ಯಶಸ್ವಿಯಾಗಿ ಮುಕ್ತಾಯಗೊಂಡ ಯಮಹಾ 'ಕಾಲ್ ಆಫ್ ದಿ ಬ್ಲ್ಯೂ' ಟ್ರ್ಯಾಕ್ ಡೇ: ಹೈಲೆಟ್ಸ್ ಇಲ್ಲಿವೆ
ಯಮಹಾ ಅಭಿಮಾನಿಗಳಿಗಾಗಿ ಆಯೋಜಿಸಿದ್ದ ಟ್ರ್ಯಾಕ್ ಡೇ ಪಂದ್ಯಾವಳಿಯನ್ನು 'ದಿ ಕಾಲ್ ಆಫ್ ದಿ ಬ್ಲ್ಯೂ' ಎಂಬ ಶೀರ್ಷಿಕೆಯಡಿ ಯಶಸ್ವಿಯಾಗಿ ಮುಕ್ತಾಯಗೊಳಿಸಲಾಗಿದೆ. ಸಾವಿರಾರು ಅಭಿಮಾನಿಗಳ ನಡುವೆ ಚೆನ್ನೈನಲ್ಲಿ ನಡೆದ ಈ ರೇಸಿಂಗ್ ಫೀಲ್ಡ್‌ನ ಹೈಲೆಟ್ಸ್ ಅನ್ನು ಇಲ್ಲಿ ನೋಡಬಹುದು.

ನಮ್ಮಲ್ಲಿ ಹೆಚ್ಚಿನವರಿಗೆ ಸ್ಪೋರ್ಟ್ ಬೈಕ್ ಖರೀದಿಸುವುದು ಕನಸಾಗಿರುತ್ತದೆ. ಖರೀದಿಸದಿದ್ದರೂ ಕನಿಷ್ಠಪಕ್ಷ ಒಮ್ಮೆ ಓಡಿಸುವ ಆಸೆ ಇರುತ್ತದೆ. ಅಂತಹವರಿಗಾಗಿಯೇ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಯಮಹಾ ಚೆನ್ನೈನ ಇರುಂಕಟ್ಟು ಫೋರ್ಟ್‌ನಲ್ಲಿರುವ ಮದ್ರಾಸ್ ಮೋಟಾರ್ ರೇಸಿಂಗ್ ಫೀಲ್ಡ್‌ನಲ್ಲಿ (ಎಂಎಂಆರ್‌ಟಿ) 'ಕಾಲ್ ಆಫ್ ದಿ ಬ್ಲ್ಯೂ' ಕಾರ್ಯಕ್ರಮವನ್ನು ಆಯೋಜಿಸಿತ್ತು.

ರೇಸಿಂಗ್ ಬೈಕ್ ಉತ್ಸಾಹಿಗಳಿಗೆ ವಿಶೇಷವಾಗಿ ಯಮಹಾ ಬೈಕ್ ಪ್ರೇಮಿಗಳಿಗಾಗಿ ಆಯೋಜಿಸಿದ್ದ ಯಮಹಾದ 'ಕಾಲ್ ಆಫ್ ದಿ ಬ್ಲ್ಯೂ' ಅಭಿಯಾನ ಮಾರ್ಚ್ 13ರಂದು ಭಾನುವಾರ ಯಶಸ್ವಿಯಾಗಿ ನಡೆಯಿತು. ಹೆಚ್ಚಿನ ಸಂಖ್ಯೆಯ ಯಮಹಾ ಬೈಕ್ ಪ್ರಿಯರು ಈ ಈವೆಂಟ್‌ನಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 9 ಗಂಟೆಗೆ ಪಂದ್ಯಾವಳಿ ಆರಂಭವಾಗುತ್ತಿದ್ದಂತೆ ಬ್ರೂಮ್-ಬ್ರೂಮ್ ಶಬ್ದಗಳೊಂದಿಗೆ ಟ್ರ್ಯಾಕ್‌ಗೆ ಯಮಹಾ ಟಾಪ್ ಎಂಡ್ ಮಾಡಲ್‌ಗಳು ಕಾಲಿಟ್ಟವು.

