ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಎಲೆಕ್ಟ್ರಿಕ್ ವಾಹನ ಮಾರಾಟವು ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪ್ರಮುಖ ವಾಹನ ಕಂಪನಿಗಳು ತಮ್ಮ ಇವಿ ಸ್ಕೂಟರ್ ಮಾದರಿಗಳ ಮಾರಾಟ ಆರಂಭಿಸುವ ಸಿದ್ದತೆಯಲ್ಲಿವೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಸಾಂಪ್ರಾದಾಯಿಕ ವಾಹನಗಳ ಉತ್ಪಾದನೆ ಮಾಡುವ ಕಂಪನಿಗಳಿಂತಲೂ ಸ್ಟಾರ್ಟ್ಅಪ್ ಇವಿ ಕಂಪನಿಗಳೇ ಇವಿ ವಾಹನ ಮಾರಾಟದಲ್ಲಿ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಸ್ಟಾರ್ಟ್ಅಪ್ ಕಂಪನಿಗಳಿಗೆ ಪೈಪೋಟಿಯಾಗಿ ಇದೀಗ ಪ್ರಮುಖ ವಾಹನ ಕಂಪನಿಗಳು ಕೂಡಾ ಹೊಸ ಇವಿ ವಾಹನಗಳ ಬಿಡುಗಡೆಗೆ ಸಿದ್ದಗೊಳ್ಳುತ್ತಿವೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ದ್ವಿಚಕ್ರ ವಾಹನ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಯಮಹಾ ಕಂಪನಿಯು ಕೂಡಾ ಶೀಘ್ರದಲ್ಲಿಯೇ ತನ್ನ ಇವಿ ಸ್ಕೂಟರ್ ಕಾನ್ಸೆಪ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಯಮಹಾ ಹೊಸ ಇವಿ ಸ್ಕೂಟರ್ ಮುಂದಿನ ತಿಂಗಳು 11ರಂದು ಅನಾವರಣಗೊಳ್ಳಲಿದೆ ಎನ್ನಲಾಗಿದೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಹೊಸ ಇವಿ ಸ್ಕೂಟರ್ ಉತ್ಪನ್ನದ ಅನಾವರಣಗೊಳಿಸುವ ಕುರಿತಂತೆ ಈಗಾಗಲೇ ಮಾಧ್ಯಮಗಳಿಗೆ ಆಹ್ವಾನ ಸಹ ಕಳುಹಿಸಿರುವ ಯಮಹಾ ಕಂಪನಿಯು ಇವಿ ಸ್ಕೂಟರ್ ಉತ್ಪನ್ನದ ಬಗೆಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲವಾದರೂ ಅನಾವರಣದ ನಂತರ ಕೆಲವೇ ದಿನಗಳಲ್ಲಿ ಹೊಸ ಸ್ಕೂಟರ್ ಮಾರಾಟ ಆರಂಭಿಸುವ ಯೋಜನೆಯಲ್ಲಿದೆ ಎನ್ನಬಹುದು.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಯಮಹಾ ಕಂಪನಿಯು ಹೊಸ ಸ್ಕೂಟರ್‌ಗಳನ್ನು 2019ರ ಟೊಕಿಯೋ ಮೋಟಾರ್ ಶೋನಲ್ಲಿ ಅನಾವರಣಗೊಳಿಸಿದ್ದ ಇ-01 ಮತ್ತು ಇಸಿ-05 ಕಾನ್ಸೆಪ್ಟ್ ಮಾದರಿಗಳನ್ನು ಆಧರಿಸಿ ಬಿಡುಗಡೆ ಮಾಡುತ್ತಿದ್ದು, 2030ರ ವೇಳೆಗೆ ವಾರ್ಷಿಕವಾಗಿ ಸುಮಾರು ಶೇ. 33 ರಷ್ಟು ಇವಿ ವಾಹನಗಳ ಮಾರಾಟವನ್ನು ವಿಸ್ತರಿಸುವ ಗುರಿಹೊಂದಿದೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

