ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ರಾಯಲ್ ಎನ್‌ಫೀಲ್ಡ್ (Royal Enfield) ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ಹೊಸ ಬೈಕ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ವಿಭಾಗಗಳಲ್ಲಿ ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಬಲಪಡಿಸಲು ಸಹಾಯವಾಗುತ್ತದೆ. ಹೊಸ 350 ಸಿಸಿ, 450 ಸಿಸಿ ಮತ್ತು 650 ಸಿಸಿ ಮಾದರಿಗಳು ಸ್ಪಾಟ್ ಟೆಸ್ಟ್ ನಡೆಸುವ ವೇಳೆ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ರಾಯಲ್ ಎನ್‍ಫೀಲ್ಡ್ ಕಂಪನಿಯು ಮುಂದೆ ಬಿಡುಗಡೆಗೊಳಿಸುವ ಮಾದರಿಗಳಲ್ಲಿ ಹೊಸ ಹಂಟರ್ 350 ಕೂಡ ಒಳಗೊಂಡಿದೆ. ಇದೀಗ ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿಗೆ ಸಂಬಂಧಿಸಿದ ಪ್ರಮುಖ ವಿವರಗಳು ಸೋರಿಕೆಯಾಗಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಅನುಮೋದನೆ ದಾಖಲೆಯು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ ಮತ್ತು ಇದು ಹಲವಾರು ವಿವರಗಳನ್ನು ಬಹಿರಂಗಪಡಿಸಿದೆ. ಮೊದಲನೆಯದಾಗಿ, ಹಂಟರ್ 350 ಹೆಸರನ್ನು ಅದರ ಮೇಲೆ ಉಲ್ಲೇಖಿಸಲಾಗಿದೆ, ಇದು ರೋಡ್‌ಸ್ಟರ್‌ನ ಅಂತಿಮ ಉತ್ಪಾದನಾ ಹೆಸರಾಗಿರಬಹುದು ಎಂದು ಸೂಚಿಸುತ್ತದೆ. ಇದಲ್ಲದೆ, ಅದರ ಆಯಾಮದ ಅಂಕಿಅಂಶಗಳು ಬಹಿರಂಗವಾಗಿವೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ದಾಖಲೆಯ ಪ್ರಕಾರ, ರಾಯಲ್ ಎನ್‌ಫೀಲ್ಡ್ ಹಂಟರ್ 350 ಒಟ್ಟಾರೆ ಉದ್ದ 2,055 ಎಂಎಂ, 800 ಎಂಎಂ ಅಗಲ ಮತ್ತು 1,055 ಎಂಎಂ ಎತ್ತರವನ್ನು ಹೊಂದಿದ್ದು, ವೀಲ್‌ಬೇಸ್ ಉದ್ದವು 1,370 ಎಂಎಂ ಮತ್ತು ಒಟ್ಟು ವಾಹನದ ತೂಕವನ್ನು 360 ಕೆಜಿಯನ್ನು ಹೊಂದಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ಮಿಟಿಯೊರ್ ಬೈಕಿಗೆ ಹೋಲಿಸಿದರೆ, ಹಂಟರ್ 350 ಉದ್ದದಲ್ಲಿ 85 ಎಂಎಂ ಚಿಕ್ಕದಾಗಿದೆ, 45 ಎಂಎಂ ಕಿರಿದಾಗಿದೆ ಮತ್ತು 85 ಎಂಎಂ ಎತ್ತರದಲ್ಲಿ ಚಿಕ್ಕದಾಗಿದೆ ಮತ್ತು 30 ಎಂಎಂ ಚಿಕ್ಕದಾದ ವೀಲ್‌ಬೇಸ್ ಉದ್ದವನ್ನು ಹೊಂದಿದೆ. ಕ್ಲಾಸಿಕ್ 350 ಬೈಕಿಗೆ ಹೋಲಿಸಿದರೆ, ಹಂಟರ್ 90 ಎಂಎಂ ಉದ್ದ ಮತ್ತು 35 ಎಂಎಂ ಎತ್ತರ ಕಡಿಮೆ ಆದರೆ 15 ಎಂಎಂ ಅಗಲವಾಗಿರುತ್ತದೆ. ವೀಲ್‌ಬೇಸ್ ಉದ್ದವು ಕ್ಲಾಸಿಕ್‌ನಲ್ಲಿ 20 ಎಂಎಂ ಉದ್ದವಾಗಿದೆ ಮತ್ತು 15 ಕೆಜಿಯಷ್ಟು ಭಾರವಾಗಿರುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ಹಂಟರ್ 350 ಅಸ್ತಿತ್ವದಲ್ಲಿರುವ ಶ್ರೇಣಿಯ ರಾಯಲ್ ಎನ್‌ಫೀಲ್ಡ್ ಬೈಕ್ ಗಳಿಗಿಂತ ಬೆಲೆಯು ಕಡಿಮೆಯಿರುತ್ತದೆ. ಈ ಬೈಕ್ ಕ್ಲಾಸಿಕ್ ಮತ್ತು ಹಂಟರ್‌ನಂತೆಯೇ ಡಬಲ್ ಕ್ರೇಡಲ್ ಫ್ರೇಮ್‌ನಿಂದ ಆಧಾರವಾಗಿದೆ ಮತ್ತು ಸಿಂಗಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ಇನ್ನು ಇತ್ತೀಚಿನ ಚಿತ್ರಗಳಲ್ಲಿ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಂಟರ್ ಅದರ ಟಿಯರ್-ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಉದ್ದವಾದ ಸಿಂಗಲ್-ಪೀಸ್ ಸೀಟ್, ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, ಟರ್ನ್ ಇಂಡಿಕೇಟರ್‌ಗಳು, ರಿಯರ್-ವ್ಯೂ ಮಿರರ್‌ಗಳು ಮತ್ತು ಸ್ವಲ್ಪ ಎತ್ತರದ ಸ್ಕ್ರ್ಯಾಂಬ್ಲರ್ ಮಾದರಿಯ ಮೋಟಾರ್‌ಸೈಕಲ್ ಆಗಿರುತ್ತದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ಮುಂಬರುವ ರಾಯಲ್ ಎನ್‌ಫೀಲ್ಡ್ ಹಂಟರ್ ರಾಯಲ್ ಎನ್‌ಫೀಲ್ಡ್ ಜೆ-ಪ್ಲಾಟ್‌ಫಾರ್ಮ್ ಮತ್ತು ಸ್ಕ್ರಾಂಬ್ಲರ್ ತರಹದ ಸ್ಟೈಲಿಂಗ್ ಅನ್ನು ಆಧರಿಸಿದೆ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಂಟರ್ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಲ್ಲಿ ಅತ್ಯಂತ ಹಗುರವಾಗಿದೆ ಮತ್ತು ಮಿಟಿಯೊರ್ ಮತ್ತು ಕ್ಲಾಸಿಕ್‌ನಂತೆಯೇ ಅದೇ 349 ಸಿಸಿ ಎಂಜಿನ್ ಅನ್ನು ಹೊಂದಿರುತ್ತದೆ

