Bajaj Pulsar N160: E20 ಇಂಧನ ಚಾಲಿತ ಜನಪ್ರಿಯ 'ಬಜಾಜ್ ಪಲ್ಸರ್ N160' ಬಿಡುಗಡೆ.. ಪಕ್ಕಾ ಲೈಕ್ ಮಾಡುವಿರಿ!
ದೇಶದ ಯುವಕರಿಗೆ ನಿಮ್ಮ ಹಾಟ್ ಫೆವರೇಟ್ ಬೈಕ್ ಯಾವುದೆಂದು ಕೇಳಿದರೆ ತಕ್ಷಣ ಬರುವ ಉತ್ತರ ಅದುವೇ ಬಜಾಜ್ ಪಲ್ಸರ್ ಎಂದು. ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾಲಕಾಲಕ್ಕೆ ಪಲ್ಸರ್ ಸರಣಿಯ ಬೈಕ್‌ಗಳನ್ನು ನವೀಕರಿಸಿ, ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ, ಪಲ್ಸರ್ N160 ಲಾಂಚ್ ಆಗಿದ್ದು, ಇಲ್ಲಿದೆ ಹೆಚ್ಚಿನ ಮಾಹಿತಿ.
ಬಜಾಜ್ ಆಟೋ, 2023ರ ಪಲ್ಸರ್ N160 ಬೈಕ್‌ನ್ನು OBD2 ಎಮಿಷನ್ ಮಾನದಂಡ ಹಾಗೂ E20 (ಎಥನಾಲ್) ಇಂಧನದೊಂದಿಗೆ ಚಲಿಸಲು ನೆರವಾಗುವ ಎಂಜಿನ್ ನವೀಕರಣದೊಂದಿಗೆ ಬಿಡುಗಡೆ ಮಾಡಿದ್ದು, ದೇಶೀಯ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿಯೇ ಖರೀದಿಗೆ ಲಭ್ಯವಿದೆ. ರೂ.1,29,645 (ಎಕ್ಸ್ ಶೋರೂಂ, ದೆಹಲಿ) ದರದಲ್ಲಿ ಸಿಗಲಿದೆ. ಆಸಕ್ತ ಗ್ರಾಹಕರು, ಸಮೀಪದ ಶೋರೂಂಗೆ ಭೇಟಿ ನೀಡಿ ಕೊಂಡುಕೊಳ್ಳಬಹುದು.