2050ರ ವೇಳೆಗೆ ತನ್ನ ಶ್ರೇಣಿಯ ಶೇ.90 ರಷ್ಟು ವಾಹನಗಳನ್ನು ವಿದ್ಯುದ್ದೀಕರಿಸುವ ಗುರಿ ಹೊಂದಿರುವ ಯಮಹಾ ಕಂಪನಿಯು ಭವಿಷ್ಯದ ಯೋಜನೆಗಳಿಗೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಇವಿ ಸ್ಕೂಟರ್ ವಿನೂತನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಜ್ಜುಗೊಂಡಿದೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಹೊಸ ಇ-01 ಮತ್ತು ಇಸಿ-05 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮೊದಲ ಬಾರಿಗೆ ಟೊಕಿಯೊ ಮೋಟಾರ್ ಶೋನಲ್ಲಿ ಪ್ರದರ್ಶನ ಮಾಡಿದ್ದ ಯಮಹಾ ಕಂಪನಿಯು ಈಗಾಗಲೇ ಟ್ರೇಡ್‌ ಮಾರ್ಕ್ ಸಲ್ಲಿಕೆ ಮಾಡಿದ್ದು, ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯುವ ಯೋಜನೆಯಲ್ಲಿದೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಎಲೆಕ್ಟ್ರಿಕ್ ವಾಹನಗಳಿಗಾಗಿಯೇ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯುವ ಮೂಲಕ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಮೀಸಲಿಡಲು ಸಹಕಾರಿಯಾಗಲಿದ್ದು, ಹೊಸ ಯೋಜನೆಗಾಗಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುವ ಯೋಜನೆಯಲ್ಲಿದೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಎಬಿಎಸ್, ಸ್ವಾಪ್ ಬ್ಯಾಟರಿ, ಜಿಯೋ ಫೆನ್ಸಿಂಗ್, ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯಗಳ ಜೊತೆ ಹಲವಾರು ತಾಂತ್ರಿಕ ಅಂಶಗಳು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದು, ಹೊಸ ಸ್ಕೂಟರ್‌ಗಳನ್ನು ಜಾಗತಿಕ ಮಾರುಕಟ್ಟೆಗಳನ್ನು ಗುರಿಯಾಗಿಸಿ ಅಭಿವೃದ್ದಿಗೊಳಿಸಿದೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿಗಾಗಿ ತೈವಾನ್ ಮೂಲದ ಇ-ಸ್ಕೂಟರ್ ತಯಾರಕರಾದ ಗೊಗೊ ಜೊತೆಗೂ ಸಹಭಾಗಿತ್ವ ಹೊಂದಿರುವ ಯಮಹಾ ಕಂಪನಿಯು ಹೊಸ ಯೋಜನೆ ಅಡಿ ಹಲವಾರು ಹೊಸ ಸ್ಕೂಟರ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಗೊಗೊ ಕಂಪನಿಯು ಈಗಾಗಲೇ ಹಲವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಯಮಹಾ ಕಂಪನಿಯು ಇದೀಗ ಗೊಗೊ ಜೊತೆಗೂಡಿ ಜಾಗತಿಕ ಮಾರುಕಟ್ಟೆಗಾಗಿ ವಿವಿಧ ಮಾದರಿಯ ಇವಿ ಮಾದರಿಗಳನ್ನು ಸಿದ್ದಪಡಿಸುತ್ತಿದೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಇ-01 ಮತ್ತು ಇಸಿ-05 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಹ ಹೊಸ ಸಹಭಾಗಿತ್ವ ಯೋಜನೆ ಅಡಿಯಲ್ಲಿಯೇ ನಿರ್ಮಾಣಗೊಳ್ಳುತ್ತಿದ್ದು, ಇದರಲ್ಲಿ ಒಂದು ಮಾದರಿಯು ವರ್ಷದ ಮಧ್ಯಂತರದಲ್ಲಿ ಭಾರತದಲ್ಲೂ ಬಿಡುಗಡೆಯಾಗಲಿವೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಹೊಸ ಇವಿ ಸ್ಕೂಟರ್‌ಗಳ ತಾಂತ್ರಿಕ ಅಂಶಗಳ ಇನ್ನು ಯಾವುದೇ ನಿಖರವಾದ ತಾಂತ್ರಿಕ ಅಂಶಗಳಿಲ್ಲವಾದರೂ ಇ-01 ಮತ್ತು ಇಸಿ-05 ಎಲೆಕ್ಟ್ರಿಕ್ ಸ್ಕೂಟರ್‌ಗಳು ಅತ್ಯುತ್ತಮ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಒಂದು ಬಾರಿ ಪೂರ್ಣ ಪ್ರಮಾಣದ ಚಾರ್ಜ್ ಮಾಡಿದ್ದಲ್ಲಿ 120ಕಿ.ಮೀ ನಿಂದ 150 ಕಿ.ಮೀ ಮೈಲೇಜ್‌ನೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರಲಿವೆ ಎನ್ನಲಾಗಿದೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಯಮಹಾ ಇ-ಸ್ಕೂಟರ್‌ನ ದೊಡ್ಡ ಹೈಲೈಟ್ ಎಂದರೆ ಇದು ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ನೀಡುತ್ತದೆ. ಇದು ಬದಲಾಯಿಸಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ. ಇದು ಹಬ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ಗೆ ಶಕ್ತಿಯನ್ನು ನೀಡಲಿದ್ದು, ಇದು ಸುಮಾರು 3kW ಅನ್ನು ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಬಹುದಾಗಿದೆ.

ಶೀಘ್ರದಲ್ಲಿಯೇ ಭಾರತದಲ್ಲಿ ಅನಾವರಣಗೊಳ್ಳಲಿದೆ ಯಮಹಾ ಮೊದಲ ಇವಿ ಸ್ಕೂಟರ್

ಹೊಸ ಇವಿ ಎಲೆಕ್ಟ್ರಿಕ್ ಸ್ಕೂಟರ್ ಇಕೋ, ನಾರ್ಮಲ್ ಮತ್ತು ಪವರ್ ಸೇರಿದಂತೆ ಮೂರು ರೈಡ್ ಮೋಡ್‌ ಹೊಂದಿರಲಿದ್ದು, ಬ್ಯಾಟರಿ ಸ್ಥಿತಿ, ವೇಗ, ಇತ್ಯಾದಿಗಳಂತಹ ನಿರ್ಣಾಯಕ ಮಾಹಿತಿಯನ್ನು ಹಂಚಿಕೊಳ್ಳುವ ಸರಳವಾದ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಇದು ಪಡೆಯುತ್ತದೆ.

Article Published On: Saturday, March 12, 2022, 16:12 [IST]
English summary
Yamaha motorcycle india could unveil first electric scooter in india soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+