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ಮುಂಬರುವ ರಾಯಲ್ ಎನ್‌ಫೀಲ್ಡ್ ಹಂಟರ್ 20.2 ಬಿಹೆಚ್‌ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ರಾಯಲ್ ಎನ್‌ಫೀಲ್ಡ್ 5-ಸ್ಪೀಡ್ ಗೇರ್‌ಬಾಕ್ಸ್‌ನ ಗೇರ್ ಅನುಪಾತಕ್ಕೆ ಮೋಟಾರ್‌ಸೈಕಲ್‌ನ ಪಾತ್ರಕ್ಕೆ ಸರಿಹೊಂದುವಂತೆ ಯಾವುದೇ ಬದಲಾವಣೆಗಳನ್ನು ಮಾಡಿದೆಯೇ ಎಂದು ನಮಗೆ ಖಚಿತವಾಗಿಲ್ಲ. ಇದರ ಜೊತೆಗೆ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಂಟರ್ ಅನ್ನು 'J1C1' ಮತ್ತು 'J1C2' ಎಂಬ ಕೋಡ್ ನೇಮ್ ನಲ್ಲಿ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಬಹುದು.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ಈ ಎರಡು ಮಾದರಿಗಳಲ್ಲಿ, 'J1C1' ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ, ಆದರೆ 'J1C2' ಪುನರಾವರ್ತನೆಯು ಬೆಲೆಗಳನ್ನು ಅತ್ಯಂತ ಸ್ಪರ್ಧಾತ್ಮಕವಾಗಿಸಲು ಕನಿಷ್ಠ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಬಿಡುಗಡೆಯಾದಾಗ, ರಾಯಲ್ ಎನ್‌ಫೀಲ್ಡ್ ಮುಂಬರುವ ಹಂಟರ್ ಮೋಟಾರ್‌ಸೈಕಲ್‌ನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.30 ಲಕ್ಷದಿಂದ 1.40 ಲಕ್ಷವಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಈ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಮಾದರಿಯು ಕ್ಲಾಸಿಕ್-ರೋಡ್‌ಸ್ಟರ್ ಲುಕ್ ಅನ್ನು ಹೊಂದಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ಹಂಟರ್ 350 ಬೈಕಿನಲ್ಲಿ ಸಣ್ಣ-ಸಿಂಗಲ್-ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ಒಳಗೊಂಡಿರಲಿದೆ. ಮೊಬೈಲ್ ಅಪ್ಲಿಕೇಶನ್‌ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಒಮ್ಮೆ ಜೋಡಿಸಿದಾಗ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಒದಗಿಸಲು ಇದು ಸಣ್ಣ ಟಿಎಫ್‌ಟಿ ಡಿಸ್ ಪ್ಲೇಯನ್ನು ಕೂಡ ಹೊಂದಿದೆ. ಇದು ಸ್ಪೀಡ್, ಒಡೋಮೀಟರ್, ಟ್ರಿಪ್ ಮೀಟರ್, ಫ್ಯೂಯಲ್ ಗೇಜ್ ಮತ್ತು ಇತರ ಟೆಲ್ಟೇಲ್ ಚಿಹ್ನೆಗಳಂತಹ ಉಳಿದ ವಿವರಗಳನ್ನು ಒದಗಿಸಲು ಮುಖ್ಯ ಕ್ಲಸ್ಟರ್ ಯುನಿಟ್ ಹೊಂದಿರಲಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಿಂಭಾಗದಲ್ಲಿ ಟ್ವಿನ್-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಸುರಕ್ಷತೆಗಾಗಿ ಎರಡು ಕಡೆಯಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಿ, ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಬಹುದು.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮಾಹಿತಿ ಬಹಿರಂಗ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಒಟ್ಟಾರೆಯಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯ 350ಸಿಸಿ ವಿಭಾಗದ ಹಂಟರ್ ಬೈಕ್ ಹೊಸ ಮಾದರಿಯಾಗಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದುದೆಂದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಹೈನೆಸ್ ಸಿಬಿ 350 ಬೈಕಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Upcoming new royal enfield hunter 350 specification leaked details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X