ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಎಲೆಕ್ಟ್ರಿಕ್ ವಾಹನಗಳ ಆಧರಿತ ವಿತರಣಾ ಕಂಪನಿಯಾಗಿ ಮುಂಚೂಣಿ ಸಾಧಿಸುತ್ತಿರುವ ಜೈಪ್ ಎಲೆಕ್ಟ್ರಿಕ್ ಕಂಪನಿಯು ವಿವಿಧ ಯೋಜನೆಗಳಿಗಾಗಿ ಪ್ರಮುಖ ಕಂಪನಿಗಳೊಂದಿಗೆ ಸಹಭಾಗಿತ್ವ ಘೋಷಣೆ ಮಾಡುತ್ತಿದ್ದು, ಕಂಪನಿಯು ಇದೀಗ ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿಯೊಂದಿಗೆ ಪಾಲುದಾರಿಕೆ ಘೋಷಿಸಿದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿನ ಇ-ಕಾಮರ್ಸ್ ವಿತರಣೆಗಳ ಮೇಲೆ ಕೇಂದ್ರೀಕರಿಸಿರುವ ಜೈಪ್ ಎಲೆಕ್ಟ್ರಿಕ್ ಕಂಪನಿಯು ಸ್ವಾಯತ್ತ ಎಲೆಕ್ಟ್ರಿಕ್ ವಾಹನಗಳ ಪ್ರದೇಶದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸುತ್ತಿದ್ದು, ಲಾಜಿಸ್ಟಿಕ್ಸ್ ಉದ್ಯಮಕ್ಕೆ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಕಂಪನಿ ಹೊಂದಿದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಹೀಗಾಗಿ ಕಂಪನಿಯು ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸಲು ಪ್ರಮುಖ ಕಂಪನಿಗಳೊಂದಿಗೆ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಸಹಭಾಗಿತ್ವ ಯೋಜನೆ ಆರಂಭಿಸುತ್ತಿದ್ದು, ಇದೀಗ ಫ್ಲೋ ಮೊಬಿಲಿಟಿ ಜೊತೆಗಿನ ಪಾಲುದಾರಿಕೆಯ ಭಾಗವಾಗಿ ಜೈಪ್ ಎಲೆಕ್ಟ್ರಿಕ್ ಕಂಪನಿಯು ಇ-ಕಾಮರ್ಸ್ ಲಾಜಿಸ್ಟಿಕ್ಸ್ ಅನ್ನು ಸರಳಗೊಳಿಸಲು ಡೆಲಿವರಿ ಬಾಟ್‌ಗಳನ್ನು ತಯಾರಿಸಲಿದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಡೆಲಿವರಿ ಬಾಟ್ ಗೇಟ್ ಅಥವಾ ಪ್ರವೇಶದಲ್ಲಿ ಉಳಿದಿರುವ ಯಾವುದೇ ಇ-ಕಾಮರ್ಸ್ ಪ್ಯಾಕೇಜ್‌ಗಳನ್ನು ತೆಗೆದುಕೊಂಡು ಅವುಗಳನ್ನು ಗ್ರಾಹಕರ ಬಾಗಿಲಿಗೆ ತಲುಪಿಸಿದ್ದು, ಫ್ಲೋ ಮೊಬಿಲಿಟಿ ಕಂಪನಿಯ ಡೆಲಿವರಿ ಬಾಟ್‌ಗಳು ವಿತರಣೆಯ ಸಮಯದಲ್ಲಿ ಸ್ವಯಂಚಾಲಿತವಾಗಿ ನ್ಯಾವಿಗೇಟ್ ಮಾಡಲು ಜೈಪ್ ಎಲೆಕ್ಟ್ರಿಕ್ ತನ್ನ ವಿಶೇಷ ತಂತ್ರಜ್ಞಾನದ ಮೂಲಕ ಅನುಮತಿಸುತ್ತದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಫ್ಲೋ ಮೊಬಿಲಿಟಿ, ಜೈಪ್ ಎಲೆಕ್ಟ್ರಿಕ್ ಮತ್ತು ವೆಂಚರ್ ಕ್ಯಾಟಲಿಸ್ಟ್‌ನಿಂದ ಶಾರ್ಟ್‌ಲಿಸ್ಟ್ ಮಾಡಿದ ಹೊಸ ಪೀಳಿಗೆಯ ಡೀಪ್-ಟೆಕ್ ಕಂಪನಿಗಳಲ್ಲಿ ಒಂದಾಗಿದೆ ಎನ್ನಲಾಗಿದ್ದು, ಹೊಸ ಯೋಜನೆಗಾಗಿ ಬರೋಬ್ಬರಿ 1.5 ಮಿಲಿಯನ್ ಯುಎಸ್‌ಡಿ ಹೂಡಿಕೆಯೊಂದಿಗೆ ಅದರ ಮುಂದಿನ ಹಂತದ ಬೆಳವಣಿಗೆಗೆ ಎದುರುನೋಡುತ್ತಿದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಇನ್ನು ಲಾಜಿಸ್ಟಿಕ್ಸ್ ಡೆಲಿವರಿ ಸ್ಟಾರ್ಟ್ಅಪ್ ಜೈಪ್ ಎಲೆಕ್ಟ್ರಿಕ್ ಕಂಪನಿಯು ಇವಿ ವಾಹನ ಬಳಕೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಮುಂಬರುವ ಕೆಲವೇ ವರ್ಷಗಳಲ್ಲಿ ಇವಿ ವಾಹನ ಉದ್ಯಮದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಜೈಪ್ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಕೊನೆಯ ಮೈಲಿ ತನಕದ ಗೂಡ್ಸ್ ವಿತರಣೆಗಾಗಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಂಡ ಮೊದಲ ಡೆಲಿವರಿ ಕಂಪನಿಯಾಗಿದ್ದು, ಇ-ಕಾಮರ್ಸ್ ಕಂಪನಿಗಳಿಗೆ ವ್ಯಾಪಕವಾದ ವಿತರಣಾ ಸೇವೆಗಳನ್ನು ಒದಗಿಸುತ್ತಿದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಕಂಪನಿಯು ಈಗಾಗಲೇ ಪ್ರಮುಖ ಕಂಪನಿಗಳೊಂದಿಗೆ ವಿವಿಧ ರೇಂಜ್ ಹೊಂದಿರುವ ಇವಿ ವಾಹನಗಳನ್ನು ಬಳಕೆ ಮಾಡುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಬರೋಬ್ಬರಿ 1 ಲಕ್ಷ ಇವಿ ವಾಹನಗಳನ್ನು ಅಳವಡಿಸಿಕೊಳ್ಳುವ ಯೋಜನೆಯಲ್ಲಿದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ದೆಹಲಿ ಮೂಲದ ಜೈಪ್ ಎಲೆಕ್ಟ್ರಿಕ್ ಸ್ಮಾರ್ಟ್ ಇವಿ ಕಂಪನಿಯು ವಿತರಣಾ ವಲಯದಲ್ಲಿನ ಸೇವೆಗಳಿಗಾಗಿ ವಿಶೇಷವಾದ ಹೊಸ ಇವಿ ವಾಹನಗಳ ಉತ್ಪಾದನೆಗೂ ಕೂಡಾ ಚಾಲನೆ ನೀಡಿದ್ದು, ಜೈಪ್ ಕಂಪನಿಯು ಇವಿ ವಾಹನ ಉದ್ಯಮ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕಂಪನಿಯ ಮೇಲೆ ಭಾರೀ ಪ್ರಮಾಣದ ಹೂಡಿಕೆಯಾಗಿದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಬ್ಯುಸಿನೆಸ್ ಟು ಬ್ಯುಸಿನೆಸ್(ಬಿಟುಬಿ) ಉದ್ದೇಶಗಳಿಗೆ ಹೆಚ್ಚಿನ ಸಂಖ್ಯೆಯ ಇವಿ ವಾಹನಗಳನ್ನು ಒದಗಿಸುತ್ತಿರುವ ಜೈಪ್ ಕಂಪನಿಯು ಪ್ರಮುಖ ಇ-ಕಾರ್ಮಸ್ ಕಂಪನಿಗಳೊಂದಿಗೆ ಪಾಲುದಾರಿಕೆ ಪ್ರಕಟಿಸಿದ್ದು, ಇದೀಗ ದೇಶಾದ್ಯಂತ ತನ್ನ ಫ್ಲೀಟ್‌ನಲ್ಲಿ ಒಂದು ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಹೊರತರುವುದಾಗಿ ಘೋಷಿಸಿದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಪ್ರಸ್ತುತ ಜೈಪ್ ಎಲೆಕ್ಟ್ರಿಕ್ ಕಂಪನಿಯು ದೆಹಲಿ-ಎನ್‌ಸಿಆರ್, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದ್ದು, ಜೈಪ್ ಕಂಪನಿಯ ಸೀರಿಸ್ ಎ ಬಂಡವಾಳ ಹೂಡಿಕೆಯಲ್ಲಿ ವಿವಿಧ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆ ಮಾಡಿವೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಭವಿಷ್ಯದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಲಿರುವ ಜೈಪ್ ಎಲೆಕ್ಟ್ರಿಕ್ ಇವಿ ವಾಹನ ಮಾದರಿಗಳಿಗಾಗಿ ಹೊಸದಾಗಿ ಸುಮಾರು ರೂ. 