ದು, ಹೊಸ ಕನೆಕ್ಟಿವಿಟಿ ಸೌಲಭ್ಯದೊಂದಿಗೆ ಬಳಕೆದಾರರು ವೆಹಿಕಲ್ ಹೆಲ್ತ್, ಕ್ಲೌಂಡ್ ಕನೆಕ್ವಿಟಿ, ಮ್ಯೂಜಿಕ್ ಪ್ಲೇಯರ್, ಬ್ಲೂಟೂತ್ ಮತ್ತು ಸೇಫ್ಟಿ ನೋಟಿಫಿಕೇಷನ್ ಒಳಗೊಂಡಿದೆ.

Article Published On: Saturday, July 30, 2022, 11:20 [IST]
English summary
Tvs iqube production reaches almost 5k units details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+