ವಾಯ್ಸ್ ಅಸಿಸ್ಟ್‌ನೊಂದಿಗೆ ಬಿಡುಗಡೆಯಾದ ಟಿವಿಎಸ್ ಜೂಪಿಟರ್ ಝಡ್‌ಎಕ್ಸ್ ರೂಪಾಂತರ
ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ತನ್ನ ಟಿವಿಎಸ್ ಜೂಪಿಟರ್ ಝಡ್‌ಎಕ್ಸ್ ಅನ್ನು ಉನ್ನತೀಕರಿಸಿ ಹಲವು ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್ ಎಕ್ಸೋನೆಟ್ ಆಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದರಲ್ಲಿ ಸುಧಾರಿಸಿರುವ ವೈಶಿಷ್ಟ್ಯಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಭಾರತದಲ್ಲಿ ಹೋಂಡಾ ಆಕ್ಟಿವಾ ನಂತರ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿರುವ ವಾಹನ ಟಿವಿಎಸ್ ಜೂಪಿಟರ್ ಆಗಿದೆ. ಇದೀಗ ಗ್ರಾಹಕರನ್ನು ಆಕರ್ಷಿಸಲು ಟಿವಿಎಸ್ ಮೋಟಾರ್ ತನ್ನ ಜೂಪಿಟರ್ ಶ್ರೇಣಿಗೆ ಹೊಸ ಉನ್ನತ ರೂಪಾಂತರವನ್ನು ಸೇರಿಸಿದೆ. ಟಿವಿಎಸ್ ಜೂಪಿಟರ್ ಝಡ್‌ಎಕ್ಸ್ ಸ್ಮಾರ್ಟ್ ಎಕ್ಸೋನೆಕ್ಟ್ (Jupiter ZX SmartXonnect) ತನ್ನ ಫೋರ್ಟ್‌ಫೋಲಿಯೊಗೆ ಹೊಸ ಉನ್ನತ ರೂಪಾಂತರವನ್ನು ಸೇರಿಸಿದೆ.

ಟಿವಿಎಸ್‌ಗೆ ಸಂಬಂಧಿಸಿದಂತೆ, ದೇಶೀಯ ಮಾರುಕಟ್ಟೆಯಲ್ಲಿ ಜೂಪಿಟರ್ ಅತ್ಯುತ್ತಮವಾಗಿ ಮಾರಾಟವಾಗುತ್ತಿರುವ ವಾಹನವಾಗಿದೆ. ಇದೀಗ ಕಂಪನಿಯು ಹೊಸ ವೈಶಿಷ್ಟ್ಯವನ್ನು ಪರಿಚಯಿಸುವ ಮೂಲಕ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕಂಪನಿಯು ಈ ಮಾದರಿಯನ್ನು ರೂ 80,973 ಎಕ್ಸ್ ಶೋ ರೂಂ ಬೆಲೆಯಲ್ಲಿ ಬಿಡುಗಡೆ ಮಾಡಿದೆ.

ಈ ರೂಪಾಂತರವು ಎರಡು ಹೊಸ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ, ಮ್ಯಾಟ್ ಬ್ಲಾಕ್ ಮತ್ತು ಕಾಪರ್ ಬ್ರೌನ್. ಬ್ರ್ಯಾಂಡ್‌ನ ಶ್ರೇಣಿಯಲ್ಲಿ ಜೂಪಿಟರ್ 110 ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದ್ದು, ಈ ಹೊಸ ವೈಶಿಷ್ಟ್ಯಗಳು ಮಾರಾಟದ ಅಪೇಕ್ಷಣೀಯತೆಯನ್ನು ಹೆಚ್ಚಿಸುತ್ತವೆ ಎಂದು ಕಂಪನಿ ಆಶಿಸಿದೆ.