52 ಕೋಟಿಯಷ್ಟು ಹೂಡಿಕೆಯಾಗಿದ್ದು, ಈ ಮೂಲಕ ಜೈಪ್ ಕಂಪನಿಯ ಮೇಲೆ ಇದುವರೆಗೆ ಸುಮಾರು ರೂ.94 ಕೋಟಿ ಬಂಡವಾಳ ಹೂಡಿಕೆಯಾದಂತಾಗಿದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಹೊಸ ಬಂಡವಾಳ ಹೂಡಿಕೆಯೊಂದಿಗೆ ಕಂಪನಿಯು ತನ್ನ ಉದ್ಯಮ ವ್ಯಾಪ್ತಿ ವಿಸ್ತರಿಸುವುದರ ಜೊತೆಗೆ ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳನ್ನು ಹೊರತರುವ ಸಿದ್ದತೆಯಲ್ಲಿದ್ದು, 2022ರಲ್ಲಿ ಜೈಪ್ ಆದಾಯವು 5 ಪಟ್ಟು ಹೆಚ್ಚಳವಾಗುವ ನೀರಿಕ್ಷೆಗಳಿವೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಇ-ಕಾಮರ್ಸ್ ಕಂಪನಿಗಳ ಸರಕಗಳನ್ನು ಗ್ರಾಹಕರಿಗೆ ತಲುಪಿಸಲು ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವಲ್ಲಿ ಮುಂಚೂಣಿ ಸಾಧಿಸುತ್ತಿರುವ ಜೈಪ್ ಕಂಪನಿಯು ಕೊನೆಯ ಹಂತದ ಮೈಲಿ ತನಕ ಸೇವೆಗಳನ್ನು ನೀಡಲಿದ್ದು, ಹೊಸ ಬಂಡವಾಳ ಹೂಡಿಕೆಯು ಉದ್ಯಮ ವಿಸ್ತರಣೆಗೆ ಸಾಕಷ್ಟು ಸಹಕಾರಿಯಾಗಲಿದೆ.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಜೈಪ್ ಕಂಪನಿಯು ಹೊಸ ಸ್ಕೂಟರ್ ಮಾದರಿಗಳನ್ನು ವಿಶೇಷವಾಗಿ ಬಿಟುಬಿ ಉದ್ದೇಶಗಳಿಗಾಗಿ ಅಭಿವೃದ್ದಿಗೊಳಿಸುತ್ತಿದ್ದು, 2017 ರಲ್ಲಿ ಆರಂಭವಾದ ಜೈಪ್ ಕಂಪನಿಯನ್ನು ಆಕಾಶ್ ಗುಪ್ತಾ ಮತ್ತು ರಾಶಿ ಅಗರ್‌ವಾಲ್ ಎಂಬುವವರು ಸ್ಥಾಪನೆ ಮಾಡಿದರು.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಬ್ಯುಸಿನೆಸ್ ಟು ಬ್ಯುಸಿನೆಸ್ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ಪೆಟ್ರೋಲ್ ಸ್ಕೂಟರ್‌ಗಳ ನಿರ್ವಹಣಾ ವೆಚ್ಚವು ಕಳೆದ ಕೆಲ ತಿಂಗಳಿನಲ್ಲಿ ಸಾಕಷ್ಟು ಏರಿಕೆಯಾಗುತ್ತಿರುವುದರಿಂದ ಜೈಪ್ ಇವಿ ಕಂಪನಿಯು ಉದ್ಯಮ ವ್ಯವಹಾರಗಳಿಗೆ ಪೂರಕವಾಗಿ ಹೊಸ ವಾಣಿಜ್ಯ ಬಳಕೆಯ ಇವಿ ಸ್ಕೂಟರ್ ಒಂದನ್ನು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆ ಮಾಡಿತ್ತು.

ವಿತರಣೆಗಾಗಿ ಸ್ವಯಂಚಾಲಿತ ಬಾಟ್‌ಗಳನ್ನು ತಯಾರಿಸಲು ಫ್ಲೋ ಮೊಬಿಲಿಟಿ ಜೊತೆ ಕೈಜೋಡಿಸಿದ ಜೈಪ್

ಜೈಪ್ ಕಂಪನಿಯು ವಿವಿಧ ಇ-ಕಾಮರ್ಸ್ ಕಂಪನಿಗಳ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗೂಡ್ಸ್ ಡೆಲಿವರಿಗಾಗಿ ಸಂಪೂರ್ಣವಾಗಿ ಎಲೆಕ್ಟಿಕ್ ವಾಹನಗಳನ್ನು ಮಾತ್ರ ಬಳಕೆ ಮಾಡುತ್ತಿದೆ. ಆರಂಭದಲ್ಲಿ ವಿವಿಧ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದ ಜೈಪ್ ಕಂಪನಿಯು ಇದೀಗ ತನ್ನದೆ ಆದ ವಾಹನ ಉತ್ಪಾದನಾ ವಿಭಾಗವನ್ನು ತೆರೆದಿದ್ದು, ಡೆಲಿವರಿ ಉದ್ದೇಶಗಳು ಮತ್ತು ಬೇಡಿಕೆ ಅನುಸಾರವಾಗಿ ಹೊಸ ಇವಿ ಸ್ಕೂಟರ್ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದೆ.

Article Published On: Tuesday, April 5, 2022, 11:28 [IST]
English summary
Zypp electric partners with flo mobility for delivery bots
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+