ಈ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಉಚಿತವಾಗಿ ಭಾಗವಹಿಸಬಹುದು ಎಂದು ಕಂಪನಿ ಘೋಷಿಸಿದ್ದರಿಂದ ನಿರೀಕ್ಷೆಯಂತೆ ಬುಕ್ಕಿಂಗ್‌ಗಳು ಭರದಿಂದ ಸಾಗಿದ್ದವು. ಆದರೆ ಯಮಹಾ ಇದಕ್ಕೆ ನಿರ್ದಿಷ್ಟ ಸ್ಲಾಟ್‌ಗಳನ್ನು ಮಾತ್ರ ನಿಗದಿಪಡಿಸಿದ್ದರಿಂದ, ಬುಕಿಂಗ್ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಪೂರ್ಣಗೊಂಡಿತು. ಟ್ರ್ಯಾಕ್ ದಿನದ ಮತ್ತೊಂದು ಪ್ರಮುಖ ಅಂಶವೆಂದರೆ ಭಾಗವಹಿಸುವ ಎಲ್ಲರಿಗೂ ಯಮಹಾ ಇಂಡಿಯಾ ಉತ್ಪನ್ನಗಳನ್ನು ಬಳಸಲು ಅನುಮತಿ ನೀಡಲಾಗಿತ್ತು.

ಯಮಹಾ ತನ್ನ ಉತ್ಪಾದನಾ ವಾಹನಗಳ ಮೇಲಿನ ಅತಿಯಾದ ವಿಶ್ವಾಸಕ್ಕೆ ಇದು ಸಾಕ್ಷಿಯೆಂದು ಹೇಳಬಹುದು. ಅಲ್ಲದೆ, ಟ್ರ್ಯಾಕ್ ಡೇನಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತ ಮಾಸ್ಕ್, ಯಮಹಾ ಲೋಗೋ ಇರುವ ಟಿ-ಶರ್ಟ್ ಮತ್ತು ಲ್ಯಾನ್ಯಾರ್ಡ್ ಅನ್ನು ನೀಡಲಾಯಿತು. ಇದರೊಂದಿಗೆ ರೇಸ್ ಟ್ರ್ಯಾಕ್‌ನಲ್ಲಿ ಯಮಹಾ ಬೈಕ್ ಓಡಿಸುವ ರೇಸರ್‌ಗಳಿಗೆ ಶೇರಿಂಗ್ ಮೋಡ್‌ನಲ್ಲಿ ರೈಡಿಂಗ್ ಗೇರ್ ಒದಗಿಸಲಾಗಿತ್ತು.

ಅದೇ ಸಮಯದಲ್ಲಿ ರೇಸ್‌ಟ್ರಾಕ್‌ಗಾಗಿ ರೈಡಿಂಗ್ ಗೇರ್ ಅನ್ನು ಹೊಂದಿದ್ದವರು ಅವುಗಳನ್ನು ಯಮಹಾ ಟ್ರ್ಯಾಕ್ ಡೇಗೆ ತಂದಿದ್ದರು. ಅಲ್ಲದೇ ತಮ್ಮ ಸ್ವಂತ ಯಮಹಾ ಬೈಕ್‌ಗಳನ್ನು ಬಳಸಲು ಸಹ ಯಮಹಾ ಕಂನಿ ಕೆಲವರಿಗೆ ಅನುಮತಿ ನೀಡಿತ್ತು. ಇದಕ್ಕಾಗಿ ಮಾಲೀಕರು ವಾಹನದ ಆರ್‌ಟಿಒ ನೋಂದಣಿ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿದ್ದರು. ಅದರಂತೆ ಭಾಗವಹಿಸುವ ಎಲ್ಲಾ ಸವಾರರು ತಮ್ಮ ಚಾಲನಾ ಪರವಾನಗಿಯನ್ನು ಸಲ್ಲಿಸಿ ಟ್ರ್ಯಾಕ್‌ನಲ್ಲಿ ಪಾಲ್ಗೊಂಡಿದ್ದರು.

ರೇಸ್‌ಟ್ರಾಕ್‌ನಲ್ಲಿ ಭಾಗವಹಿಸುವವರು ಸುರಕ್ಷತಾ ಕಾರ್ಯವಿಧಾನಗಳಿಗೆ ವಿರುದ್ಧವಾಗಿ ಸವಾರಿ ಮಾಡುವ ವಿವಿಧ ನಿಯತಾಂಕಗಳು ಮತ್ತು ವ್ಯತ್ಯಾಸಗಳ ಬಗ್ಗೆ ಸಹ ಸ್ಪರ್ಧಿಗಳಿಗೆ ಕಲಿಸಲಾಯಿತು. ಉದಾಹರಣೆಗೆ ಪೋಶ್ಚರ್ ಟ್ರೈನಿಂಗ್ ಸಹ ನೀಡಲಾಯಿತು. ಸುಮಾರು 3.71 ಕಿ.ಮೀ ಉದ್ದವಿರುವ ಮದ್ರಾಸ್ ಮೋಟಾರ್ ರೇಸ್ ಕೋರ್ಸ್ ಒಟ್ಟು 12 ತಿರುವುಗಳನ್ನು ಹೊಂದಿದೆ.

ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಯಮಹಾ ಅಭಿಮಾನಿಗಳು ಜಮಾಯಿಸಿದ್ದರು. ವರದಿಯ ಪ್ರಕಾರ, 200 ಸವಾರರು ಯಮಹಾದ YZF-R3, YZF-R15, MT-15, FZ ಬೈಕ್‌ಗಳು ಮತ್ತು Aerox 155 ಮ್ಯಾಕ್ಸಿ-ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಅಭಿಯಾನದ ಬಗ್ಗೆ ಯಮಹಾ ಮಾರ್ಚ್ 8ರಂದು ಮದ್ರಾಸ್ ಟ್ರ್ಯಾಕ್ ಡೇ ನಡೆಯಲಿದೆ ಎಂದು ಘೋಷಿಸಿತ್ತು. ಅಂದಿನಿಂದಲೂ ಯಮಹಾ ಬೈಕ್ ಪ್ರೇಮಿಗಳು ರೇಸ್‌ಟ್ರಾಕ್‌ನಲ್ಲಿ ಸವಾರಿ ಮಾಡಲು ಸಿದ್ದತೆ ನಡೆಸಿದ್ದರು. ಈಗಾಗಲೇ ಹೇಳಿದಂತೆ, ಬಲವಾದ ರೇಸಿಂಗ್ ಸಂಪ್ರದಾಯದೊಂದಿಗೆ ಅತ್ಯಾಕರ್ಷಕ ಬ್ರ್ಯಾಂಡ್ ಆಗಿ ತನ್ನ ಜಾಗತಿಕ ಇಮೇಜ್ ಅನ್ನು ಸ್ಥಾಪಿಸಲು ಯಮಹಾದ ಪ್ರಯತ್ನಗಳಲ್ಲಿ ಟ್ರ್ಯಾಕ್ ಡೇ ಈವೆಂಟ್ ಕೂಡ ಒಂದು.

ಇದು ಯಮಹಾ ಗ್ರಾಹಕರಿಗೆ ರೋಮಾಂಚನ ಮತ್ತು ತಮ್ಮ ಬ್ರಾಂಡ್ ಬಗ್ಗೆ ಹೆಮ್ಮೆಯ ಭಾವನೆಯನ್ನು ನೀಡುತ್ತದೆ. ಈವೆಂಟ್‌ನಲ್ಲಿ ರೇಸಿಂಗ್ ಬೈಕ್‌ಗೆ ಸಂಬಂಧಿಸಿದ ಪರಿಕರಗಳು ಮತ್ತು ರೈಡಿಂಗ್ ಗೇರ್‌ಗಳನ್ನು ಪ್ರದರ್ಶಿಸಲಾಯಿತು. ಯಮಹಾದ ಇಂತಹ ಪ್ರಯತ್ನಗಳು ಭಾರತದಲ್ಲಿ ರೇಸರ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ ಎಂದು ಹೇಳಬಹುದು.

ಜೊತೆಗೆ ದೇಶೀಯವಾಗಿ ಯಮಹಾ ಮಾರಾಟ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಚೆನ್ನೈ ಟ್ರ್ಯಾಕ್ ಡೇ ನಂತರ ಯಮಹಾ ಪ್ರಸ್ತುತ 2022ರ ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ 'ದಿ ಕಾಲ್ ಆಫ್ ದಿ ಬ್ಲೂ' ಅಭಿಯಾನ ಅಡಿಯಲ್ಲಿ ಕೆಲವು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಮೂಲಕ ಭಾರತದ ಇತರ ಕೆಲವು ನಗರಗಳಲ್ಲಿ ಇದೇ ಮಾದರಿಯ ಟ್ರ್ಯಾಕ್ ಡೇ ಸ್ಪರ್ಧೆಗಳನ್ನು ನಡೆಸಲು ಯೋಜಿಸಿದೆ.


Click it and Unblock the Notifications