ಟಿವಿಎಸ್ ಜೂಪಿಟರ್ ಝಡ್‌ಎಕ್ಸ್ ಈಗ ಸ್ಮಾರ್ಟ್ ಎಕ್ಸೋನೆಕ್ಟ್ ಆಗಿದ್ದು ಸ್ಪೆಷಲ್ ಫೀಚರ್ಸ್ ಪಡೆದುಕೊಂಡಿದೆ. ವಾಯ್ಸ್ ಅಸಿಸ್ಟ್, ಸಂಪೂರ್ಣ ಡಿಜಿಟಲ್ ಕನ್ಸೋಲ್, ನ್ಯಾವಿಗೇಷನ್‌ನಂತಹ ವೈಶಿಷ್ಟ್ಯಗಳು ಲಭ್ಯವಿರುವ ಏಕೈಕ 110cc ಸ್ಕೂಟರ್ ಆಗಿದೆ. ಟಿವಿಎಸ್ ಮೊದಲ ಬಾರಿಗೆ ಟಿವಿಎಸ್ ಜೂಪಿಟರ್ ಗ್ರಾಂಡೆ ಆವೃತ್ತಿಯೊಂದಿಗೆ 110cc ಸ್ಕೂಟರ್ ವಿಭಾಗದಲ್ಲಿ ಬ್ಲೂಟೂತ್ ಸಂಪರ್ಕವನ್ನು ಪರಿಚಯಿಸಿದೆ.

ಸ್ಮಾರ್ಟ್ ಎಕ್ಸೋನೆಕ್ಟ್ ವೈಶಿಷ್ಟ್ಯವು ಈಗ ಟಾಪ್-ಆಫ್-ಲೈನ್ ರೂಪಾಂತರಕ್ಕೆ ಪ್ರಮಾಣಿತ ವೈಶಿಷ್ಟ್ಯವಾಗಿದೆ. ಸಂಪೂರ್ಣ ಡಿಜಿಟಲ್ ಕನ್ಸೋಲ್, ವಾಯ್ಸ್ ಅಸಿಸ್ಟ್, ನ್ಯಾವಿಗೇಷನ್ ಅಸಿಸ್ಟ್ ಮತ್ತು ಎಸ್‌ಎಂಎಸ್/ಕಾಲ್ ಅಲರ್ಟ್‌ಗಳನ್ನು ಒಳಗೊಂಡು ಆಕರ್ಷಣೆಯನ್ನು ಹೆಚ್ಚಿಸಲಾಗಿದೆ.

ಟಿವಿಎಸ್ ಸ್ಮಾರ್ಟ್ ಎಕ್ಸೋನೆಕ್ಟ್ ಪ್ಲಾಟ್‌ಫಾರ್ಮ್ ಬ್ಲೂಟೂತ್-ಸಕ್ರಿಯಗೊಳಿಸಿದ ಟೆಕ್ ಜೋಡಿಯಾಗಿದ್ದು ಇದನ್ನು ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಲಭ್ಯವಿರುವ ಟಿವಿಸ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಬಳಸಬಹುದು.

ಟಿವಿಎಸ್ ಜೂಪಿಟರ್ ಝಡ್‌ಎಕ್ಸ್ ಇಂಟೆಲಿಗೋ ತಂತ್ರಜ್ಞಾನ (ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್) ಮತ್ತು ಐ-ಟಚ್‌ಸ್ಟಾರ್ಟ್‌ನೊಂದಿಗೆ ಸಂಯೋಜಿತ ಸ್ಟಾರ್ಟರ್-ಜನರೇಟರ್ ಸಿಸ್ಟಮ್ ಅನ್ನು ಹೊಂದಿದೆ. ಎಲ್‌ಇಡಿ ಹೆಡ್‌ಲ್ಯಾಂಪ್, 2 ಲೀಟರ್ ಗ್ಲೋವ್‌ಬಾಕ್ಸ್ ಮೊಬೈಲ್ ಚಾರ್ಜರ್, 21 ಲೀಟರ್ ಸ್ಟೋರೇಜ್ ಮತ್ತು ಫ್ರಂಟ್ ಡಿಸ್ಕ್ ಬ್ರೇಕ್ ಇತರ ವೈಶಿಷ್ಟ್ಯಗಳಾಗಿವೆ.

ಹೊಸ ವೈಶಿಷ್ಟ್ಯ ಮತ್ತು ಬಣ್ಣ ಆಯ್ಕೆಗಳ ಪರಿಚಯವನ್ನು ಹೊರತುಪಡಿಸಿ, ಎಂಜಿನ್ ಮತ್ತು ಎಂಜಿನ್ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈ ಹೊಸ ರೂಪಾಂತರವು ಪ್ರಸ್ತುತ ಜೂಪಿಟರ್‌ನಂತೆಯೇ 110cc ಎಂಜಿನ್, 7,500 rpm ನಲ್ಲಿ 5.8 bhp ಯ ಗರಿಷ್ಠ ಶಕ್ತಿಯನ್ನು ಮತ್ತು 5,500 rpm ನಲ್ಲಿ 8.8 Nm ಟಾರ್ಕ್ ಉತ್ಪಾದನೆ ಮಾಡುತ್ತದೆ.