ಭಾರತದಾದ್ಯಂತ ವಾಯುಮಾಲಿನ್ಯ ತಡೆಗೆ ಹೊಸ ಎಮಿಷನ್ ಮಾನದಂಡಗಳು ಈಗಾಗಲೇ ಜಾರಿಯಾಗಿದ್ದು, ನವೀಕರಿಸಿರುವ ಪಲ್ಸರ್ N160 ಬೈಕ್‌ನಲ್ಲಿ ಅಳವಡಿಸಿರುವ (OBD2) ಸಾಧನ, ಎಂಜಿನ್ ನಲ್ಲಿ ದೋಷಗಳಿದ್ದರೆ ಅದನ್ನು ಪತ್ತೆಹಚ್ಚಿ, ಡ್ಯಾಶ್ ಬೋರ್ಡ್ ಮೂಲಕ ರೈಡರ್ ಗೆ ಮಾಹಿತಿಯನ್ನು ತೋರಿಸುತ್ತದೆ. E20 ಎಂಜಿನ್ ಹೊಂದಿರುವುದರಿಂದ 80% ಪೆಟ್ರೋಲ್, 20% ಎಥನಾಲ್ ಇಂಧನದಿಂದ ಚಲಿಸಬಲ್ಲದು.
ನೂತನ ಬಜಾಜ್ ಪಲ್ಸರ್ N160 ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 164.82 ಸಿಸಿ, ಸಿಂಗಲ್ ಸಿಲಿಂಡರ್ ಏರ್/ಆಯಿಲ್ ಕೋಲ್ಡ್ ಎಂಜಿನ್ ಹೊಂದಿದೆ. 8,750 rpmನಲ್ಲಿ15.68 bhp ಗರಿಷ್ಠ ಪವರ್ ಹಾಗೂ 6,750 rpmನಲ್ಲಿ 14.65 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ಬೈಕ್, ಟ್ವಿನ್ DRLಗಳೊಂದಿಗೆ ಆಕರ್ಷಕ ಸಿಂಗಲ್ ಪಾಡ್ ಪ್ರೊಜೆಕ್ಟರ್ ಸ್ಟೈಲ್ ಹೆಡ್‌ಲೈಟ್, LED ಟೈಲ್ ಲೈಟ್, ಬಲ್ಬ್ ಟೈಪ್ ಟರ್ನ್ ಇಂಡಿಕೇಟರ್ ಹೊಂದಿದೆ. ಜೊತೆಗೆ 17 ಇಂಚಿನ ಅಲಾಯ್ ವೀಲ್ಸ್ ಪಡೆದುಕೊಂಡಿದ್ದು, ಮೂರು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಅವುಗಳೆಂದರೆ, ಬ್ರೂಕ್ಲಿನ್ ಬ್ಲಾಕ್, ರೇಸಿಂಗ್ ರೆಡ್ ಮತ್ತು ಕೆರಿಬಿಯನ್ ಬ್ಲೂ.
ಬಜಾಜ್ ಪಲ್ಸರ್ N160 ಬೈಕ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, ಇದು, ಡಿಸ್ಟೆನ್ಸ್ ಟು ಎಂಪ್ಟಿ ಮೀಟರ್ ನೊಂದಿಗೆ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದಿದೆ. ಈ ಬೈಕ್‌ನ್ನು ಕಂಪನಿಯು ಸಿಂಗಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡುಯೆಲ್ ಚಾನೆಲ್ ABS ಎಂಬ ಎರಡು ರೂಪಾಂತರಗಳಲ್ಲಿ ಖರೀದಿಗೆ ನೀಡುತ್ತದೆ.

ಸಿಂಗಲ್ ಚಾನೆಲ್ ABS ಪಲ್ಸರ್ ಆವೃತ್ತಿಯ ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದು ಫ್ರಂಟ್ 31 ಎಂಎಂ ಟೆಲಿಸ್ಕೋಪಿಕ್ ಫೋರ್ಕ್, ರೇರ್ ಮೊನೊಶಾಕ್ ಸೆಟಪ್ ಹೊಂದಿದೆ. ಫ್ರಂಟ್ 280 ಎಂಎಂ ಡಿಸ್ಕ್, ರೇರ್ 230 ಎಂಎಂ ಡಿಸ್ಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಪಡೆದಿದೆ. ಡುಯೆಲ್ ಚಾನೆಲ್ ABS ಹೊಂದಿರುವ ಬೈಕ್, ಫ್ರಂಟ್ ದೊಡ್ಡದಾದ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್, 300 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.
ಇನ್ನು, ಬಜಾಜ್ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಎಂಜಿನ್ ನವೀಕರಣದೊಂದಿಗೆ ಪಲ್ಸರ್ N160 ಬೈಕ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದು, ಆಕರ್ಷಕ ವೈಶಿಷ್ಟ್ಯ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗಲಿದೆ. ಜೊತೆಗೆ ಸಿಂಗಲ್ ಚಾನೆಲ್ ABS ಹಾಗೂ ಡುಯೆಲ್ ಚಾನೆಲ್ ABS ರೂಪಾಂತರದಲ್ಲಿ ದೊರೆಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಹಕರಿಂದ ಹೇಗೆ ಪ್ರತಿಕ್ರಿಯೆ ಪಡೆಯಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.


Click it and Unblock the Notifications