ವಾಯ್ಸ್ ಅಸಿಸ್ಟ್, ಧ್ವನಿ ಆಜ್ಞೆಗಳ ಮೂಲಕ ಸ್ಕೂಟರ್‌ನೊಂದಿಗೆ ಸಂವಹನವನ್ನು ಸಕ್ರಿಯಗೊಳಿಸುತ್ತದೆ. ಬ್ಲೂಟೂತ್ ಹೆಡ್‌ಫೋನ್‌ಗಳು, ವೈರ್ಡ್ ಹೆಡ್‌ಫೋನ್‌ಗಳು ಅಥವಾ ಹೆಲ್ಮೆಟ್‌ನಂತಹ ಸಂಪರ್ಕಿತ ಸಾಧನದ ಮೂಲಕ ಟಿವಿಎಸ್ ಸ್ಮಾರ್ಟ್ ಎಕ್ಸೋನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಇದನ್ನು ಜೋಡಿಸಬಹುದು.

ಸ್ಕೂಟರ್ ಪ್ರತಿಕ್ರಿಯೆಯು ಸ್ಪೀಡೋಮೀಟರ್ ಮತ್ತು ಹೆಡ್‌ಫೋನ್‌ಗಳ ಮೂಲಕ ಆಡಿಯೊ ಪ್ರತಿಕ್ರಿಯೆಯಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಟಿವಿಎಸ್ ಜೂಪಿಟರ್ ZX ರೂಪಾಂತರವನ್ನು ಇತರ ಟ್ರಿಮ್‌ಗಳಿಂದ ಪ್ರತ್ಯೇಕಿಸಲು ಸಿಲ್ವರ್ ಓಕ್ ಬಣ್ಣದ ಆಂತರಿಕ ಪ್ಯಾನೆಲ್‌ಗಳನ್ನು ಹೊಸದಾಗಿ ಅಳವಡಿಸಲಾಗಿದೆ. ಹೊಸ ಡ್ಯುಯಲ್ ಟೋನ್ ಸೀಟ್ ಅನ್ನು ಹೊಸ ವಿನ್ಯಾಸದ ಮಾದರಿಯೊಂದಿಗೆ ಬಳಸಲಾಗಿದೆ.

ಕಂಪನಿಯು ಈಗ ಪಿಲಿಯನ್‌ನ ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ಸ್ಕೂಟರ್‌ಗೆ ಪಿನ್ ಬ್ಯಾಕ್‌ರೆಸ್ಟ್ ಅನ್ನು ಸೇರಿಸಿದೆ. ಭಾರತದಲ್ಲಿ ಟಿವಿಎಸ್ ಜುಪಿಟರ್ ಉತ್ತಮ ಯಶಸ್ಸನ್ನು ಸಾಧಿಸಿದ್ದರೂ, ರಫ್ತು ಮಾರುಕಟ್ಟೆಯಲ್ಲಿ ಹಿಂದುಳಿದಿದೆ.

ಇತ್ತೀಚಿನ ತಿಂಗಳುಗಳಲ್ಲಿ, ಟಿವಿಎಸ್ ತನ್ನ XL ಮೊಪೆಡ್‌ನ ಮಾರಾಟದಲ್ಲಿ ಗಮನಾರ್ಹ ಕುಸಿತವನ್ನು ಕಂಡಿದೆ, ಇದು ತಯಾರಕರನ್ನು ಮಾರಾಟದಲ್ಲಿ ದೀರ್ಘಕಾಲ ಮುನ್ನಡೆಸಿದ್ದ ಮಾದರಿ ಎಂದು ಹೇಳಬಹುದು. XL ಮಾರಾಟದಲ್ಲಿನ ಕುಸಿತದ ನಂತರ, ಜೂಪಿಟರ್ ಈಗ ಬ್ರ್ಯಾಂಡ್‌ನ ಪ್ರಮುಖ ಮಾದರಿಯಾಗಿದೆ. ಟಿವಿಎಸ್ ಇತ್ತೀಚೆಗೆ 125 ಆವೃತ್ತಿಯೊಂದಿಗೆ ಜೂಪಿಟರ್ ಅನ್ನು ಪ್ರಸ್ತುತಪಡಿಸಿತ್ತು.


Click it and Unblock the Notifications